Connect with us

ಬಾಲಕನೊಬ್ಬನಿಗೆ ಹಿಗ್ಗಾಮುಗ್ಗ ಥಳಿಸಿದ ಭಜರಂಗದಳದ ಮುಖಂಡ: ವಿಡಿಯೋ ವೈರಲ್

Published

on

ಬಾಲಕನೊಬ್ಬನಿಗೆ ಹಿಗ್ಗಾಮುಗ್ಗ ಥಳಿಸಿದ ಭಜರಂಗದಳದ ಮುಖಂಡ: ವಿಡಿಯೋ ವೈರಲ್

ವಿಟ್ಲ: ವಿಟ್ಲದ ಕೊಳ್ನಾಡು ಗ್ರಾಮದ ಕಾಡುಮಠ ಶಾಲೆಯ ಮೈದಾನದಲ್ಲಿ ಭಜರಂಗದಳ ಮುಖಂಡನೊಬ್ಬ, ಬಾಲಕನೊಬ್ಬರಿಗೆ ಹಿಗ್ಗಾಮುಗ್ಗ ಹಲ್ಲೆ ನಡೆಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕನ್ಯಾನ ಗ್ರಾಮದ ಮರ್ತನಾಡಿ ನಿವಾಸಿ ರೌಡಿ ಶೀಟರ್, ಭಜರಂಗದಳದ ಮುಖಂಡ ದಿನೇಶ್ ಎಂಬಾತ ಕಾಡುಮಠ ಶಾಲೆಯಲ್ಲಿ ಬಾಲಕನ ಕಾಲರ್ ಪಟ್ಟಿ ಹಿಡಿದು ಬಾಲಕನನ್ನು ಮೈದಾನ ಇಡಿ ಎಳೆದಾಡಿ ಹಲ್ಲೆ ನಡೆಸಿದ್ದಲ್ಲದೇ,

ಬಾಲಕನನ್ನು ಅವಹೇಳನಕಾರಿಯಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ಕೈ ಕಡಿಯುತ್ತೇನೆ ಎಂದು ಅವಾಝ್ ಹಾಕಿದ್ದಾನೆ.

ಬಳಿಕ ಬಾಲಕನ ಹೆತ್ತವರನ್ನು ಅಶ್ಲೀಲ ಪದಗಳಿಂದ ನಿಂದಿಸಿರುವ ಬಗ್ಗೆ ವಿಡಿಯೋದಲ್ಲಿ ದಾಖಲಾಗಿದೆ.

ದಿನೇಶನ ಸಹಪಾಠಿಗಳೇ ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆನ್ನಲಾಗಿದೆ. ಬಳಿಕ ಅದನ್ನು ಯಾರೂ ಸಾಮಾಜಿಕ ಜಾಲಗಳಲ್ಲಿ ಹರಿಯಬಿಟ್ಟಿದ್ದಾರೆ.

ಇದೀಗ ಈ ವಿಡಿಯೋ ಬಾರಿ ವಿವಾದವನ್ನು ಹಾಕಿದೆ. ಮುಸ್ಲಿಂ ಸಂಘಟನೆಗಳ ಮುಖಂಡರು ಈ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ.

ದಿನೇಶ ಎಂಬಾತ ಕನ್ಯಾನ ಭಾಗದಲ್ಲಿ ಭಜರಂಗದಳ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದು, ಈತನ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದೆ.

ಕೇರಳದಲ್ಲಿ ಧರ್ಮಗುರುಯೊಬ್ಬರ ಮೇಲೆ ಹಲ್ಲೆ ಕೂಡಾ ನಡೆಸಿ, ಜೈಲು ಪಾಲಾಗಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇದೀಗ ಬಾಲಕನ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಆತನಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಇಸ್ತ್ರಿ ಅಂಗಡಿಯವನ ಸಂಪಾದನೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು!

Published

on

ಕೇವಲ 10 ರೂಪಾಯಿಗೆ ಒಂದು ಬಟ್ಟೆ ಇಸ್ತ್ರಿ ಮಾಡುವ ಸಣ್ಣ ಉದ್ಯಮದಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.


ನಳಿನಿ ಉನಾಗರ್ ಎಂಬುವವರು ಎಕ್ಸ್ (X) ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅವರ ಮನೆಯ ಬಳಿಯಿರುವ ಡ್ರೈ ಕ್ಲೀನರ್ ಅಂಗಡಿಯ ಮಾಲೀಕರು ಮತ್ತು ಅವರ ಪತ್ನಿ ಇಬ್ಬರೂ ಸೇರಿ ಸಹಾಯಕರ ನೆರವಿನೊಂದಿಗೆ ಈ ಸಾಧನೆ ಮಾಡುತ್ತಿದ್ದಾರೆ.

ಪ್ರತಿದಿನ ಸುಮಾರು 350 ಬಟ್ಟೆಗಳನ್ನು ತಲಾ 10 ರೂಪಾಯಿಯಂತೆ ಇಸ್ತ್ರಿ ಮಾಡುತ್ತಾರೆ. ಇದರಿಂದ ದಿನಕ್ಕೆ 3,500 ರೂ. ಆದಾಯ ಬರುತ್ತದೆ. ಪ್ರತಿದಿನ ಸರಿಸುಮಾರು 20 ಭಾರೀ ಬಟ್ಟೆಗಳನ್ನು ತಲಾ 350 ರೂ. ರಂತೆ ಡ್ರೈ ಕ್ಲೀನ್ ಮಾಡುತ್ತಾರೆ. ಇದರಿಂದ ದಿನಕ್ಕೆ 7,000 ರೂ. ಆದಾಯ ಬರುತ್ತದೆ. ಎಲ್ಲಾ ಸೇರಿ ದಿನಕ್ಕೆ ಸುಮಾರು 10,500 ರೂಪಾಯಿ ಗಳಿಸುತ್ತಾರೆ. ತಿಂಗಳಿಗೆ 27 ದಿನ ಕೆಲ್ಸ ಮಾಡಿದ್ರೂ ಒಟ್ಟು ಆದಾಯ ಸುಮಾರು 2.8 ಲಕ್ಷ ಎಂದು ನಳಿನಿ ಹೇಳಿದ್ದಾರೆ.

ಇದನ್ನೂ ಓದಿ: ಅಪ್ಪನೊಂದಿಗೆ ಹಾಲು ತರಲು ಹೋದಾಗ ನಡೆದ ದುರಂತ; ಸ್ಕೂಲ್ ಬಸ್ ಹರಿದು ಇಬ್ಬರು ಕಂದಮ್ಮಗಳು ಸಾವು

ಅಂಗಡಿ ಅವರದ್ದೇ ಆದ ಕಾರಣ ಬಾಡಿಗೆ ಇರುವುದಿಲ್ಲ. ವಿದ್ಯುತ್ ಬಿಲ್ ಸುಮಾರು 6,000 ರೂ. ಮತ್ತು ಇಬ್ಬರು ಸಹಾಯಕರ ಸಂಬಳ 40,000 ರೂ. ಕಳೆದರೆ, ಅವರಿಗೆ ತಿಂಗಳಿಗೆ ಅಂದಾಜು 2.3 ಲಕ್ಷ ರೂಪಾಯಿ ಉಳಿಯುತ್ತದೆ.

Continue Reading

LATEST NEWS

ಅಪ್ಪನೊಂದಿಗೆ ಹಾಲು ತರಲು ಹೋದಾಗ ನಡೆದ ದುರಂತ; ಸ್ಕೂಲ್ ಬಸ್ ಹರಿದು ಇಬ್ಬರು ಕಂದಮ್ಮಗಳು ಸಾವು

Published

on

ಬೆಂಗಳೂರು: ಶಾಲಾ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಎರಡು ಪುಟ್ಟ ಕಂದಮ್ಮಗಳು ಕೊನೆಯುಸಿರೆಳೆದ ಘಟನೆ ಇಂದು ಬೆಳಿಗ್ಗೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಕಾನ್ಸ್‌ಟೇಬಲ್ ನಾಗನಗೌಡ ಅವರ 2 ವರ್ಷದ ಮಗಳು ವರ್ಷ ಹಾಗೂ ಅವರ ಅಣ್ಣನ ಮಗಳು 4 ವರ್ಷದ ಭಾನು ಎಂದು ಗುರುತಿಸಲಾಗಿದೆ.

ನಗರದ ಸಿಎಆರ್ ವಿಭಾಗದಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾಗನಗೌಡ ಎಂಬುವವರು ಇಂದು ಬೆಳಿಗ್ಗೆ ತಮ್ಮ ಬೈಕ್‌ನಲ್ಲಿ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಹಾಲು ತರಲು ಹೊರಟಿದ್ದರು.

ಥಣಿಸಂದ್ರದ ಮುಖ್ಯರಸ್ತೆಯ ಬಳಿ ಚಲಿಸುತ್ತಿದ್ದಾಗ, ಎದುರುಗಡೆಯಿಂದ ಬಂದ ಶಾಲಾ ಬಸ್ ಅಚಾನಕ್ಕಾಗಿ ಟರ್ನ್ ಪಡೆದುಕೊಂಡಿದೆ. ಈ ವೇಳೆ ಬೈಕ್‌ಗೆ ಬಸ್ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ ನಾಗನಗೌಡ ಮತ್ತು ಇಬ್ಬರು ಮಕ್ಕಳು ರಸ್ತೆಗೆ ಬಿದ್ದಿದ್ದಾರೆ.

ದುರದೃಷ್ಟವಶಾತ್, ಮಕ್ಕಳಿಬ್ಬರು ನೇರವಾಗಿ ಬಸ್ಸಿನ ಚಕ್ರದ ಕೆಳಗೆ ಬಿದ್ದಿದ್ದು, ಚಾಲಕ ಬ್ರೇಕ್ ಹಾಕುವಷ್ಟರಲ್ಲಿ ಬಸ್ ಮಕ್ಕಳ ಮೇಲೆ ಹರಿದಿದೆ. ತಲೆಗೆ ಗಂಭೀರ ಗಾಯಗಳಾದ ಪರಿಣಾಮ ಎರಡು ಮತ್ತು ನಾಲ್ಕು ವರ್ಷದ ಇಬ್ಬರು ಪುಟಾಣಿಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ನಾಗನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಐಟಿಐ ವಿದ್ಯಾರ್ಥಿಗಳ ಮಧ್ಯೆ ಚೂರಿ ಇರಿತ-ಇಬ್ಬರಿಗೆ ಗಾಯ

ಶಾಲಾ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದ್ದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

Continue Reading

LATEST NEWS

ಉಡುಪಿ: ಫ್ಲ್ಯಾಟ್, ಚಿನ್ನ ನೀಡುವುದಾಗಿ ನಂಬಿಸಿ ಉದ್ಯಮಿಗೆ ಕೋಟಿ ಕೋಟಿ ವಂಚನೆ

Published

on

ಉಡುಪಿ: ಹರಾಜಿನಲ್ಲಿ ಫ್ಲ್ಯಾಟ್ ಮತ್ತು ಚಿನ್ನ ಖರೀದಿಸಿ ಕೊಡುವುದಾಗಿ ನಂಬಿಸಿ ಮುಂಬೈ ಮೂಲದ ಉದ್ಯಮಿ ಮಮತಾ ಶೆಟ್ಟಿ ಎಂಬವರಿಗೆ ಉಡುಪಿ ಮೂಲದ ದಂಪತಿ ಸುಹಾಸಿನಿ ಶೆಟ್ಟಿ ಹಾಗೂ ಪತಿ ಪುನೀತ್ ಶೆಟ್ಟಿ ಎಂಬವರು ಸುಮಾರು 4.78 ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ ಎಂದು ದಂಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಮತಾ ಶೆಟ್ಟಿಗೆ ದೂರದ ಸಂಬಂಧಿಯಾಗಿರುವ ಸುಹಾಸಿನಿ, 2024ರ ಜನವರಿಯಿಂದ ಜೂನ್‌ವರೆಗೆ ಹಂತ ಹಂತವಾಗಿ 4.78 ಕೋಟಿ ರೂಪಾಯಿ ಹಣ ವರ್ಗಾಯಿಸಿಕೊಂಡಿದ್ದಾರೆ. ಹರಾಜಿನಲ್ಲಿ ಚಿನ್ನ, ಫ್ಲ್ಯಾಟ್ ಹಾಗೂ ಸ್ಕ್ರಾಪ್ ವ್ಯವಹಾರದಲ್ಲಿ ಲಾಭಕರ ಹೂಡಿಕೆ ಮಾಡಿಕೊಡುವುದಾಗಿ ನೀಡಿದ ಭರವಸೆಯನ್ನು ನಂಬಿದ ಹಿನ್ನೆಲೆಯಲ್ಲಿ ತಾನು ಮೋಸ ಹೋಗಿದ್ದಾಗಿ ದೂರು ನೀಡಲಾಗಿದೆ. ಆಕೆ ಜೊತೆ ಪತಿ ಕೂಡಾ ಕೈಜೋಡಿಸಿದ್ದಾರೆ.

2024ರಲ್ಲಿ ಉಡುಪಿ ಸೈಬರ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಬಳಿಕ ಸುಹಾಸಿನಿ ಶೆಟ್ಟಿ ನ್ಯಾಯಾಲಯದಿಂದ ಪ್ರಕರಣಕ್ಕೆ ಸ್ಟೇ ಆದೇಶ ಪಡೆದಿದ್ದರು. ಈ ನಡುವೆ ಕಿಶೋರ್ ಶೆಟ್ಟಿ ಮತ್ತು ನವೀನ್ ಮೂಲ್ಕಿ ಎನ್ನುವವರ ಮೂಲಕ ಸಂಧಾನ ಮಾತುಕತೆ ನಡೆದಿದ್ದರೂ ಅದು ವಿಫಲವಾಗಿದೆ. ಇದೀಗ ಸುಹಾಸಿನಿ ಮತ್ತು ಪತಿ ಮಣಿಪಾಲದಿಂದ ಮಂಗಳೂರಿಗೆ ಸ್ಥಳಾಂತರಗೊಂಡು ಮಂಗಳೂರಿನಲ್ಲೂ ಇದೇ ರೀತಿ ಮೋಸ ಮಾಡಿದ್ದಾರೆ.

ಇದನ್ನೂ ಓದಿ: ಮದುವೆ ಮನೆ ಬಫೆ ಆ್ಯಪ್‌ ಅಭಿವೃದ್ಧಿಪಡಿಸಿದ ಬೆಂಗಳೂರು ಯುವಕನಿಗೆ ಕೊಲೆ ಬೆದರಿಕೆ!

ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ತನಗೆ ನ್ಯಾಯ ದೊರಕಿಸಿಕೊಡುವಂತೆ ಮಮತಾ ಶೆಟ್ಟಿ ಮಂಗಳೂರು ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿ ಮರು ತನಿಖೆಗೆ ಮನವಿ ಮಾಡಿರುವುದಾಗಿ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page