Connect with us

BANTWAL

ಬಂಟ್ವಾಳದಲ್ಲಿ ಪಾಳುಬಿದ್ದ ಆಶ್ರಮ ಶಾಲೆ-ದುರಸ್ತಿಗಾಗಿ ಶಾಸಕರಿಗೆ ಮನವಿ

Published

on

ಬಂಟ್ವಾಳ: ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬಿ.ಸಿ.ರೋಡಿನಲ್ಲಿ ಕಾರ್ಯಾಚರಿಸುತ್ತಿರುವ ಪರಿಶಿಷ್ಟ ವಿದ್ಯಾರ್ಥಿಗಳ ಆಶ್ರಮ ಶಾಲೆಯು ಅವ್ಯವಸ್ಥೆಯಿಂದ ಕೂಡಿದೆ ಎಂದು ಆರೋಪಿಸಿರುವ ಬಂಟ್ವಾಳ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಚಂಡ್ತಿಮಾರ್ ಅವರು ಶಾಲೆಯ ದುರಸ್ತಿಗಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಮನವಿ ಮಾಡಿದ್ದಾರೆ.


ಮೇ 21 ರಂದು ಶಾಲೆಗೆ ಭೇಟಿ ನೀಡಿದ ವೇಳೆ ಶಾಲೆಯ ಮೇಲ್ಛಾವಣಿಯ ಅವ್ಯವಸ್ಥೆಯಿಂದ ಸೋರುತ್ತಿದ್ದು, ನೀರು ಒಳಗೆ ಬಂದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಜತೆಗೆ ಗೋಡೆಗಳಿಗೆ ನೀರು ಬಂದು ಸಂಪೂರ್ಣ ಪಾಚಿ ಹಿಡಿದಿದೆ.

ಒಳಭಾಗದಲ್ಲಿ ಸೀಲಿಂಗ್‌ನ ಗಾರೆಗಳು ಬಿದ್ದು ಕಬ್ಬಿಣಗಳು ಕಾಣುತ್ತಿವೆ. ಬಾಗಿಲುಗಳು ಸರಿಯಿಲ್ಲದೆ ಬೀಗ ಹಾಕಿದರೂ ಸ್ವಲ್ಪ ದೂಡಿದರೆ ಒಳಗೆ ಹೋಗುವ ಪರಿಸ್ಥಿತಿ ಇದೆ.


ಬಡವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಿರ್ಮಾಣವಾಗಿದ್ದ ಹಳೆಯ ಕಾಲದ ಆಶ್ರಮ ಶಾಲೆಯ ದುರಸ್ತಿ ಮಾಡದಿದ್ದರೆ ಬಡವರ ಮಕ್ಕಳ ವಿದ್ಯಾಭ್ಯಾಸ ಕ್ಕೆ ಕುತ್ತು ಬೀಳುವ ಸಂಭವವಿದೆ.


ಕೂಡಲೇ ಮಕ್ಕಳಿಗೆ ಬದಲಿ ವ್ಯವಸ್ಥೆ ಕಲ್ಪಿಸಿಕೊಟ್ಟು, ಹೊಸ ಕಟ್ಟಡ ನಿರ್ಮಾಣಕ್ಕೆ ಹೆಜ್ಜೆ ಇಡುವಂತೆ ಅವರು ಮನವಿ ಮಾಡಿದ್ದಾರೆ.

 

BANTWAL

ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ತಹಶಿಲ್ದಾರ್ ಹಠಾತ್ ದಾಳಿ

Published

on

ವಿಟ್ಲ : ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್ ನೇತೃತ್ವದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ನಿನ್ನೆ (ಮಾ.19) ಬಂಟ್ವಾಳ ತಾಲೂಕಿನ ಕುಡ್ತಮುಗೇರು ಹಾಗೂ ಗಡಿಪ್ರದೇಶವಾದ ಕನ್ಯಾನ ಪಾದೆಕಲ್ಲು ಎಂಬಲ್ಲಿಗೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ದಿಢೀರ್ ದಾಳಿ ನಡೆಸಿದ್ದಾರೆ.

ಕುಡ್ತಮುಗೇರು ಎಂಬಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಸುಮಾರು 30 ಕ್ಕೂ ಅಧಿಕ ಪಿಕಪ್ ಲೋಡ್ ಮರಳು ರಾಶಿ ಸ್ಥಳದಲ್ಲಿ ಸಂಗ್ರಹಿಸಲಾಗಿದೆ. ಕಂದಾಯ ಅಧಿಕಾರಿಗಳ ತಂಡ ಹಠಾತ್ ದಾಳಿ ನಡೆಸಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಸ್ಥಳೀಯ ಗ್ರಾ.ಪಂ.ಪಿಡಿಒ ಅವರಿಗೆ ಪ್ರಕರಣವನ್ನು ದಾಖಲಿಸಿ ಕ್ರಮಕೈಗೊಳ್ಳಲು ಹಸ್ತಾಂತರ ಮಾಡಲಾಗಿದೆ.

ದಾಳಿಯ ವೇಳೆ ತಹಶಿಲ್ದಾರ್ ಅರ್ಚನಾ ಭಟ್ ಜೊತೆಗೆ ವಿಟ್ಲ ಕಂದಾಯ ಅಧಿಕಾರಿ ರವಿ ಎಂ.ಎನ್‌, ಗ್ರಾಮ ಆಡಳಿತಾಧಿಕಾರಿ ಕರಿಬಸಪ್ಪ ನಾಯಕ್, ಗ್ರಾಮ ಸಹಾಯಕಾದ ಗಿರೀಶ್ ಶೆಟ್ಟಿ, ರುಕ್ಮಯ್ಯ ಮೂಲ್ಯ, ಲಿಂಗಪ್ಪ ಗೌಡ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

Continue Reading

BANTWAL

ಬಂಟ್ವಾಳ: ರಸ್ತೆಯಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನ ರಕ್ಷಣೆ

Published

on

ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಕೆಲ ದಿನಗಳಿಂದ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬನನ್ನು ಇಲ್ಲಿನ ಮನೋರೋಗ ಚಿಕಿತ್ಸಕರು ರಕ್ಷಣೆ ಮಾಡಿದ್ದಾರೆ. ಕಲ್ಲಡ್ಕದ ಡಾಕ್ಟರ್ ಚಂದ್ರಶೇಖರ್ ಅವರ ಚೇತನಾ ಕ್ಲಿನಿಕ್ ನ ಮನೋರೋಗ ತಜ್ಞ ಡಾ. ರಾಜೇಶ್ ಈ ಕಾರ್ಯ ಮಾಡಿದವರಾಗಿದ್ದಾರೆ.

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯುವಕನೊಬ್ಬ ರಸ್ತೆಯಲ್ಲಿ ತಿರುಗಾಡುವುದನ್ನು ಕಂಡ ಅವರು ಆತನಿಗೆ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಹೀಗಾಗಿ ಆತನನ್ನು ವಿಚಾರಿಸಿದಾಗ ಆತ ತಮಿಳುನಾಡು ಮೂಲದ ಕಾಂಜಿಪುರಂನವನು ಎಂಬುದಾಗಿ ಹೇಳಿದ್ದಾನೆ. ಆತನನ್ನು ಚಿಕಿತ್ಸೆಗೆ ಒಳಪಡಿಸಲು ಕರೆದುಕೊಂಡು ಹೋಗಲು ಮುಂದಾದಾಗ ಈತ ತಪ್ಪಿಸಕೊಳ್ಳಲು ಯತ್ನಿಸಿದ್ದಾನೆ.

ಈ ವೇಳೆ ವ್ಯಕ್ತಿಯನ್ನು ಸ್ಥಳಿಯರಾದ ಚೇತನ ಕ್ಲಿನಿಕ್ ಸಿಬ್ಬಂದಿ ವಿನಯಾ ಮಿತಬೈಲು , ಜಮಾಲ್ ಕರಾವಳಿ ಮೆಡಿಕಲ್, ಸೌಕತ್ ಕಲ್ಲಡ್ಕ,ಅರಿಶ್ ಅಮರ್ ಹಾಗೂ ಇನ್ನಿತರ ಸಹಕಾರದೊಂದಿಗೆ ಹಿಡಿದು ಅಂಬ್ಯುಲೆನ್ಸ್ ನಲ್ಲಿ ಕೂರಿಸಿದ್ದಾರೆ. ಬಳಿಕ ದೈಗೂಳಿ ಸತ್ಯಸಾಯಿ ಸೇವಾಶ್ರಮಕ್ಕೆ ಬಿಡಲಾಗಿದೆ. ಇದೀಗ ಈತನಿಗೆ ಸತ್ಯಸಾಯಿ ಸೇವಾಶ್ರಮದಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಅಲ್ಪ ಪ್ರಮಾಣದಲ್ಲಿ ಸುದಾರಿಸಿಕೊಂಡಿದ್ದಾನೆ. ಇವರ ಈ ಸೇವೆಯನ್ನು ಸ್ಥಳೀಯರು ಕೊಂಡಾಡಿದ್ದಾರೆ.

Continue Reading

BANTWAL

ಬಂಟ್ವಾಳ: ಮೂಡೂರು- ಪಡೂರು ಜೋಡುಕರೆ ಕಂಬಳ ಕೂಟದ ಫಲಿತಾಂಶ ಪ್ರಕಟ

Published

on

ಬಂಟ್ವಾಳ: 14 ನೇ ವರ್ಷದ ಹೊನಲು ಬೆಳಕಿನ “ಮೂಡೂರು- ಪಡೂರು” ಜೋಡುಕರೆ ಕಂಬಳ ಕೂಟದ ಫಲಿತಾಂಶ ಪ್ರಕಟಗೊಂಡಿದೆ.


ಕೆನೆಹಲಗೆ 10 ಜೊತೆ , ಅಡ್ಡಹಲಗೆ 06 ಜೊತೆ , ಹಗ್ಗ ಹಿರಿಯ 20 ಜೊತೆ, ನೇಗಿಲು ಹಿರಿಯ 24 ಜೊತೆ, ಹಗ್ಗ ಕಿರಿಯ 22 ಜೊತೆ, ನೇಗಿಲು ಕಿರಿಯ 86 ಜೊತೆ ಹೀಗೆ ಒಟ್ಟು 168 ಜೊತೆ ಕೋಣಗಳು ಭಾಗವಹಿಸಿದ್ದವು. ಇನ್ನು ಬಹುಮಾನ ವಿಜೇತರ ವಿವರ ಹೀಗಿದೆ..

ಕನೆ ಹಲಗೆ:
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್
ಹಲಗೆ ಮುಟ್ಟಿದವರು: ಭಟ್ಕಳ ಪಾಂಡು

ಬೀಯಪಾದೆ ಕೆರೆಕೋಡಿ ಗುತ್ತು ಶೇಖರ ಪೂಜಾರಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಅಡ್ಡ ಹಲಗೆ:

ಪ್ರಥಮ: ನಾರಾವಿ ಯುವರಾಜ್ ಜೈನ್ (11.53)
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಅಲ್ಲಿಪಾದೆ ಕೆಳಗಿನ ಮನೆ ವಿನ್ಸೆಂಟ್ ಪಿಂಟೋ “ಎ” (12.62)
ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ್

ಹಗ್ಗ ಹಿರಿಯ:

ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ “ಬಿ” (11.48)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ “ಎ” (11.55)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ಹಗ್ಗ ಕಿರಿಯ:

ಪ್ರಥಮ: ಲೊರೆಟ್ಟೋ ಮಹಲ್ ತೋಟ ಆನ್ಯ ಅವಿಲ್ ಮಿನೇಜಸ್ (11.68)
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ದ್ವಿತೀಯ: ಸುರತ್ಕಲ್ ಖಂಡಿಗೆ ಕುಸುಮಾಕರ್ ಸುವರ್ಣ (11.77)
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ನೇಗಿಲು ಹಿರಿಯ:

ಪ್ರಥಮ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (11.25)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ (11.41)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

ನೇಗಿಲು ಕಿರಿಯ:

ಪ್ರಥಮ: ದೂಜ ಅಭಿಮಾನಿ ಬಳಗ (11.80)
ಓಡಿಸಿದವರು: ಬೈಂದೂರು ಮಂಜುನಾಥ ಗೌಡ

ದ್ವಿತೀಯ: ಮಿಜಾರು ಪ್ರಸಾದ್ ನಿಲಯ ಪ್ರಸಿದ್ಧ್ ಶೆಟ್ಟಿ (12.13)
ಓಡಿಸಿದವರು: ಬಾರಾಡಿ ನತೇಶ್

 

Continue Reading
Advertisement

Trending

Copyright © 2025 Namma Kudla News

You cannot copy content of this page