Connect with us

LATEST NEWS

“ಬಲಿಪಜ್ಜ”ರೆಂದೇ ಖ್ಯಾತಿವೆತ್ತ ಬಲಿಪ ನಾರಾಯಣ ಭಾಗವತರು..

Published

on

ಭಾಗವತ ಭೀಷ್ಮ..ಅಜ್ಜನ ಪ್ರೀತಿಯ ಶಿಷ್ಯ..ಯಕ್ಷಕ್ಷೇತ್ರದ ಬೃಹತ್ ವೃಕ್ಷ ಬಲಿಪ ನಾರಾಯಣ ಭಾಗವತರು..ಹೌದು ಯಕ್ಷಗಾನದ ಹಾಡು ಅಂದ್ರೆನೇ ಹಾಗೆ..ಯಾರನ್ನು ಕೂಡ ಒಮ್ಮೆ ಮೌನ ಮುಗ್ಧರನ್ನಾಗುಸುತ್ತದೆ..

ಬಲಿಪ ನಾರಾಯಣ ಭಾಗವತರು…ಯಕ್ಷಗಾನ ಕ್ಷೇತ್ರದಲ್ಲಿ ಈ ಹೆಸರು ಗೊತ್ತಿಲ್ಲದವರೂ ಯಾರು ಇಲ್ಲ..ಯಕ್ಷಗಾನದ ರಂಗಸ್ಥಳವನ್ನೊಮ್ಮೆ ಏರಿದರೆ ಸಾಕು ಅವರ ಆ ಕಂಠಕ್ಕೆ ಸರಿಸಾಟಿ ಇನ್ನೊಬ್ಬರಿಲ್ಲ…ಹೌದು, ತೆಂಕು ತಿಟ್ಟು ಯಕ್ಷಗಾನದ  ಹಿರಿಯ ಹಾಗೂ ಪ್ರಸಿದ್ಧ ಭಾಗವತರು ಬಲಿಪರು..ಪರಂಪರೆಯ ಕಂಠಸಿರಿ ಮೂಲಕ ಜನಮಾನಸದಲ್ಲಿ ತಳವೂರಿರುವವರು ಬಲಿಪ ನಾರಾಯಣ ಭಾಗವತರು. ಸುದೀರ್ಘ ಯಕ್ಷಪಯಣದಲ್ಲಿ ಯಕ್ಷಗಾನೀಯ ಚೌಕಟ್ಟನ್ನು ನೀರಿ ಹೋಗದೆ, ಸಾಂಪ್ರದಾಯಿಕ ಭಾಗವತಿಕೆಗೆ ಪರ್ಯಾಯ ಹೆಸರೇ ಬಲಿಪ ಭಾಗವತರು ಎಂಬ ಖ್ಯಾತಿ ಗಳಿಸಿದವರು.  ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದವರು ಬಲಿಪ ನಾರಾಯಣ ಭಾಗವತರು..

ಬಲಿಪ ಮಾಧವ ಭಟ್ ಹಾಗೂ ಸರಸ್ವತಿ ದಂಪತಿಗಳ ಮುದ್ದಿನ ಪುತ್ರ ಬಲಿಪರು  ಮಾರ್ಚ್ 13, 1938ರಂದು ಕಾಸರಗೋಡಿನ ಪಡ್ರೆ ಗ್ರಾಮದಲ್ಲಿ ಜನಿಸಿದರು.  ತಮ್ಮ ತಾತ ದಿ.ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು 13ನೇ ವರ್ಷದಲ್ಲಿ ರಂಗಪ್ರವೇಶಗೈದರು…ಇವರ ಪತ್ನಿ ಶ್ರೀಮತಿ ಜಯಲಕ್ಷ್ಮೀ .. ಇವರ ನಾಲ್ವರು ಮಕ್ಕಳಲ್ಲಿ ಮಾಧವ ಬಲಿಪರು ಹಿಮ್ಮೇಳವಾದಕರಾಗಿದ್ದು,  ಶಿವಶಂಕರ ಬಲಿಪ ಮತ್ತು ಪ್ರಸಾದ ಬಲಿಪರು ಪ್ರಸಿದ್ದ ಭಾಗವತರು.., ಇನ್ನೋರ್ವ ಪುತ್ರ ಶಶಿಧರ್ ಬಲಿಪ ಕೃಷಿಕರು….

ತೆಂಕು ತಿಟ್ಟು ಯಕ್ಷಗಾನದ ಭೀಷ್ಮ ಎಂದು ಕರೆಯಲ್ಪಡುವ ಬಲಿಪ ನಾರಾಯಣ ಭಾಗವತರು 60 ವರ್ಷಗಳ ಕಾಲ ಯಕ್ಷಗಾನ ಕಲಾ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಪಡ್ರೆ ಜಠಾಧಾರಿ ಮೇಳವನ್ನು ಮೊದಲಿಗೆ ಆರಂಭಿಸಿದರು.. ಸುಮಾರು 50ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳ ಕಂಠಪಾಠ ಬಲಿಪರಿಗಿತ್ತು..

ಭಾಗವತ ಭೀಷ್ಮ ವಿಶೇಷಣಕ್ಕೆ ಇವರಿಗಿಂತ ಸೂಕ್ತ ಇನ್ನೊಬ್ಬರಿಲ್ಲ. ಅಜ್ಜನ ಶಿಷ್ಯನಾಗಿ ಭಾಗವತಿಕೆಯಲ್ಲಿಯೇ ಬದುಕಿದವರು ಇವರು. ಯಕ್ಷಕ್ಷೇತ್ರದ ಬೃಹತ್ ವೃಕ್ಷ. ಇವರ ಗರಡಿಯಲ್ಲಿ ಪಳಗಿದ ಅದೆಷ್ಟೋ ಮರಗಳಿಗೂ ಇವರದೇ ಮಾರ್ಗದರ್ಶನ. ಬಲಿಪ ನಾರಾಯಣ ಭಾಗವತರು.

ಯಕ್ಷಗಾನದ ಸುದೀರ್ಘ ಸೇವೆಗಾಗಿ ಅಭಿಮಾನಿಗಳು” ಬಲಿಪ ಅಮೃತ ಭವನ”ವನ್ನು ಕಟ್ಟಿಸಿಕೊಟ್ಟಿದ್ದಾರೆ. ಬಲಿಪನಾರಾಯಣ ಭಾಗವತರು “ಐದು ದಿನದ ದೇವಿ ಮಹಾತ್ಮೆ”ಎಂಬ ಪ್ರಸಂಗವನ್ನು ರಚಿಸಿದ್ದು, ಯಕ್ಷಗಾನದ ಇತಿಹಾಸದಲ್ಲೇ ಇದು ಮಹತ್ವದ ಕೃತಿಯಾಗಿತ್ತು..

ಅದೆಷ್ಟೋ ಹಿರಿಯ ಯಕ್ಷಗಾನ ಕಲಾವಿದರಲ್ಲಿ ಇವರು ಒಬ್ಬ ಸಮರ್ಥ ಭಾಗವತರು..ಯಾವತ್ತೋ ಇವರ ಮುಡಿಗೆ ಸೇರಬೇಕಾದ ಅತೀ ಎತ್ತರದ ಗೌರವಾನ್ವಿತ ಪ್ರಶಸ್ತಿ ಪಾರ್ತಿಸುಬ್ಬ ಬಲಿಪರ ಮಡಿಲಿಗೆ ಸೇರಿದ್ದು ಬಹಳ ಸಂತೋಷಕರ ವಿಚಾರವೇ ಸರಿ..ಆದರೆ ಈ ಪ್ರಶಸ್ತಿ ಹೆಸರುಗಳನ್ನು ಯಾವತ್ತು ಬಯಸಿದವರಲ್ಲ ಬಲಿಪ ನಾರಾಯಣ ಭಾಗವತರು. ಅವರ ಸರಳ ವ್ಯಕ್ತಿತ್ವ ಇಂದು ಎಲ್ಲರಿಗೂ ಮಾದರಿಯಾಗಿದೆ.

ಹಲವಾರು ಪ್ರಶಸ್ತಿ, ಗೌರವಗಳ ಸರದಾರ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಮಂಡಳಿಯ (ಕಟೀಲು ಮೇಳ) ದ ಪ್ರಧಾನ ಭಾಗವತರಾಗಿದ್ದರು ಬಲಿಪರು. ಎಲ್ಲರ ಅಚ್ಚು ಮೆಚ್ಚಿನ ಬಲಿಪ್ಪಜ್ಜ ಫೆ.18, 2023 ರಂದು ಇಹಲೋಕ ತ್ಯಜಿಸಿದರು..

 

 

LATEST NEWS

ಚೀನಾ: ರೆಸ್ಟೋರೆಂಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ 20 ಜನ ಸಾವು

Published

on

ಚೀನಾ: ರೆಸ್ಟೋರೆಂಟ್‌ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು 20 ಮಂದಿ ಸಾವನ್ನಪ್ಪಿದ್ದು, 3 ಮಂದಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಚೀನಾದ ಉತ್ತರ ನಗರ ಲೀಯಾವೊಯಾಂಗ್‌ನ ಚುನಿಯಾಂಗ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬೈರನ್ ವಾನ್ ಎನ್ನುವ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ 43 ಸೆಕೆಂಡುಗಳ ವಿಡಿಯೋದಲ್ಲಿ ಅಗ್ನಿ ಜ್ವಾಲೆ ಮುಗಿಲೆತ್ತರಕ್ಕೆ ಚಿಮ್ಮುತ್ತಿರುವುದನ್ನು ಕಾಣಬಹುದು.

ಅಗ್ನಿ ವ್ಯಾಪಿಸುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಜನರು ಕಾಲ್ಕಿತ್ತಿದ್ದಾರೆ. ಇನ್ನೂ ಕೆಲವರು ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುವಲ್ಲಿ ನಿರತರಾಗಿದ್ದರು.

ಪ್ರಾಥಮಿಕ ಮೂಲಗಳ ಪ್ರಕಾರ ಮೊದಲು ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ರೆಸ್ಟೋರೆಂಟ್‌ಗೆ ವ್ಯಾಪಿಸಿದೆ. ಈ ಕುರಿತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಬೆಂಕಿ ನಂದಿಸುವ ಪ್ರಯತ್ನ ನಡೆದಿದೆ.

Continue Reading

LATEST NEWS

ಅಮೆರಿಕದ ದೇಗುಲದಲ್ಲಿ ಪ್ರಧಾನಿ ಹೆಸರಿನಲ್ಲಿ ಪೂಜೆ ಸಲ್ಲಿಸಿದ ಅಣ್ಣಾಮಲೈ

Published

on

ಮಂಗಳೂರು : ಅಮೆರಿಕದ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ಸೈನಿಕರ ಹೆಸರಿನಲ್ಲಿ ಪೂಜೆ ಸಲ್ಲಿಸಲಾಗಿದೆ. ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಈ ಪೂಜೆ ನೆರವೇರಿಸಿದ್ದು, ಪ್ರಧಾನಿ ಹಾಗೂ ಸೈನ್ಯಕ್ಕೆ ಶಕ್ತಿ ತುಂಬುವಂತೆ ಕೃಷ್ಣನಲ್ಲಿ ಪ್ರಾರ್ಥಿಸಿದ್ದಾರೆ.

ಅಮೆರಿಕದ ಫೀನಿಕ್ಸ್ ಮಹಾನಗರದಲ್ಲಿ ಇರುವ ಕೃಷ್ಣ ಮಂದಿರಲ್ಲಿ ಈ ಪೂಜೆ ಸಲ್ಲಿಸಿದ್ದಾರೆ. ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ತೆರಳಿದ್ದ ಅಣ್ಣಾಮಲೈ, ಉಡುಪಿ ಪುತ್ತಿಗೆ ಮಠಕ್ಕೆ ಸೇರಿದ ಕೃಷ್ಣ ಮಂದಿರದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಹಿಂದೂಗಳೇ, ನಿಮ್ಮ ಮನೆಯಲ್ಲಿ ತಲ್ವಾರ್, ಮಹಿಳೆಯರು ಬ್ಯಾಗ್‌ನಲ್ಲಿ ಚೂರಿ ಇಟ್ಕೊಳ್ಳಿ : ಕಲ್ಲಡ್ಕ ಪ್ರಭಾಕರ ಭಟ್

 

 

Continue Reading

LATEST NEWS

ಹಿಂದೂಗಳೇ, ನಿಮ್ಮ ಮನೆಯಲ್ಲಿ ತಲ್ವಾರ್, ಮಹಿಳೆಯರು ಬ್ಯಾಗ್‌ನಲ್ಲಿ ಚೂರಿ ಇಟ್ಕೊಳ್ಳಿ : ಕಲ್ಲಡ್ಕ ಪ್ರಭಾಕರ ಭಟ್

Published

on

ಮಂಗಳೂರು/ಮಂಜೇಶ್ವರ : ಹಿಂದೂ ಮುಸ್ಲಿಂ ಗಲಾಟೆ ಆದ್ರೆ ಹಿಂದೂಗಳು ಓಡುವ ಕಾಲ ಒಂದು ಇತ್ತು. ಈಗ ಕೈ ತೋರಿಸಿದ್ರೆ ಮುಸ್ಲಿಮರು ಓಡಿ ಹೋಗ್ತಾರೆ. ಹೀಗಾಗಿ ನಿಮ್ಮ ಮನೆಯಲ್ಲಿ ಒಂದು ತಲ್ವಾರ್ ಯಾವಾಗಲೂ ಇಟ್ಟುಕೊಳ್ಳಿ ಮತ್ತು ಮಹಿಳೆಯರು ಚೂರಿ ಇಟ್ಟುಕೊಳ್ಳಿ ಎಂದು ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಮಂಜೇಶ್ವರದ ವರ್ಕಾಡಿಯಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಪೆಹಲ್ಗಾಮ್ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಅಲ್ಲಿ ಉಗ್ರರಿಗೆ ತಲ್ವಾರ್ ತೋರಿಸಿದ್ರೂ ಸಾಕಿತ್ತು ಓಡಿ ಹೋಗ್ತಾ ಇದ್ರು. ಮಹಿಳೆಯರು ತಮ್ಮ ಬ್ಯಾಗಿನಲ್ಲಿ ಸ್ನೋ ಪೌಡರ್ ಬಾಚಣಿಗೆ ಜೊತೆಯಲ್ಲಿ ಆರು ಇಂಚಿನ ಚೂರಿ ಇಟ್ಟುಕೊಳ್ಳಿ, ಅದಕ್ಕೆ ಲೈಸೆನ್ಸ್ ಬೇಡ.

ಇದನ್ನೂ ಓದಿ : ಅಮೆರಿಕದಲ್ಲಿ ಪತ್ನಿ, ಪುತ್ರನಿಗೆ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಮೈಸೂರು ಉದ್ಯಮಿ

ಸಂಜೆ ಆರು, ಏಳು ಗಂಟೆ ಬಳಿಕ ನಿಮ್ಮ ಮೇಲೆ ಆಕ್ರಮಣ ಮಾಡುತ್ತಾರೆ. ಆವಾಗ ಕೈ ಮುಗಿದು ಬೇಡಿಕೊಳ್ಳದೆ ಚೂರಿ ತೆಗೆದು ತೋರಿಸಿ ಎಂದು ಪ್ರಭಾಕರ್ ಭಟ್ ಕರೆ ನೀಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page