Connect with us

FILM

ನಟ ಸೋನು ಸೂದ್ ವಿರುದ್ದ ಬಂಧನ ವಾರೆಂಟ್ ಜಾರಿ

Published

on

ಮಂಗಳೂರು/ಪಂಜಾಬ್ : ಖ್ಯಾತ ಬಾಲಿವುಡ್ ನಟ ಸೋನು ಸೂದ್ ವಿರುದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ.

ಲೂಧಿಯಾನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಮಣಪ್ರೀತ್ ಕೌರ್ ಅವರು ವಾರೆಂಟ್ ಹೊರಡಿಸಿದ್ದಾರೆ. ಲುಧಿಯಾನ ಮೂಲದ ವಕೀಲ ರಾಜೇಶ್ ಖನ್ನಾ ಅವರು ಮೋಹಿತ್ ಶುಕ್ಲಾ ವಿರುದ್ಧ 10 ಲಕ್ಷ ರೂ. ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಕಲಿ ರಿಜಿಕಾ ನಾಣ್ಯದಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ದೇಶದ್ರೋಹದ ಆರೋಪ; ಖ್ಯಾತ ನಟಿ ಅರೆಸ್ಟ್

ಸಾಕ್ಷ್ಯ ಹೇಳಲು ಸೋನು ಸೂದ್ ಅವರಿಗೆ ನ್ಯಾಯಾಲಯಕ್ಕೆ ಬರುವಂತೆ ಸೂಚಿಸಲಾಗಿತ್ತು. ಆದರೆ ಅವರು ಹಾಜರಾಗಲು ವಿಫಲರಾದ ಕಾರಣ ಬಂಧನ ವಾರೆಂಟ್ ಹೊರಡಿಸಲಾಗಿದೆ. ಸೋನು ಸೂದ್ ಅವರನ್ನು ಬಂಧಿಸುವಂತೆ ಮುಂಬೈನ ಅಂಧೇರಿ ಪಶ್ಚಿಮದಲ್ಲಿರುವ ಓಶಿವಾರಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಲುಧಿಯಾನ ನ್ಯಾಯಾಲಯವು ನಿರ್ದೇಶಿಸಿದೆ.ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆಯನ್ನು ಫೆ.10 ಕ್ಕೆ ಕೋರ್ಟ್ ನಿಗದಿಪಡಿಸಿದೆ.

ಸೋನು ಸೂದ್ ಪ್ರತಿಕ್ರಿಯೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದರ ಜೊತೆ ಮಾತನಾಡಿದ ಸೋನು ಸೂದ್, “ನಾನು ಯಾವುದಕ್ಕೂ ಬ್ರಾಂಡ್ ಅಂಬಾಸಿಡರ್ ಅಲ್ಲ, ನಾನು ಈಗಾಗಲೇ ನನ್ನ ವಕೀಲರ ಮೂಲಕ ಉತ್ತರಿಸಿದ್ದೇನೆ ಮತ್ತು ಫೆಬ್ರವರಿ 10 ರಂದು ಮತ್ತೆ ಉತ್ತರ ನೀಡುತ್ತೇನೆ. ಈ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದೆಲ್ಲ ಏನೆಂದು ನನಗೂ ತಿಳಿದಿಲ್ಲ. ಕೆಲವರು ಬೇಕೆಂದೇ ಮಾನ ಹರಾಜು ಹಾಕಲು ಈ ರೀತಿಯ ಕೆಲಸಗಳನ್ನು ಮಾಡುತ್ತಾರೆ. ಆದರೆ ಇದಕ್ಕೆಲ್ಲ ನಾನು ಹೆದರುವುದಿಲ್ಲ” ಎಂದು ಹೇಳಿದ್ದಾರೆ.

FILM

ಟ್ರೆಂಡ್ ಬದಿಗಿಟ್ಟು ಮಗಳಿಗೆ ಅರ್ಥಗರ್ಭಿತ ಹೆಸರಿಟ್ಟ ನಟಿ ನೇಹಾ ಗೌಡ; ವ್ಹಾವ್ ಅಂದ್ರು ಫ್ಯಾನ್ಸ್!

Published

on

ಮಂಗಳೂರು/ಬೆಂಗಳೂರು : ಲಕ್ಷ್ಮೀ ಬಾರಮ್ಮ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ನಟಿ ನೇಹಾ ಗೌಡ. ಗೊಂಬೆ ಎಂದೇ ಖ್ಯಾತರಾಗಿದ್ದರು ನೇಹಾ. ಅದಾದ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 9 ರ ಶೋ ಮೂಲಕನೂ ಗಮನ ಸೆಳೆದಿದ್ದರು. ಅವರ ಪತಿ ಚಂದನ್ ಕೂಡ ‘ಅಂತರಪಟ’ ಧಾರಾವಾಹಿಯಲ್ಲಿ ನಟಿಸಿ ಮನೆ ಮಾತಾಗಿದ್ದರು. ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ನಾಮಕರಣ ಶಾಸ್ತ್ರ ಅದ್ದೂರಿಯಾಗಿ ನಡೆದಿದೆ.

ಬೆಂಗಳೂರಿನಲ್ಲಿ ಅದ್ದೂರಿ ಸಮಾರಂಭ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಕಿರುತೆರೆ, ಹಿರಿತೆರೆ ಕಲಾವಿದರು ಆಗಮಿಸಿ ಶುಭ ಹಾರೈಸಿದರು.

ವಿಶೇಷ ಅಂದ್ರೆ ಟ್ರೆಂಡ್ಸ್‌ ಬದಿಗಿಟ್ಟು ನೇಹಾ ದಂಪತಿ ಚಂದದ ಹೆಸರೊಂದನ್ನು ಮಗಳಿಗಿಟ್ಟಿದ್ದಾರೆ. ಇತ್ತೀಚೆಗೆ ವಿಭಿನ್ನ ಹೆಸರುಗಳದೇ ರಾಯಭಾರವಾಗಿರುವಾಗ ನೇಹಾ – ಚಂದನ್ ಮಾತ್ರ ಅರ್ಥಪೂರ್ಣವಾಗಿರುವ ಹೆಸರಿಟ್ಟಿದ್ದಾರೆ.

ಹೌದು, ಈ ದಂಪತಿ ಮಗುವಿಗೆ ಇಟ್ಟಿರುವ ಹೆಸರು ‘ಶಾರದಾ’. ದಂಪತಿ ನಿಲುವಿಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಶುಭ ಹಾರೈಸುತ್ತಿದ್ದಾರೆ.

ಇದನ್ನೂ ಓದಿ : ಸಿಕಂದರ್ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಒಬ್ಬರೇ ಅಲ್ಲ..! ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಕನ್ನಡಿಗ..?

ಬಾಲ್ಯದಲ್ಲೇ ಪ್ರೀತಿಯಲ್ಲಿ ಬಿದ್ದಿದ್ದ ನೇಹಾ – ಚಂದನ್ 2018ರಲ್ಲಿ ವಿವಾಹವಾಗಿದ್ದರು. ಕಳೆದ ವರ್ಷ ಅಕ್ಟೋಬರ್‌ 29ರಂದು ನೇಹಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

Continue Reading

FILM

ಸಿಕಂದರ್ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಒಬ್ಬರೇ ಅಲ್ಲ..! ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಕನ್ನಡಿಗ..?

Published

on

ಮಂಗಳೂರು/ಮುಂಬೈ: ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ‘ಸಿಕಂದರ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಸಿನಿಮಾದ ಟ್ರೈಲರ್‌ನಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಒಬ್ಬರೇ ಅಲ್ಲ, ಕನ್ನಡದ ಮತ್ತೊಬ್ಬ ನಟ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಸಿಕಂದರ್‌ನಲ್ಲಿ ಕನ್ನಡ ಪ್ರತಿಭೆಗಳ ಹವಾ ತುಂಬಾ ಜೋರಾಗಿದೆ.


ಸಲ್ಮಾನ್‌ ಖಾನ್ ನಟನೆಯ ‘ಸಿಕಂದರ್’ ಸಿನಿಮಾ ಮಾರ್ಚ್ 30ಕ್ಕೆ ತೆರೆಮೇಲೆ ಬರಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಸಲ್ಲುಗೆ ನಾಯಾಕಿಯಾಗಿ ರಶ್ಮಿಕಾ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

ಆ್ಯಕ್ಷನ್ ಅವತಾರದಲ್ಲಿ ಸಲ್ಲು..
ಸಲ್ಮಾನ್‌ ಖಾನ್ ಸಿನಿಮಾಗಳಲ್ಲಿ ಮಾಸ್ ಅಂಶಗಳು ಎಂದಿನಂತೆ ಪುನರಾವರ್ತನೆಯಾಗಿದೆ. ಈ ಚಿತ್ರದಲ್ಲಿ ಪ್ರಮುಖವಾಗಿ ಸಮಾಜದಲ್ಲಿರುವ ಕೆಟ್ಟ ಶಕ್ತಿಗಳು ಮತ್ತು ಸಮಾಜಕ್ಕೆ ಕೇಡು ಭಯಸುವವರ ವಿರುದ್ದ ಸಲ್ಮಾನ್ ಖಾನ್ ಅವರು ಹೋರಾಡುವಂತೆ ಟ್ರೈಲರ್‌ನಲ್ಲಿ ತೊರಿಸಲಾಗಿದೆ. ಮತ್ತೊಂದೆಡೆ ಸಲ್ಮಾನ್ ಖಾನ್ ಲವರ್ ಬಾಯ್ ಆಗಿಯೂ ಕಾಣಿಸಿಕೊಂಡಿದ್ದಾರೆ.

ಕ್ಯೂಟ್ ಆಗಿ ಕಾಣಿಸಿಕೊಂಡ ರಶ್ಮಿಕಾ
ಸಿಕಂದರ್ ಸಿನಿಮಾದಲ್ಲಿ ಸಲ್ಲುಗೆ ಜೊತೆಯಾಗಿ ರಶ್ಮಿಕಾ ನಟಿಸಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ಪಾತ್ರ ಕ್ಯೂಟ್ ಆಗಿ ಇರಲಿದೆ ಅನ್ನೋದು ಟ್ರೈಲರ್ ಮೂಲಕ ಫ್ಯಾನ್ಸ್‌ಗೆ ಪಕ್ಕಾ ಆಗಿದೆ. ರಶ್ಮಿಕಾ ಟ್ರೈಲರ್ ಉದಕ್ಕೂ ಕಾಣಿಸಿಕೊಂಡಿದ್ದಾರೆ. ಸಿಕಂದರ್‌ಗೆ ಇಷ್ಟ ಆಗುವ ಹುಡುಗಿಯಾಗಿ ನೋಡಬಹುದು.

ಇದನ್ನೂ ಓದಿ: ಸಿಕಂದರ್ ಸಿನಿಮಾಗೆ ರಶ್ಮಿಕಾ ಮಂದಣ್ಣ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ಕನ್ನಡಿಗ
ಸಿನಿಮಾದಲ್ಲಿ ಬಾಲಿವುಡ್ ಕಲಾವಿದರಿಗಿಂತ ದಕ್ಷಿಣದ ಮಂದಿಗೆ ಚಿತ್ರತಂಡ ಮಣೆ ಹಾಕಿದೆ. ಸಿಕಂದರ್‌ನಲ್ಲಿ ಕನ್ನಡಿಗ ಕಿಶೋರ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಬಹುಭಾಷಾ ನಟನಾಗಿ ಸೈ ಎನಿಸಿಕೊಂಡಿರುವ ಕನ್ನಡಿಗ ಕಿಶೋರ್, ಯಾವುದೇ ಭಾಷೆಯ ಸಿನಿಮಾ ಆಗಿದ್ರೂ ಪಾತ್ರಕ್ಕೆ ಜೀವ ತುಂಬುತ್ತಾರೆ.

ಸಲ್ಮಾನ್ ಖಾನ್ ಮುಂದೆ ಕಿಶೋರ್ ತೊಡೆ ತಟ್ಟಿದ್ದಾರೆ. ಟ್ರೈಲರ್‌ನಲ್ಲಿ ಚಿಕ್ಕದಾಗಿ ಸಲ್ಮಾನ್ ಮತ್ತು ಕಿಶೋರ್ ಫೈಟ್ ಸೀನ್ ತೋರಿಸಲಾಗಿದೆ. ಇಬ್ಬರ ನಡುವಿನ ಕಾಂಬಿನೇಶನ್ ಯಾವ ರೀತಿ ಇರಲಿದೆ ಎಂದು ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

‘ಘಜಿನಿ’ ರೀತಿಯ ಸಿನಿಮಾಗಳನ್ನು ನೀಡಿದ ಎ ಆರ್ ಮುರುಗದಾಸ್ ಅವರು ‘ಸಿಕಂದರ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ಸತ್ಯರಾಜ್, ಕಿಶೋರ್ ಮೊದಲಾದವರು ಪಾತ್ರವರ್ಗದಲ್ಲಿ ಇದ್ದಾರೆ.

Continue Reading

FILM

ಕ್ರಿಕೆಟಿಗ ಡೇವಿಡ್ ವಾರ್ನರ್‌ಗೆ ನೀನೊಬ್ಬ ದೊಡ್ಡ ಕಳ್ಳ.. ಎಂದ ಹಿರಿಯ ನಟ ರಾಜೇಂದ್ರ ಪ್ರಸಾದ್!

Published

on

ಮಂಗಳೂರು/ಹೈದರಾಬಾದ್: ಟಾಲಿವುಡ್ ನಟ ನಿತಿನ್ ಮತ್ತು ಶ್ರೀಲೀಲಾ ಅಭಿನಯದ ‘ರಾಬಿನ್‌ಹುಡ್‌’ ಸಿನಿಮಾದಲ್ಲಿ ಡೇವಿಡ್ ವಾರ್ನರ್ ಕೂಡ ಬಣ್ಣ ಹಚ್ಚಿದ್ದು, ಸಿನಿಮಾ ಮಾ. 28ರಂದು ತೆರೆಗೆ ಬರಲಿದೆ.


ಸಿನಿಮಾದ ಫ್ರೀ ರಿಲೀಸ್ ಈವೆಂಟ್‌ ಭಾನುವಾರ (ಮಾ.23) ಹೈದರಾಬಾದ್‌ನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಡೇವಿಡ್ ವಾರ್ನರ್ ಕೂಡ ಹಾಜರಿದ್ದರು. ಇದೇ ಸಂದರ್ಭದಲ್ಲಿ ವಾರ್ನರ್‌ಗೆ ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರು ನೀಡಿದ ಹೇಳಿಕೆಗಳು ವೈರಲ್ ಆಗಿದೆ.

ಈ ಸಿನಿಮಾದಲ್ಲಿ ರಾಜೇಂದ್ರ ಪ್ರಸಾದ್ ಪ್ರಧಾನ ಹಾಸ್ಯ ಕಲಾವಿದನಾಗಿ ಬಣ್ಣ ಹಚಿದ್ದಾರೆ. ಫ್ರೀ ರಿಲೀಸ್ ಈವೆಂಟ್‌ ವೇದಿಕೆಯಲ್ಲಿ ಮಾತನಾಡಿದ ರಾಜೇಂದ್ರ ಪ್ರಸಾದ್, ಡೇವಿಡ್ ವಾರ್ನರ್ ಅವರು, ನೀವು ಕ್ರಿಕೆಟ್ ಆಡಿದರೆ, ನೀವು ನಟಿಸುತ್ತಿರುವಂತೆ ಕಾಣುತ್ತದೆ ಎಂದು ಹೇಳಿದರು. ಅಲ್ಲದೇ, ನೀನೊಬ್ಬ ದೊಡ್ಡ ಕಳ್ಳ, ನೀವೇನು ಸಾಮಾನ್ಯ ವ್ಯಕ್ತಿಯಲ್ಲ ಎಂದರು. ಆದರೆ, ರಾಜೇಂದ್ರ ಪ್ರಸಾದ್ ಇದನ್ನೆಲ್ಲ ತಮಾಷೆಗಾಗಿ ಹೇಳಿದ್ದಾರೆ.

ಇದನ್ನೂ ಓದಿ: ಏರ್ ಇಂಡಿಯಾ ವಿರುದ್ದ ಆಕ್ರೋಶಗೊಂಡ ಕ್ರಿಕೆಟಿಗ ಡೇವಿಡ್ ವಾರ್ನರ್!

ಮುಂದುವರಿದು, ತಾನು 48 ವರ್ಷಗಳಿಂದ ಚಿತ್ರರಂಗದಲ್ಲಿ ಇರುವುದಕ್ಕೆ ಕಾರಣ ಯಾರು ಎಂಬುದನ್ನು ಹೇಳಿದ್ದಾರೆ. ನಾನು ಇಲ್ಲೇ ಇರುವುದಕ್ಕೆ ಕಾರಣ ಮೈತ್ರಿ ಮೂವೀಸ್. ಇದು ನನ್ನ ಸ್ವಂತ ಕಂಪನಿಯಿದ್ದಂತೆ. ನವೀನ್ ಮತ್ತು ರವಿ ಎಲ್ಲರೂ ನನ್ನ ಮಕ್ಕಳು. ನಾನು ಫಸ್ಟ್ ಶ್ರೀಮಂತುಡು ಸಿನಿಮಾದಲ್ಲಿ ನಟಿಸಿದೆ. ಇಂದು ನಾನು ರಾಬಿನ್ ಹುಡ್‌ನಲ್ಲಿ ನಟಿಸಿದ್ದೇನೆ. ಇಂದು ನಿಮ್ಮೆಲ್ಲರ ಮುಂದೆ ನಿಂತು ಮಾತನಾಡುವ ಹಕ್ಕು ನನಗಿದೆ. ಏಕೆ ಎಂಬುದು ಈ ಚಿತ್ರ ನೋಡಿದ ನಂತರ ನಿಮಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page