Connect with us

ಕೌಟುಂಬಿಕ ಕಾರಣ – ಅಂತರ್ ಜಿಲ್ಲಾ ಪ್ರಯಾಣ – ಪರಿಶೀಲನೆ : ಸಚಿವ ಕೋಟ

Published

on

ಲಾಕ್ ಡೌನ್ ನಿಂದಾಗಿ ಸ್ವಗ್ರಾಮ ಸೇರದೆ ಬಾಕಿ ಇರುವವರಿಗೆ ಶೀಘ್ರದಲ್ಲಿ ವ್ಯವಸ್ಥೆ: ಸಚಿವ ಕೋಟ

ಮಂಗಳೂರು: ಲಾಕ್ ಡೌನ್‍ನಿಂದಾಗಿ ತಮ್ಮ ಕುಟುಂಬ ಸೇರಲಾಗದೆ ಬಾಕಿಯಾಗಿರುವವರಿಗೆ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅನುಮತಿ ನೀಡುವ ಸಂಬಂಧ,

ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಬುಧವಾರ (ಎಪ್ರಿಲ್ 29) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳ ಬಗೆಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,

ಮೊದಲ ಹಂತದಲ್ಲಿ ವಲಸೆ ಕಾರ್ಮಿಕರಿಗೆ ತಮ್ಮ ಗ್ರಾಮಗಳಲ್ಲಿ ಕೃಷಿ ಕಾರ್ಯ ಕೈಗೊಳ್ಳಲು ಅಥವಾ ತಮ್ಮ ಕೆಲಸದ ಸ್ಥಳಗಳಿಗೆ ತಲುಪುವ ಸಲುವಾಗಿ ಅವರನ್ನು ಸ್ವಗ್ರಾಮಗಳಿಗೆ ತಲುಪಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ.

ಇದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಂದಲೂ ವಲಸೆ ಕಾರ್ಮಿಕರು ತಮ್ಮ ಜಿಲ್ಲೆಗೆ ತೆರಳಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.

ಈಗಾಗಲೇ ಮಂಗಳೂರು ಹೊರತುಪಡಿಸಿ, ಉಳಿದ ತಾಲೂಕುಗಳಿಂದ ವಲಸೆ ಕಾರ್ಮಿಕರನ್ನು ಕಳುಹಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ.

ಸುಮಾರು 4000 ಮಂದಿ ಈಗಾಗಲೇ ತೆರಳಿದ್ದಾರೆ. ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಇನ್ನು 3-4 ದಿನಗಳೊಳಗೆ ಇದು ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.

ಎರಡನೇ ಹಂತದಲ್ಲಿ ಜಿಲ್ಲೆಯಲ್ಲಿ ಲಾಕ್‍ ಡೌನ್‍ ನಿಂದ ಉಳಿದುಕೊಂಡು, ಬೇರೆ ಜಿಲ್ಲೆಯಲ್ಲಿರುವ ಕುಟುಂಬವನ್ನು ಸೇರಲಾದವರಿಗೆ ಆದ್ಯತೆ ನೀಡಲಾಗುವುದು.

ಈ ಬಗ್ಗೆ ಸರಕಾರದ ಪರಿಶೀಲನೆಯಲ್ಲಿದೆ ಎಂದು ಸಚಿವರು ತಿಳಿಸಿದರು.

ವಿದೇಶದಲ್ಲಿರುವ ಜಿಲ್ಲೆಯ ನಾಗರೀಕರನ್ನು ಇಲ್ಲಿಗೆ ಕರೆತರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಕೋವಿಡ್‍ ನಿಂದ ಮೃತಪಟ್ಟವರನ್ನು ಮಂಗಳೂರಿನ ಬೋಳೂರು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಯಾವುದೇ ಗೊಂದಲಗಳು ಬೇಡ. ಸಾಮಾನ್ಯ ರೋಗಿಗಳನ್ನು ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಂಗಳಲ್ಲಿ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಸರಕಾರ ಮಾರ್ಗದರ್ಶನ ಕಳುಹಿಸಲಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಭೆಯಲ್ಲಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ಹರೀಶ್ ಪೂಂಜಾ, ಯು.ಟಿ. ಖಾದರ್, ಅಂಗಾರ, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಹರೀಶ್ ಕುಮಾರ್,

ಐವನ್ ಡಿಸೋಜ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಪೊಲೀಸ್ ಕಮೀಷನರ್ ಡಾ. ಪಿ.ಎಸ್. ಹರ್ಷ ಮತ್ತಿತರರು ಹಾಜರಿದ್ದರು.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ಕಲಾಯಿ ಅಶ್ರಫ್ ಹತ್ಯೆಗೆ ರಿವೇಂಜ್ ಪೋಸ್ಟ್..! 16 ಇನ್ಸ್ಟಾಗ್ರಾಂ ಖಾತೆ ವಿರುದ್ಧ FIR

Published

on

ಮಂಗಳೂರು: ಕೋಮು ಸೂಕ್ಷ್ಮ ಪ್ರದೇಶವಾದ ಕರಾವಳಿಯಲ್ಲಿ ಧರ್ಮ ದಂಗಲ್ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ ಎನ್ನುವಷ್ಟರಲ್ಲಿ ಮತ್ತೆ ಹತ್ಯೆಗೆ ಪ್ರಚೋದನೆ ನೀಡುವ ಉದ್ದೇಶದಲ್ಲಿ ಹಾಕಿರುವಂತಹ ಪೋಸ್ಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಭಯ ಹುಟ್ಟಿಸಿದೆ.

2017ರಲ್ಲಿ ನಡೆದ ಎಸ್​ಡಿಪಿಐ ಮುಖಂಡ ಕಲಾಯಿ ಅಶ್ರಫ್ ಹತ್ಯೆ ಪ್ರಮುಖ ಆರೋಪಿ, ಹಿಂದೂ ಸಂಘಟನೆಯ ಮುಖಂಡ ಭರತ್ ಕುಮ್ಡೇಲ್​​​ಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಲಾಯಿ ಅಶ್ರಫ್ ಹತ್ಯೆಗೆ ಪ್ರತೀಕಾರದ ಬಗ್ಗೆ ಸಂದೇಶಗಳು ರವಾನೆಯಾಗುತ್ತಿದೆ.

Target 900, Team Target Boys, Immu Bai ಇನ್ಸ್ಟಾಗ್ರಾಮ್ ಪೇಜ್​​ಗಳಲ್ಲಿ ಭಯ ಹುಟ್ಟಿಸುತ್ತಿರುವ ರೀತಿಯಲ್ಲಿ ಪೋಸ್ಟ್ ಮಾಡಲಾಗಿದೆ. Revange Is Loading , Target Set One By One ಎಂಬ ಸಂದೇಶ ಇರುವ ಪೋಸ್ಟ್​​ ಮಾಡಲಾಗಿದ್ದು, ಕೈಯಲ್ಲಿ ತಲವಾರು ಮತ್ತು ಪಿಸ್ತೂಲ್ ಹಿಡಿದು ಮುಖ ಮರೆಮಾಚಿ ಮಾಡಿರುವ ರೀಲ್ಸ್ ಕೂಡ ಪೋಸ್ಟ್​​ ಮಾಡಲಾಗಿದೆ. ಇತ್ತೀಚೆಗೆ ಕೇರಳದಲ್ಲಿ ಹತ್ಯೆಯಾದ ರೌಡಿಶೀಟರ್ ನೌಫಾಲ್ ಸಾವಿಗೂ ಪ್ರತೀಕಾರದ‌ ಎಚ್ಚರಿಕೆ ನೀಡಲಾಗಿದೆ. ಭರತ್ ಕುಮ್ಡೇಲ್ ಸದ್ಯ ಮಂಗಳೂರು ಜೈಲಿನಲ್ಲಿದ್ದು, ಪ್ರಚೋದನಾಕಾರಿ ಇನ್ಸ್ಟಾಗ್ರಾಮ್​​ ಪೋಸ್ಟ್​ಗಳ ಮೇಲೆ ಮಂಗಳೂರು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಈ ಬಗ್ಗೆ ಸುಮೋಟೊ ಕೇಸ್​​ ದಾಖಲಿಸಿರುವ ಖಾಕಿ, 16 ಇನ್ಸ್ಟಾಗ್ರಾಮ್​​ ಖಾತೆಗಳ ವಿರುದ್ಧ ಎಫ್​ಐಆರ್​ ಮಾಡಿದೆ. ಜೊತೆಗೆ ಆಯಕಟ್ಡಿನ ಜಾಗಗಳ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ನಟೋರಿಯಸ್ ಗ್ಯಾಂಗ್​​ಗಳ ಚಲನವಲನಗಳನ್ನೂ ಗಮನಿಸಲಾಗುತ್ತಿದೆ.

ಈ ಹಿಂದೆಯೂ ಭರತ್ ಕುಮ್ಡೇಲ್​​ಗೆ ಸಾಮಾಜಿಕ ತಾಣಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗಿತ್ತು. ಬ್ಯಾರಿ ರಾಯಲ್ ನವಾಬ್ ,  ಬ್ಯಾರಿ ಟ್ರೋಲರ್, ಮಂಗಳೂರು ಕಿಂಗ್ ಎಂಬ ಹೆಸರಿನ ಪೇಜ್​ಗಳ ಮುಖಾಂತರ ಎಚ್ಚರಿಕೆಯ ಸಂದೇಶ ಬಂದಿತ್ತು. ಭರತ್‌ ಕುಮ್ಡೇಲ್​​​ ರಕ್ತ ಈ ಭೂಮಿಗೆ ಹರಿಸದೆ ನಮಗೆ ಸಮಾಧಾನವಿಲ್ಲ. ನಮ್ಮ ಸಹೋದರ ಶಾಹಿದ್ ಅಶ್ರಫ್ ಕಲಾಯಿಯನ್ನು ಮರೆತಿಲ್ಲ, ಪ್ರತಿರೋಧ ಅಪರಾಧವಲ್ಲ ಎಂದು ಪೋಸ್ಟ್​​ ಮಾಡಲಾಗಿತ್ತು. ಇದೀಗ ಇಂತಹ ಪ್ರಚೋದನಾಕಾರಿ ಪೋಸ್ಟ್ ಹಾಕುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

Continue Reading

STATE

ಬೆಳಗಾವಿ ಅಧಿವೇಶನದಲ್ಲಿ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿಗೆ 50 ಲಕ್ಷ ರೂ. ನೀಡಲು ಶಾಸಕರ ಮನವಿ

Published

on

ಬೆಳಗಾವಿ: ಢಾಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಾಟದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಗೆದ್ದ ಕಾರ್ಕಳ್ ಮಿಯ್ಯಾರಿನ ಧನಲಕ್ಷ್ಮಿ ಪೂಜಾರಿ ಅವರು ಇಂದು ತನ್ನ ಕೋಚ್‌ ತೇಜಸ್ವಿನಿ ಪೈ ಅವರ ಜತೆಗೆ ಬೆಳವಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದಅಧಿವೇಶನದ ಕಲಾಪ ವೀಕ್ಷಿಸಿದರು.

 

ಈ ಸಂದರ್ಭದಲ್ಲಿ ಧನ ಲಕ್ಷ್ಮಿ ಅವರನ್ನು ಸರಕಾರದ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ಧನಲಕ್ಷ್ಮಿ ಅದರ ಸಾಧನೆಯನ್ನು ಗುರುತಿಸಿ ಸರಕಾರದ ವತಿಯಿಂದ ಈಗಾಗಲೇ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ ಎಂದು ತಿಳಿಸಿದರು.

ಧನಲಕ್ಷ್ಮಿ ಮತ್ತು ಆಕೆಯ ತರಬೇತುದಾರರಾದ ತೇಜಸ್ವಿನಿ ಪೈ ಅವರನ್ನು ಅಭಿನಂದಿಸುತ್ತೇನೆ ಎಂದರು. ಧನಲಕ್ಞ್ಮಿ ಅವರಿಗೆ  ಕನಿಷ್ಟ 50 ಲಕ್ಷ ರೂಪಾಯಿ ಬಹುಮಾನ ನೀಡ ಬೇಕೆಂದು ಶಾಸಕ ವೇದವ್ಯಾಸ ಕಾಮತ್ ಒತ್ತಾಯಿಸಿದರು.ಆಕೆಗೆ ಸರಕಾರಿ ಉದ್ಯೋಗ ಕೊಡಿಸಬೇಕೆಂದು ವಿ ಸುನಿಲ್ ಕುಮಾರ್ ಮನವಿ ಮಾಡಿದರು.

Continue Reading

DAKSHINA KANNADA

ಡಿ. 13, 14 ರಂದು ಮಂಗಳೂರಿನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವ

Published

on

ಮಂಗಳೂರು: ಮಂಗಳೂರಿನ ಮದರ್ ತೆರೆಸಾ ವಿಚಾರ ವೇದಿಕೆ ಮತ್ತು ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್‌ ಇವುಗಳ ಜಂಟಿ ಆಶ್ರಯದಲ್ಲಿ ಡಿಸೆಂಬರ್ 13 ಮತ್ತು 14 ರಂದು ಕದ್ರಿ ಪಾರ್ಕ್‌ ನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವವನ್ನು ಆಯೋಜಿಸಲಾಗಿದೆ.

ಎರಡು ದಿನಗಳ ಈ ಉತ್ಸವದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳು ಮಧ್ಯಾಹ್ನ 2.30 ರಿಂದ ರಾತ್ರಿ 9.30 ರ ತನಕ ನಡೆಯಲಿವೆ ಎಂದು ಮದರ್ ತೆರೆಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ರಿಸ್ಮಸ್‌ ಖೇಲ್‌ ಸ್ಪರ್ಧೆಗಳು, ಕ್ರಿಸ್ಮಸ್ ಕ್ಯಾರಲ್‌ಗಳ ಗಾಯನ ಸ್ಪರ್ಧೆ, ಕೇಕ್ ಸ್ಪರ್ಧೆ, ಸ್ಟಾರ್ ಸ್ಪರ್ಧೆ, ವೈನ್‌ ಮೇಳ, ಆಹಾರ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಇದನ್ನೂ ಓದಿ: ‘ನಶೆ ಮುಕ್ತ ಮಂಗಳೂರು’ ಅಭಿಯಾನ-ಸ್ಪೀಕರ್ ಯು.ಟಿ ಖಾದರ್ ಅವರಿಂದ ಉದ್ಘಾಟನೆ

ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಕ್ಯಾಥೊಲಿಕದ ಸಭಾ ಅಧ್ಯಕ್ಷ ಸಂತೋಷ್ ಡಿ’ಸೋಜಾ, ಕಾರ್ಯಕ್ರಮದ ಸಂಚಾಲಕ ಸ್ಟ್ಯಾನಿ ಲೋಬೊ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page