Connect with us

LATEST NEWS

18ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ನೇಮಕ..! INDIA ನಲ್ಲಿ ಅಸಮಾಧಾನ..!

Published

on

ಮಂಗಳೂರು / ನವದೆಹಲಿ : ಹದಿನೆಂಟನೇ ಲೋಕಸಭೆಯ ಮೊದಲ ಅಧಿವೇಶನ ಆರಂಭಗೊಂಡಿದ್ದು, ಪ್ರೋಟೆಮ್ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ಅವರನ್ನು ಆಯ್ಕೆ ಮಾಡಲಾಗಿದೆ. 2 ದಿನಗಳ ಅಧಿವೇಶನಕ್ಕೆ ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಅವರು ಕಾರ್ಯನಿರ್ವಹಿಸಲಿದ್ದು, ಮೂರನೇ ದಿನ ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ.


ಹಂಗಾಮಿ ಸ್ಪೀಕರ್ ಆಗಿ 8 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಕೇರಳದ ಮಾವಿಲಕೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಕೆ .ಸುರೇಶ್ ಅವರಿಗೆ ನೀಡಬೇಕಾಗಿತ್ತು. ಆದ್ರೆ, ಭರ್ತೃಹರಿ ಮಹತಾಬ್ ಅವರಿಗೆ ಈ ಅವಕಾಶ ನೀಡಲಾಗಿದೆ. ಈ ಬಗ್ಗೆ ಇಂಡಿ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದ್ದು, ಕೆ. ಸುರೇಶ್ ಸೇರಿದಂತೆ ಒಕ್ಕೂಟದ ಮೂವರನ್ನು ಪ್ಯಾನೆಲ್ ಮೆಂಬರ್ ಕರ್ತವ್ಯಕ್ಕೆ ಹಾಜರಾಗದಂತೆ ಸೂಚಿಸಿದೆ. ಹೀಗಾಗಿ ಕೆ. ಸುರೇಶ್ ಹಾಗೂ ಇತರ ಮೂವರು ಹಿರಿಯ ಸಂಸದರು ಹಂಗಾಮಿ ಸ್ಪೀಕರ್ ಅವರಿಗೆ ಸಹಕರಿಸದೆ ಪ್ರಮಾಣವಚನದಿಂದ ದೂರು ಉಳಿದಿದ್ದಾರೆ.

ಹದಿನೆಂಟನೇ ಲೋಕಸಭೆಯ ಸ್ಪೀಕರ್ ಆಗಿ ಮತ್ತೆ ಓಂ ಬಿರ್ಲಾ ಅವರು ನೇಮಕವಾಗುವ ಸಾಧ್ಯತೆ ಇದೆ. ಇದೇ ವೇಳೆ ಡೆಪ್ಯುಟಿ ಸ್ಪೀಕರ್ ಸ್ಥಾನ ಲೋಕಸಭೆಯ ಸಂಪ್ರದಾಯದಂತೆ ವಿರೋಧ ಪಕ್ಷಕ್ಕೆ ನೀಡುವುದು ವಾಡಿಕೆ. ಹೀಗಾದಲ್ಲಿ ಡೆಪ್ಯುಟಿ ಸ್ಪೀಕರ್ ಆಗಿ ಕಾಂಗ್ರೆಸ್ ಸಂಸದ ಕೆ.ಸುರೇಶ್ ಅವರಿಗೆ ಡೆಪ್ಯುಟಿ ಸ್ಪೀಕರ್ ಸಿಗುವ ಸಂಭವ ನಿಚ್ಚಳವಾಗಿದೆ.

ಇದನ್ನೂ ಓದಿ : WATCH : ಅಬ್ಬಬ್ಬಾ…! ಚಲಿಸುತ್ತಿರುವ ಬಸ್ಸಿನ ಕೆಳಗೆ ಮಲಗಿ ಯುವಕನ ರೀಲ್ಸ್; ಅಸಲಿ ಕಥೆ ಏನು?

ಆದ್ರೆ, ಎನ್‌ಡಿಎ ಅಂಗ ಪಕ್ಷ ಟಿಡಿಪಿ ಸ್ಪೀಕರ್ ಹುದ್ದೆಗೆ ಪಟ್ಟು ಹಿಡಿದಿದ್ದು, ಅದಕ್ಕೆ ಡೆಪ್ಯುಟಿ ಸ್ಪೀಕರ್ ಸ್ಥಾನವನ್ನು ನೀಡುವ ಬಗ್ಗೆ ಬಿಜೆಪಿ ನಾಯಕರು ಚಿಂತಿಸಿದ್ದಾರೆ. ಹೀಗಾಗಿ ಈ ಬಾರಿ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನೂ ವಿರೋಧ ಪಕ್ಷಕ್ಕೆ ಬಿಟ್ಟು ಕೊಡದೆ, ಮತದಾನದ ಮೂಲಕ ಡೆಪ್ಯುಟಿ ಸ್ಪೀಕರ್ ಆಯ್ಕೆ ನಡೆಯುವ ಸಾಧ್ಯತೆ ಕೂಡಾ ಇದೆ.

LATEST NEWS

ChatGPT, DeepSeek ಬ್ಯಾನ್; ಹಣಕಾಸು ಸಚಿವಾಲಯದಿಂದ ಸುತ್ತೋಲೆ

Published

on

ಮಂಗಳೂರು/ನವದೆಹಲಿ : ಸದ್ಯ ಎಲ್ಲೆಡೆ ಚಾಟ್ ಜಿಪಿಟಿ, ಡೀಪ್ ಸೀಕ್‌ನದ್ದೇ ಸದ್ದು. ಆದರೆ, ಇಂತಹ  ಕೃತಕ ಬುದ್ಧಿಮತ್ತೆ ಟೂಲ್‌ಗಳ ಬಳಕೆಯನ್ನು ಹಣಕಾಸು ಸಚಿವಾಲಯ ನಿಷೇಧಿಸಿದೆ. AI ಭದ್ರತಾ ನೀತಿಗಳನ್ನು ಬಿಗಿಗೊಳಿಸಿರುವ ಹಣಕಾಸು ಸಚಿವಾಲಯ ಸರ್ಕಾರದ ಡೇಟಾ ಹಾಗೂ ಕಡತಗಳ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ.

ಹಣಕಾಸು ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಅವರ ಅನುಮೋದನೆಯೊಂದಿಗೆ ಹೊರಡಿಸಲಾದ ಈ ನಿರ್ದೇಶನ ಸಚಿವಾಲಯದ ಜಾಲದಲ್ಲಿ ಬಳಸಲಾಗುವ ಎಲ್ಲಾ AI-ಚಾಲಿತ ಅಪ್ಲಿಕೇಶನ್‌ಗಳಿಗೆ ಅನ್ವಯಿಸುತ್ತದೆ.  ಸರ್ಕಾರಿ ಇಲಾಖೆಗಳ ಡಿವೈಸ್ ಗಳಲ್ಲಿ ಮಾತ್ರ ChatGPT, DeepSeek ಗಳ ಬಳಕೆಗೆ ನಿಷೇಧ ಅನ್ವಯವಾಗುತ್ತದೆ.

ಈ ಬಗ್ಗೆ ಹಣಕಾಸು ಸೇವೆಗಳ ಇಲಾಖೆ ಸೇರಿದಂತೆ ಸಚಿವಾಲಯದ ಅಡಿಯಲ್ಲಿರುವ ಎಲ್ಲಾ ಇಲಾಖೆಗಳಿಗೆ ಆದೇಶದ ಪ್ರತಿಯನ್ನು ರವಾನಿಸಲಾಗಿದೆ.

ಇದನ್ನೂ ಓದಿ : ಬಿಗ್‌ಬಾಸ್‌ ಸೀಸನ್-11 ರಲ್ಲಿ ಅತೀ ಕಡಿಮೆ ಸಂಬಳ ಪಡೆದ ಸ್ಪರ್ಧಿ ಇವರೇ ನೋಡಿ..!

AI ಟೂಲ್ ಗಳು ಸರ್ಕಾರಿ ಡೇಟಾದ ಗೌಪ್ಯತೆಗೆ ಅ*ಪಾಯವನ್ನುಂಟು ಮಾಡುತ್ತವೆ ಎಂದು ಪತ್ರದಲ್ಲಿ ಹೇಳಲಾಗಿದ್ದು, ಅಧಿಕೃತ ಸಾಧನಗಳಲ್ಲಿ ಅವುಗಳ ಬಳಕೆಯನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕೆಂದು ಸಲಹೆ ನೀಡಿದೆ. ಎಲ್ಲಾ ಇಲಾಖೆಗಳ ಉದ್ಯೋಗಿಗಳಿಗೆ ನಿರ್ದೇಶನವನ್ನು ಪಾಲಿಸಲು ಸೂಚಿಸಲಾಗಿದೆ.

 

Continue Reading

BIG BOSS

ಬಿಗ್‌ಬಾಸ್‌ ಸೀಸನ್-11 ರಲ್ಲಿ ಅತೀ ಕಡಿಮೆ ಸಂಬಳ ಪಡೆದ ಸ್ಪರ್ಧಿ ಇವರೇ ನೋಡಿ..!

Published

on

ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದ ಕೂಡಲೇ ಅವರ ಹೆಸರು ಇನ್ನಷ್ಟು ಪ್ರಸಿದ್ಧಿಯಾಗುತ್ತದೆ. ದಿನಕ್ಕೊಂದು ಹೊಸ ಹೊಸ ಆಫರ್‌ಗಳು ಬರುತ್ತಲೇ ಇರುತ್ತದೆ. ಹೀಗಾಗಿ ಅದೆಷ್ಟೋ ಜನರು ಬಿಗ್‌ಬಾಸ್ ಮನೆಗೆ ನನಗೂ ಹೋಗಲು ಅವಕಾಶ ಸಿಗುತ್ತಿದ್ದರೆ ಒಳ್ಳೆಯದಿತ್ತು ಎಂದು ಬಯಸುತ್ತಾರೆ.

ಇನ್ನು ಬಿಗ್‌ಬಾಸ್ ಮನೆಗೆ ಹೋದವರಿಗೆ ಮೊದಲೇ ಪೇಮೆಂಟ್ ವಿಷಯವನ್ನು ಹೇಳುತ್ತಾರೆ. ಈ ಮೊದಲೇ ಹೆಸರು ಗಳಿಸಿದವರಿಗೆ ಸ್ವಲ್ಪ ಜಾಸ್ತಿ ಹಣವಿರುತ್ತದೆ. ಪ್ರತಿವಾರಕ್ಕೆ ಇಂತಿಷ್ಟು ಸಂಭಾವನೆ ಎಂದು ಅವರಿಗೆ ಸಿಗುತ್ತದೆ. ಅಲ್ಲದೇ ಬಿಗ್‌ಬಾಸ್ ಗೆದ್ದರೆ 50 ಲಕ್ಷ ಹಣವಿರುತ್ತದೆ. ಇದೀಗ ಬಿಗ್‌ಬಾಸ್‌ನಲ್ಲಿ ಅತೀ ಕಡಿಮೆ ಸಂಬಳ ಪಡೆದ ಸ್ಪರ್ಧಿ ಯಾರು ಗೊತ್ತಾ..?

 

ಹೌದು, ಬಿಗ್‌ಬಾಸ್‌ನಲ್ಲಿ ಅತೀ ಕಡಿಮೆ ಸಂಭಾವನೆ ಪಡೆದವರು ಪುತ್ತೂರಿನ ಧನ್‌ರಾಜ್ ಆಚಾರ್ಯ. ಒಂದು ವಾರಕ್ಕೆ 30 ಸಾವಿರ ಸಂಭಾವನೆ ಸಿಗುತ್ತಿತ್ತು. ಬಿಗ್‌ಬಾಸ್ ಮನೆಯಲ್ಲಿ ಧನರಾಜ್ ಅವರು ಕೊನೆಯವರೆಗೂ ಇದ್ದರು. ಗ್ರ್ಯಾಂಡ್ ಫಿನಾಲೆಗೆ ಹೋಗುವ ಮೊದಲು ಎಲಿಮಿನೇಟ್ ಆದರು.

ಅಲ್ಲದೇ ಬಿಗ್‌ಬಾಸ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿದ್ದು ಸತ್ಯ ಧಾರಾವಾಹಿಯ ಗೌತಮಿ ಜಾದವ್ ಎಂದು ತಿಳಿದುಬಂದಿದೆ. ಬಿಗ್ ಬಾಸ್‌ ಮನೆಯಲ್ಲಿ ಹನುಮಂತ ಲಮಾಣಿ ಮತ್ತು ಧನರಾಜ್ ಆಚಾರ್ ಅವರ ಸ್ನೇಹ ಎಂಥದ್ದು ಎಲ್ಲರಿಗೂ ತಿಳಿದಿದೆ. ಇಬ್ಬರು ಕೂಡ ಜೀವಕ್ಕೆ ಜೀವದಂತೆ ಇದ್ದರು. ಹಾಗೆಯೇ ತನ್ನ ಕಾಮಿಡಿ ಮಾತುಗಳ ಮೂಲಕ ಧನ್‌ರಾಜ್ ವೀಕ್ಷಕರನ್ನು ಮನೋರಂಜಿಸುತ್ತಿದ್ದರು.

Continue Reading

LATEST NEWS

ಗೆಳತಿಗಾಗಿ ಕಳ್ಳನಾದ ಎಂಎಲ್ಎ ಮಗ !

Published

on

ಮಂಗಳೂರು/ಗುಜರಾತ್ : ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಇಲ್ಲೊಬ್ಬ ರಾಜಕೀಯ ಮುಖಂಡನ ಮಗನೇ ಕಳ್ಳನಾಗಿದ್ದಾನೆ. ಅಲ್ಲದೆ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಸರಗಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.

ಗುಜರಾತ್‌ನ ಮಾಜಿ ಶಾಸಕರೊಬ್ಬರ ಮಗನ ಇತ್ತೀಚಿನ ಕೃತ್ಯಗಳ ಬಗ್ಗೆ ತಿಳಿದು ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಗೆಳತಿಗಾಗಿ ಎಂಎಲ್‌ಎ ಮಗ ಕಳ್ಳನಾಗಿ ಬದಲಾಗಿದ್ದಾನೆ. ಇತ್ತೀಚೆಗೆ ಅಹಮದಾಬಾದ್‌ನಲ್ಲಿ ಒಂದು ಕಳ್ಳತನ ನಡೆದಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಕಳ್ಳನನ್ನು ಗುರುತಿಸಿ ಬಂಧಿಸಲಾಗಿದೆ. ತನಿಖೆಯಲ್ಲಿ ಆತ ಮಾಜಿ ಶಾಸಕ ವಿಜೇಂದ್ರ ಸಿಂಗ್ ಚಂದ್ರಾವತ್ ಅವರ ಪುತ್ರ ಪ್ರದ್ಯುಮ್ನ ಸಿಂಗ್ ಚಂದ್ರಾವತ್ ಎಂದು ತಿಳಿದುಬಂದಿದೆ.

ಕಳೆದ ತಿಂಗಳು 25 ರಂದು ಪ್ರದ್ಯುಮ್ನ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರವನ್ನು ಕಸಿದುಕೊಂಡಿದ್ದ. ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಶಂಕಿತನನ್ನು ಗುರುತಿಸಿ ಬಂಧಿಸಿದಾಗ ಸತ್ಯ ಹೊರಬಂದಿತು.

ಗೆಳತಿಯ ಆಸೆ ಪೂರೈಸಲು ಕಳ್ಳತನ

ಪೊಲೀಸರ ವಿಚಾರಣೆಯ ಬಳಿಕ ಆರೋಪಿ, ತನ್ನ ಗೆಳತಿಯ ಅಗತ್ಯಗಳನ್ನು ಪೂರೈಸಲು ನಾನು ಈ ಕೆಲಸ ಮಾಡಬೇಕಾಗಿ ಬಂತು ಎಂದು ಆರೋಪಿ ಹೇಳಿಕೊಂಡಿದ್ದಾನೆ. ತನಗೆ ಮಾಸಿಕ 15,000 ರೂ. ಸಂಬಳ ಬರುತ್ತಿದ್ದು, ಆ ಹಣದಿಂದ ತನ್ನ ಗೆಳತಿಯ ಐಷಾರಾಮಿ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ. ತಾನು ಶಾಸಕರ ಮಗನಾಗಿದ್ದರೂ ಮನೆಯಿಂದ ಓಡಿಹೋಗಿದ್ದಾಗಿ ಪ್ರದ್ಯುಮ್ನ ಪೊಲೀಸರಿಗೆ ಹೇಳಿದ್ದಾನೆ.

ಸದ್ಯ ಆರೋಪಿ ವಿರುದ್ದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ. ಪ್ರಸ್ತುತ ಆತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ಇದನ್ನೂ ಓದಿ: ಆ ಒಂದು ಸೆಲ್ಫಿ ಸಾವಿಗೆ ಆಹ್ವಾನ; ಕುಟುಂಬ ಹಾಗೂ ಸ್ನೇಹಿತರ ಎದುರೇ ಹಾರಿ ಹೋದ ಪ್ರಾಣಪಕ್ಷಿ

ವಿಜೇಂದ್ರ ಸಿಂಗ್ ಚಂದ್ರಾವತ್ 2008ರಲ್ಲಿ ಮಾನಾ ಕ್ಷೇತ್ರದಿಂದ ಶಾಸಕರಾಗಿ ಗೆದ್ದರು. ಆ ಸಮಯದಲ್ಲಿ ಅವರು ಕಾಂಗ್ರೆಸ್‌ನಲ್ಲಿದ್ದರು. ನಂತರ, ಅವರು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಬಿಜೆಪಿ ಸೇರಿದರು. ಮಗನ ಕಳ್ಳತನದ ಕೃತ್ಯದಿಂದ ತಂದೆ ತಲೆ ತಗ್ಗಿಸುವಂತಾಗಿದೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page