Connect with us

LATEST NEWS

ದೆವ್ವ ಬಿಡಿಸಲು ಮಗುವಿಗೆ ಬೆತ್ತದ ಏಟು..ಮಾಟಗಾರನ ಹೊಡೆತಕ್ಕೆ ಸ್ಥಳದಲ್ಲೇ ಪ್ರಾಣ ಬಿಟ್ಟ ಕಂದಮ್ಮ

Published

on

ಚಿತ್ರದುರ್ಗ : ಪದೇಪದೆ ಭಯಬೀಳುತ್ತಿದ್ದ 2 ವರ್ಷದ ಪುಟ್ಟ ಹೆಣ್ಣುಮಗು ಮೂಢನಂಬಿಕೆಗೆ ಬಲಿಯಾದ ದುರ್ಘಟನೆ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಅಜ್ಜಿಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿಗಳಾದ ಪ್ರವೀಣ್​-ಬೇಬಿ ದಂಪತಿಯ 2 ವರ್ಷದ ಮಗಳು ಪೂರ್ಣಿಕಾ ಇತ್ತೀಚೆಗೆ ಪದೇಪದೆ ಭಯಬೀಳುತ್ತಿದ್ದಳು. ಮಗಳು ಬೆಚ್ಚಿಬೀಳುತ್ತಿದ್ದುದನ್ನು ನೋಡಿದ ತಂದೆ-ತಾಯಿ, ಪರಿಹಾರ ಕೇಳಲು ಮಗುವನ್ನು ಮಾಟಗಾರ ರಾಕೇಶ್ ಎಂಬುವನ ಬಳಿ ಕರೆದುಕೊಂಡು ಹೋಗಿದ್ದರು. ಈ ರಾಕ್ಷಸ ಮಗುವಿಗೆ ಯಾರೋ ಮಾಟ, ಮಂತ್ರ ಮಾಡಿಸಿದ್ದಾರೆ, ದೆವ್ವ ಹಿಡಿದಿದೆ ಎಂದು ಹೇಳಿದ್ದಾನೆ.

ಅಷ್ಟೇ ಅಲ್ಲ, ತಂದೆ-ತಾಯಿಯನ್ನು ಹೊರಗೆ ಕಳಿಸಿ, ದೆವ್ವ ಬಿಡಿಸುವ ನೆಪದಲ್ಲಿ ಅಷ್ಟು ಚಿಕ್ಕ ಮಗುವಿಗೆ ಬೆತ್ತದಿಂದ ಮನಸೋಇಚ್ಛೆ ಬಾರಿಸಿದ್ದಾನೆ. ರಾಕೇಶ್​​ನ ಹೊಡೆತಕ್ಕೆ ತತ್ತರಿಸಿದ ಮಗು ಅಲ್ಲಿಯೇ ಪ್ರಾಣಬಿಟ್ಟಿದೆ. ಮಗು ಎಚ್ಚರವಿಲ್ಲದೆ ಬೀಳುತ್ತಿದ್ದಂತೆ, ಪಾಲಕರನ್ನು ಒಳಗೆ ಕರೆದ ಮಾಟಗಾರ, ಮಗು ಪ್ರಜ್ಞೆತಪ್ಪಿ ಬಿದ್ದಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಹೊಳಲ್ಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.ಪಾಲಕರು ನೀಡಿದ ದೂರಿನ ಅನ್ವಯ ಪೊಲೀಸರು ರಾಕೇಶ್​​ನನ್ನು ಬಂಧಿಸಿದ್ದಾರೆ.

bangalore

ಬೆಂಗಳೂರಲ್ಲಿ ಜ್ಯೂ. ಎನ್‌ಟಿಆರ್ ಕ್ರೇಜ್: ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರಿಂದ ಲಾಠಿಚಾರ್ಜ್‌

Published

on

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಕಿಮ್ಸ್ ಆಸ್ಪತ್ರೆಯ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಜ್ಯೂ. ಎನ್‌ಟಿಆರ್ ಅವರನ್ನು ನೋಡಲು ಅಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.


ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ನೋಡಲು ಅಭಿಮಾನಿಗಳು ಮುಗಿಬಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ನಿಯಂತ್ರಣಕ್ಕೆ ಬರದಿದ್ದಾಗ, ಲಘು ಲಾಠಿ ಪ್ರಹಾರ ಮಾಡಿ ಜನರನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಇದನ್ನೂ ಓದಿ: ಒಂದೇ ದಿನ 3 ಕಡೆ ಸರಗಳ್ಳತನ ಮಾಡಿದ್ದ ಖದೀಮರ ಬಂಧನ

ನೂಕುನುಗ್ಗಲಿದ್ದರಿಂದ ಎಸ್ಕಲೇಟರ್ ಮುರಿದು ಹೋಗಿದೆ. ಈ ನಡುವೆಯೂ ಜ್ಯೂ. ಎನ್‌ಟಿಆರ್ ಅವರು ಅಭಿಮಾನಿಗಳಿಗೆ ಕೈಬೀಸಿ ವಂದಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Continue Reading

LATEST NEWS

ಒಂದೇ ದಿನ 3 ಕಡೆ ಸರಗಳ್ಳತನ ಮಾಡಿದ್ದ ಖದೀಮರ ಬಂಧನ

Published

on

ರಾಮನಗರ: ಅಡ್ರೆಸ್ ಕೇಳುವ ನೆಪದಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ ಎಸಗಿದ್ದ ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಪ್ರಭು(39), ವಸಂತಿ(37) ಮತ್ತು ಜ್ಯೋತಿ(32) ಬಂಧಿತ ಆರೋಪಿಗಳು.


ಮಾ.3ರಂದು ಕುದೂರು ಸಮೀಪದ ಕಳ್ಳಿಪಾಳ್ಯದಲ್ಲಿ ಮೂವರು ಕಾರಿನಲ್ಲಿ ಬಂದು ವಿಳಾಸ ಕೇಳುತ್ತಾ ಚೈನ್ ಕದ್ದು ಎಸ್ಕೇಪ್ ಆಗಿದ್ದರು. ಮುನೇಶ್ವರ ಸ್ವಾಮಿ ರಥೋತ್ಸವಕ್ಕೆ ಹೋಗ್ತಿದ್ದ ಭಕ್ತರ ಬಳಿ, ದೇವಸ್ಥಾನಕ್ಕೆ ಹೋಗುವ ದಾರಿ ಕೇಳಿ ಅವರ ಸರಗಳನ್ನೇ ಕದ್ದು ಪರಾರಿಯಾಗಿದ್ದರು.

ಈ ಕುರಿತು ಸಾರ್ವಜನಿಕರು ನೀಡಿದ ದೂರಿನ ಅನ್ವಯ ಕಾರ್ಯಚರಣೆ ನಡೆಸಿದ ಪೊಲೀಸರು ಕೇವಲ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಮನೆಯಲ್ಲೇ ಹರಿಯಿತು ರಕ್ತದೋಕುಳಿ: ಅವಳಿ ಸಹೋದರಿಯ ಮೇಲೆ 40ಕ್ಕೂ ಹೆಚ್ಚು ಬಾರಿ ಇರಿದ ಕಿರಾತಕ ಸಹೋದರ!

ಬಂಧಿತರಿಂದ 112 ಗ್ರಾಂ ತೂಕದ ಮೂರು ಚಿನ್ನದ ಸರ, ಕೃತ್ಯಕ್ಕೆ ಬಳಸಿದ್ದ ಒಂದು ವ್ಯಾಗನಾರ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿಕೊಂಡಿದ್ದಾರೆ. ಈ ಗ್ಯಾಂಗ್‌ ಒಟ್ಟು 7 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿತ್ತು ಎಂದು ತಿಳಿದು ಬಂದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Continue Reading

LATEST NEWS

ಮನೆಯಲ್ಲೇ ಹರಿಯಿತು ರಕ್ತದೋಕುಳಿ: ಅವಳಿ ಸಹೋದರಿಯ ಮೇಲೆ 40ಕ್ಕೂ ಹೆಚ್ಚು ಬಾರಿ ಇರಿದ ಕಿರಾತಕ ಸಹೋದರ!

Published

on

ಮೊರಾದಾಬಾದ್: ಬ್ರೇಕಪ್ ಬಳಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಅವಳಿ ಸಹೋದರಿಯರಿಗೆ 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ.


ಮೊರಾದಾಬಾದ್‌ನ ಮಜೋಲಾ ಪೊಲೀಸ್ ಠಾಣೆ ವ್ಯಾಪ್ತಿಯ ಬುದ್ಧಿ ವಿಹಾರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಹಾರ್ದಿಕ್, ತನ್ನ ಅವಳಿ ಸಹೋದರಿ ಹಿಮಶಿಖಾಳನ್ನು 40ಕ್ಕೂ ಹೆಚ್ಚು ಬಾರಿ ಇರಿದು ಹತ್ಯೆ ಮಾಡಿದ್ದಾನೆ ಇಬ್ಬರೂ ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿದ್ದು, ಹೋಳಿ ಆಚರಿಸಲು ಮನೆಗೆ ಬಂದಿದ್ದರು.

ಇತ್ತೀಚೆಗೆ ಹಾರ್ದಿಕ್ ತನ್ನ ಗೆಳತಿಯೊಂದಿಗೆ ಬ್ರೇಕ್ಅಪ್ ಮಾಡಿಕೊಂಡಿದ್ದನು. ತನ್ನ ಪ್ರೀತಿ ವಿಫಲವಾಗಲು ತನ್ನ ತಾಯಿ ಮತ್ತು ಸಹೋದರಿಯೇ ಕಾರಣ ಎಂದು ಆತ ನಂಬಿದ್ದನು. ಈ ದ್ವೇಷ ಹಾಗೂ ಬ್ರೇಕ್ಅಪ್‌ನಿಂದ ಉಂಟಾದ ಖಿನ್ನತೆಯಿಂದಾಗಿ ಆತ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಮನೆಯ ಬೆಡ್‌ರೂಮ್‌ನಿಂದ ಅಡುಗೆ ಮನೆಯವರೆಗೆ ರಕ್ತದ ಕಲೆಗಳು ಹರಡಿಕೊಂಡಿದ್ದವು. ಹಾರ್ದಿಕ್ ತನ್ನ ತಾಯಿಯ ಮೇಲೆಯೂ ಮಾರಣಾಂತಿಕ ದಾಳಿ ಮಾಡಿದ್ದು, ತಾಯಿಯ ಕಿರುಚಾಟ ಕೇಳಿ ಪಕ್ಕದ ಮನೆಯವರು ಒಳಗೆ ಓಡಿ ಬಂದು ದೃಶ್ಯ ನೋಡಿ ದಿಗ್ಭ್ರಮೆಗೊಂಡರು.

ಇದನ್ನೂ ಓದಿ: ಕಲ್ಲಿನಿಂದ ಜಜ್ಜಿ ಮಹಿಳೆ ಕೊಲೆ ಕೇಸ್: ಲಿಂಗಸೂಗೂರು ನ್ಯಾಯಾಲಯದಿಂದ ಆರೋಪಿಗೆ ಜೀವಾವಧಿ ಶಿಕ್ಷೆ

ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಹಿಮ್ಶಿಖಾ ದಾರಿ ಮಧ್ಯೆಯೇ ಮೃತಪಟ್ಟಿದ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ತಾಯಿಯನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ನಂತರ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಶನಿವಾರದಂದು(ಮಾ.7) ಬಂಧಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page