Connect with us

LATEST NEWS

19 ವರ್ಷದಿಂದ ತಲೆ ಮರೆಸಿಕೊಂಡಿದ್ದ ಸೇನಾ ಸಿಬ್ಬಂದಿ..! AI ತಂತ್ರಜ್ಞಾನದಿಂದ ಅಂದರ್..!

Published

on

ಮಂಗಳೂರು/ ಕೊಲ್ಲಂ : ಕೇರಳದ ಕೊಲ್ಲಂನಲ್ಲಿ 19 ವರ್ಷಗಳ ಹಿಂದೆ ನಡೆದ ತ್ರಿವಳಿ ಕೊ*ಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಫೆಬ್ರವರಿ 10,2006 ರಲ್ಲಿ ಕೊಲ್ಲಂ ಜಿಲ್ಲೆಯ ಅಂಚಲ್ ಎಂಬ ಸ್ಥಳದಲ್ಲಿ ತಾಯಿ ಹಾಗೂ ಅವಳಿ ಮಕ್ಕಳ ಕೊ*ಲೆ ನಡೆದಿತ್ತು. ವಿಶೇಷ ಅಂದ್ರೆ 2025 ರಲ್ಲಿ ಕೃತಕ ಬುದ್ಧಿಮತ್ತೆಯ(AI) ಸಹಾಯದಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

2006 ರಲ್ಲಿ ನಡೆದಿದ್ದ ತ್ರಿವಳಿ ಕೊ*ಲೆ ಪ್ರಕರಣ :

10 ಫೆಬ್ರವರಿ 2006 ರಂದು ಸಾಂತಮ್ಮ ಎಂಬವರು ಪಂಚಾಯತ್ ಕಚೇರಿಗೆ ಹೋಗಿ ಮನೆಗೆ ವಾಪಾಸಾಗುವಷ್ಟರಲ್ಲಿ ಮನೆಯಲ್ಲಿದ್ದ ಮಗಳು ರಂಜಿನಿ ಹಾಗೂ ಆಕೆಯ 17 ದಿನಗಳ ಅವಳಿ ಮಕ್ಕಳು ಭೀ*ಕರವಾಗಿ ಕೊ*ಲೆಯಾಗಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಗಳು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ದಿವಿಲ್ ಕುಮಾರ್ ಹಾಗೂ ರಾಜೇಶ್ ಎಂಬುವುದು ಗೊತ್ತಾಗಿತ್ತು. ಆದರೆ, ಆರೋಪಿಗಳನ್ನು ಬಂಧಿಸುವಷ್ಟರಲ್ಲಿ ಇಬ್ಬರೂ ಎಸ್ಕೇಪ್ ಆಗಿದ್ದರು. ಪೊಲೀಸರು ಇವರು ಕರ್ತವ್ಯ ನಿರ್ವಹಿಸುತ್ತಿದ್ದ ಪಠಾಣ್ ಕೋಟ್ ಮಿಲಿಟರಿ ನೆಲೆಗೆ ಹೋಗಿ ಬರಿಗೈಲಿ ವಾಪಾಸಾಗಿದ್ದರು. ಅದಾದ ಬಳಿಕ ಆರೋಪಿಗಳು ಏನಾದ್ರೂ ಎಲ್ಲಿ ಹೋದರು ಅನ್ನೋ ಸುಳಿವೇ ಸಿಕ್ಕಿರಲಿಲ್ಲ.

ತಂತ್ರಜ್ಞಾನದ ಮೂಲಕ ಆರೋಪಿಗಳ ಹುಡುಕಾಟ

2023 ರಲ್ಲಿ ಪೊಲೀಸರು ಈ ಪ್ರಕರಣದ ತನಿಖೆಯನ್ನು ತಂತ್ರಜ್ಞಾನದ ಸಹಾಯದಿಂದ ಭೇದಿಸುವ ಪ್ರಯತ್ನ ಆರಂಭಿಸಿದ್ದರು. ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ಮೊದಲಾದ ಜಾಲತಾಣದಲ್ಲಿ ಆರೋಪಿಗಳು ಸಕ್ರಿಯವಾಗಿದ್ದಾರಾ ಎಂದು ನೋಡಲು ಆರಂಭಿಸಿದ್ದರು.ಆರೋಪಿಗಳ ಹಳೆಯ ಫೋಟೋಗಳನ್ನು AI ಸಹಾಯದಿಂದ ಅಭಿವೃದ್ದಿ ಪಡಿಸಿ, 19 ವರ್ಷಗಳಲ್ಲಿ ಆರೋಪಿಗಳು ಹೇಗೆ ಬದಲಾಗಿರಬಹುದು ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಜಾಲತಾಣಗಳಲ್ಲಿ ಆ ಫೋಟೋಗಳಿಗೆ ಹೊಂದಾಣಿಕೆಯಾಗುವ ಮುಖಗಳ ಹುಡುಕಾಟ ನಡೆಸಿದಾಗ ಆರೋಪಿಗಳು ಪತ್ತೆಯಾಗಿದ್ದಾರೆ.

ಇದನ್ನೂ ಓದಿ : ಚಹಾವನ್ನು ಪದೇ ಪದೇ ಬಿಸಿಮಾಡಿ ಕುಡಿದರೆ ಏನಾಗುತ್ತದೆ ಗೊತ್ತಾ..?

ಪುದುಚೇರಿಯಿಂದ ಅಪ್ಲೋಡ್ ಆಗಿದ್ದ ಮದುವೆಯ ಫೋಟೋ ಒಂದರಲ್ಲಿ ಶೇಕಡಾ 90 ರಷ್ಟು ಹೋಲಿಕೆ ಇರುವ ವ್ಯಕ್ತಿಯನ್ನು ಗುರುತಿಸಲಾಗಿತ್ತು. ಅದು ಪ್ರವೀಣ್ ಕುಮಾರ್ ಎಂದು ತೋರಿಸುತ್ತಿತ್ತಾದ್ರೂ ಆತನ ಅಸಲಿ ಹೆಸರು ರಾಜೇಶ್. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪುದುಚೇರಿಯಲ್ಲಿ ಆರೋಪಿಯನ್ನು ಬಂಧಿಸಿದ್ದು, ಆತನ ಸಹಾಯದಿಂದ ದಿವಿಲ್ ಎಂಬಾತನನ್ನೂ ಬಂಧಿಸಲಾಗಿದೆ. ರಾಜೇಶ್  ತನ್ನ ಹೆಸರನ್ನು ಪ್ರವೀಣ್ ಕುಮಾರ್ ಎಂದು, ದಿವಿಲ್ ತನ್ನ ಹೆಸರನ್ನು ವಿಷ್ಣು ಎಂದು ಬದಲಾಯಿಸಿ ತಲೆ ಮರೆಸಿಕೊಂಡಿದ್ದರು.

ಕೊಲೆ ಮಾಡಿದ್ಯಾಕೆ?

ಒಂದೇ ಗ್ರಾಮವರಾಗಿದ್ದ ದಿವಿಲ್ ಮತ್ತು ರಂಜಿನಿ ನಡುವೆ ಪ್ರೇಮ ಸಂಬಂಧದಲ್ಲಿ ಆಕೆ ಗರ್ಭಿಣಿಯಾಗಿದ್ದಳು. ಈ ವೇಳೆ ಮದುವೆ ವಿಚಾರ ಬಂದಾಗ ದಿವಿಲ್ ನುಣುಚಿಕೊಂಡಿದ್ದರೂ ರಂಜಿನಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಈ ವೇಳೆ ಸ್ನೇಹಿತನಂತೆ ಬಂದ ರಾಜೇಶ್ ಆಕೆಗೆ ಸಹಾಯದ ಭರವಸೆ ನೀಡಿದ್ದ. ಆದ್ರೆ ಆತ ಬಂದ ಉದ್ದೇಶವೇ ರಂಜಿನಿಯನ್ನು ಕೊ*ಲೆ ಮಾಡುವುದಾಗಿತ್ತು. ದಿವಿಲ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದ ರಂಜಿನಿ ಡಿಎನ್‌ಎ ಪರೀಕ್ಷೆಗೆ ಆಗ್ರಹಿಸಿದ್ದೇ ಈ ಕೊ*ಲೆಗೆ ಸಂಚು ರೂಪಿಸಲು ಕಾರಣವಾಗಿತ್ತು. ತಾಯಿಯನ್ನು ಪಂಚಾಯತ್‌ ಕಚೇರಿಗೆ ಹೋಗಲು ಹೇಳಿದ ರಾಜೇಶ್ ಈ ಕೊ*ಲೆ ಮಾಡಿದ್ದ.

LATEST NEWS

ಏರುತ್ತಿರುವ ಬಿಸಿಲಿನ ಧಗೆ, ಮಧ್ಯಾಹ್ನ 12 ರಿಂದ 3 ಗಂಟೆ ವರೆಗೆ ಯಾರೂ ಹೊರಗೆ ಬರಬೇಡಿ: ದಿನೇಶ್ ಗುಂಡೂರಾವ್

Published

on

ರಾಯಚೂರು: ರಾಜ್ಯದಲ್ಲಿ ಈಗಾಗಲೇ ಬೇಸಿಗೆ ಆರಂಭವಾಗಿದ್ದು, ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿದೆ. ಹೀಗಾಗಿ ಮಧ್ಯಾಹ್ನ 12 ರಿಂದ 3 ಗಂಟೆ ವರೆಗೆ ಯಾರೂ ಹೊರಗೆ ಬರಬೇಡಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಉಷ್ಣಾಂಶ ಹೆಚ್ಚಳ ಹಾಗೂ ಗಾಳಿಯಲ್ಲಿ ತೇವಾಂಶ ಕಡಿಮೆ ಆಗಿರುವ ಹಿನ್ನೆಲೆ ಜನರಿಗೆ ಹಗಲು ಮತ್ತು ರಾತ್ರಿಯ ವೇಳೆ ಸಹ ಸೆಖೆಯ ಅನುಭವವಾಗುತ್ತಿದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರಾಸರಿಗಿಂತ ಹೆಚ್ಚು ತಾಪಮಾನ ದಾಖಲಾಗಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈಗಾಗಲೇ ಸೂಚಿಸಿದ್ದೇವೆ ಎಂದರು.

ಬಿಸಿಲು ಹೆಚ್ಚಾಗುತ್ತಿರುವುದರಿಂದ ಮಧ್ಯಾಹ್ನ ಹೊತ್ತು ಫೀಲ್ಡ್ ವಿಸಿಟ್ ಮಾಡುವುದನ್ನು ಅಧಿಕಾರಿಗಳು ಬಿಡಬೇಕು. ಸರ್ಕಾರಿ ನೌಕರರು ಹೊರಗಡೆ ವೀಕ್ಷಣೆಯನ್ನು ಮಧ್ಯಾಹ್ನ 12 ರಿಂದ 3ರ ವರೆಗೆ ಮಾಡಬಾರದು. ಬೆಳಗಿನ ಜಾವ ಅಥವಾ ಸಾಯಂಕಾಲ ಮಾಡಬೇಕು. ಸರ್ಕಾರ ರಜೆ ಕೊಡಬೇಕು ಅಂತ ಹೇಳುವುದಿಲ್ಲ, ಸಮಯ ಬದಲಾವಣೆ ಮಾಡಿಕೊಂಡರೆ ಒಳ್ಳೆಯದು ಎಂದರು.

Continue Reading

LATEST NEWS

ಕಲಿಕೆಯಲ್ಲಿ ಹಿಂದುಳಿದಿದ್ದ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿದ ತಂದೆ

Published

on

ಆಂಧ್ರಪ್ರದೇಶ: ಶಾಲೆಯಲ್ಲಿ ಮಕ್ಕಳು ಓದಿನಲ್ಲಿ ಹಿಂದಿ ಇದ್ದರಿಂದ ಬೇಸರಗೊಂಡು ತಂದೆಯು ತನ್ನ ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಗೋದಾವರಿ ಜಿಲ್ಲೆಯ ತಡೆಪಲ್ಲಿಗುಡೇನಿಯಲ್ಲಿ ನಡೆದಿದೆ.

ತಂದೆ ಚಂದ್ರಕಿಶೋರ್ ಹಾಗೂ ಮಕ್ಕಳಾದ ಜೋಶಿಲ್ ಹಾಗೂ ನಿಖಿಲ್ ಸಾವಿಗೀಡಾದವರು. ಚಂದ್ರಕಿಶೋರ್ ಸ್ಥಳೀಯ ಒಎನ್‌ಜಿಸಿ ಕಚೇರಿಯಲ್ಲಿ ಸಹಾಯಕ ಲೆಕ್ಕಪತ್ರಗಾರರಾಗಿ ಕೆಲಸ ಮಾಡುತ್ತಿದ್ದರು. ತನ್ನ ಒಬ್ಬರು ಮಕ್ಕಳು ಶಾಲೆಯಲ್ಲಿ ಓದಿನಲ್ಲಿ ಹಿಂದೆ ಇರುವುದೇ ಈತನಿಗೆ ದೊಡ್ಡ ಚಿಂತೆಯಾಗಿತ್ತು. ಹಾಗಾಗಿ ಒಂದು ದಿನ ಪತ್ನಿ ಮತ್ತು ಮಕ್ಕಳನ್ನು ತನ್ನ ಕಚೇರಿಗೆ ಕರೆದು ಬಳಿಕ ಪತ್ನಿಯನ್ನು ಕಛೇರಿಯಲ್ಲೇ ಇರುವಂತೆ ಹೇಳಿ ಇಬ್ಬರು ಮಕ್ಕಳನ್ನು ಶಾಲೆಯ ಸಮವಸ್ತ್ರದ ಅಳತೆಯನ್ನು ತೆಗೆಯಲು ಟೈಲರ್ ಬಳಿ ಕರೆದೊಯ್ಯುತ್ತಿರುವುದಾಗಿ ಹೇಳಿ ಹೋಗಿದ್ದಾನೆ.

ಆದರೆ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿ ನೀರು ತುಂಬಿದ ಬಕೆಟ್‌ನಲ್ಲಿ ಇಬ್ಬರು ಮಕ್ಕಳ ಮುಖವನ್ನು ಮುಳುಗಿಸಿ ಕೊಂದಿದ್ದಾನೆ. ನಂತರ ತಾನೂ ನೇಣಿಗೆ ಶರಣಾಗಿದ್ದಾನೆ. ಪತಿ ಬಹಳ ಸಮಯವಾದರೂ ಹಿಂತಿರುಗದಿದ್ದಾಗ, ತನುಜಾ ತನ್ನ ಸಹೋದ್ಯೋಗಿಗಳೊಂದಿಗೆ ಮನೆಗೆ ಹೋಗಿದ್ದಾಳ ಕಿಟಕಿಯಿಂದ ಮನೆಯೊಳಗೆ ನೋಡಿದಾಗ, ಪತಿ ಮತ್ತು ಮಕ್ಕಳು ಸತ್ತಿರುವುದು ಕಂಡು ಬಂದಿದೆ.

ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದು, ಚಂದ್ರಕಿಶೋರ್ ಬರೆದಿರುವ ಡೆತ್ ನೋಟ್ ಸ್ಥಳದಲ್ಲಿ ಪತ್ತೆಯಾಗಿದೆ.

Continue Reading

FILM

ರೀಲ್ಸ್ ರಾಣಿ ರೇಷ್ಮಾ ಆಂಟಿ ಕಿಡ್ನಾಪ್

Published

on

ಮಂಗಳೂರು/ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ‘ಹಾಯ್ ಫ್ರೆಂಡ್ಸ್ ಏನ್ ಗೊತ್ತಾ’ ಅಂತ ಹೇಳುತ್ತಲೇ ವಿಡಿಯೋ ಮಾಡಿ ಫೇಮಸ್ ಆಗಿದ್ದ ರೇಷ್ಮಾ ಯಾಸಿನ್ ಸಖತ್ ಸುದ್ದಿಯಲ್ಲಿದ್ದಾರೆ. ಆದರೆ ಇದೀಗ ಕಿಡ್ನಾಪ್ ಆಗಿರೋ ರೀತಿಯಲ್ಲಿ ರೀಲ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


ಗಿಚ್ಚಿ ಗಿಲಿಗಿಲಿ ಸೀಸನ್ 3ರ ಸ್ಪರ್ಧಿಯಾಗಿ ಇಡೀ ಕರ್ನಾಟಕಕ್ಕೆ ಫೇಮಸ್ ಆಗಿರುವ ರೇಷ್ಮಾ ಯಾಸಿನ್ ಅವರು ತಮ್ಮ ವೈರಲ್ ವಿಡಿಯೋಗಳಿಂದಲೇ ಇಂದು ಸೆಲಿಬ್ರಿಟಿಯಾಗಿದ್ದಾರೆ. ಜನರು ಸಹ ರೇಷ್ಮಾ ಅವರ ವಿಡಿಯೋಗಳಿಗೆ ಪ್ರೀತಿಯನ್ನು ನೀಡುತ್ತಿದ್ದು, ಅಧಿಕ ವ್ಯೂವ್ಸ್ ಪಡೆದುಕೊಳ್ಳುತ್ತಿರುತ್ತವೆ. ಇದೀಗ ಕಿಡ್ನಾಪ್ ಆಗಿರೋ ರೀತಿಯಲ್ಲಿ ರೀಲ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕೆಆರ್‌ಎಸ್ ಡ್ಯಾಂಗೆ ಎತ್ತಿ ಹಾಕುವೆ ಎಂದ ರವಿ ಮಂಡ್ಯ
ಸದ್ಯ ವೈರಲ್ ವಿಡಿಯೋದಲ್ಲಿ ಹಾಯ್ ಫ್ರೆಂಡ್ಸ್. ನೀವು ನನ್ನನ್ನು ಎಷ್ಟು ಬೆಳೆಸಿದ್ದೀರಿ ಅಂದ್ರೆ ರವಿ ಮಂಡ್ಯ ಅವರನ್ನು ನಾನು ಪರ್ಸನಲ್ ಮೇಕಪ್ ಮ್ಯಾನ್ ಆಗಿ ಇಟ್ಕೊಂಡಿದ್ದೇನೆ ಎಂದು ರೇಷ್ಮಾ ಆಂಟಿ ಹೇಳುತ್ತಾರೆ. ಇದಕ್ಕೆ ಕೋಪಗೊಳ್ಳುವ ರವಿ ಮಂಡ್ಯ, ಒಮಿನಿ ವ್ಯಾನ್ ಡಿಕ್ಕಿ ಓಪನ್ ಮಾಡುತ್ತಾರೆ. ನಂತರ ರೇಷ್ಮಾ ಕೈ-ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಡಿಕ್ಕಿಯೊಳಗೆ ಹಾಕುತ್ತಾರೆ. ಬಿದ್ಕೋ ಕಪಿ ಮುಂಡೆದೆ, ಇನ್ನೊಂದ್ ಸಾರಿ ಆ ಕಟ್ಟಪ್ಪನ ಜೊತೆ ನೀನು ವಿಡಿಯೋನೇ ಮಾಡಬಾರದು. ನಿನ್ನನ್ನು ಕೆಆರ್‌ಎಸ್ ಡ್ಯಾಂಗೆ ಎತ್ತಿ ಹಾಕುವೆ ಎಂದು ವ್ಯಾನ್ ಚಾಲನೆ ಮಾಡಿಕೊಂಡು ಹೋಗುತ್ತಾರೆ.

ಇದನ್ನೂ ಓದಿ: ಶ್ರೀಲೀಲಾ ಅಭಿನಯದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟರ್!

ಈ ರೀಲ್ಸ್‌ ನೋಡಿದ ನೆಟ್ಟಿಗರು, ಅಣ್ಣ ತುಂಬಾ ಉಪಕಾರ ಮಾಡಿದ್ರಿ, ಫಸ್ಟ್ ತಗೊಂಡ್ ಹೋಗಿ ಕೆಆರ್‌ಎಸ್ ಡ್ಯಾಮ್‌ಗೆ ಆಕ್ಬಿಡು ದೇವರು ಒಳ್ಳೇದ್ ಮಾಡ್ತಾನೆ ನಿನಗೆ ಎಂದು ತಮ್ಮ ಗೋಳು ತೋಡಿಕೊಂಡಿದ್ದಾರೆ. ಇವ್ಳ ಕರ್ಕೊಂಡು ಹೋಗಿ ಕಾಡಲ್ಲಿ ಬಿಟ್ ಬಂದ್ಬಿಡು ಇಲ್ಲಿ ಇವರ ಕಾಟ ತಡೆಯೋಕೆ ಆಗ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page