Connect with us

LATEST NEWS

ಎ. 1 ರಿಂದ ಮನೆ ಕಸಕ್ಕೂ ಕಟ್ಟಬೇಕು ಹಣ.. ಎಷ್ಟು ಗೊತ್ತಾ..?

Published

on

ಬೆಂಗಳೂರು: ಬಸ್ ಟಿಕೆಟ್ ದರ, ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳದ ನಡುವೆ ಬೆಂಗಳೂರಿನ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಎ. 1 ರಿಂದ ಪ್ರತಿ ಮನೆಯ ಕಸಕ್ಕೂ ಜನರು ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂದು ಸರ್ಕಾರ ಅನುಮೋದನೆ ನೀಡಿದೆ.

ತ್ಯಾಜ್ಯ ಸಂಸ್ಕರಣೆ ಮಾಡದ ಅಪಾರ್ಟೆಂಟ್ಗಳು ಅಥವಾ ದೊಡ್ಡ ವಾಣಿಜ್ಯ ಸಂಸ್ಥೆಗಳಂತಹ ಬೃಹತ್ ತ್ಯಾಜ್ಯ ಉತ್ಪಾದಕರಿಂದ ಪ್ರತಿ ಕೆ.ಜಿ. ತ್ಯಾಜ್ಯಕ್ಕೂ 12 ರೂ. ಬಳಕೆದಾರ ಶುಲ್ಕ ವಿಧಿಸಲು ಸರ್ಕಾರವು ಅವಕಾಶ ನೀಡಿದೆ. ಕಟ್ಟಡದ ವಿಸ್ತೀರ್ಣದ ಆಧಾರದ ಮೇಲೆ ಬಳಕೆದಾರ ಶುಲ್ಕ ನಿರ್ಧರಿಸಲಾಗುತ್ತದೆ.

600 ಚದರ ಅಡಿ ವರೆಗಿನ ಕಟ್ಟಡಗಳು ತಿಂಗಳಿಗೆ 10 ರೂ. ವರ್ಷಕ್ಕೆ 120 ರೂ. ಪಾವತಿಸಬೇಕು. 4,000 ಚದರ ಅಡಿಗಿಂತ ದೊಡ್ಡ ಕಟ್ಟಡಗಳಿಗೆ ತಿಂಗಳಿಗೆ ಗರಿಷ್ಠ 400 ರೂ. ವರ್ಷಕ್ಕೆ 4,800 ರೂ. ಪಾವತಿಸಬೇಕಾಗುತ್ತದೆ.

LATEST NEWS

ಐವರು ಮಡದಿಯರ ಮುದ್ದಿನ ಗಂಡ.. ಇಂದು 11 ಮಕ್ಕಳ ತಂದೆ..! ಈತನ ಐದು ಮದುವೆಗೆ ಕಾರಣ ಏನು ಗೊತ್ತಾ?

Published

on

ಮಂಗಳೂರು/ಲಾಸ್ ಏಂಜಲೀಸ್: ಒಬ್ಬ ವ್ಯಕ್ತಿಗೆ ಒಂದು ಮದುವೆಯಾದರೇ ಸಾಕು ಸಂಸಾರದ ಜಂಜಾಟದಲ್ಲಿ ಬೇಸರ ಮೂಡಿಸುತ್ತದೆ. ಆದರೆ ಲಾಸ್‌ ಏಂಜಲೀಸ್‌ನ ವ್ಯಕ್ತಿಯೊಬ್ಬ ಐದು ಮದುವೆಯಾಗಿದ್ದಾನೆ. ಈಗ ಅವನಿಗೆ 11 ಮಕ್ಕಳಿದ್ದಾರೆ. ಅವನು ಏಕಪತ್ನಿತ್ವ ತ್ಯಜಿಸಿ ಬಹುಪತ್ನಿತ್ವ ಹೊಂದಲು ಕಾರಣ ಕೂಡ ಹೇಳಿದ್ದಾನೆ.

ಹೌದು.. ಲಾಸ್ ಏಂಜಲೀಸ್ ಜೇಮ್ಸ್ ಬ್ಯಾರೆಟ್ ತನ್ನ ಗೆಳತಿಯೊಬ್ಬಳಿಗೆ ಮೋಸ ಮಾಡಿದನು. ಅವನಿಗೆ ಬೇರೆ ಮಹಿಳೆಯರೊಂದಿಗೆ ಸಂಬಂಧವಿತ್ತು. ತನ್ನನ್ನು ತಾನು ಬದಲಾಯಿಸಿಕೊಳ್ಳಬೇಕೆಂದು, ಅವನು ಏಕಪತ್ನಿತ್ವವನ್ನು ತ್ಯಜಿಸಿ ಬಹುಪತ್ನಿತ್ವವನ್ನು ಸ್ವೀಕರಿಸಿದನು.

ಅಂದರೆ ಆತ ಒಂದೇ ಬಾರಿಗೆ ಹಲವಾರು ಮಹಿಳೆಯರನ್ನು ಪ್ರೀತಿಸೋಕೆ ಶುರು ಮಾಡಿದನು. ಅವರಲ್ಲಿ ಒಬ್ಬರಿಗೆ ತಿಳಿಯದೆ ಮತ್ತೊಬ್ಬರೊಂದಿಗೆ ಸಂಬಂಧವಿತ್ತು. ಇನ್ನು ಮುಂದೆ ಯಾರನ್ನೂ ಮೋಸಗೊಳಿಸಬಾರದು ಎಂಬ ಉದ್ದೇಶದಿಂದ ತಾನೂ ಸಂಬಂಧದಲ್ಲಿದ್ದ ಎಲ್ಲರನ್ನು ಒಟ್ಟಿಗೆ ಮದುವೆಯಾದನು.

ಇದನ್ನೂ ಓದಿ: ನಾನು ಅಷ್ಟೊಂದು ಫೇಮಸ್ ಕೂಡ ಆಗಿರಲಿಲ್ಲ, ಆದರೆ ಕನ್ನಡದ ಸ್ಟಾರ್ ನಟ ನನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡ್ತಿದ್ರು..! ಗಗನಾ ಭಾರಿ

ಜೇಮ್ಸ್ ಹೇಳುವಂತೆ, ತಾನು ಒಬ್ಬಳೇ ಗೆಳತಿಯೊಂದಿಗೆ ಇದ್ದಾಗ, ತನ್ನೊಳಗೆ ನಿರಂತರವಾಗಿ ಸಂಘರ್ಷಕ್ಕೊಳಗಾಗುತ್ತಿದೆ ಮತ್ತು ತಾನು ತನ್ನೊಂದಿಗೆ ಪ್ರಾಮಾಣಿಕವಾಗಿಲ್ಲ ಎಂದು ಭಾವಿಸುತ್ತಿದೆ. ಆದರೆ ಈಗ ನಾನು ಐವರ ಜತೆ ಮದುವೆಯಾಗಿದ್ದೇನೆ. ಇದು ನನ್ನ ಪತ್ನಿಯರಿಗೂ ಗೊತ್ತು. ನನಗೆ 11 ಮಕ್ಕಳು ಇದ್ದಾರೆ. ಐದು ಜನ ಪತ್ನಿಯರೊಂದಿಗೆ ಸಂತೋಷವಾಗಿದ್ದರೂ, ಇಷ್ಟು ದೊಡ್ಡ ಕುಟುಂಬವನ್ನು ಆರ್ಥಿಕವಾಗಿ ನಿರ್ವಹಿಸುವುದು ತನಗೆ ದೊಡ್ಡ ಸವಾಲಾಗಿದೆ. ಇಡೀ ಕುಟುಂಬವು ಒಟ್ಟಿಗೆ ವಾಸಿಸುತ್ತದೆ, ಪರಸ್ಪರ ಬೆಂಬಲಿಸುತ್ತಾರೆ ಎಂದಿದ್ದಾನೆ.

ಜೇಮ್ಸ್ ಬ್ಯಾರೆಟ್ ಉದ್ದೇಶವೆನೆಂದರೆ, ತನ್ನನ್ನು ತಾನು ಸುಧಾರಿಸಿಕೊಳ್ಳುವ ಉದ್ದೇಶದಿಂದ, ಆತ ಬೇರೆಯವರ ಜೊತೆ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಅಗತ್ಯವನ್ನು ತಪ್ಪಿಸಲು ಐದು ಮದುವೆಯಾಗಿದ್ದಾನೆಯಂತೆ.

Continue Reading

LATEST NEWS

ವೈರಲ್ ವಿಡಿಯೋ: ಎಳನೀರಿನಲ್ಲೂ ಟೀ ಮಾಡ್ತಾರೇ.. ಹೇಗೆ ಗೊತ್ತಾ..? 

Published

on

ಸಾಮಾನ್ಯವಾಗಿ ನೀರು, ಹಾಲನ್ನು ಮಿಶ್ರಣ ಮಾಡಿ ಚಹಾವನ್ನು ತಯಾರು ಮಾಡ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ನೀರಿನ ಬದಲು ಎಳನೀರು ಹಾಕಿ ಮಹಿಳೆ ಬಿಸಿ ಬಿಸಿ ಚಹಾವನ್ನು ತಯಾರಿಸಿದ್ದಾಳೆ ಈ ಕುರಿತ ವಿಡಿಯೋವನ್ನು _hetals_art_ಹೆಸರಿನ ಇನ್‌ಸ್ಟ್ರಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ಗ್ಯಾಸ್ ಒಲೆ ಮೇಲೆ ಸೀಯಾಳವನ್ನಿಟ್ಟು ಅದಕ್ಕೆ ಎಳನೀರು, ಚಹಾಪುಡಿ, ಸಕ್ಕರೆ, ಹಾಲು ಸೇರಿಸಿ ಬಿಸಿ ಬಿಸಿ ಚಹಾ ತಯಾರಿಸುತ್ತಿರುವ ದೃಶ್ಯವನ್ನು ಕಾಣಬಹುದು.

ಏಪ್ರಿಲ್ 2ರಂದು ಶೇರ್ ಮಾಡಲಾದ ಈ ವಿಡಿಯೋ 2.5 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು “ಈ ಜನಗಳು ನಮ್ಮ ಭಾವನೆಗಳ ಜೊತೆ ಯಾಕೆ ಹೀಗೆ ಆಡ್ತಾರೆ” ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇದೆಂಥಾ ಹುಚ್ಚಾಟ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಇದೆಂಥಾ ಅವಸ್ಥೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.

Watch Video:

Continue Reading

LATEST NEWS

ಪಾಕ್ ಸುದ್ದಿವಾಹಿನಿಗಳಲ್ಲಿ ಸಿಎಂ ಸಿದ್ದು ಸದ್ದು

Published

on

ಮಂಗಳೂರು/ಬೆಂಗಳೂರು : ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಿಂದ ಇಡೀ ದೇಶವೇ ಕೆರಳಿದೆ. ಉಗ್ರರನ್ನು ಮಟ್ಟ ಹಾಕಲು ಭಾರತೀಯ ಸೇನೆ ಸನ್ನದ್ಧವಾಗಿದೆ. ಅತ್ತ ಪಾಕಿಸ್ತಾನದ ವಾಹಿನಿಯಲ್ಲಿ ಸಿಎಂ ಸಿದ್ಧರಾಮಯ್ಯ ಕಾಣಿಸಿಕೊಂಡಿದ್ದಾರೆ.

ಹೌದು, ಪಹಲ್ಗಾಮ್ ಉಗ್ರರ ದಾಳಿಯ ವಿಚಾರವಾಗಿ ಸಿಎಂ ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿರುವ ಹೇಳಿಕೆ ಪಾಕ್ ಸುದ್ದಿವಾಹಿನಿಗಳಲ್ಲಿ ಬಿತ್ತರವಾಗಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಯುದ್ಧದ ಅಗತ್ಯತೆ ಇಲ್ಲಎಂದಿದ್ದ ಸಿಎಂ!

ಮೈಸೂರಲ್ಲಿ ಪಹಲ್ಗಾಮ್ ದಾಳಿಯ ಬಗ್ಗೆ ನಿನ್ನೆ (ಎ. 26)  ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಅಗತ್ಯತೆ ಇಲ್ಲ. ಆದರೆ, ಅನಿವಾರ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪಹಲ್ಗಾಮ್ ಅದೊಂದು ಯಾತ್ರಾರ್ಥಿಗಳ ಸ್ಥಳ. ಅಲ್ಲಿ ಭದ್ರತೆಯನ್ನು ಕೈಗೊಳ್ಳಬೇಕಿತ್ತು.

ಈ ಹಿಂದೆ ಪುಲ್ವಾಮಾ ದಾಳಿಯಲ್ಲೂ ಘೋರ ದುರಂತ ಸಂಭವಿಸಿತ್ತು. ಕೇಂದ್ರ ಸರ್ಕಾರದಿಂದ ಭದ್ರತಾ ವೈಫಲ್ಯ ಆಗಿದೆ. ಅದೊಂದು ಇಂಟಲಿಜೆನ್ಸ್ ಹಾಗೂ ಸೆಕ್ಯೂರಿಟಿ ಫೇಲ್ಯೂರ್​. ಕೇಂದ್ರ ಸರ್ಕಾರ ಭದ್ರತಾ ಕ್ರಮ ತೆಗೆದುಕೊಂಡಿಲ್ಲ. ಈಗ ಯಾವುದೇ ಕ್ರಮ ತೆಗೆದುಕೊಂಡರೂ 26 ಜನ ವಾಪಸ್ ಬರೋಲ್ಲ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದರು.

ಯುದ್ಧದ ಪರ ನಾವು ಇಲ್ಲ. ಶಾಂತಿ ಇರಬೇಕು. ಜನರಿಗೆ ಭದ್ರತೆ ಇರಬೇಕು. ಕೇಂದ್ರ ಸರ್ಕಾರ ಭದ್ರತಾ ಕ್ರಮವನ್ನು ತೆಗೆದುಕೊಳ್ಳಬೇಕು ಎಂದಿದ್ದರು. ಸದ್ಯ ಈ ಹೇಳಿಕೆಯನ್ನು ಪಾಕ್ ಸುದ್ದಿ ವಾಹಿನಿಗಳು ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರ ಮಾಡಿವೆ. ಈ ವೀಡಿಯೋ  ವೈರಲ್ ಆಗುತ್ತಿದೆ.

ಇದನ್ನೂ ಓದಿ : ಪಹಲ್‌ಗಾಮ್ : ದಾಳಿ ನಡೆದ ವಾರದೊಳಗೆ ಮತ್ತೆ ಹೆಚ್ಚುತ್ತಿದೆ ಪ್ರವಾಸಿಗರ ಸಂಖ್ಯೆ

ವೀಡಿಯೋ ವೈರಲ್ ಬಗ್ಗೆ ಪ್ರತಿಕ್ರಿಯೆ :

ಸಿಎಂ ಸಿದ್ದರಾಮಯ್ಯ ಹೇಳಿಕೆ ಪಾಕ್ ವಾಹಿನಿಗಳಲ್ಲಿ ಪ್ರಸಾರವಾಗಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನದ ಮೇಲೆ ಯುದ್ಧ ಬೇಡ ಎಂದು ನಾನು ಹೇಳಿಲ್ಲ. ಪಹಲ್ಗಾಮ್‌ ಭದ್ರತೆಯ ಬಗ್ಗೆ ನಾನು ಮಾತನಾಡಿದ್ದೆ. ಉಗ್ರರ ದಾಳಿಯಲ್ಲಿ ಭದ್ರತಾ ವೈಫಲ್ಯ ಆಗಿದೆ. ಯುದ್ಧ ಅನಿವಾರ್ಯ ಆದ್ರೆ ಮಾಡಲಿ. ನಾನು ಪಾಕಿಸ್ತಾನದ ಮೇಲೆ ಯುದ್ಧ ಬೇಡ ಅಂತ ಹೇಳಿಲ್ಲ ಎಂದಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page