Connect with us

chikkamagaluru

ಎಟಿಎಂ ಮೆಷಿನ್‌ಗೆ ಬೆಂಕಿ ಅವಘಡ..! ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ..!!

Published

on

ಚಿಕ್ಕಮಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎಟಿಎಂ ಮೆಷಿನ್‌ಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಸುಟ್ಟು ಕರಕಲಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.  ನಗರದ ಐ.ಜಿ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ನ ಎಟಿಎಂ ಗೆ ಭಾನುವಾರ(ಎ.21) ಮಧ್ಯರಾತ್ರಿ ಬೆಂಕಿ ತಗುಲಿದೆ.

ಎಟಿಎಂ ಕೊಠಡಿಯಲ್ಲಿ ಅಳವಡಿಸಿದ್ದ ಎಸಿಯಲಲ್ಲಿ ವಿದ್ಯುತ್ ಸರ್ಕ್ಯೂಟ್‌ ಸಂಭವಿಸಿ ಈ ಘಟನೆ ನಡೆದಿದೆ ಎನ್ನಲಾಗಿದೆ.  ಇದರಿಂದ ಎಟಿಎಂ ಮೆಷಿನ್ ಹಾಗೂ ಹಣ ತುಂಬಿಸುವ ಮೆಷಿನ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ಮೆಷಿನ್‌ನಲ್ಲಿದ್ದ 5.ಲಕ್ಷ ರೂಪಾಯಿ ಸುಟ್ಟು ಕರಕಲಾಗಿ  ಹೋಗಿದೆ. ಎಟಿಎಂ ಮೆಷಿನ್ ಮೇಲಿನ ಭಾಗದಲ್ಲಿ ಕರ್ನಾಟಕ ಬ್ಯಾಂಕ್ ಇದ್ದು ಅದೃಷ್ಟವಶಾತ್ ಭಾರೀ ಅಪಾಯ ತಪ್ಪಿದಂತಾಗಿದೆ.

READ MORE..; ಮಲ್ಪೆ ಬೀಚ್‌ನಲ್ಲಿ ಮುಳುಗಿ ಯುವಕ ಮೃತ್ಯು.. ಮಂಡ್ಯ ಯುವಕನ ದುರಂತ ಅಂತ್ಯ..!

ಎಟಿಎಂಗೆ ಬೆಂಕಿ ಹೊತ್ತಿಕೊಂಡ ವಿಚಾರವನ್ನು ಹೈದರಾಬಾದ್ ಬ್ಯಾಂಕ್ ಕಂಟ್ರೋಲ್ ರೂಮ್​ ಅಗ್ನಿಶಾಮಕ ದಳಕ್ಕೆ ತಿಳಿಸಿದೆ. ಮಾಹಿತಿ ಬಂದ ಕೂಡಲೆ ಸ್ಥಳಕ್ಕೆ ಧಾವಿಸಿದ ಚಿಕ್ಕಮಗಳೂರು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

chikkamagaluru

ದುಃಖದ ಮಡುವಿನಲ್ಲೂ ಪತಿಯ ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದ ಪತ್ನಿ

Published

on

ಚಿಕ್ಕಮಗಳೂರು: ಪತಿಯ ಸಾವಿನ ಅಗಾಧ ನೋವಿನ ನಡುವೆಯೂ ಅಂಗಾಂಗ ದಾನ ಮಾಡುವ ಮೂಲಕ ಪತ್ನಿ ಸಾರ್ಥಕತೆ ಮೆರೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ.


ಕೊಪ್ಪ ತಾಲೂಕಿನ ನಿವಾಸಿ, ಮಂಜುನಾಥ್‌(35) ಮೃತಪಟ್ಟ ದುರ್ದೈವಿ. ಆಟೋ ಅಪಘಾತದಲ್ಲಿ ಮಂಜುನಾಥ್‌ ಅವರ ಮೆದುಳು ನಿಷ್ಕ್ರಿಯ ಗೊಂಡಿದ್ದರಿಂದ ಸಾವನ್ನಪ್ಪಿದ್ದರು. ಇದೀಗ ಪತ್ನಿ ಅಪೂರ್ವ ಶೆಟ್ಟಿ ಅವರು ಧೈರ್ಯದಿಂದ ಅಂಗಾಂಗ ದಾನಕ್ಕೆ ಸಮ್ಮತಿ ನೀಡಿ, ಇತರರ ಬದುಕಿಗೆ ಬೆಳಕಾಗಿದ್ದಾರೆ. ಇಂದು ಮಧ್ಯಾಹ್ನ ಮಂಜುನಾಥ್‌ ಅವರ ಹೃದಯ, ಕಿಡ್ನಿ, ಲಿವರ್‌ ಸೇರಿ ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ.

ಈ ಮೊದಲು ಮಣಿಪಾಲ್‌ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಿ ಫೀಸ್‌ ಫ್ರೀ ಮಾಡಿಕೊಡ್ತೀವಿ ಎಂದಾಗ, ಪತಿ ತೀರಿಕೊಂಡ ದುಃಖದಲ್ಲಿದ್ದ ಪತ್ನಿ ಅದಕ್ಕೆ ಒಪ್ಪಿಕೊಂಡಿರಲಿಲ್ಲ. ಮನಸ್ಸು ಕರಗಿದ ಬಳಿಕ ಮಂಜುನಾಥ್‌ ಪತ್ನಿ ಅಪೂರ್ವ ಶೆಟ್ಟಿ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಕೊಪ್ಪ ತಾಲೂಕಿನ ಪ್ರಶಮನಿ ಆಸ್ಪತ್ರೆಯಲ್ಲಿ ಈ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ಟ್ರಿಮ್ಮರ್‌ನಿಂದ ಪತ್ನಿಯ ತಲೆ ಬೋಳಿಸಿದ ಪತಿ!

4 ವರ್ಷ ಹಾಗೂ 1 ವರ್ಷದ 2 ಗಂಡು ಮಕ್ಕಳಿರೋ ಈ ಕುಟುಂಬಕ್ಕೆ ಇದ್ದ ಏಕೈಕ ಆಸರೆ ಮಂಜುನಾಥ್ ಇನ್ನಿಲ್ಲವಾಗಿದ್ದಾರೆ. ಹೀಗಾಗಿ, ಈ ಬಡ ಕುಟುಂಬ ಮಕ್ಕಳ ವಿದ್ಯಾಬ್ಯಾಸದ ಬಗ್ಗೆ ಸಂಘ ಸಂಸ್ಥೆಗಳ ಸಹಾಯ ಬಯಸಿದೆ ಎಂದು ತಿಳಿದು ಬಂದಿದೆ.

Continue Reading

chikkamagaluru

ಚಿಕ್ಕಮಗಳೂರು: ಗಣತಿ ವೇಳೆ ಪತ್ತೆಯಾಯ್ತು ಹುಲಿ ಕಳೇಬರ

Published

on

ಚಿಕ್ಕಮಗಳೂರು: ಹುಲಿ ಗಣತಿ ವೇಳೆ ಹುಲಿಯೊಂದರ ಕಳೇಬರ ಪತ್ತೆಯಾಗಿರುವ ಘಟನೆ ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಹೆಬ್ಬೆ ವಲಯ ಅರಣ್ಯದ ಗಂಗೆ ಗಿರಿಯಲ್ಲಿ ಬೆಳಕಿಗೆ ಬಂದಿದೆ.


ಸುಮಾರು 8ರಿಂದ 10 ವರ್ಷ ಪ್ರಾಯದ ಗಂಡು ಹುಲಿ ಎಂದು ಗುರುತಿಸಲಾಗಿದೆ. ಹುಲಿಗಳ ನಡುವೆ ನಡೆದ ಕಾದಾಟದಲ್ಲಿ ನಿತ್ರಾಣಗೊಂಡು ಮೃತಪಟ್ಟಿದೆ ಎಂಬ ಶಂಕೆ ವ್ಯಕ್ತವಾಗಿದೆ. ಹುಲಿಯ ದೇಹವು 5-6 ದಿನಗಳ ಹಿಂದೆಯೇ ಮೃತಪಟ್ಟಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: ಮಂಗಳೂರು: ದೋಣಿಗೆ ಹಗ್ಗ ಕಟ್ಟುತ್ತಿದ್ದಾಗ ನದಿಗೆ ಬಿದ್ದು ಮೀನುಗಾರ ಸಾ*ವು

ಸ್ಥಳಕ್ಕೆ ಧಾವಿಸಿದ ವನ್ಯಜೀವಿ ವಿಭಾಗದ ಅಧಿಕಾರಿಗಳು, ಪಶುವೈದ್ಯರು ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಕಳೇಬರವನ್ನು ಅಧಿಕಾರಿಗಳು ಸುಟ್ಟಿದ್ದಾರೆ.

Continue Reading

chikkamagaluru

ಮಗನನ್ನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ತಂದೆ

Published

on

ಚಿಕ್ಕಮಗಳೂರು: ಮಗನನ್ನು ತಂದೆಯೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಮಾಡಿದ ಭೀಕರ ಘಟನೆ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ನಿನ್ನೆ(ಜ.3) ರಾತ್ರಿ ನಡೆದಿದೆ.


ಪ್ರದೀಪ್‌ ಆಚಾರ್‌(29) ಮೃತಪಟ್ಟ ಯುವಕ. ರಮೇಶ್‌ ಆಚಾರ್‌ ಆರೋಪಿ ತಂದೆ.

ಕುಡುಕರಾಗಿದ್ದ ತಂದೆ-ಮಗ ಇಬ್ಬರೂ ಮನೆಯಲ್ಲಿ ಸಣ್ಣಪುಟ್ಟ ಕಾರಣಕ್ಕೆ ಆಗಾಗ ಗಲಾಟೆ ಮಾಡುತ್ತಿದ್ದು, ಇದರಿಂದ ಬೇಸತ್ತ ರಮೇಶ್‌ ಪತ್ನಿ ತನ್ನ ತವರು ಮನೆಗೆ ತೆರಳಿದ್ದರು. ಬಳಿಕ ಮನೆಯಲ್ಲಿ ತಂದೆ-ಮಗ ಇಬ್ಬರೇ ವಾಸವಿದ್ದರು ಎಂದು ತಿಳಿದು ಬಂದಿದೆ.

ಶನಿವಾರ ರಾತ್ರಿ ಅಪ್ಪ-ಮಗನ ಮಧ್ಯೆ ಜಗಳ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ರಮೇಶ್‌ ಮಗನ ಮೇಲೆ ಮಚ್ಚಿನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಪ್ರದೀಪ್‌ ಮೃತಪಟ್ಟಿದ್ದಾರೆ. ಇಂದು(ಜ.4) ಬೆಳಿಗ್ಗೆ ಮಾಹಿತಿ ತಿಳಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪತ್ನಿಯನ್ನು ಕೊ*ಲ್ಲಲು 15 ದಿನಗಳ ಟ್ರೈನಿಂಗ್ ಪಡೆದಿದ್ದ ಪತಿ!

ಘಟನಾ ಸ್ಥಳಕ್ಕೆ ಧಾವಿಸಿದ ಬಾಳೂರು ಠಾಣಾ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page