Connect with us

NATIONAL

ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಬಂಧನಕ್ಕೆ ಅರೆಸ್ಟ್ ವಾರೆಂಟ್ ಜಾರಿ !

Published

on

ಮಂಗಳೂರು/ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ವಿರುದ್ದ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಉದ್ಯೋಗಿಗಳಿಗೆ ಮತ್ತು ಸರ್ಕಾರಕ್ಕೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ವಾರೆಂಟ್ ಜಾರಿ ಮಾಡಲಾಗಿದೆ.

ರಾಬಿನ್ ಉತ್ತಪ್ಪ ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ನಡೆಸುತ್ತಿದ್ದರು. ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಲವರ ಪಿಎಫ್ ಹಣ ಪಾವತಿಸದೇ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಎಷ್ಟು ದಿನ ಅಂತಾ ಈ ತಾರತಮ್ಯ ಸಹಿಸೋಕೆ ಸಾಧ್ಯ; ಸ್ಪೋಟಕ ಹೇಳಿಕೆ ನೀಡಿದ ಅಶ್ವಿನ್ ತಂದೆ !

ರಾಬಿನ್ ಉತ್ತಪ್ಪ ಒಡೆತನದ ಕಂಪೆನಿಯು ಉದ್ಯೋಗಿಗಳ ಪಿಎಫ್ ಖಾತೆಗೆ ಹಣ ಹಾಕದೆ 23 ಲಕ್ಷ ರೂ. ವಂಚನೆ ಆರೋಪ ಕೇಳಿ ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಿಎಫ್ ಓ ರಿಜಿನಲ್ ಕಮಿಷನರ್ ಷಡಾಕ್ಷಿರಿ ಗೋಪಾಲ ರೆಡ್ಡಿ ಅವರು, ರಾಬಿನ್ ಉತ್ತಪ್ಪ ಅವರನ್ನು ಬಂಧಿಸುವಂತೆ ಇದೇ ತಿಂಗಳು ನಾಲ್ಕರಂದು ಪುಲಕೇಶಿ ನಗರ ಪೊಲೀಸರಿಗೆ ಪತ್ರ ಬರೆದಿದ್ದಾರೆ.

ಈ ಹಿನ್ನಲೆಯಲ್ಲಿ ರಾಬಿನ್ ಉತ್ತಪ್ಪ ಅವರಿಗೆ ನೋಟಿಸ್ ನೀಡಲು ಪೊಲೀಸರು ಅವರ ಮನೆಗೆ ತೆರಳಿದ್ದರು. ಆದರೆ ಪ್ರಸ್ತುತ ಆ ವಿಳಾಸದಲ್ಲಿ ಅವರು ವಾಸವಿಲ್ಲ. ಹೀಗಾಗಿ ಇದೀಗ ಉತ್ತಪ್ಪ ಅವರಿಗೆ ವಾರೆಂಟ್ ಜಾರಿಗೊಳಿಸಲಾಗಿದೆ.

ಸದ್ಯ ರಾಬಿನ್ ಉತ್ತಪ್ಪ ಭಾರತವನ್ನು ತೊರೆದು ದುಬೈನಲ್ಲಿ ನೆಲೆಸಿದ್ದಾರೆ. ಇದೀಗ ಅವರ ವಿರುದ್ದ ಪ್ರಕರಣ ದಾಖಲಾಗಿರುವ ಕಾರಣ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ.

ಭಾರತ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಟೀಮ್ ಇಂಡಿಯಾ ಪರ ಒಟ್ಟು 59 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಏಕದಿನ ಕ್ರಿಕೆಟ್​ನಲ್ಲಿ 934 ರನ್ ಕಲೆಹಾಕಿದರೆ, ಟಿ20 ಕ್ರಿಕೆಟ್​ನಲ್ಲಿ 249 ರನ್ ಸಿಡಿಸಿದ್ದಾರೆ. ಇದರ ನಡುವೆ 7 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ ನಿವೃತ್ತರಾಗಿರುವ ರಾಬಿನ್ ಕೆಲ ಲೀಗ್​​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

LATEST NEWS

ಹಮಾಸ್ ಬೆಂಬಲಿಸಿದ ಭಾರತೀಯ ವಿದ್ಯಾರ್ಥಿನಿಯ ಅಮೆರಿಕ ವೀಸಾ ರದ್ದು, ಸ್ವಯಂ ಗಡಿಪಾರು

Published

on

ಮಂಗಳೂರು/ವಾಷಿಂಗ್ಟನ್ : ಹಮಾಸ್‌ಗೆ ಬೆಂಬಲ ವ್ಯಕ್ತಪಡಿಸಿದ ಭಾರತೀಯ ವಿದ್ಯಾರ್ಥಿಯ ವೀಸಾವನ್ನು ಅಮೆರಿಕ ರದ್ದುಗೊಳಿಸಿದೆ. ಹೀಗಾಗಿ ಆಕೆ ಸ್ವಯಂ ಗಡಿಪಾರಾಗಿದ್ದಾಳೆ ಎಂದು ವರದಿಗಳು ತಿಳಿಸಿವೆ. ಭಾರತದ ಪ್ರಜೆ ರಂಜನಿ ಶ್ರೀನಿವಾಸನ್ ಎಫ್ – 1 ವಿದ್ಯಾರ್ಥಿ ಕಲಿಕಾ ವೀಸಾದಲ್ಲಿ ಅಮೆರಿಕಕ್ಕೆ ತೆರಳಿದ್ದರು. ವರದಿಗಳ ಪ್ರಕಾರ, ಆಕೆ ಕೊಲಂಬಿಯಾದ ಗ್ರಾಜುಯೇಟ್ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಪ್ಲಾನಿಂಗ್ ಮತ್ತು ಪ್ರಿಸರ್ವೇಶನ್‌ನಲ್ಲಿ ಸಂಶೋಧನೆ ನಡೆಸುತ್ತಿದ್ದರು.

ರಂಜನಿ ಶ್ರೀನಿವಾಸನ್ ಭಯೋತ್ಪಾದಕ ಸಂಘಟನೆಯಾದ ಹಮಾಸ್ ಅನ್ನು ಬೆಂಬಲಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಹೀಗಾಗಿ ಮಾರ್ಚ್ 5 ರಂದು, ವಿದೇಶಾಂಗ ಇಲಾಖೆ ಅವರ ವೀಸಾವನ್ನು ರದ್ದುಗೊಳಿಸಿದೆ. ಹೀಗಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳುವ ಮೊದಲು ರಂಜನಿ ಹೋಮ್ ಅಪ್ಲಿಕೇಶನ್ ಮೂಲಕ ಸ್ವಯಂ ಗಡಿಪಾರಾಗಿದ್ದಾರೆ. ಇಲ್ಲವಾದಲ್ಲಿ ಅಮೆರಿಕ ಮಿಲಿಟರಿ ವಿಮಾನದ ಮೂಲಕ ಮನೆಗೆ ಕಳುಹಿಸಲಾಗುತ್ತಿತ್ತು.

ಗೃಹ ಭದ್ರತಾ ಕಾರ್ಯದರ್ಶಿ ಪೋಸ್ಟ್ :

ರಂಜನಿ ಶ್ರೀನಿವಾಸನ್ ವಿಮಾನ ನಿಲ್ದಾಣದಲ್ಲಿದ್ದ ವೀಡಿಯೋವೊಂದನ್ನು ಗೃಹ ಭದ್ರತಾ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ‘ಕೌನ್ ಬನೇಗಾ ಕರೋಡ್‌ಪತಿ-17’ರ ನಿರೂಪಕರ ಕುರಿತ ವದಂತಿಗೆ ತೆರೆ ಎಳೆದ ಬಿಗ್‌ ಬಿ

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಾಸಿಸಲು ಮತ್ತು ಅಧ್ಯಯನ ಮಾಡಲು ವೀಸಾ ಪಡೆಯುವುದು ಒಂದು ಸೌಭಾಗ್ಯ. ನೀವು ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸುವಾಗ ಆ ಸವಲತ್ತು ರದ್ದುಗೊಳ್ಳುತ್ತದೆ. ನೀವು ಈ ದೇಶದಲ್ಲಿ ಇರಲು ಅರ್ಹರಲ್ಲ. ಕೊಲಂಬಿಯಾ ವಿಶ್ವವಿದ್ಯಾಲಯದ ಭಯೋತ್ಪಾದಕ ಸಹಾನುಭೂತಿ ಹೊಂದಿರುವ ಒಬ್ಬರು ಸ್ವಯಂ ಗಡೀಪಾರು ಮಾಡಲು CBP ಹೋಮ್ ಅಪ್ಲಿಕೇಶನ್ ಅನ್ನು ಬಳಸುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.

Continue Reading

LATEST NEWS

‘ಕೌನ್ ಬನೇಗಾ ಕರೋಡ್‌ಪತಿ-17’ರ ನಿರೂಪಕರ ಕುರಿತ ವದಂತಿಗೆ ತೆರೆ ಎಳೆದ ಬಿಗ್‌ ಬಿ

Published

on

ಮಂಗಳೂರು/ಮುಂಬೈ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕೌನ್ ಬನೇಗಾ ಕರೋಡ್‌ಪತಿ-16’ರ ಅಂತಿಮ ಸಂಚಿಕೆಯಲ್ಲಿ ಮುಂದಿನ ಹೋಸ್ಟ್ ಯಾರು ಎಂಬ ಬಗ್ಗೆ ನಟ ಅಮಿತಾಭ್ ಬಚ್ಚನ್ ಸ್ಪಷ್ಟನೆ ಕೊಟ್ಟಿದ್ದಾರೆ.

ವಾಸ್ತವವಾಗಿ, ಕೆಬಿಸಿ 16ರ ಇತ್ತೀಚಿನ ಸಂಚಿಕೆಯೊಂದರಲ್ಲಿ ಅಮಿತಾಭ್ ಬಚ್ಚನ್ ಕಾರ್ಯಕ್ರಮವನ್ನು ತೊರೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಈ ವೇಳೆ ಅವರು ಭಾವುಕರಾದರು. ತಾವು ಉತ್ತರಾಧಿಕಾರಿಯನ್ನು ಹುಡುಕುವಂತೆ ಚಾನೆಲ್‌ಗೆ ಹೇಳಿದ್ದಾಗಿ ಅವರು ಪ್ರತಿಪಾದಿಸಿದ್ದರು.

ಆದರೆ ಚಾನೆಲ್ ಹಾಗೆ ಮಾಡಲು ವಿಫಲವಾಯಿತು ಮತ್ತು ಅನಿವಾರ್ಯವಾಗಿ ಅವರು ‘ಕೌನ್ ಬನೇಗಾ ಕರೋಡ್‌ಪತಿ’ಯ 16 ನೇ ಸೀಸನ್ ಅನ್ನು ಹೋಸ್ಟ್ ಮಾಡಬೇಕಾಯಿತು ಎಂಬ ಬಗ್ಗೆ ವದಂತಿ ಹಬ್ಬಿದ್ದವು.

ಇದನ್ನೂ ಓದಿ: ‘ಕೌನ್ ಬನೇಗಾ ಕರೋಡ್‌ಪತಿ’ ಗೆ ಬಿಗ್ ಬಿ ಗುಡ್ ಬೈ? ಹೊಸ ಹೋಸ್ಟ್ ಯಾರು ಗೊತ್ತಾ?

ಆದರೆ ಸೀಸನ್ 16ರ ಕೊನೆಯ ಸಂಚಿಕೆಯಲ್ಲಿ ಈ ಬಗ್ಗೆ ಬಚ್ಚನ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ “ಮುಂದಿನ ಸೀಸನ್‌ನಲ್ಲಿ ಮತ್ತೆ ಸಿಗೋಣ” ಎನ್ನುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

Continue Reading

LATEST NEWS

ಕೊನೆಗೂ ಭೂಮಿಗೆ ಮರಳಲಿದ್ದಾರೆ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್

Published

on

ಮಂಗಳೂರು/ವಾಷಿಂಗ್ಟನ್: ಸುಮಾರು ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶನಿಲ್ದಾಣದಲ್ಲೇ ಉಳಿದುಕೊಂಡಿರುವ ಭಾರತದ ಮೂಲದ ಅಮೆರಿಕದ ಖಗೋಳ ವಿಜ್ಞಾನಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ಯಶಸ್ವಿಯಾಗಿ ಭೂಮಿಗೆ ವಾಪಸ್ ಕರೆತರಲು ಸ್ಪೇಸ್ ಎಕ್ಸ್ ನೆರವಿನಿಂದ ನಾಸಾ ಕಾರ್ಯಾಚರಣೆಯನ್ನು ಆರಂಭಿಸಿದೆ.


ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಸಂಜೆ ಸ್ಥಳೀಯ ಕಾಲಮಾನ 7.03ಕ್ಕೆ ಸರಿಯಾಗಿ ಸ್ಪೇಸ್ ಎಕ್ಸ್‌ನ ಫಾಲ್ಕನ್‌-9 ರಾಕೆಟ್ ಉಡಾವಣೆಯಾಗಿದೆ.

ಈ ಸಂಬಂಧ ನಾಸಾ ಹಾಗೂ ಸ್ಪೇಸ್ ಎಕ್ಸ್ ಮಾಹಿತಿ ಹಾಗೂ ವೀಡಿಯೋವನ್ನು ಹಂಚಿಕೊಂಡಿದೆ. ನಾಸಾದ ಸ್ಪೇಸ್ ಎಕ್ಸ್ ಡ್ರ್ಯಾಗನ್ ಸ್ಪೇಸ್ ಕ್ರಾಫ್ಟ್ ಕ್ರೂ 10 ಉಡ್ಡಯನ ಯಶಸ್ವಿಯಾಗಿದೆ ಎಂದು ನಾಸಾ ಘೋಷಿಸಿದೆ.

ಇದನ್ನೂ ಓದಿ: ಬ್ಯಾಹ್ಯಾಕಾಶದಲ್ಲಿರುವ ಸುನೀತಾ ವಿಲಿಯಮ್ಸ್‌ ಈಗ ಹೇಗಿದ್ದಾರೆ ಗೊತ್ತಾ ?

ಈ ಕಾರ್ಯಾಚರಣೆ ಹಲವು ದಿನಗಳ ಹಿಂದೆಯೇ ಆರಂಭವಾಗಬೇಕಿತ್ತು. ಆದರೆ, ಹಲವಾರು ತಾಂತ್ರಿಕ ಕಾರಣಗಳಿಂದಾಗಿ ಇದನ್ನು ಪದೇ ಪದೇ ಮುಂದೂಡುತ್ತಲೇ ಬರಲಾಗಿತ್ತು. ಕಡೆಗೂ ಅದಕ್ಕೆ ಕಾಲ ಕೂಡಿಬಂದಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page