Connect with us

LATEST NEWS

ಆಝಾನ್ v/s ಭಜನೆ: ಕಾನೂನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಎಂದ ಗೃಹಸಚಿವ

Published

on

ಬೆಂಗಳೂರು: ಆಝಾನ್ ವಿರೋಧಿಸಿ ಭಜನೆ ಹಾಗೂ ಸುಪ್ರಭಾತ ಅಭಿಯಾನವನ್ನು ಶ್ರೀರಾಮ ಸೇನೆ ಹಾಗೂ ಹಿಂದೂ ಪರ ಸಂಘಟನೆಗಳು ಆರಂಭಿಸಿದ್ದು,

ಈ ಹಿನ್ನೆಲೆಯಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.


ಈ ಬಗ್ಗೆ ಹೇಳಿಕೆ ನೀಡಿರುವ ಅವರು “ಶಬ್ದ ಮಾಲಿನ್ಯ ಉಂಟು ಮಾಡುವ ಯಾವುದೇ ಚಟುವಟಿಕೆಗಳನ್ನು ನಿಯಂತ್ರಿಸಲು ನ್ಯಾಯಾಲಯಗಳ ಆದೇಶದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು.

ನ್ಯಾಯಾಲಯದ ಆದೇಶವನ್ನು, ಎಲ್ಲರೂ ಗೌರವಿಸಬೇಕು” ಎಂದಿದ್ದಾರೆ.
ಅದರ ಜೊತೆಗೆ ಕಾನೂನನ್ನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆಯನ್ನು ಆರಗ ಜ್ಞಾನೇಂದ್ರ ನೀಡಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಪ್ರೀತಿಸಿ ಮದುವೆಯಾದವರ ಬಾಳಲ್ಲಿ ವಿಧಿಯಾಟ..! ‘ನೀ ನನ್ನ ಲವ್ವರ..’ ಎನ್ನುತ್ತಲೇ ಒಬ್ಬಂಟಿಯಾದ ..!

Published

on

ಮಂಗಳೂರು/ರಾಯಚೂರು : ಪ್ರೀತಿಸಿದವರನ್ನು ಮದುವೆಯಾಗುವ ಯೋಗ ಎಲ್ಲರಿಗೂ ಇರುವುದಿಲ್ಲ. ಒಂದು ವೇಳೆ ಹಾಗಾದರೆ ಅವರಂಥ ಅದೃಷ್ಟವಂತರು ಮತ್ತಾರೂ ಇಲ್ಲ. ಎಲ್ಲಾ ಪ್ರೀತಿಯು ಗೆಲ್ಲುತ್ತದೆ ಎಂದು ಹೇಳಲು ಆಗುವುದಿಲ್ಲ. ಕೆಲವೊಂದು ಸೋಲಲೂ ಬಹುದು. ಆದರೆ ಇದೀಗ ರಾಜ್ಯದಲ್ಲಿ ವಿಭಿನ್ನ ದುರಂತ ಪ್ರೇಮಕತೆಯೊಂದು ನಡೆದಿದೆ. ನಾ ಡ್ರೈವರ.. ನೀ ನನ್ನ ಲವ್ವರ.. ಅಂತಿದ್ದವನು ಇದೀಗ ಒಂಟಿಯಾಗಿದ್ದಾನೆ. ಆರು ವರ್ಷ ಕಾದು ಮದುವೆಯಾದ ಜೋಡಿಹಕ್ಕಿ ಇದೀಗ ಬೇರೆಬೇರೆಯಾಗಿದೆ.

ಕಾಲೇಜಿನಲ್ಲಿ ಪ್ರೀತಿ ಶುರು : 

ರಮೇಶ್ ಹಾಗೂ ಯಶೋಧಾ ಹೈಸ್ಕೂಲ್ ಫ್ರೆಂಡ್ಸ್. ಅವರಿಬ್ಬರು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಈಚನಾಳ ಗ್ರಾಮದವರು. ಕಾಲೇಜಿನಲ್ಲಿದ್ದಾಗ ಪ್ರೀತಿ ಶುರುವಾಗಿ, ಆರು ವರ್ಷದಿಂದ ಲವ್ ಮಾಡಿ, ಕೈ ಕೈ ಹಿಡಿದು ಓಡಾಡಿ, ಬೈಕ್ನಲ್ಲಿ ಸ್ಟೈಲೀಶ್ ಆಗಿ ರೀಲ್ಸ್ ಕೂಡ ಮಾಡಿದ್ದರು. ಯಶೋಧಾಗೆ 18 ವರ್ಷವಾಗಲಿ ಎಂದು ರಮೇಶ್ ಆರು ವರ್ಷ ಕಾದಿದ್ದಾನೆ. ಆಕೆಗಾಗಿ ತನ್ನ ಓದು ಅರ್ಧಕ್ಕೆ ಬಿಟ್ಟು ಕಾರು ಚಾಲಕನಾಗಿ ಕೆಲಸ ಮಾಡುವುದಕ್ಕೆ ಶುರು ಮಾಡಿದ್ದ. ಕಳೆದ 15 ದಿನಗಳ ಹಿಂದಷ್ಟೇ ಸಿಂಧನೂರಿನಲ್ಲಿ ಇಬ್ಬರೂ ಖುಷಿಖುಷಿಯಾಗಿ ರಿಜಿಸ್ಟರ್ ಮದುವೆಯಾಗಿದ್ದಾರೆ.

ಕುಟುಂಬಸ್ಥರಿಂದ ನಾಪತ್ತೆ ದೂರು : 

ಓಡಿ ಹೋಗಿ ವಿವಾಹವಾದ ಬಳಿಕ ರಮೇಶ್ ಹಾಗೂ ಯಶೋಧಾ ಬೆಂಗಳೂರಿಗೆ ಬಂದು ಜೀವನ ನಡೆಸುತ್ತಿದ್ದರು. ಈ ಮಧ್ಯೆ ಲಿಂಗಸುಗೂರು ಠಾಣೆಗೆ ಯೋಶೋಧಾ ಕುಟುಂಬಸ್ಥರಿಂದ ನಾಪತ್ತೆ ದೂರು ನೀಡಲಾಗಿದೆ. ಆ ಬಳಿಕ ರಮೇಶ್ ಗೆ ಲಿಂಗಸುಗೂರು ಪೊಲೀಸರು ಕರೆ ಮಾಡಿ ವಿಚಾರಣೆಗೆಂದು ಠಾಣೆಗೆ ಕರೆದಿದ್ದಾರೆ. ರಿಜಿಸ್ಟರ್ ಮ್ಯಾರೇಜ್ ಆದರೂ ಸಹ ಯಶೋಧಾಳನ್ನ ಆಕೆ ಪೋಷಕರ ಜೊತೆ ಕಳುಹಿಸಿಕೊಟ್ಟಿದ್ದಾರೆ. ಸ್ಥಳೀಯ ಜನಪ್ರತಿನಿಧಿಯೊಬ್ಬರ ಒತ್ತಡಕ್ಕೆ ಮಣಿದು ಪೊಲೀಸರು ಹೀಗೆ ಮಾಡಿದ್ದಾರೆ ಎಂದು ಆರೋಪ ಕೂಡ ಕೇಳಿಬಂದಿದ್ದು, ಸದ್ಯ ರಮೇಶ್ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ.

Continue Reading

LATEST NEWS

ಟ್ರೇಡ್‌ಮಾರ್ಕ್‌ ಅವಮಾನಿಸಿದ ಆರೋಪ; ಹೈಕೋರ್ಟ್‌ ಮೆಟ್ಟಿಲೇರಿದ ಆರ್‌ಸಿಬಿ

Published

on

ಮಂಗಳೂರು/ನವದೆಹಲಿ: “ಬ್ಯಾಡೀಸ್ ಇನ್ ಬೆಂಗಳೂರು ಅಡಿ ಟ್ರಾವಿಸ್ ಹೆಡ್” ಎಂಬ ಶೀರ್ಷಿಕೆಯ ಉಬರ್ ಮೋಟೋದ ಯೂಟ್ಯೂಬ್ ಜಾಹೀರಾತು ತನ್ನ ಟ್ರೇಡ್‌ಮಾರ್ಕ್ ಅವಮಾನಿಸಿದೆ ಎಂದು ಆರೋಪಿಸಿ ರಾಯಲ್ ಚಾಲೆಂಜರ್ಸ್‌ ಸ್ಪೋರ್ಟ್ಸ್‌ ಪ್ರೈವೇಟ್ ಲಿಮಿಟೆಡ್ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ದ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.


ಆರ್‌ಸಿಬಿ ಸಲ್ಲಿಸಿದ ಮಧ್ಯಂತರ ತಡಯಾಜ್ಞೆಯ ಅರ್ಜಿಯ ವಾದಗಳನ್ನು ಆಲಿಸಿದ ನಂತರ ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರು ತಮ್ಮ ಆದೇಶವನ್ನು ಕಾಯ್ದಿರಿಸಿದ್ದಾರೆ.

ಅಷ್ಟಕ್ಕೂ ಜಾಹೀರಾತಿನಲ್ಲೇನಿದೆ?
ಜಾಹೀರಾತಿನ ಪ್ರಮುಖ ಪಾತ್ರಧಾರಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಸ್ಪೋಟಕ ಆಟಗಾರ ಟ್ರಾವಿಸ್ ಹೆಡ್ ತನ್ನ ಟ್ರೇಡ್‌ಮಾರ್ಕ್‌ ಅನ್ನು ಅವಮಾನಿಸಿದ್ದಾರೆ ಎಂದು ಆರ್‌ಸಿಬಿ ಆರೋಪಿಸಿದೆ.

ಈ ಜಾಹೀರಾತಿನಲ್ಲಿ ಟ್ರಾವಿಸ್ ಹೆಡ್ ಕಳ್ಳಹೆಜ್ಜೆಯೊಂದಿಗೆ ಕ್ರೀಡಾಂಗಣದೊಳಗೆ ಕಾಲಿಟ್ಟು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹೈದರಬಾದ್ ತಂಡದ ನಡುವಿನ ಪಂದ್ಯದ ಫಲಕದಲ್ಲಿ ಸ್ಪ್ರೇ ಪೇಯಿಂಟ್ ಬಳಸಿ ‘ರಾಯಲಿ ಚಾಲೆಂಜರ್ಸ್ ಬೆಂಗಳೂರು’ ಎಂದು ಬದಲಿಸುತ್ತಾರೆ.

ಇದನ್ನೂ ಓದಿ: ಇಂದು ಆರ್‌ಸಿಬಿ-ಪಂಜಾಬ್ ಕದನ; ಆಟಕ್ಕೆ ಅಡ್ಡಿಯಾಗುತ್ತಾ ಮಳೆ?

ಆ ಹೊತ್ತಿಗೆ ಭದ್ರತಾ ಸಿಬ್ಬಂದಿ ಇವರನ್ನು ಬೆನ್ನಟುತ್ತಾರೆ. ಈ ಸಂದರ್ಭದಲ್ಲಿ ಉಬರ್‌ನ ಮೂರು ನಿಮಿಷಗಳಲ್ಲಿ ವಾಹನ ಸೌಲಭ್ಯವನ್ನು ಪಡೆದು ಬೈಕ್‌ನಲ್ಲಿ ಹೆಡ್ ಪರಾರಿಯಾಗುತ್ತಾರೆ. ಮೂರು ನಿಮಷಗಳಲ್ಲಿ ತನ್ನ ಸೇವೆ ಲಭ್ಯ ಎಂಬ ಜಾಹೀರಾತು ಸಿದ್ದಪಡಿಸಿದ್ದರಲ್ಲಿ ತನ್ನ ತಂಡದ ಹೆಸರನ್ನು ಅವಹೇಳನ ಮಾಡಲಾಗಿದೆ ಎಂದು ಉಬರ್ ವಿರುದ್ದ ಆರ್‌ಸಿಬಿ ನ್ಯಾಯಾಲಯದ ಮೆಟ್ಟಿಲೇರಿದೆ.

 

Continue Reading

FILM

ಪ್ರಿಯಕರನೊಂದಿಗಿನ ಫೋಟೋ ಹಂಚಿಕೊಂಡ ಅರ್ಜುನ್ ಸರ್ಜಾ ಎರಡನೇ ಮಗಳು; ನಾನು ಮೊದಲೇ ಊಹಿಸಿದ್ದೆ ಎಂದ ಅಪ್ಪ!

Published

on

ಮಂಗಳೂರು/ಬೆಂಗಳೂರು : ಖ್ಯಾತ ನಟ ಅರ್ಜುನ್ ಸರ್ಜಾ ಕಳೆದ ವರ್ಷವಷ್ಟೇ ಹಿರಿಯ ಪುತ್ರಿ, ನಟಿ ಐಶ್ವರ್ಯ ಮದುವೆಯನ್ನು ಅದ್ದೂರಿಯಾಗಿ ಮಾಡಿ ಮುಗಿಸಿದ್ದರು. ಇದೀಗ ಎರಡನೇ ಮಗಳು ಹಸೆಮಣೆ ಏರಲು ಸಜ್ಜಾಗಿದ್ದು, ಸದ್ದಿಲ್ಲದೆ ನಿಶ್ಚಿತಾರ್ಥ ನಡೆದಿದೆ. ಸದ್ಯ ಈ ಜೋಡಿಯ ಫೋಟೋಗಳು ವೈರಲ್ ಆಗುತ್ತಿವೆ.

ಅರ್ಜುನ್ ಸರ್ಜಾ ಮತ್ತು ಪತ್ನಿ ನಿವೇದಿತಾ ದಂಪತಿ ಮಗಳ ಸಂಭ್ರಮದಲ್ಲಿ ಜೊತೆಯಾಗಿದ್ದರು. ಐಶ್ವರ್ಯಾ ಸರ್ಜಾ ಪತಿ ಉಮಾಪತಿ ಜೊತೆಗೆ ಈ ಶುಭ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಅಂಜನಾ ತನ್ನ ಭಾವಿ ಪತಿಯೊಂದಿಗಿನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಫ್ ಕೋರ್ಸ್ ಎಸ್ ಎಂದು ಹಾರ್ಟ್ ಎಮೋಜಿ ಹಾಕಿರುವ ಅವರು, #13yearslater ಎಂದು ಬರೆದುಕೊಂಡಿದ್ದಾರೆ.

ಅಂಜನಾ ಪೋಸ್ಟ್ ಸದ್ಯ ಎಲ್ಲರ ಗಮನಸೆಳೆಯುತ್ತಿದೆ. ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ವಿಶೇಷ ಅಂದ್ರೆ ಅರ್ಜುನ್ ಸರ್ಜಾ ಕೂಡ ಕಮೆಂಟ್ ಮಾಡಿರೋದು. ನಾನು ಮೊದಲೇ ಊಹಿಸಿದ್ದೆ, ಅವನು ನಿನ್ನ ಪಾರ್ಟ್ನರ್ ಆಗುತ್ತಾನೆಂದು ಎಂದು ಬರೆದಿದ್ದಾರೆ. ಐಶ್ವರ್ಯಾ ಸರ್ಜಾ ‘ಫೈನಲಿ’ ಎಂದು ಕಮೆಂಟ್ ಮಾಡಿದ್ದಾರೆ.

ಅಂದ್ಹಾಗೆ, ನಿವೇದಿತಾ ವರಿಸುತ್ತಿರುವ ಹುಡುಗ ಚಿತ್ರರಂಗದವರಲ್ಲ. ಈ ದೇಶದವರೂ ಅಲ್ಲ. ಅವರು ವಿದೇಶದವರು. ಇಟಲಿ ಮೂಲದವರು ಎಂದು ಹೇಳಲಾಗುತ್ತಿದೆ. ಎಂಗೇಜ್ಮೆಂಟ್‌ ಕೂಡ ಇಟಲಿಯಲ್ಲೇ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಋತುಚಕ್ರದ ಬಗ್ಗೆ ಮಾತನಾಡುವಾಗ ಈಗಲೂ ಮುಜುಗರವಾಗುತ್ತದೆ – ಸಮಂತಾ ಬೇಸರ

ಹುಡುಗ ಯಾರು? ಮದುವೆ ಯಾವಾಗ? ಇತ್ಯಾದಿ ವಿಚಾರ ಇನ್ನಷ್ಟೇ ತಿಳಿದುಬರಬೇಕಿದೆ. ಅಂದ್ಹಾಗೆ ಕಳೆದ ವರ್ಷ ಜೂ.10 ರಂದು ಹಿರಿಯ ಮಗಳು ಐಶ್ವರ್ಯಾ ಸರ್ಜಾಳ ವಿವಾಹವನ್ನು ತಮಿಳು ನಟ ಉಮಾಪತಿಯೊಂದಿಗೆ ನೆರವೇರಿಸಿದ್ದ ಅರ್ಜುನ್ ಸರ್ಜಾ ಇದೀಗ ಎರಡನೇ ಮಗಳ ಮದುವೆ ತಯಾರಿಯಲ್ಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page