ಮಂಗಳೂರು/ಬೆಂಗಳೂರು : ಗಾಯಕಿ, ನಿರೂಪಕಿ ಅರ್ಚನಾ ಉಡುಪ ಕ್ಯಾ*ನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಅವರು ಹಾಡುವುದನ್ನೇ ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಸುದ್ದಿ ಭಾರೀ ವೈರಲ್ ಆಗಿದ್ದು, ಇದೀಗ ಸ್ವತಃ ಗಾಯಕಿಯೇ ಸ್ಪಷ್ಟನೆ ಕೊಟ್ಟಿದ್ದಾರೆ.

ನನ್ನನ್ನು ಬಹಳ ದಿನಗಳಿಂದ ಕಾಡುತ್ತಿರುವ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳಲೇಬೇಕು ಎಂಬುದಾಗಿ ಕ್ಯಾಪ್ಷನ್ ಕೊಟ್ಟು ವೀಡಿಯೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಗಾಯಕಿ ಹಂಚಿಕೊಂಡಿದ್ದಾರೆ.
ಏನಂದ್ರು ಗಾಯಕಿ?
ನಾನು ಇವತ್ತು ಎರಡು ಅತೀ ಮುಖ್ಯವಾದ ವಿಷಯಗಳನ್ನು ಹಂಚಿಕೊಳ್ಳಲು ವೀಡಿಯೋ ಮಾಡುತ್ತಿದ್ದೇನೆ. ನನ್ನನ್ನು ಇವು ಬಹಳ ದಿನಗಳಿಂದ ಕಾಡುತ್ತಿವೆ. ಈ ವಿಡಿಯೋ ಮಾಡಬೇಕೋ, ಬೇಡವೋ? ಇದರಿಂದ ಉಪಯೋಗ ಆಗುತ್ತೋ ಇಲ್ವೋ? ಅನ್ನುವ ಅನುಮಾನವಿತ್ತು. ಕಿರಿ ಕಿರಿ ಜಾಸ್ತಿ ಆಗುತ್ತಿರುವುದರಿಂದ ನಿಮ್ಮ ಜೊತೆ ಈ ವಿಚಾರ ಹಂಚಿಕೊಳ್ಳುತ್ತಿದ್ದೇನೆ.
3-4 ವರ್ಷದ ಹಿಂದೆ ಸಂದರ್ಶನವೊಂದನ್ನು ಕೊಟ್ಟಿದ್ದೆ. ಆ ಸಂದರ್ಶನದಲ್ಲಿ ನನಗೆ 20 ವರ್ಷದ ಹಿಂದೆ ಸಣ್ಣದಾಗಿ ಗಂಟಲಿನ ಕಿರಿ ಕಿರಿ ಸಮಸ್ಯೆ ಉಂಟಾಗಿ ಕೆಲವು ತಿಂಗಳಗಳ ಕಾಲ ಹಾಡುವುದಕ್ಕೆ ಆಗಿರಲಿಲ್ಲ. ಈ ತೊಂದರೆಯಿಂದ ಹೇಗೆ ಹೊರಗೆ ಬಂದೆ, ಮತ್ತೆ ಹಾಡೋದಕ್ಕೆ ಹೇಗೆ ಪ್ರಾರಂಭಿಸಿದೆ ಎಂಬ ವಿಷಯವನ್ನು ನಾಲ್ಕೈದು ವರ್ಷಗಳ ಹಿಂದೆ ಇಂಟರ್ವ್ಯೂವ್ನಲ್ಲಿ ಹಂಚಿಕೊಂಡಿದ್ದೆ.
ಆದರೆ ನಾನು ಹೇಳಿದ್ದ ಕ್ಲಿಪ್ ಅನ್ನು ಮಾತ್ರ ಪ್ರಮೋಷನ್‌ಗಾಗಿ ಅವರು ಹಾಕಿದ್ದಾರೆ. ಆದರೆ, ನೀವು ಆ ಸಂದರ್ಶನವನ್ನು ಪೂರ್ಣವಾಗಿ ನೋಡದೇ ನನಗೆ ಗಂಟಲು ಹೋಗಿದೆ, ಹಾಡೋದಕ್ಕೆ ಆಗುತ್ತಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ಮನಸಿಗೆ ತುಂಬಾ ನೋ*ವು ಕೊಡುತ್ತಿದೆ. ಎಲ್ಲಿ ಹೋದರೂ ಆರೋಗ್ಯವಾಗಿದ್ದೀರಾ, ಹಾಡುತ್ತಿದ್ದೀರಾ ಎಂದು ಕೇಳುತ್ತಿದ್ದಾರೆ. ಆದರೆ ನನಗೆ ಏನು ಆಗಿಲ್ಲ. ಈಗ ನಾನು ಮೊದಲಿಗಿಂತ ಹೆಚ್ಚು ಬ್ಯುಸಿಯಾಗಿದ್ದೀನಿ. ಹೆಚ್ಚು ಹಾಡು ಹಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಶಾರ್ಟ್ ಹೇರ್ ಕಟ್ ಯಾಕೆ?
ತಮ್ಮ ಶಾರ್ಟ್ ಹೇರ್ ಕಟ್ ಬಗ್ಗೆಯೂ ಗಾಯಕಿ ಸ್ಪಷ್ಟನೆ ನೀಡಿದ್ದು, ಹೇರ್ ಕಟ್ ಯಾಕೆ ಮಾಡಿಸಿದ್ದೀನಿ ಅಂದರೆ, ನಾನೊಂದು ಹೊಸ ಸೀರಿಯಲ್ನಲ್ಲಿ ಆ್ಯಕ್ಟ್ ಮಾಡುತ್ತಿದ್ದೇನೆ. ಆ ಪಾತ್ರಕ್ಕೆ ಇದೇ ರೀತಿಯ ಶಾರ್ಟ್ ಹೇರ್ ಕಟ್ ಬೇಕು ಅಂದದ್ದರಿಂದ ಮಾಡಿಸ್ಕೋಬೇಕಾಯಿತು. ಅದು ಬಿಟ್ಟು ನನಗೆ ಯಾವುದೇ ಆರೋಗ್ಯದ ಸಮಸ್ಯೆ ಇಲ್ಲ. ಆದರೆ ನನಗೆ ಕ್ಯಾನ್ಸರ್ ಬಂದಿದೆ ಅನ್ನೋ ಮಟ್ಟಕ್ಕೆ ಎಲ್ಲ ಕಡೆನೂ ಹಬ್ಬಿಸಿದ್ದಾರೆ. ಇದು ನನಗಿಂತ ಹೆಚ್ಚಾಗಿ ನನ್ನ ಕುಟುಂಬಸ್ಥರಿಗೆ, ಸ್ನೇಹಿತರಿಗೆ ತುಂಬಾ ನೋವಾಗಿದೆ.
ಇದನ್ನೂ ಓದಿ : ಭಜರಂಗಿ ನಟಿಯ 22 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಕಳ್ಳ ಅಂದರ್
ದಯವಿಟ್ಟು ಪೂರ್ತಿ ವಿಷಯವನ್ನು ತಿಳಿದುಕೊಳ್ಳದೆ ಸೋಶಿಯಲ್ ಮೀಡಿಯಾದಲ್ಲಿ ಏನನ್ನು ಹೇಳಬೇಡಿ. ಪೂರ್ತಿ ವಿಷಯ ತಿಳಿದುಕೊಳ್ಳಿ. ಇದರಿಂದ ಮತ್ತೊಬ್ಬರ ವೃತ್ತಿ ಜೀವನಕ್ಕೆ ಅಥವಾ ವೈಯಕ್ತಿಯ ಜೀವನಕ್ಕೆ ಘಾಸಿ ಆಗುವುದು ತಪ್ಪುತ್ತೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ. ದೇವರ ದಯೆಯಿಂದ ಗಟ್ಟಿ ಮುಟ್ಟಾಗಿ ಆರೋಗ್ಯವಾಗಿದ್ದೀನಿ ಎಂದು ಅರ್ಚನಾ ಉಡುಪ ಹೇಳಿದ್ದಾರೆ.