Connect with us

LATEST NEWS

ಜಮ್ಮುವಿನಲ್ಲಿ ಸೇನಾ ವಾಹನ ಅಪಘಾತ; ಉಡುಪಿ ಮೂಲದ ಯೋಧ ಸೇರಿ ಐವರು ಹುತಾತ್ಮ

Published

on

ಮಂಗಳೂರು/ನವದೆಹಲಿ: ಇಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ಭಾರತೀಯ ಸೇನಾ ಟ್ರಕ್ ರಸ್ತೆಯಲ್ಲಿ ಸಾಗುವಾಗ ಮಾರ್ಗ ಮಧ್ಯೆ ಜಾರಿದ ಪರಿಣಾಮ 300 ಅಡಿ ಆಳದ ಕಮರಿಗೆ ಉರುಳಿ, ಉಡುಪಿ ಮೂಲದ ಯೋಧ ಸೇರಿ ಐವರು ಮೃತಪಟ್ಟ ಘಟನೆ ಘರೋವಾದಲ್ಲಿ ವರದಿಯಾಗಿದೆ.

ಕುಂದಾಪುರ ಬಳಿಯ ಕೋಟೇಶ್ವರ ಬಿಜಾಡಿಯ ಅನೂಪ್ (33) ಮಹಾಲಿಂಗಪುರದ ಮಹೇಶ್ (25), ಬೆಳಗಾವಿ ಬಳಿಯ ಸಾಂಬ್ರಾ ಗ್ರಾಮದ ಯೋಧ ಸುಬೇದಾರ್ ದಯಾನಂದ ತಿರಕಣ್ಣವರ (45), ಸೇರಿ ಮಹಾರಾಷ್ಟ್ರ ಮೂಲದ ಇಬ್ಬರು ಯೋಧರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಸೈಬರ್ ಕ್ರೈಂ ಕಾರ್ಯಾಚರಣೆ; ಕೇರಳದ ಆರೋಪಿಗಳಿಬ್ಬರು ಅರೆಸ್ಟ್

ಈ ಘಟನೆಯಿಂದ ಹಲವರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು, ಸೇನಾ ವಾಹನವು ಜಿಲ್ಲೆಯ ಬನೋಯ್ ಗೆ ತೆರಳುತ್ತಿದ್ದಾಗ ಘರೋವಾ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ವೈಟ್ ನೈಟ್ ಕಾರ್ಪ್ಸ್ ನ ಎಲ್ಲಾ ಶ್ರೇಣಿಗಳು ಪೂಂಚ್ ಸೆಕ್ಟರ್ ನಲ್ಲಿ ಕಾರ್ಯಾಚರಣೆಯ ಕರ್ತವ್ಯದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಐವರು ಯೋಧರ ಸಾವಿನ ಸುದ್ದಿಗೆ ಭಾರತೀಯ ಸೇನೆ ಸಂತಾಪ ಸೂಚಿಸಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಗಾಯಗೊಂಡ ಸಿಬ್ಬಂದಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನೆ ತಿಳಿಸಿದೆ.

DAKSHINA KANNADA

ಸುಳ್ಯ : ಗ್ಯಾಸ್ ಸಿಲಿಂಡರ್ ಸರಬರಾಜು ಲಾರಿ ಪಲ್ಟಿ; ಸವಾರ ಗಂಭೀರ

Published

on

ಸುಳ್ಯ : ಭಾರತ್ ಗ್ಯಾಸ್ ಸಿಲಿಂಡ‌ರ್ ಸರಬರಾಜು ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ತಿರುವಿನ ಬಳಿ ಪಲ್ಟಿಯಾಗಿ ಬಿದ್ದಿರುವ ಘಟನೆ ಸುಳ್ಯ ತಾಲೂಕು ಕುಂಬರ್ಚೋಡು ತಿರುವಿನಲ್ಲಿ ನಿನ್ನೆ (ಮಾ.14) ತಡರಾತ್ರಿ ಸಂಭವಿಸಿದೆ.

ಘಟನೆಯ ಪರಿನಾಮ ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಅಪಘಾತದ ಕಾರಣವಾಗಿ ಸ್ಥಳದಲ್ಲಿ ಅಲ್ಪ ಸಮಯ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿರುತ್ತದೆ. ಲಾರಿಯಲ್ಲಿ ಇದ್ದ ಗ್ಯಾಸ್ ಸಿಲಿಂಡ‌ರ್ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದೆ.

Continue Reading

LATEST NEWS

ಕಲುಷಿತ ನೀರು ಸೇವಿಸಿ ವೃದ್ಧ ಸಾವು; 20 ಕ್ಕೂ ಹೆಚ್ಚಿನ ಜನರು ಅಸ್ವಸ್ಥ

Published

on

ಚಿಕ್ಕಮಗಳೂರು: ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆಯಾಗಿದ್ದು ಅದನ್ನು ಸೇವಿಸಿ ಓರ್ವ ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚಿನ ಜನರು ಅಸ್ವಸ್ಥಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೆ.ಕುರುಬರಹಳ್ಳಿ ಹಾಗೂ ಚಿಕ್ಕಪೈಯಲಗುರ್ಕಿ ಗ್ರಾಮದಲ್ಲಿ ನಡೆದಿದೆ.

ಕೆ.ಕುರುಬರಹಳ್ಳಿಯ ಸಿದ್ದಪ್ಪ (67) ಸಾವನ್ನಪ್ಪಿದ ವೃದ್ಧರಾಗಿದ್ದಾರೆ. ಕಲುಷಿತ ನೀರು ಕುಡಿದು ವಾಂತಿ, ಭೇದಿಯಿಂದ ಬಳಲುತ್ತಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕೆ.ಕುರುಬರಹಳ್ಳಿ ಹಾಗೂ ಚಿಕ್ಕಪೈಯಲಗುರ್ಕಿ ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆಯಾಗಿದ್ದು ಅದನ್ನು ಕುಡಿದು 20ಕ್ಕೂ ಹೆಚ್ಚಿನ ಜನರು ಅಸ್ವಸ್ಥರಾಗಿದ್ದಾರೆ. ಅವರೆಲ್ಲರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮಕ್ಕೆ ಕಲುಷಿತ ನೀರು ಪೂರೈಕೆಯಾದ್ದರಿಂದ ಅಲ್ಲಿನ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading

FILM

ಬ್ರಹ್ಮಾಸ್ತ್ರ ನಿರ್ದೇಶಕ ಅಯಾನ್ ಮುಖರ್ಜಿಗೆ ಪಿತೃ ವಿ*ಯೋಗ; ಹಿರಿಯ ನಟ ದೇಬ್ ಮುಖರ್ಜಿ ಇ*ನ್ನಿಲ್ಲ

Published

on

ಮಂಗಳೂರು/ಮುಂಬೈ : ಬಾಲಿವುಡ್‌ನ ಹಿರಿಯ ನಟ ದೇಬ್ ಮುಖರ್ರಿ(83) ವಿ*ಧಿವಶರಾಗಿದ್ದಾರೆ.  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಬೈನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ದೇಬ್ ಮುಖರ್ಜಿ ಖ್ಯಾತ ನಿರ್ದೇಶಕ ಸುಶಾಧರ್ ಮುಖರ್ಜಿ ಅವರ ಪುತ್ರ. ಅಲ್ಲದೇ, ಅವರ ಮಗ ಸದ್ಯದ ಜನಪ್ರಿಯ ನಿರ್ದೇಶಕ ಅಯಾನ್ ಮುಖರ್ಜಿ.

ದೇಬ್ ಮುಖರ್ಜಿ ಸಿನಿ ಪಯಣ :

1969 ರಲ್ಲಿ ಸಂಬಂಧ್ ಚಿತ್ರದ ಮೂಲಕ ಬಣ್ಣ ಹಚ್ಚಿದ ದೇಬ್, ಏಕ್ ಬಾರ್ ಮುಸ್ಕುರಾ ದೋ, ಜೋ ಜೀತಾ ವೋಹಿ ಸಿಕಂದರ್ , ಅಭಿನೇತ್ರಿ ,ಆಸೂ ಬನ್‌ ಗಯೇ ಪೂಲ್ ಮೊದಲಾದ ಚಿತ್ರಗಳಲ್ಲಿ ನಟಿಸಿ ಜನಮನಗೆದ್ದಿದ್ದರು.

ನಟ ಶಾಹಿದ್ ಕಪೂರ್ ನಟನೆಯ 2009 ರಲ್ಲಿ ತೆರೆ ಕಂಡ ‘ಕಮೀನೆ’ ದೇಬ್ ಮುಖರ್ಜಿ ನಟನೆಯ ಕೊನೆಯ ಚಿತ್ರ,. ಬಳಿಕ ನಟನೆಯಿಂದ ಅವರು ದೂರ ಉಳಿದಿದ್ದರು.

ಸದ್ಯ ಅವರ ಮಗ ಅಯಾನ್ ಮುಖರ್ಜಿ ಸಿನಿಲೋಕದಲ್ಲಿ ಸಾಧನೆ ಮೆರೆಯುತ್ತಿದ್ದಾರೆ. ಬ್ರಹ್ಮಾಸ್ತ್ರ, ವೇಕ್ ಅಪ್ ಸಿದ್‌ನಂತಹ ಹಿಟ್ ಚಿತ್ರಗಳನ್ನು ನೀಡಿದ್ದಾರೆ.  ಅಷ್ಟೇ ಅಲ್ಲ, ದೇಬ್ ಮುಖರ್ಜಿ ಅವರ ಅಳಿಯ ಅಂದ್ರೆ ಮಗಳು ಸುನೀತಾ ಅವರ ಪತಿ ಅಶುತೋಷ್ ಗೋವಾರಿಕರ್ ಕೂಡ ನಿರ್ದೇಶಕ. ಅಂದಹಾಗೆ, ನಟಿ ಕಾಜಲ್‌ಗೆ ದೇಬ್ ಮುಖರ್ಜಿ  ಚಿಕ್ಕಪ್ಪ.

ಗಣ್ಯರ ಕಂಬನಿ :

ಹೋಳಿ ಸಂಭ್ರಮದಲ್ಲಿದ್ದ ಬಾಲಿವುಡ್‌ಗೆ ದೇಬ್ ಮುಖರ್ಜಿ ನಿ*ಧನ ನೋವುಣಿಸಿದೆ. ಹಿರಿಯ ನಟನ ನಿ*ಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.  ಅಯಾನ್ ಮುಖರ್ಜಿ ಹಾಗೂ ರಣಬೀರ್ ಕಪೂರ್ ಸ್ನೇಹಿತರು. ಅಲಿಯಾ ಭಟ್ ಹುಟ್ಟು ಹಬ್ಬ ಆಚರಣೆಗಾಗಿ ವಿದೇಶಕ್ಕೆ ತೆರಳಿದ್ದ ರಣಬೀರ್ ಕಬೀರ್ ಕುಟುಂಬ ಗೆಳೆಯನ ತಂದೆಯ ನಿ*ಧನದ ಸುದ್ದಿ ತಿಳಿಯುತ್ತಿದ್ದಂತೆ ವಾಪಾಸಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page