Connect with us

FILM

ಎಆರ್ ರೆಹಮಾನ್ ಆರೋಗ್ಯದಲ್ಲಿ ಏರು-ಪೇರು; ಆಸ್ಪತ್ರೆಗೆ ದಾಖಲು

Published

on

ಮಂಗಳೂರು/ಚೆನ್ನೈ: ಖ್ಯಾತ ಸಂಗೀತ ಕ್ಷೇತ್ರದ ದಿಗ್ಗಜ ಎಆರ್ ರೆಹಮಾನ್ ಅವರ ಆರೋಗ್ಯದಲ್ಲಿ ಏರು-ಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಇಂದು (ಮಾ.16) ಬೆಳಗ್ಗೆ 7.30ರ ಸುಮಾರಿಗೆ ರೆಹಮಾನ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ರೆಹಮಾನ್ ಅವರನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎದೆನೋವಿನ ಹಿನ್ನೆಲೆಯಲ್ಲಿ ಎ.ಆರ್ ರೆಹಮಾನ್ ಅವರಿಗೆ ECG, ಎಕೋಕಾರ್ಡಿಯೋಗ್ರಾಮ್ ಸೇರಿ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದೆ. ಸದ್ಯಕ್ಕೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಇನ್ನೂ ಕೆಲ ದಿನ ಅಪೋಲೊ ಆಸ್ಪತ್ರೆಯಲ್ಲಿಯೇ ಕಳೆಯಲಿರುವ ಎಆರ್ ರೆಹಮಾನ್ ಆಂಜಿಯೋಗ್ರಾಂ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ, ಖ್ಯಾತ ಸಂಗೀತ ನಿರ್ದೇಶಕನ ದಾಂಪತ್ಯ ಜೀವನದಲ್ಲಿ ಬಿರುಕು!

ಎಆರ್ ರೆಹಮಾನ್ ಅವರಿಗೆ ಈಗ 58 ವರ್ಷ ವಯಸ್ಸಾಗಿದೆ. ಇತ್ತೀಚೆಗಷ್ಟೆ ಅವರು ಪತ್ನಿ ಸಾಯಿರಾ ಬಾನು ಅವರಿಂದ ದೂರಾಗಿದ್ದಾರೆ. ಪತ್ನಿಯಿಂದ ವಿಚ್ಛೇದನ ಪಡೆದಿರುವ ಎಆರ್ ರೆಹಮಾನ್ ಏಕಾಂಗಿಯಾಗಿದ್ದಾರೆ. ಅಂದಹಾಗೆ ರೆಹಮಾನ್ ಅವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ರೆಹಮಾನ್ ಪುತ್ರ ಮತ್ತು ಪುತ್ರಿ ಇಬ್ಬರೂ ಸಹ ಗಾಯಕರೇ ಆಗಿದ್ದಾರೆ.

FILM

ನಾನು ಅಷ್ಟೊಂದು ಫೇಮಸ್ ಕೂಡ ಆಗಿರಲಿಲ್ಲ, ಆದರೆ ಕನ್ನಡದ ಸ್ಟಾರ್ ನಟ ನನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡ್ತಿದ್ರು..! ಗಗನಾ ಭಾರಿ

Published

on

ಮಂಗಳೂರು/ಬೆಂಗಳೂರು: ರಿಯಾಲಿಟಿ ಶೋ ಮೂಲಕವೇ ಕನ್ನಡಿಗರ ಮನೆಮಾತಾಗಿರುವ ಗಗನ ಭಾರಿ ಸದ್ಯ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ’ ಮೆಂಟರ್ ಆಗಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಒಂದು.. ನಾನು ಅಷ್ಟೊಂದು ಫೇಮಸ್ ಇಲ್ಲದ ಸಂದರ್ಭದಲ್ಲೇ ನನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಕನ್ನಡದ ಸ್ಟಾರ್‌ ನಟರೊಬ್ಬರು ಫಾಲೋ ಮಾಡ್ತಿದ್ರು ಎಂದು ಹೇಳಿದ್ದಾರೆ. ಇದು ಅಭಿಮಾನಿಗಳ ಕೂತುಹಲಕ್ಕೆ ಕಾರಣವಾಗಿದೆ.

ಕಿರುತೆರೆಯಲ್ಲಿ ಫೇಮಸ್ಸು ಆಗಿರುವವರ ಪೈಕಿ ಗಗನಾ ಕೂಡಾ ಒಬ್ಬರು. “ಮಹಾನಟಿ” ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿದ್ದಲ್ಲದೇ, ಮನೆಮಗಳಂತೆ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ ನಟಿ ಗಗನಾ ಭಾರಿ. ತಮ್ಮ ಇನ್‌ಸ್ಟೆಂಟ್ ಡೈಲಾಗ್‌ಗಳ ಮೂಲಕವೇ ಪ್ರೇಕ್ಷಕರ ಮನಕದ್ದ ಚೆಲುವೆ.

ಡೈಲಾಗ್ ಡೆಲಿವರಿಗೆ ಫೇಮಸ್ ಆಗಿದ್ದ ಗಗನಾ ಭಾರಿ, ಮಹಾನಟಿ ರಿಯಾಲಿಟಿ ಶೋನ ಉದ್ದಕ್ಕೂ ಬಹಳಷ್ಟು ಪಾಪ್ಯುಲಾರಿಟಿ ಗಳಿಸಿದ್ದರು. “ಮಹಾನಟಿ” ರಿಯಾಲಿಟಿ ಶೋ ಅಷ್ಟೇ ಅಲ್ಲದೆ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ರಿಯಾಲಿಟಿ ಶೋನಲ್ಲಿಯೂ ಈಕೆ ಕಾಣಿಸಿಕೊಂಡಿದ್ದಾರೆ. ಇದೀಗ “ಭರ್ಜರಿ ಬ್ಯಾಚುಲರ್” ಸೀಸನ್ 2 ನಲ್ಲಿಯೂ ಭಾಗವಹಿಸಿದ್ದಾರೆ. ತಮ್ಮ ಐಟಿ ಕೆಲಸ ಬಿಟ್ಟು ಇದೀಗ ರಿಯಾಲಿಟಿ ಶೋ ಗಳಲ್ಲಿಯೇ ಸಕ್ರಿಯರಾಗಿದ್ದಾರೆ.

ಆದರೆ ಗಗನಾ ಭಾರಿ “ಮಹಾನಟಿ” ರಿಯಾಲಿಟಿ ಶೋಗೆ ಬರುವ ಮೊದಲೇ ಇವರನ್ನು ಕನ್ನಡದ ಸ್ಟಾರ್ ನಟರೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದರು.. ಎಂಬ ವಿಚಾರವನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಹಾಡು ನಕಲು ಮಾಡಿದ ಆರೋಪ; ಎಆರ್‌ ರೆಹಮಾನ್‌ಗೆ 2 ಕೋಟಿ ರೂ. ದಂಡ

ಈ ವಿಚಾರವನ್ನು ಗಗನಾ ಭಾರಿ ಅವರೇ ಹಂಚಿಕೊಂಡಿದ್ದು, “”ನಾನು ರಿಯಾಲಿಟಿ ಶೋಗೆ ಬರುವುದಕ್ಕೂ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಿದ್ದೆ. ಹೀಗಿರುವಾಗ ನನ್ನ ಒಂದು ರೀಲ್ಸ್ ರವಿ ಸರ್‌ಗೆ ಇಷ್ಟವಾಗಿ, ಅವರು ಅದನ್ನು ಲೈಕ್ ಮಾಡಿದರು. ಜೊತೆಗೆ ನನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಕೂಡ ಮಾಡಿದ್ರು. ‘ಮಹಾನಟಿ’ ಶೋಗಿಂತಲೂ ಮುಂಚೆ ಯಾರಾದರೂ ಸೆಲೆಬ್ರಿಟಿ ನನ್ನನ್ನು ಫಾಲೋ ಮಾಡಿದ್ದಾರೆ ಎಂದರೆ, ಅದು ರವಿಚಂದ್ರನ್ ಸರ್. ನಾನು ಆಮೇಲೆ ರವಿ ಸರ್‌ಗೆ ಮೇಸೆಜ್ ಮಾಡಿ, ‘ನೀವು ನನ್ನನ್ನು ಫಾಲೋ ಮಾಡಿದ್ದು ನನಗೆ ಖುಷಿ ಆಯ್ತು, ನನಗೆ ಬೂಸ್ಟ್ ಅಪ್ ಸಿಕ್ಕಂತೆ ಆಯ್ತು ಅಂತ ಹೇಳಿದ್ದೆ. ಬಹಳಷ್ಟು ಜನ ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ ಅವರದ್ದು ಲಕ್ಕಿ ಹ್ಯಾಂಡ್ ಎಂದು ಹೇಳುವುದನ್ನು ಕೇಳಿದ್ದೆ, ಅದು ನನ್ನ ವಿಷಯದಲ್ಲಿ ಸತ್ಯವೇ ಆಯಿತು. ಅವರು ನನ್ನನ್ನು ಫಾಲೋ ಮಾಡಲು ಆರಂಭಿಸಿ ಕೆಲವೇ ದಿನಗಳಿಗೆ ಮಹಾ ನಟಿ ಎಂಬ ದೊಡ್ಡ ರಿಯಾಲಿಟಿ ಶೋ ಗೆ ನಾನು ಆಯ್ಕೆಯಾಗಿ ಇಂದು ಬಹಳಷ್ಟು ಪಾಪ್ಯುಲಾರಿಟಿಯನ್ನು ಪಡೆದಿದ್ದೇನೆ” ಎಂದಿದ್ದಾರೆ ನಟಿ ಗಗನಾ.

Continue Reading

bangalore

ಇಬ್ಬರು ಮೂವರಾಗಿ ಇಂದಿಗೆ 3 ತಿಂಗಳು; ಮಗನ ಫೊಟೋ ರಿವೀಲ್ ಮಾಡಿದ ವಶಿಷ್ಠ ದಂಪತಿ

Published

on

ಸ್ಯಾಂಡಲ್‌ವುಡ್‌ನ ಕ್ಯೂಟ್ ಹೋಡಿಯಾಗಿ ಗುರುತಿಸಿಕೊಂಡಿರುವ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ದಂಪತಿ ಗಂಡು ಮಗುವಿಗೆ ಜನ್ಮ ನೀಡಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿತ್ತು. ಈಗ ಮಗು ಜನಿಸಿ 3 ತಿಂಗಳು ತುಂಬಿದ ಖುಷಿಯಲ್ಲಿ ಮಗನ ಫೋಟೋವನ್ನು ವಸಿಷ್ಠ ದಂಪತಿ ರಿವೀಲ್ ಮಾಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಫುಲ್ ಖುಷ್ ಆಗಿದೆ.
2023ರ ಜನವರಿ 26ರಂದು ವಸಿಷ್ಠ ಮತ್ತು ಹರಿಪ್ರಿಯಾ ಮೈಸೂರಿನಲ್ಲಿ ಮದುವೆಯಾದರು. ಇದೇ ದಿನಾಂಕ ಅಂದರೆ 2025 ರ ಜ.26ರಂದು ಹರಿಪ್ರಿಯಾ ಮುದ್ದಾದ ಗಂಡು ಮಗನಿಗೆ ಜನ್ಮ ನೀಡಿದರು. ಹೀಗಾಗಿ ಸಿನಿಮಾಗೆ ಬ್ರೇಕ್ ಕೊಟ್ಟು ಮಗನ ಆರೈಕೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಮಗನಿಗೆ 3 ತಿಂಗಳು ತುಂಬಿದ ಖುಷಿಯಲ್ಲಿ ಮೊದಲ ಬಾರಿಗೆ ಹರಿಪ್ರಿಯಾ ದಂಪತಿ ಮಗನ ಫೊಟೋ ರಿವೀಲ್ ಮಾಡಿದ್ದಾರೆ.
ಮಗನೊಂದಿಗಿನ ಬ್ಲ್ಯಾಕ್ & ವೈಟ್ ಫೋಟೋ ಶೇರ್ ಮಾಡಿ, ‘ನಾವಿಬ್ಬರೂ ಮೂವರಾಗಿ ಇಂದಿಗೆ 3 ತಿಂಗಳು’ ವಸಿಷ್ಠ ದಂಪತಿ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸದ್ಯ ಈ ಫೊಟೋ ಫುಲ್ ವೈರಲ್ ಆಘುತ್ತಿದೆ ಹಲವಾರು ಕಾಮೆಂಟ್‌ಗಳನ್ನು ಒಳಗೊಂಡಿದೆ.

Continue Reading

FILM

ಹಾಡು ನಕಲು ಮಾಡಿದ ಆರೋಪ; ಎಆರ್‌ ರೆಹಮಾನ್‌ಗೆ 2 ಕೋಟಿ ರೂ. ದಂಡ

Published

on

ಮಂಗಳೂರು/ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ‘ವೀರ ರಾಜ ವೀರ’ ಹಾಡು ವಿವಾದಕ್ಕೆ ಕಾರಣವಾಗಿತ್ತು. ರೆಹಮಾನ್ ಅವರು ಕಂಪೋಸ್ ಮಾಡಿರುವ ಈ ಹಾಡಿನ ಮೇಲೆ ಕಾಪಿರೈಟ್ ಆರೋಪ ಮಾಡಲಾಗಿತ್ತು. ಇದೀಗ ಈ ಆರೋಪ ಸಾಬೀತಾಗಿದ್ದು, ಈ ಕುರಿತು ದೆಹಲಿ ಹೈಕೋರ್ಟ್ ಭಾರೀ ಪ್ರಮಾಣದ ದಂಡವನ್ನು ವಿಧಿಸಿದೆ.

ಭಾರತೀಯ ಶಾಸ್ತ್ರೀಯ ಗಾಯಕ ಮತ್ತು ಪದ್ಮಶ್ರೀ ಪುರಸ್ಕೃತ ಫೈಯಾಜ್ ವಾಸಿಫುದ್ದೀನ್ ದಾಗರ್ ಅವರು ‘ಪೊನ್ನಿಯನ್ ಸೆಲ್ವನ್ 2’ ಸಿನಿಮಾದ ‘ವೀರ ರಾಜ ವೀರ’ ಹಾಡು ‘ಶಿವ ಸ್ತುತಿ’ಯಿಂದ ನಕಲು ಮಾಡಲಾಗಿದೆ ಎಂದು ಆರೋಪಿಸಿ, 2023ರಲ್ಲಿ ಮೊಕದಮ್ಮೆ ಹೂಡಿದ್ದರು. ಇದೀಗ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ಮೇಲೆ ದೆಹಲಿ ಹೈಕೋರ್ಟ್ ಎಆರ್ ರೆಹಮಾನ್ ಮತ್ತು ನಿರ್ಮಾಣ ಸಂಸ್ಥೆ ಮದ್ರಾಸ್ ಟಾಕೀಸ್ ವಿರುದ್ದ ಮಧ್ಯಂತರ ಆದೇಶ ಹೊರಡಿಸಿದೆ.

ವಿಚಾರಣೆ ನಡೆಸಿದ ಕೋರ್ಟ್ ಹಾಡನ್ನು ಶಿವ ಸ್ತುತಿಯಿಂದ ನಕಲು ಮಾಡಿದ್ದು ಸಾಬೀತಾಗಿದ್ದು, ಕೆಲ ಬದಲಾವಣೆಗಳು ಅದಕ್ಕೆ ಹೋಲುತ್ತದೆ ಎಂದು ಕೋರ್ಟ್ ಹೇಳಿದೆ.

ಇನ್ನೂ ಎ. ಆರ್ ರೆಹಮಾನ್, ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ 2 ಕೋಟಿ ರೂ. ಠೇವಣಿ ಇಡುವಂತೆ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ಆದೇಶಿಸಿದ್ದಾರೆ.

ಇದನ್ನೂ ಓದಿ: 5 ತಿಂಗಳ ನಂತರ ವಿಚ್ಛೇದನದ ಕುರಿತು ಮೌನ ಮುರಿದ ಎ. ಆರ್ ರೆಹಮಾನ್

ಉಸ್ತಾದ್ ಫೈಯಜ್ ವಾಸಿಫುದ್ದೀನ್ ಅವರಿಗೆ 2 ಲಕ್ಷ ರೂಪಾಯಿ ಪಾವತಿಸಬೇಕು. ಎಲ್ಲಾ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಜೂನಿಯರ್ ಡಾಗರ್ ಬ್ರದರ್ಸ್‌ಗೆ ಕ್ರೆಡಿಟ್ ನೀಡುವಂತೆ ನ್ಯಾಯಾಲಯವು ನಿರ್ಮಾಣ ಸಂಸ್ಥೆಗೆ ನಿರ್ದೇಶನ ನೀಡಿದೆ. ಈ ಕುರಿತು ಮಾಧ್ಯಮಗಳು ವರದಿ ಮಾಡಿವೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page