Connect with us

BELTHANGADY

ಬೆಳ್ತಂಗಡಿ :   ಆಟೋ ಚಾಲಕನಿಗೆ ಚೂರಿ ಇರಿದು ಆರೋಪಿ ಪರಾರಿ..!

Published

on

ಬೆಳ್ತಂಗಡಿ :   ಆಟೋ ಚಾಲಕನಿಗೆ ಚೂರಿ ಇರಿದು ಆರೋಪಿ ಪರಾರಿ..!

ಬೆಳ್ತಂಗಡಿ:  ಆಟೋ ಚಾಲಕನಿಗೆ ಚೂರಿ ಇರಿದು ಆರೋಪಿ ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪ ನಿಡಿಗಲ್ ಸೀಟು ಎಂಬಲ್ಲಿ ನಡೆದಿದೆ.

ಉಜಿರೆ ಗ್ರಾಮದ ಗುರಿಪಳ್ಳ ಮಾಳಿಗೆ ಮನೆ ನಿವಾಸಿ ಸದಾನಂದ (58)ಎಂಬವರ ಆಟೋ ರಿಕ್ಷಾವನ್ನು ಬಾಡಿಗೆ ಪಡೆದು ಸೀಟು ಕಾಡಿನ ಸನಿಹದಲ್ಲಿ ಬರುತ್ತಿದ್ದಂತೆ ಚೂರಿ ಇರಿದು ಆರೋಪಿ ಪರಾರಿಯಾಗಿದ್ದಾನೆ.

ಆರೋಪಿಯನ್ನು ಗುರಿಪಳ್ಳ ನಿವಾಸಿ ಚಂದ್ರ ಶೇಖರ್ ಎಂದು ಗುರುತಿಸಲಾಗಿದೆ.

ಕುತ್ತಿಗೆಗೆ ಭಾಗಕ್ಕೆ ಗಾಯಗೊಂಡ ಆಟೋ ಚಾಲಕ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಸ್ಥಳಕಾಗಮಿಸಿ ಘಟನೆಗೆ ಸಂಬಂಧಿಸಿ ಮಾಹಿತಿ ಕಲೆ ಹಾಕಿ ಪ್ರಕರಣ ದಾಖಲು ಮಾಡಿದ್ದಾರೆ.

BELTHANGADY

ಬೆಳ್ತಂಗಡಿ: ಬೊಳಿಯಾರ್‌ನಲ್ಲಿ ಕಾಡಾನೆ ದಾಳಿಗೆ ಆಟೋಗೆ ಹಾನಿ; ಚಾಲಕ ಅಪಾಯದಿಂದ ಪಾರು

Published

on

ಬೆಳ್ತಂಗಡಿ: ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಆಟೋರಿಕ್ಷಾವೊಂದು ನಜ್ಜುಗುಜ್ಜಾದ ಘಟನೆ ಧರ್ಮಸ್ಥಳದ ಬೊಳಿಯಾರು ಎಂಬಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.


ಬೊಳಿಯಾರು ನಿವಾಸಿ ದಿನೇಶ್ ಎಂಬುವರು ತಮ್ಮ ಆಟೋರಿಕ್ಷಾದಲ್ಲಿ ಮುಂಜಾನೆ ತನ್ನ ಮನೆಯಿಂದ ಧರ್ಮಸ್ಥಳದ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮನೆಯ ಸಮೀಪವೇ ಕಾಡಾನೆಯೊಂದು ರಸ್ತೆ ಮಧ್ಯೆ ಎದುರಾಗಿದ್ದು, ದಿನೇಶ್ ಇದನ್ನು ಗಮನಿಸಿ ಆತಂಕಗೊಂಡಿದ್ದಾರೆ. ತಕ್ಷಣವೇ ರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿ ಸಂಭವಿಸಬಹುದಾದ ಅಪಾಯದಿಂದ ಪಾರಾಗಿದ್ದಾರೆ.

ಆದರೆ ಸ್ಥಳದಲ್ಲಿ ಬಿಟ್ಟುಹೋಗಿದ್ದ ರಿಕ್ಷಾದ ಮೇಲೆ ಕಾಡನೆ ಎರಗಿ ಜಖಂಗೊಳಿಸಿ ಸಮೀಪದ ಚರಂಡಿಗೆ ತಳ್ಳಿ ಹಾಕಿದೆ. ಇದನ್ನು ನೋಡಿದ ಆಟೋ ಚಾಲಕ ದಿನೇಶ್ ಗಾಬರಿಗೊಂಡು ಸ್ಥಳದಲ್ಲಿಯೇ ಮೂರ್ಛೆ ಹೋಗಿದ್ದಾರೆ.

ಇನ್ನು ಕಾಡಾನೆ ರಿಕ್ಷಾವನ್ನು ನಜ್ಜುಗುಜ್ಜುಗೊಳಿಸುತ್ತಿರುವ ಶಬ್ದ ದಿನೇಶ್‌ರವರ ಪತ್ನಿ ಹಾಗೂ ನೆರೆಯವರಿಗೂ ಕೇಳಿ ಸ್ಥಳಕ್ಕೆ ಬಂದಾಗ ಕಾಡನೆಗಳು ಅರಣ್ಯದತ್ತ ಹೋಗಿದೆ.

ಇದನ್ನೂ ಓದಿ: ಲಾರಿ-ಬೈಕ್ ನಡುವೆ ಭೀ*ಕರ ಅಪ*ಘಾತ; ಮೂವರು ಸ್ಥಳದಲ್ಲೇ ಸಾ*ವು

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Continue Reading

BELTHANGADY

ನಟ್ಟಿಬೈಲ್‌ನಲ್ಲಿರುವ ನೀರಿನ ಟ್ಯಾಂಕ್‌ನಲ್ಲಿ ರಟ್ಟಿನ ಬಾಕ್ಸ್, ಕಬ್ಬಿಣದ ರಾಡ್, ಗುಟ್ಕಾ ಪ್ಯಾಕೇಟ್‌, ರಾಶಿಗಟ್ಟಲೆ ಕಸ!

Published

on

ಉಪ್ಪಿನಂಗಡಿ: ಉಪ್ಪಿನಂಗಡಿಯ ನಟ್ಟಿಬೈಲ್‌ನಲ್ಲಿರುವ ಗ್ರಾ.ಪಂ.ನ ಕುಡಿಯುವ ನೀರಿನ ಟ್ಯಾಂಕ್‌ನ ತಳಭಾಗದಲ್ಲಿ ರಟ್ಟಿನ ಬಾಕ್ಸ್, ಕಬ್ಬಿಣದ ರಾಡ್, ಗುಟ್ಕಾ ಪ್ಯಾಕೇಟ್‌ಗಳು ಸೇರಿದಂತೆ ರಾಶಿಗಟ್ಟಲೆ ಕಸವಿರುವುದು ಪತ್ತೆಯಾಗಿದೆ.


ಕಳೆದ ಒಂದು ವರ್ಷದಿಂದ ಇದೇ ಟ್ಯಾಂಕ್‌ನ ನೀರು ಕುಡಿಯುತ್ತಿರುವ ನಟ್ಟಿಬೈಲ್ ಪರಿಸರದ ನಿವಾಸಿಗಳು ಅಧಿಕಾರಿಗಳ ಬೇಜವಾಬ್ದಾರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಜಿ.ಪಂ.ನ ಕಾರ್ಯ ನಿರ್ವಹಣಾಧಿಕಾರಿ ಜಲಜೀವನ್ ಮೆಷಿನ್ ಕಾಮಗಾರಿಯ ಅನುಷ್ಠಾನದ ಕುರಿತು ಗ್ರಾ.ಪಂ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಸುತ್ತೋಲೆಯನ್ನು ಹೊರಡಿಸಿದ್ದು, ಅದರಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಮೂರು ತಿಂಗಳಿಗೊಮ್ಮೆ ಶುಚಿಗೊಳಿಸಲು ಸೂಚಿಸಿದ್ದಾರೆ.

ಇದನ್ನೂ ಓದಿ: ಬಂಟ್ವಾಳ: ಹಾವು ಕಡಿದು ನವ ವಿವಾಹಿತ ಸಾವು

ಕುಡಿಯುವ ನೀರಿನ ಗುಣಮಟ್ಟದ ಕುರಿತು ಆರೋಪಗಳು ಬಂದಲ್ಲಿ ಸಂಬಂಧಪಟ್ಟ ಪಿಡಿಒ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

 

 

Continue Reading

BELTHANGADY

ಬೆಳ್ತಂಗಡಿ: ಅಟೋ ರಿಕ್ಷಾ ಚಾಲನೆ ವೇಳೆ ಹಾರ್ಟ್ ಅಟ್ಯಾಕ್ – ಚಾಲಕ ನಿಧನ

Published

on

ಬೆಳ್ತಂಗಡಿ: ರಿಕ್ಷಾ ಚಾಲನೆ ಮಾಡುತ್ತಿದ್ದಾಗಲೇ ಹೃದಯಾ*ಘಾತದಿಂದ ಚಾಲಕ ಸಾ*ವನಪ್ಪಿದ ಘಟನೆ ಮಂಗಳವಾರ ಬೆಳಿಗ್ಗೆ ಕೊಕ್ಕಡ ಸಮೀಪ ಕೆಂಪಕೋಡಿನಲ್ಲಿ ನಡೆದಿದೆ.

ಮೃ*ತರನ್ನು ಕೆಂಪಕೋಡು ನಿವಾಸಿ ಶರತ್ ಕುಮಾರ್ ಕೆ (36) ಎಂದು ಗುರುತಿಸಲಾಗಿದೆ.

ಶರತ್ ಕುಮಾರ್ ಅವರು ಪ್ರತಿದಿನದಂತೆ ಬೆಳಿಗ್ಗೆ ತಮ್ಮ ಆಟೋದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಬಿಟ್ಟು ಮರಳುತ್ತಿದ್ದರು. ಈ ವೇಳೆ ಅವರಿಗೆ ತೀವ್ರ ಹೃದಯಾ*ಘಾತ ಸಂಭವಿಸಿದ್ದು, ರಿಕ್ಷಾ ಚಲಾಯಿಸುವ ನಡುವೆಯೇ ನಿಧ*ನರಾದರು.

ಇದನ್ನೂ ಓದಿ: ಮೈಸೂರು ರಸ್ತೆ ಫ್ಲೈಓವರ್‌ನಲ್ಲಿ ಭೀ*ಕರ ಅಪ*ಘಾತ: ಇಬ್ಬರು ಯುವಕರು ಸಾ*ವು

ಕೂಡಲೇ ಗಮನಿಸಿದ ಸ್ಥಳೀಯರು ಶರತ್‌ ಅವರನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸಿದರು. ಆದರೆ, ಅದಾಗಲೇ ಅವರು ನಿಧನ ಹೊಂದಿದ್ದರು. ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ ಶರತ್ ಕುಮಾರ್ ಅವರು ತಂದೆ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page