Connect with us

LATEST NEWS

ಪತಿಯಿಂದಲೇ ಭೀಕರ ಹ*ತ್ಯೆಯಾದ ‘ಭಜರಂಗಿ’ ಸಿನೆಮಾ ನಟಿ ..!

Published

on

ಮೈಸೂರು: ನಟಿ ಹಾಗೂ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತೆ ವಿದ್ಯಾ ನಂದೀಶ್ ಭೀಕರವಾಗಿ ಕೊಲೆಯಾಗಿರುವ ದುರ್ಘಟನೆ ಮೈಸೂರು ಜಿಲ್ಲೆಯ ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೌಟುಂಬಿಕ ಕಲಹದಿಂದಾಗಿ ನಟಿ ಹ*ತ್ಯೆಯಾಗಿದ್ದು, ವಿದ್ಯಾ ಅವರನ್ನು ಪತಿ ನಂದೀಶ್‌ ಕೊ*ಲೆ ಮಾಡಿದ್ದಾನೆ ಎನ್ನಲಾಗಿದೆ.

vidya nandeesh

ಸಿನಿಮಾ ಮಾತ್ರವಲ್ಲ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ವಿದ್ಯಾ ಅವರು ಕೆಲ ನಾಯಕರೊಂದಿಗೆ ಆಪ್ತರಾಗಿದ್ದರು. ಇದೇ ಕುಟುಂಬದಲ್ಲಿ ವಿರಸಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಈ ವಿಚಾರದಲ್ಲಿ ಪತಿ ಹಾಗೂ ಪತ್ನಿ ನಡುವೆ ಜಗಳಕ್ಕೆ ದಾರಿ ಮಾಡಿಕೊಟ್ಟಿತ್ತು ಎನ್ನುವ ಮಾತುಗಳು ಕೇಳಿಬಂದಿವೆ.  ಸೋಮವಾರ ರಾತ್ರಿ ಪತಿ ಪತ್ನಿ ಇಬ್ಬರ ನಡುವೆ ಜಗಳ ನಡೆದಿದೆ.  ಗಲಾಟೆ ವೇಳೆ ಹರಿತವಾದ ಆಯುಧದಿಂದ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ..; ಮಾಜಿ ಪ್ರಿಯತಮೆ ಮದುವೆಗೆ ವಿಶ್ ಮಾಡಲು ಹೋದ ಯುವಕ..! ವರನಿಗೆ ಹಿಗ್ಗಾಮುಗ್ಗ ಥಳಿಸಿ ಹಲ್ಲೆ..!!

ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ನಟನೆಯ ಸೂಪರ್‌ ಹಿಟ್‌ ಚಿತ್ರ ‘ಭಜರಂಗಿ’ಯಲ್ಲಿ ನಟಿಸಿದ್ದರು. ಚಿರಂಜೀವಿ ಸರ್ಜಾ ನಟನೆಯ ‘ಅಜಿತ್’ ಚಿತ್ರದಲ್ಲಿ ವಿದ್ಯಾ ನಂದೀಶ್ ನಾಯಕನ ಸ್ನೇಹಿತೆಯ ಪಾತ್ರದಲ್ಲಿ ಮಿಂಚಿದ್ದರು. ಮಾತ್ರವಲ್ಲ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರವನ್ನು ನಿಭಾಯಿಸಿದ್ದರು. ಇದೀಗ ಕೌಟುಂಬಿಕ ಕಲಹದಿಂದಾಗಿ ನಟಿ ಹತ್ಯೆಯಾಗಿದ್ದಾರೆ.

 

 

LATEST NEWS

ಗುಂಡು ಹಾರಿಸಿಕೊಂಡು ಆತ್ಮಹ*ತ್ಯೆ ಮಾಡಿಕೊಂಡ ಬಿಜೆಪಿ ನಾಯಕ

Published

on

ಮಂಗಳೂರು/ಶ್ರೀನಗರ: ಜಮ್ಮುಕಾಶ್ಮೀರದ ಮಾಜಿ ಶಾಸಕ, ಬಿಜೆಪಿ ನಾಯಕ ಫಕೀರ್ ಮೊಹಮ್ಮದ್ ಖಾನ್ ಅವರು ಇಂದು (ಮಾ.20) ಗುಂಡು ಹಾರಿಸಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.


62 ವರ್ಷದ ಖಾನ್ ಇಲ್ಲಿನ ತುಳಸಿಬಾಗ್ ಸರ್ಕಾರಿ ವಸತಿಗೃಹದೊಳಗೆ ಗುಂಡು ಹಾರಿಸಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯನ್ನು ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್, ಮಾಜಿ ಶಾಸಕರು ಆತ್ಮಹ*ತ್ಯೆಯಿಂದ ಸಾವನ್ನಪ್ಪಿದ್ದಾರೆ ದೃಢಪಡಿಸಿದ್ದಾರೆ. ಮೊಹಮ್ಮದ್ ಖಾನ್ ಅವರ ಆತ್ಮಹ*ತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್:  18 ನಕ್ಸಲರ ಹ*ತ್ಯೆ; ಓರ್ವ ಯೋಧ ಹು*ತಾತ್ಮ

1996ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಆಯ್ಕೆಯಾಗಿದ್ದ ಖಾನ್, 2020ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ, ಕೆಲವು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಪಡೆಯುವಲ್ಲಿ ಅವರು ವಿಫಲರಾಗಿದ್ದರು.

ಫಕೀರ್ ಮೊಹಮ್ಮದ್ ಖಾನ್ ಅವರ ನಿಧನಕ್ಕೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಂತಾಪ ವ್ಯಕ್ತಪಡಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿದ್ದಾರೆ.

Continue Reading

LATEST NEWS

ಒಬ್ಬರಲ್ಲ, ಇಬ್ಬರಲ್ಲ 48 ನಾಯಕರ ಹನಿಟ್ರ್ಯಾಪ್; ಸದನದಲ್ಲಿ ಸಚಿವ ರಾಜಣ್ಣ ಬಾಂಬ್!

Published

on

ಮಂಗಳೂರು/ಬೆಂಗಳೂರು : ಸದನದಲ್ಲಿ ಇಂದು ಹನಿ ಟ್ರ್ಯಾಪ್ ವಿಚಾರ ಸದ್ದು ಮಾಡಿದ್ದು,  ರಾಜಣ್ಣ ಸ್ಫೋಟಕ ಮಾಹಿತಿ  ಹೊರಹಾಕಿದ್ದಾರೆ. ವಿಜಯಪುರ ಶಾಸಕ  ಬಸನಗೌಡ ಪಾಟೀಲ್ ಯತ್ನಾಳ್ ಕಲಾಪದಲ್ಲಿ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದ್ದು,  ಸಹಕಾರ ಸಚಿವ ಕೆ.ಎನ್.ರಾಜಣ್ಣಗೆ ಹನಿಟ್ರ್ಯಾಪ್ ಆಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ  ಸಚಿವ ರಾಜಣ್ಣ ಈ ಆರೋಪವನ್ನು ಒಪ್ಪಿಕೊಂಡಿದ್ದಾರೆ.

ಯತ್ನಾಳ್ ನನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ನಾನು ವಾಸ್ತವವನ್ನು ಹೇಳುತ್ತೇನೆ. ಸಾರ್ವಜನಿಕವಾಗಿ ತಪ್ಪು ಮಾಹಿತಿ ಹೋಗಬಾರದು ಎಂದು ಹೇಳುತ್ತಿದ್ದೇನೆ. ತುಮಕೂರು ಭಾಗದ ಸಚಿವ ಎಂದು ಹೇಳುತ್ತಿದ್ದು, ನಾನು ಮತ್ತು ಪರಮೇಶ್ವರ್ ಇಬ್ಬರೇ ಇರುವುದು. ಕರ್ನಾಟಕ ರಾಜ್ಯ  ಸಿಡಿಗೆ ಕಾರ್ಖಾನೆ ಎಂದು ಬಹಳ ಜನ ಹೇಳುತ್ತಾರೆ.  ರಾಜ್ಯ, ರಾಷ್ಟ್ರಮಟ್ಟದ ಸುಮಾರು 48  ನಾಯಕರ ಹನಿಟ್ರ್ಯಾಪ್ ವಿಡಿಯೋಗಳಿವೆ ಎಂದು ಬಾಂ*ಬ್ ಸಿಡಿಸಿದ್ದಾರೆ.

ಇದನ್ನೂ ಓದಿ : ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳು ಸ್ನಾನ ಹೇಗೆ ಮಾಡುತ್ತಾರೆ ಗೊತ್ತಾ?

ಇದು ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದ ವಿವಿಧ ಪಕ್ಷಗಳ ನಾಯಕರ ಹನಿಟ್ರ್ಯಾಪ್ ಆಗಿದೆ. ನಾನು ಲಿಖಿತ ರೂಪದಲ್ಲಿ ದೂರು ಕೊಡುತ್ತೇನೆ. ಅದನ್ನ ಆಧರಿಸಿ ತನಿಖೆ ನಡೆಸಬೇಕು. ಹನಿಟ್ರ್ಯಾಪ್ ಹಿಂದಿನ ಪ್ರೊಡ್ಯೂಸರ್ ಯಾರು? ಡೈರೆಕ್ಟರ್ ಯಾರು? ಎಂಬುದು ಹೊರಬರಲಿ ಎಂದಿದ್ದಾರೆ.

 

Continue Reading

LATEST NEWS

ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಚಹಲ್-ಧನಶ್ರೀ ಜೋಡಿ

Published

on

ಮಂಗಳೂರು/ಮುಂಬೈ: ಟೀಮ್ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಇದೀಗ ಕಾನೂನುಬದ್ದವಾಗಿ ದೂರವಾಗಿದ್ದಾರೆ. ಇಬ್ಬರ ವಿಚ್ಛೇದನಕ್ಕೆ ನ್ಯಾಯಾಲಯ ಅಧಿಕೃತವಾಗಿ ಮುದ್ರೆಯೊತ್ತಿದೆ.


ಕಳೆದ ಎರಡು ತಿಂಗಳುಗಳಿಂದ ಸ್ಟಾರ್ ಜೋಡಿಯ ವಿಚ್ಛೇದನ ವಿಚಾರ ಸುದ್ದಿಯಲ್ಲಿತ್ತು. ಇಂದು (ಮಾ.20) ಮುಂಬೈನ ಬಾಂದ್ರಾದಲ್ಲಿರುವ ಕೌಟುಂಬಿಕ ನ್ಯಾಯಾಲಯದಿಂದ ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಹಲ್ ಅವರ ಲಾಯರ್ ನಿತಿನ್ ಕುಮಾರ್ ಗುಪ್ತಾ,”ನ್ಯಾಯಾಲಯವು ವಿಚ್ಛೇದನದ ತೀರ್ಪು ನೀಡಿದೆ. ನ್ಯಾಯಾಲಯವು ಇಬ್ಬರು ಜಂಟಿಯಾಗಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿದೆ. ಇಬ್ಬರೂ ಇನ್ನು ಮುಂದೆ ಗಂಡ-ಹೆಂಡತಿಯಲ್ಲ. ವಿಚ್ಛೇದನ ಅಧಿಕೃತವಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚಹಲ್-ಧನಶ್ರೀ ಡಿವೋರ್ಸ್ ನಾಳೆ ನಿರ್ಧಾರ… ಜೀವನಾಂಶ ಎಷ್ಟು ಕೋಟಿ ಗೊತ್ತಾ..? 

ಮುಂಬರುವ ಐಪಿಎಲ್‌ನಲ್ಲಿ ಚಹಲ್ ಭಾಗವಹಿಸುವಿಕೆಯನ್ನು ಪರಿಗಣಿಸಿ ಗುರುವಾರವೇ ವಿಚ್ಛೇದನ ಅರ್ಜಿಯನ್ನು ನಿರ್ಧರಿಸುವಂತೆ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದ್ದರು. ಅದರಂತೆ ಇಂದು ತೀರ್ಪು ಬಂದಿದೆ. ದಂಪತಿಯು ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದರು ಎಂಬುದನ್ನು ನ್ಯಾಯಾಲಯ ಪರಿಗಣಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page