Connect with us

BELTHANGADY

ಅಡಿಕೆ ಬೆಳೆಗಾರರನ್ನು ಕಂಗೆಡಿಸಿದ ಕೊಳೆರೋಗ: ಸುಳ್ಯ-ಬೆಳ್ತಂಗಡಿಯಲ್ಲಿ ಅತ್ಯಧಿಕ ಪ್ರಮಾಣ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್‌ ಮತ್ತು ಜುಲೈ ತಿಂಗಳಿನಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಯ ಬೆಳೆಗಾರರನ್ನು ಕಂಗೆಡಿಸಿದೆ. ಅಡಕೆ ತೋಟಗಳಲ್ಲಿ ಈ ಬಾರಿ ಕೋಳೆ ರೋಗ ಕಾಣಿಸಿಕೊಂಡಿದೆ. ನಿರಂತರವಾಗಿ ಎಳತು ಅಡಕೆ ಉದುರತೊಡಗಿದೆ.

ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ಕೊಳೆರೋಗದ ಪ್ರಮಾಣ ಅತ್ಯಧಿಕವಾಗಿದ್ದು, ಶೇಕಡಾ 40ರಷ್ಟು ಅಡಿಕೆ ಫಸಲು ನಷ್ಟದ ಭೀತಿಯಲ್ಲಿ ಬೆಳೆಗಾರರಿದ್ದಾರೆ. 2018ರಲ್ಲಿ ಮಾರಕ ಕೊಳೆರೋಗಕ್ಕೆ ಜಿಲ್ಲೆಯಲ್ಲಿ ಶೇಕಡಾ 40ಕ್ಕಿಂತ ಜಾಸ್ತಿ ಅಡಕೆ ಫಸಲು ನಷ್ಟ ಉಂಟಾಗಿತ್ತು.

ಇದು ಮತ್ತೆ ಪುನರಾವರ್ತನೆಯಾಗುವ ಆತಂಕ ಎದುರಾಗಿದೆ. ಸಾಮಾನ್ಯವಾಗಿ ಅಡಕೆ ತೋಟಕ್ಕೆ ಜೂನ್ ಪ್ರಥಮ ವಾರದಲ್ಲಿ ಔಷಧ ಸಂಪಿರಣೆ ಆರಂಭಿಸುವುದು ಕ್ರಮ. ಆದರೆ ಈ ಬಾರಿ ಮಳೆಯಿಂದ ಬಿಡುವು ಸಿಕ್ಕಿಲ್ಲ. ಈಗ ಆಗಸ್ಟ್‌ ಮಧ್ಯಭಾಗ ಕಳೆದಿದೆ.

ಈಗಷ್ಟೇ ಸುಳ್ಯದ ಕೆಲವು ಭಾಗಗಳಲ್ಲಿ ಮೊದಲ ಬೋರ್ಡೋ ಸಿಂಪರಣೆಗೆ ಇಳಿದಿದ್ದಾರೆ. ಮೊದಲೇ ಹಳದಿ ರೋಗದಿಂದ ಕಂಗಾಲಾಗಿರುವ ಸುಳ್ಯ ತಾಲೂಕಿನ ಬೆಳೆಗಾರರು ಈಗ ಅಡಕೆ ಕೊಳೆರೋಗದಿಂದ ಮತ್ತಷ್ಟು ಕಂಗಾಲಾಗಿದ್ದಾರೆ.

BELTHANGADY

ಜಂಕ್ ಫುಡ್ ತಿನ್ತೀರಾ.. ಹುಷಾರ್..! ತಿಂಡಿ ಪೊಟ್ಟಣದಲ್ಲಿ ಸತ್ತ ಹಾವಿನ ಮರಿ ಪತ್ತೆ..!!

Published

on

ಬೆಳ್ತಂಗಡಿ: ಇದು ಜಂಕ್ ಫುಡ್‌ ತಿನ್ನುವವರು ನೋಡಲೇಬೇಕಾದ ಬೆಚ್ಚಿಬೀಳಿಸುವ ಸ್ಟೋರಿ..ಜಂಕ್ ಫುಡ್‌ ಬಗ್ಗೆ ಎಚ್ಚರಿಕೆಯ ಮಾತುಗಳು ಆಗಿಂದಾಗ್ಗೆ ಕೇಳಿ ಬರುತ್ತವೆ. ಇದೀಗ ಅದಕ್ಕೊಂದು ಸೇರ್ಪಡೆ ಎಂಬಂತೆ ಇದೀಗ ಜಂಕ್ ಫುಡ್ ಪೊಟ್ಟಣದಲ್ಲಿ ಸಣ್ಣ ಹಾವಿನ ಮಾದರಿಯ ರೀತಿಯ ವಸ್ತುವೊಂದು ಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮುಂಡಾಜೆಯ ಸೋಮಂತಡ್ಕ ಎಂಬಲ್ಲಿ ಗೂಡಂಗಡಿಯಿಂದ ಖರೀದಿಸಿದ ಹೈದರಾಬಾದ್ ವೆಜ್‌ ಬಿರಿಯಾನಿ- ಜಂಕ್‌ ಫುಡ್ ಪೊಟ್ಟಣದಲ್ಲಿ ಇದು ಪತ್ತೆಯಾಗಿದೆ ಎನ್ನಲಾಗಿದೆ. ಅಬ್ದುಲ್ ಮುಸ್ಲಿಯಾರ್ ಎಂಬವರ ಮಗಳು ಖರೀದಿಸಿದ್ದ ಜಂಕ್ ಫುಡ್ ಪೊಟ್ಟಣವನ್ನು ಬಿಡಿಸಿ ತಿನ್ನುವ ವೇಳೆ ಅದರಲ್ಲಿ ಹಾವಿನ ಮಾದರಿಯ ವಸ್ತು ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ.

ಅಬ್ದುಲ್ ಮುಸ್ಲಿಯಾರ್ ಅವರು ಈ ಬಗ್ಗೆ ಆರೋಗ್ಯ ಇಲಾಖೆಗೆ ದೂರು ನೀಡಿದ್ದು, ಅರೋಗ್ಯ ಇಲಾಖೆಯ ಅಧಿಕಾರಿಗಳು ಹಾವಿನ ಮಾದರಿಯ ವಸ್ತುವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ತಿಂಡಿ ತಿಂದ‌ ಮಕ್ಕಳ ಆರೋಗ್ಯ ತಪಾಸಣೆಯನ್ನು ವೈದ್ಯರು ನಡೆಸಿದ್ದು, ಸದ್ಯಕ್ಕೆ  ಮಕ್ಕಳ ಆರೋಗ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ ವೈದ್ಯರ ಮಾಹಿತಿ ನೀಡಿದ್ದಾರೆ.

Continue Reading

BELTHANGADY

ಎರಡು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮೆರೆಸಿಕೊಂಡಿದ್ದ ಆರೋಪಿ ಬಂಧನ

Published

on

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ 2014 ರಲ್ಲಿ ಐಪಿಸಿ ಕಲಂ 406,420, 468, 478, 201 ಅಡಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಎರಡು ವರ್ಷಗಳಿಂದ ತಲೆ ಮೆರೆಸಿಕೊಂಡಿದ್ದ ಹಾಗೂ ಬೆಳ್ತಂಗಡಿ ನ್ಯಾಯಾಲಯವು ವಾರೆಂಟ್ ಹೊರಡಿಸಿದ್ದ ಆರೋಪಿ ಕಮಲಾಕ್ಷ ಮಂಜೇಶ್ವರ ಎಂಬಾತ ಇದೀಗ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.

ಪೊಲೀಸರು ಆತನನ್ನು ಅಕ್ಟೋಬರ್ 30 ರಂದು ಕಾಸರಗೋಡು ಜಿಲ್ಲೆಯ ವಿದ್ಯಾನಗರ ಎಂಬಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದಾರೆ.

Continue Reading

BELTHANGADY

ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಸಾ*ವು

Published

on

ಬೆಳ್ತಂಗಡಿ: ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬೆಳ್ತಂಗಡಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಸಾನ್ವಿ(17) ಎಂಬಾಕೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾ*ವನ್ನಪ್ಪಿದ್ದಾಳೆ.

ಕಣಿಯೂರು ಗ್ರಾಮದ ಪಿಲಿಗೂಡು ನಿವಾಸಿ ಯಶೋಧರ ಶೆಟ್ಟಿ ಅವರ ಪುತ್ರಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಸಾನ್ವಿ ಶೆಟ್ಟಿ ಕಳೆದ ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತಿದ್ದರು.

ಇದನ್ನೂ ಓದಿ: ಜೀವಾಂತ್ಯಕ್ಕೆ ಯತ್ನಿಸಿದ ವಿದ್ಯಾರ್ಥಿನಿ, ಆಸ್ಪತ್ರೆಗೆ ಸಾಗಿಸುವಾಗ ಕಾರು ಅಪಘಾತವಾಗಿ ಸಾವು..!

ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾ*ವನ್ನಪ್ಪಿದ್ದಾಳೆ. ಈಕೆ ತಾಯಿ ರೇಖಾ, ಸಹೋದರ ಸುಹಾನ್ ಅವರನ್ನು ಅಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page