Connect with us

LATEST NEWS

ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಶವ ಪತ್ತೆ, ಹಲವರು ಸಾವು ಶಂಕೆ

Published

on

ತಮಿಳುನಾಡು: ತಮಿಳುನಾಡಿನ ವಿರುದುನಗರ ಜಿಲ್ಲೆಯ ಸತ್ತೂರು ಪ್ರದೇಶದಲ್ಲಿ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಇದುವರೆಗೆ 6 ಮೃತದೇಹಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.

ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕಾರ್ಖಾನೆ ಪರವಾನಗಿ ಹೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಸಾಯನಿಕಗಳನ್ನು ಬೆರೆಸುವ ಪ್ರಕ್ರಿಯೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮೇ 9 ರಂದು ತಮಿಳುನಾಡಿನ ಶಿವಕಾಶಿ ಬಳಿಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ್ದ ಭಾರೀ ಸ್ಫೋಟದಲ್ಲಿ 8 ಮಂದಿ ಸಾವನ್ನಪ್ಪಿದ್ದರು.

Advertisement
Click to comment

Leave a Reply

Your email address will not be published. Required fields are marked *

LATEST NEWS

ಪ್ರಾಣ ಕೊಡುವ ಸ್ನೇಹಿತರೇ ಜೀವ ತೆಗೆದರು ; ಗೆಳೆಯನನ್ನೇ ಅಪಹರಿಸಿ ಕೊಲೆ

Published

on

ಮಂಗಳೂರು/ನವದೆಹಲಿ: ಸ್ನೇಹಿತರೆಂದರೆ ಪ್ರಾಣಕ್ಕೆ ಪ್ರಾಣ ಕೊಡುವವರು ಎಂದು ಹೇಳುತ್ತಾರೆ. ಆದರೆ. ಅಂತಹ ಸ್ನೇಹಿತರೇ ಮೃತ್ಯುಸ್ವರೂಪಿಯಾಗಿದ್ದರೆ ?? ಅದನ್ನೆಲ್ಲಾ ಊಹಿಸಲೂ ಅಸಾಧ್ಯ. ಆದರೆ ಇದೀಗ ಅದೇ ಘಟನೆ ವಾಸ್ತವಕ್ಕೆ ತಿರುಗಿದೆ. ಸ್ನೇಹಿತರೇ ತಮ್ಮ ಗೆಳೆಯನನ್ನು ಅಪಹರಿಸಿ ಭೀಕರವಾಗಿ ಕೊಲೆಗೈದಿರುವ ಘಟನೆ ನವದೆಹಲಿಯ ವಜೀರಾಬಾದ್ ಪ್ರದೇಶದಲ್ಲಿ ನಡೆದಿದೆ.

ಏನಿದು ಘಟನೆ ?

ಸ್ನೇಹಿತರೇ ತನ್ನ ಗೆಳೆಯನನ್ನು ಅಪಹರಿಸಿ ಕೊಲೆಗೈದಿದ್ದಾರೆ. 9ನೇ ತರಗತಿ ವಿದ್ಯಾರ್ಥಿಯನ್ನು ಅಪಹರಿಸಿ ಫೋನ್ ಮೂಲಕ ಕುಟುಂಬದವರ ಬಳಿ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಆದರೆ ಪ್ರಕರಣ ಭಾರಿ ತಿರುವು ಪಡೆದುಕೊಂಡಿದೆ. ಬಾಲಕನನ್ನು ಭಲ್ಸ್ವಾ ಸರೋವರದ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದು, ಅಲ್ಲಿ ಹಲವು ಬಾರಿ ಇರಿದು, ಶವವನ್ನು ಎಸೆದು ಹೋಗಿದ್ದಾರೆ.

ಮೃತನ ದೇಹದಲ್ಲಿ ಹಲವಾರು ಇರಿತದ ಗಾಯಗಳಿದ್ದು, ಅದೊಂದು ಭೀಕರ ಕೊಲೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ನಂತರ ದೆಹಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಅಪರಾಧದ ಹಿಂದಿನ ಉದ್ದೇಶ ಮತ್ತು ಹೆಚ್ಚಿನ ಜನರು ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Continue Reading

LATEST NEWS

ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ಡಿವೋರ್ಸ್ ಕಾರಣ ಕೊನೆಗೂ ಬಯಲು …!

Published

on

ಮಂಗಳೂರು/ಮುಂಬೈ : ಮಾರ್ಚ್ 20 ರಂದು ಮುಂಬೈನ ಬಾಂದ್ರಾದಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ವಿಚ್ಛೇದನ ಪಡೆಯುವ ಮೂಲಕ ಅಧಿಕೃತವಾಗಿ ತಮ್ಮ ದಾಂಪತ್ಯ ಜೀವನ ಕೊನೆಗೊಳಿಸಿದ್ದಾರೆ. ಆದರೆ ಈ ಸ್ಟಾರ್ ಜೋಡಿಯ ವಿಚ್ಛೇದನಕ್ಕೆ ಕಾರಣವೇನು ಎಂಬುದು ಮಾತ್ರ ಬಹಿರಂಗವಾಗಿರಲಿಲ್ಲ. ಆದರೀಗ ಇಬ್ಬರು ದೂರವಾಗಲು ಅಸಲಿ ಕಾರಣ ಏನು ಎಂಬ ಸತ್ಯಾಂಶ ಬಯಲಾಗಿದೆ.

ಡಿವೋರ್ಸ್‌ಗೆ ಕಾರಣವೇನು ?

ಮೂಲಗಳ ಪ್ರಕಾರ, ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಅವರ ಸಂಬಂಧದಲ್ಲಿ ಬಿರುಕು ಮೂಡಲು ಮುಖ್ಯ ಕಾರಣ ವಾಸ ಸ್ಥಳದಲ್ಲಿನ ಭಿನ್ನಾಭಿಪ್ರಾಯ. ಇಬ್ಬರೂ ತಮ್ಮ ವಾಸಸ್ಥಳದ ಬಗ್ಗೆ ಒಮ್ಮತಕ್ಕೆ ಬಂದಿರಲಿಲ್ಲ. ಈ ಕಾರಣದಿಂದಾಗಿ ಅವರು ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು. ಡಿಸೆಂಬರ್ 2020 ರಲ್ಲಿ ಮದುವೆಯಾದ ನಂತರ, ಧನಶ್ರೀ ಹರಿಯಾಣದಲ್ಲಿ ಚಹಲ್ ಮತ್ತು ಅವರ ಪೋಷಕರೊಂದಿಗೆ ವಾಸಿಸಲು ತೆರಳಿದ್ದರು. ಆದರೆ, ಕೆಲವು ದಿನಗಳ ನಂತರ ಧನಶ್ರೀ ಮುಂಬೈನಲ್ಲಿ ಉಳಿಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಂಬೈನಲ್ಲೇ ಮನೆ ಮಾಡಬೇಕೆಂದು ಅಗ್ರಹಿಸಿದ್ದರು. ಆದರೆ ಇದು ಯುಜ್ವೇಂದ್ರ ಚಹಲ್​ ಅವರಿಗೆ ಇಷ್ಟವಿರಲಿಲ್ಲ.

ಧನಶ್ರೀ ವರ್ಮಾ ಮುಂಬೈನಲ್ಲೇ ವಾಸಿಸಲು ಬಯಸುತ್ತಿದ್ದರು. ಆದರೆ ಯುಜ್ವೇಂದ್ರ ಚಹಲ್ ತನ್ನ ಪತ್ನಿಯು ಹರಿಯಾಣದಲ್ಲಿರುವ ತಾಯಿಯೊಂದಿಗೆ ಇರಬೇಕೆಂದು ಆಗ್ರಹಿಸಿದ್ದರು. ಆದರೆ ಇದಕ್ಕೆ ಧನಶ್ರೀ ವರ್ಮಾ ಸಿದ್ಧರಿರಲಿಲ್ಲ. ಇತ್ತ ತನ್ನ ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಲು ಯುಜ್ವೇಂದ್ರ ಚಹಲ್ ಸಹ ಸಿದ್ಧನಾಗಿರಲಿಲ್ಲ. ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಲಾರಂಭಿಸಿದೆ. ಈ ಭಿನ್ರಾಭಿಪ್ರಾಯವೇ ಡೈವೋರ್ಸ್ ಹಂತಕ್ಕೆ ಹೋಗಿದೆ ಎಂದು ತಿಳಿದು ಬಂದಿದೆ.

Continue Reading

LATEST NEWS

ಮುಂಬರುವ ಅಮವಾಸ್ಯೆಯಂದು ಹೀಗೆ ಮಾಡಿ ..! ಶನಿ ದೋಷದಿಂದ ಮುಕ್ತಿ ಪಡೆಯಿರಿ ..!

Published

on

ಶನಿ ದೇವರ ಪೂಜೆಗೆ ಅತ್ಯಂತ ಮಂಗಳಕರವಾಗಿರುವ ದಿನ ಎಂದು ‘ಶನಿ ಅಮವಾಸ್ಯೆ’ ದಿನವನ್ನು ಗುರುತಿಸಲಾಗುತ್ತದೆ. ಈ ದಿನ ಕರ್ಮದಾತ ಮತ್ತು ನ್ಯಾಯದ ದೇವರು ಶನಿ ದೇವರನ್ನು ಪೂಜಿಸುವುದು ಬಹಳ ವಿಶೇಷ ಎಂದು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಸೂಚಿಸಲಾಗಿದೆ. ಶನಿ ಅಮವಾಸ್ಯೆಯಂದು ಶನಿ ದೇವರನ್ನು ಭಕ್ತಿಯಿಂದ ಪೂಜಿಸಿದರೆ, ಜೀವನದ ಎಲ್ಲಾ ತೊಂದರೆಗಳಿಂದ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಿದೆ. ಈ ದಿನ ಶನಿ ದೇವರನ್ನು ಪೂಜಿಸುವುದರ ಜೊತೆಗೆ, ಕೆಲವು ವಿಶೇಷ ಕ್ರಮಗಳ ಪಾಲನೆಯೂ ಅಗತ್ಯ. ಅದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ .

ಶನಿ ಅಮಾವಾಸ್ಯೆ ಯಾವಾಗ?

ಮಾರ್ಚ್ 29 ರಂದುಈ ವರ್ಷದ ಶನಿ ಅಮಾವಾಸ್ಯೆ ಬರಲಿದೆ. ಇದು ಚೈತ್ರ ಮಾಸದ ಅಮಾವಾಸ್ಯೆಯ ದಿನವಾಗಿರುತ್ತದೆ. ಈ ದಿನ ಶನಿದೇವನು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಚೈತ್ರ ಮಾಸದ ಈ ಶನಿ ಅಮಾವಾಸ್ಯೆ ಮಾರ್ಚ್ 28 ರಂದು ಸಂಜೆ 7:55 ಕ್ಕೆ ಪ್ರಾರಂಭವಾಗಿ ಮಾರ್ಚ್ 29 ರಂದು ಸಂಜೆ 4:27 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಉದಯ ತಿಥಿಯ ಪ್ರಕಾರ, ಶನಿ ಅಮಾವಾಸ್ಯೆ ಮಾರ್ಚ್ 29 ರಂದು ಬರುತ್ತದೆ. ಇದು ಈ ವರ್ಷದ ಮೊದಲ ಶನಿ ಅಮಾವಾಸ್ಯೆ. ಈ ದಿನ ಸೂರ್ಯಗ್ರಹಣ ಕೂಡ ಇರುತ್ತದೆ.

ಶನಿ ಅಮಾವಾಸ್ಯೆಯ ದಿನ ಹೀಗೆ ಮಾಡಿದರೆ ಒಳ್ಳೆಯದು :

ಎಳ್ಳೆಣ್ಣೆ ಅರ್ಪಣೆ :

ಶನಿ ಅಮವಾಸ್ಯೆಯ ದಿನ ಶನಿ ದೇವರಿಗೆ ಸಾಸಿವೆ ಅಥವಾ ಎಳ್ಳೆಣ್ಣೆಯನ್ನು ಅರ್ಪಿಸಬೇಕು. ಅಲ್ಲದೆ, ಓಂ ಶಂ ಶನೈಶ್ಚರಾಯ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಹೀಗೆ ಮಾಡುವುದರಿಂದ ಶನಿ ದೇವರ ಆಶೀರ್ವಾದ ಸಿಗುತ್ತದೆ. ಅಲ್ಲದೆ, ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ಅರಳಿ ಮರಕ್ಕೆ ನೀರು ಅರ್ಪಿಸಿ ಮತ್ತು ದೀಪ ಹಚ್ಚುವುದು :

ಮಾರ್ಚ್ 29 ರಂದು ಬರುವ ಶನಿ ಅಮವಾಸ್ಯೆಯ ದಿನ ಅರಳಿ ಮರಕ್ಕೆ ನೀರನ್ನು ಅರ್ಪಿಸಬೇಕು. ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು. ಹನುಮಾನ್ ಚಾಲೀಸಾ ಪಠಿಸಬೇಕು. ಇದು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ.

ದಾನ ಮಾಡುವುದು :

ಶನಿ ಅಮಾವಾಸ್ಯೆಯ ದಿನದಂದು ಕಪ್ಪು ಎಳ್ಳು, ಉದ್ದಿನ ಬೇಳೆ ಮತ್ತು ಕಬ್ಬಿಣದ ವಸ್ತುಗಳನ್ನು ದಾನ ಮಾಡಬೇಕು. ಬೆಲ್ಲ ಮತ್ತು ಹಿಟ್ಟಿನ ಸಣ್ಣ ಉಂಡೆಗಳನ್ನು ಮಾಡಿ ಇರುವೆಗಳಿಗೆ ತಿನ್ನಿಸಬೇಕು. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಸಂತುಷ್ಟಳಾಗುತ್ತಾಳೆ. ಶನಿ ದೋಷದಿಂದ ಪರಿಹಾರ ಸಿಗುತ್ತದೆ. ಇದಲ್ಲದೆ, ಸಂಪತ್ತು ಮತ್ತು ಆಸ್ತಿಯಲ್ಲಿ ಹೆಚ್ಚಳವಾಗುತ್ತದೆ.

Continue Reading
Advertisement

Trending

Copyright © 2025 Namma Kudla News

You cannot copy content of this page