ಕನ್ನಡ ಚಿತ್ರರಂಗ ಕಂಡ ಅಮೋಘ ರತ್ನ ಪುನೀತ್ ರಾಜ್ ಕುಮಾರ್ ನಿಧನ ಎಲ್ಲರಿಗೂ ಎಂದಿಗೂ ಅರಗಿಸಿಕೊಳ್ಳಲಾಗದ ಸಂಗತಿ. ಸಾಮಾನ್ಯ ಮಂದಿಗೇ ಹೀಗನಿಸಿರಬೇಕಾದರೆ, ಇನ್ನು ಅವರ ಪತ್ನಿಗೆ ಹೇಗಾಗಬೇಡ. ಅಪ್ಪು ನಿಧನದ ನಂತರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೆಗಲಿಗೆ ಹಲವು ಜವಾಬ್ದಾರಿ ಏರಿದೆ. ಇದೀಗ ನಿಧಾನವಾಗಿ ಸಿನಿಮಾ ಕೆಲಸಗಳಲ್ಲಿ ಅಶ್ವಿನಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇನ್ನು ಸಿನಿಮಾ ಕಾರ್ಯಕ್ರಮಗಳಲ್ಲಿ ಕೂಡ ಭಾಗಿ ಆಗುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ಮುಗಿಸಬೇಕಾಗಿದ್ದ ಕೆಲಸಗಳನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಂದುವರೆಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಅದಾಗಲೇ ಅಪ್ಪು ಒಂದಷ್ಟು ಕಥೆಗಳನ್ನು ಫೈನಲ್ ಮಾಡಿ ಸಿನಿಮಾ ನಿರ್ಮಾಣ ಆರಂಭಿಸಿದ್ದರು. ಆ ಸಿನಿಮಾಗಳು ಇದೀಗ ಬಿಡುಗಡೆಗೆ ಸಜ್ಜಾಗುತ್ತಿವೆ.
ಸದ್ಯ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಐಷಾರಾಮಿ ಕಾರು ಖರೀದಿಸಿದ್ದಾರೆ. ಅಪ್ಪುಗೂ ಕಾರು, ಬೈಕ್ ಅಂದ್ರೆ ಅಚ್ಚುಮೆಚ್ಚು. ಸಾಕಷ್ಟು ಐಷಾರಾಮಿ ಕಾರುಗಳು ಅವರ ಬಳಿ ಇವೆ. ಆ ಪಟ್ಟಿಗೆ ಇದೀಗ ಆಡಿಕ್ಯೂ 7 ಕಾರು ಸೇರಿಕೊಂಡಿದೆ. ಆಡಿ ಕ್ಯೂ7 ಕಾರಿನ ಆನ್‌ರೋಡ್ ಬೆಲೆ 1 ಕೋಟಿ 10 ಲಕ್ಷ ರೂ.ವರೆಗೂ ಆಗುತ್ತದೆ.
ಇದನ್ನೂ ಓದಿ ಬಾಲಿವುಡ್ ನಟಿ ಸಾರಾ ಅಲಿಖಾನ್ ವಿಡಿಯೋ ವೈರಲ್… !
ಲ್ಯಾಂಬೋರ್ಗಿನಿ ಕಾರು ಉಡುಗೊರೆ ನೀಡಿದ್ದ ಅಪ್ಪು :

2019ರಲ್ಲಿ ಪತ್ನಿಗೆ ಪುನೀತ್ ರಾಜ್‌ಕುಮಾರ್ ಲ್ಯಾಂಬೋರ್ಗಿನಿ ಕಾರು ಉಡುಗೊರೆಯಾಗಿ ನೀಡಿದ್ದು ಭಾರೀ ಸುದ್ದಿ ಆಗಿತ್ತು. ಮಹಿಳಾ ದಿನಾಚರಣೆ ದಿನವೇ ಪತ್ನಿಗೆ ಅಪ್ಪು ಸರ್‌ಪ್ರೈಸ್ ನೀಡಿದ್ದರು. ಬರೋಬ್ಬರಿ 5 ಕೋಟಿ ರೂ. ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ನೀಲಿ ಬಣ್ಣದ ಕಾರು ಅದಾಗಿತ್ತು. ಶೋರೂಂನಲ್ಲಿ ಅಪ್ಪು ಕಾರು ಖರೀದಿಸಿದ್ದ ಫೋಟೊಗಳು ಸಖತ್ ವೈರಲ್ ಆಗಿತ್ತು.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಡಿ ಕ್ಯೂ7 ಕಾರು ಖರೀದಿಸಿರುವ ವಿಚಾರವನ್ನು ಆಡಿ ಬೆಂಗಳೂರು ಸೆಂಟ್ರಲ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಅಭಿಮಾನಿಗಳು ಅಶ್ವಿನಿ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ಇದನ್ನೂ ಓದಿ ಹಿಂದಿಗೆ ರಿಮೇಕ್ ಆಗುತ್ತಿದೆ ಝೀ ಕನ್ನಡದ ಫೇಮಸ್ ಸೀರಿಯಲ್…! ಪ್ರೋಮೋ ರಿಲೀಸ್..!

ಸದ್ಯ ಸಿನಿಮಾ ಕೆಲಸಗಳಲ್ಲಿ ಅಶ್ವಿನಿ ಬಿಝಿಯಾಗಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಾಣದ ‘O2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪುನೀತ್ ರಾಜ್‌ಕುಮಾರ್ ಕಥೆ ಕೇಳಿ ಒಪ್ಪಿ ಆರಂಭಿಸಿದ ಕೊನೆಯ ಸಿನಿಮಾಗಳಲ್ಲಿ ಇದು ಒಂದು. ರಾಘವ್ ನಾಯಕ್ ಹಾಗೂ ಪ್ರಶಾಂತ್ ರಾಜ್ ನಿರ್ದೇಶನದ ಈ ಥ್ರಿಲ್ಲರ್ ಚಿತ್ರದಲ್ಲಿ ಆಶಿಕಾ ರಂಗನಾಥ್ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಈಗಾಗಲೇ ಟೀಸರ್ ಬಿಡುಗಡೆಯಾಗಿದೆ.