Connect with us

STATE

ಬಾಗಲಕೋಟೆ| ಭೀಕರ ರಸ್ತೆ ಆಪಘಾತ; ನಾಲ್ವರು ಮೃತ್ಯು

Published

on

ಬಾಗಲಕೋಟೆ: ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ದುರಂತವೊಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ ಮಂಗಳವಾರ(ಡಿ.3) ತಡರಾತ್ರಿ 1 ಗಂಟೆಯ ಸುಮಾರಿಗೆ ನಡೆದಿದೆ.


ಜಮಖಂಡಿಯ ಸಿದ್ದಾಪುರ ಗ್ರಾಮದ ಬಳಿ ಬಾಗಲಕೋಟೆ–ವಿಜಯಪುರ ಹೆದ್ದಾರಿಯಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹಿಂಬದಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಒಬ್ಬ ಯುವಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ವಿಶ್ವನಾಥ ಕಂಬಾರ(17), ಗಣೇಶ್‌ ಅರಳಿಮಟ್ಟಿ(20), ವೀಣ ಶೇಡಬಾಳ(22) ಮತ್ತು ಪ್ರಜ್ವಲ್‌ ಶೇಡಬಾಳ(17) ಮೃತಪಟ್ಟವರು.


ಕಬ್ಬಿನ ಲೋಡ್‌ ಹಿಂಭಾಗ ಟ್ರ್ಯಾಕ್ಟರ್‌ ಚಾಲಕ ರಿಫ್ಲೆಕ್ಟರ್‌ ಕೂಡ ಅಳವಡಿಸಿದ್ದ ಎನ್ನಲಾಗಿದೆ. ಆದರೆ, ವೇಗವಾಗಿ ಬಂದ ಕಾರು ಟ್ರ್ಯಾಕ್ಟರ್‌ ಹಿಂಭಾಗಕ್ಕೆ ಡಿಕ್ಕಿಯಾಗಿದೆ.

ಇದನ್ನೂ ಓದಿ: ಕಾರ್ಕಳ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿ*ಕ್ಕಿ ಹೊಡೆದ ಕಾರು; ಮೂವರಿಗೆ ಗಾ*ಯ

ಈ ದುರ್ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಜಮಖಂಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

STATE

ಬೆಳಗಾವಿ ಅಧಿವೇಶನದಲ್ಲಿ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿಗೆ 50 ಲಕ್ಷ ರೂ. ನೀಡಲು ಶಾಸಕರ ಮನವಿ

Published

on

ಬೆಳಗಾವಿ: ಢಾಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಾಟದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಗೆದ್ದ ಕಾರ್ಕಳ್ ಮಿಯ್ಯಾರಿನ ಧನಲಕ್ಷ್ಮಿ ಪೂಜಾರಿ ಅವರು ಇಂದು ತನ್ನ ಕೋಚ್‌ ತೇಜಸ್ವಿನಿ ಪೈ ಅವರ ಜತೆಗೆ ಬೆಳವಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದಅಧಿವೇಶನದ ಕಲಾಪ ವೀಕ್ಷಿಸಿದರು.

 

ಈ ಸಂದರ್ಭದಲ್ಲಿ ಧನ ಲಕ್ಷ್ಮಿ ಅವರನ್ನು ಸರಕಾರದ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ಧನಲಕ್ಷ್ಮಿ ಅದರ ಸಾಧನೆಯನ್ನು ಗುರುತಿಸಿ ಸರಕಾರದ ವತಿಯಿಂದ ಈಗಾಗಲೇ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ ಎಂದು ತಿಳಿಸಿದರು.

ಧನಲಕ್ಷ್ಮಿ ಮತ್ತು ಆಕೆಯ ತರಬೇತುದಾರರಾದ ತೇಜಸ್ವಿನಿ ಪೈ ಅವರನ್ನು ಅಭಿನಂದಿಸುತ್ತೇನೆ ಎಂದರು. ಧನಲಕ್ಞ್ಮಿ ಅವರಿಗೆ  ಕನಿಷ್ಟ 50 ಲಕ್ಷ ರೂಪಾಯಿ ಬಹುಮಾನ ನೀಡ ಬೇಕೆಂದು ಶಾಸಕ ವೇದವ್ಯಾಸ ಕಾಮತ್ ಒತ್ತಾಯಿಸಿದರು.ಆಕೆಗೆ ಸರಕಾರಿ ಉದ್ಯೋಗ ಕೊಡಿಸಬೇಕೆಂದು ವಿ ಸುನಿಲ್ ಕುಮಾರ್ ಮನವಿ ಮಾಡಿದರು.

Continue Reading

LATEST NEWS

ಸಾರಿಗೆ ಬಸ್ ಪ*ಲ್ಟಿಯಾಗಿ ಕಂಡಕ್ಟರ್ ಸಾ*ವು; ಹಲವು ಪ್ರಯಾಣಿಕರಿಗೆ ಗಾ*ಯ

Published

on

ಮಂಗಳೂರು/ರಾಯಚೂರು : ಸಾರಿಗೆ ಬಸ್ ಪ*ಲ್ಟಿಯಾಗಿ ನಿರ್ವಾಹಕ ಮೃ*ತಪಟ್ಟ ಘಟನೆ ಇಂದು(ಡಿ.09) ಬೆಳಗ್ಗೆ ರಾಯಚೂರಿನ ದೇವದುರ್ಗ ತಾಲೂಕಿನ ಅಂಚೇಸುಗೂರು ಕಾಲುವೆಯ ಸೇತುವೆ ಬಳಿ ನಡೆದಿದೆ. ಬಸವರಾಜ್  ಮೃತ ಕಂಡಕ್ಟರ್.

ಕೆಎಸ್‌ಆರ್‌ಟಿಸಿ ಬಸ್ ಅಂಜಳ ಗ್ರಾಮದಿಂದ ದೇವದುರ್ಗಕ್ಕೆ ಸಾಗುತ್ತಿತ್ತು. ಈ ವೇಳೆ ಅಂಚೇಸುಗೂರು ಕಾಲುವೆಯ ಸೇತುವೆ ದಾಟುವಾಗ ಈ ದುರಂ*ತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಪ*ಲ್ಟಿಯಾಗಿದ್ದು, ಪರಿಣಾಮ ಬಸ್‌ ನಲ್ಲಿದ್ದ 40 ಜನರ ಪೈಕಿ 38 ಪ್ರಯಾಣಿಕರು ಗಾ*ಯಗೊಂಡಿದ್ದಾರೆ.

ಇದನ್ನೂ ಓದಿ : ಬಾರ್ಡರ್ 2 : ಅಹಾನ್ ಶೆಟ್ಟಿ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಕೂಡಲೇ ಧಾವಿಸಿ, ಸಲಾಕೆಗಳಿಂದ ಬಸ್‌ ನ ಗಾಜು ಒಡೆದು, ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಎಷ್ಟು ಹೊತ್ತಾದರೂ ಆಂಬ್ಯುಲೆನ್ಸ್ ಬಾರದ ಕಾರಣ ಟಂಟಂ, ಬೈಕ್‌ ಗಳಲ್ಲಿ ಗಾಯಾಳುಗಳನ್ನ ರವಾನೆ ಮಾಡಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾ*ಯಗೊಂಡಿದ್ದ ಕಂಡಕ್ಟರ್ ಚಿಕಿತ್ಸೆ ಫಲಕಾರಿಯಾಗದೇ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾ*ವನ್ನಪ್ಪಿದ್ದಾರೆ. ಅಪಘಾ*ತದ ಬಗ್ಗೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಗ್ಯಾಸ್ ಗೀಸರ್ ಸೋರಿಕೆ; ತಾಯಿ, ಮಗು ಸಾ*ವು

Published

on

ಮಂಗಳೂರು/ಬೆಂಗಳೂರು : ಇತ್ತೀಚಿಗೆ ಗ್ಯಾಸ್ ಗೀಸರ್‌ ದುರಂ*ತಗಳು ಹೆಚ್ಚಾಗಿದ್ದು, ಇದೀಗ ತಾಯಿ ಹಾಗೂ ಪುಟ್ಟ ಕಂದಮ್ಮ ಪ್ರಾ*ಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಗೋವಿಂದರಾಜ ನಗರದಲ್ಲಿ  ಈ ದುರ್ಘ*ಟನೆ ನಡೆದಿದೆ. 26 ವರ್ಷದ ಚಾಂದಿನಿ,  4 ವರ್ಷದ ಯುವಿ ಮೃ*ತಪಟ್ಟವರು.

ಸ್ನಾನಕ್ಕೆಂದು ತೆರಳಿದ್ದಾಗ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥರಾಗಿದ್ದರು. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಆಸ್ಪತ್ರೆಯಲ್ಲಿ ಸಾ*ವನ್ನಪ್ಪಿದ್ದಾರೆ.

ಘಟನೆ ಬೆಳಕಿಗೆ ಬಂದಿದ್ದು ಹೇಗೆ…

ಪ್ರತಿದಿನ ದೊಡ್ಡ ಮಗಳನ್ನು ಶಾಲೆಯಿಂದ 4 ಗಂಟೆಗೆ ಕರೆದುಕೊಂಡು ಬರಲು ಚಾಂದಿನಿ ಹೋಗುತ್ತಿದ್ದರು. ಆದರೆ ಸೋಮವಾರ ಮಗಳನ್ನು  ಕರೆದುಕೊಂಡು ಬರಲು ಶಾಲೆಗೆ ಹೋಗದ ಕಾರಣ ಶಾಲೆಯವರು ಚಾಂದಿನಿ ಪತಿ ಕಿರಣ್‌ಗೆ ಫೋನ್ ಮಾಡಿದ್ದರು. ಬಳಿಕ ಚಾಂದಿನಿಗೆ ಕರೆ ಮಾಡಿದರೆ ರಿಸೀವ್ ಮಾಡಿರಲಿಲ್ಲ. ಇದರಿಂದ ಕಿರಣ್ ತಮ್ಮನಿಗೆ ಕರೆ ಮಾಡಿ ನೋಡುವಂತೆ ತಿಳಿಸಿದ್ದರು.

ಇದನ್ನೂ ಓದಿ : ಲಾರಿ ಡಿ*ಕ್ಕಿಯಾಗಿ ಮೊಟ್ಟೆ ಸಾಗಾಟದ ವಾಹನ ಪ*ಲ್ಟಿ

ಕಿರಣ್ ತಮ್ಮ ಪ್ರವೀಣ್ ಮನೆಗೆ ಬಂದು ನೋಡಿದಾಗ ಬಾತ್ ರೂಮ್‌ನಲ್ಲಿ ತಾಯಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಗ್ಯಾಸ್ ಗೀಸರ್ ಸೋರಿಕೆಯಿಂದ ದು*ರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page