Connect with us

FILM

ಮತ್ತೆ ಗರ್ಭಿಣಿಯಾದ ಅನುಷ್ಕಾ ಶರ್ಮ… ಬೇಬಿ ಬಂಪ್ ವಿಡೀಯೋ ವೈರಲ್

Published

on

ಬಾಲಿವುಡ್ ಹೀರೋಯಿನ್ ಅನುಷ್ಕಾ ಶರ್ಮಾ ಅವರು ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ.

ಮುಂಬೈ : ಬೇಬಿ ಬಂಪ್ ಅನ್ನು ತೋರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಅನುಷ್ಕಾ ಮತ್ತು ವಿರಾಟ್ ಮತ್ತೆ ಪೋಷಕರಾಗಲಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ನವೆಂಬರ್ 12 ರಂದು ನಡೆಯಲಿರುವ ಭಾರತ ಮತ್ತು ನೆದರ್ಲ್ಯಾಂಡ್ಸ್ ವಿಶ್ವಕಪ್ ಪಂದ್ಯಕ್ಕಾಗಿ ಇಬ್ಬರೂ ಬೆಂಗಳೂರಿಗೆ ಬಂದಿಳಿದಿದ್ದಾರೆ.


ಈ ವಿಡೀಯೋದಲ್ಲಿ ಬೇಬಿ ಬಂಪ್ ಕಾಣಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.ನೆಟ್ಟಿಗರೊಬ್ಬರು.. ಎರಡನೇ ವಿರಾಟ್ ಬರಲಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ, ಮತ್ತೊಬ್ಬರು ಇದು ತುಂಬಾ ಒಳ್ಳೆಯ ಸುದ್ದಿ ಎಂದಿದ್ದಾರೆ.. ದೇವರು ಅವರಿಬ್ಬರನ್ನು ಆಶೀರ್ವದಿಸಲಿ. ಅನೇಕ ಅಭಿಮಾನಿಗಳು ವಿವಿಧ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ ಶುಭ ಹಾರೈಸಿದ್ದಾರೆ.


ಅನುಷ್ಕಾ ಶರ್ಮಾ ಹಾಗೂ ವಿರಾಟ್​ಗೆ ವಮಿಕಾ ಹೆಸರಿನ ಮಗಳಿದ್ದಾಳೆ. 2018ರಲ್ಲಿ ರಿಲೀಸ್ ಆದ ‘ಜೀರೋ’ ಚಿತ್ರವೇ ಕೊನೆ. ಇದಾದ ನಂತರ ಯಾವುದೇ ಸಿನೆಮಾದಲ್ಲಿ ಕಾಣಿಸಿಕೊಂಡಿಲ್ಲ.

FILM

ಅಂಬಾನಿ ಮಗನ ಮದುವೆಯಲ್ಲಿ ನಡೆದ ಘಟನೆಯ ಬಗ್ಗೆ ಬೇಸರ ಹೊರಹಾಕಿದ ಮಾಡೆಲ್

Published

on

ಮಂಗಳೂರು/ನವದೆಹಲಿ: ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಮಗನ ಅದ್ದೂರಿ ಮದುವೆಯಲ್ಲಿ ಅಮೆರಿಕನ್ ಮಾಡೆಲ್ ಕಿಮ್ ಕರ್ದಾಶಿಯನ್ ಪಾಲ್ಗೊಂಡಿದ್ದರು. ಮದುವೆಯಲ್ಲಿ ಆ ಒಂದು ಅಚಾನಕ್ ಘಟನೆಯ ಬಗ್ಗೆ ಇತ್ತೀಚೆಗೆ ನಡೆದ ಖಾಸಗಿ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕೆ ಬಾಲಿವುಡ್‌ನ ಸೆಲೆಬ್ರಿಟಿಗಳನ್ನು ಕರೆದು ಒಂದು ಕಡೆ ಗುಡ್ಡೆ ಹಾಕಿದ್ದರು. ಸಾಲದಕ್ಕೆ ಇಂಟರ್‌ ನ್ಯಾಷನಲ್ ಸ್ಟಾರ್ಸ್‌ಗಳನ್ನು ಕರೆಸಿದ್ದರು. ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರು ಬಂದಿದ್ದರು. ಆ ಪೈಕಿ ಜಗತ್ತಿನಲ್ಲಿ ಅತ್ಯಂತ ಸುಂದರ ನಟಿ ಎಂದೇ ಖ್ಯಾತಿಯನ್ನೂ ಪಡೆದ  ಶಿಯಾನ್ ಕೂಡ ಒಬ್ಬರು.

ಈ ವೇಳೆ ಕಿಮ್ ಕಾರ್ದಾಶಿಯಾನ್ ಅವರು ಕಸ್ಟಮ್ ಐವರಿ ಲೆಹಂಗಾ ಜೊತೆಗೆ ದುಬಾರಿ ಬೆಲೆಯ ವಜ್ರದ ಹಾರ, ಕಿವಿಯೋಲೆಗಳು ಮತ್ತು ಶಿರ ಮಾಲೆಯನ್ನು ಧರಿಸಿದ್ದರು.

ಇದನ್ನೂ ಓದಿ: ಭಾರತೀಯ ರೂಪಾಯಿ ಚಿಹ್ನೆಗೆ ತಮಿಳುನಾಡಿನ ನಂಟು!

ಮದುವೆ ಸಮಾರಂಭದಲ್ಲಿ ಅನಂತ್ ಅಂಬಾನಿ ಸಹೋದರಿ ಇಶಾ ಅಂಬಾನಿ ಜೊತೆ ಕಿಮ್ ಕರ್ದಾಶಿಯನ್ ಮಾತನಾಡುತ್ತಿದ್ದಾಗ ಅವರ ಡೈಮಂಡ್ ನೆಕ್ಲೆಸ್‌ನಿಂದ ಒಂದು ವಜ್ರದ ಹರಳು ಕೆಳಗೆ ಬಿದ್ದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಬಗ್ಗೆ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ ಕರ್ದಾಶಿಯನ್, “ನನಗೆ ಅರಿವಿಲ್ಲದೇ ನನ್ನ ನೆಕ್ಲೆಸ್‌ನಿಂದ ವಜ್ರದ ಹರಳು ಕೆಳಗೆ ಬಿದ್ದಿದೆ. ಇದನ್ನೂ ನನ್ನ ಜೊತೆಗಿದ್ದ ಸ್ನೇಹಿತೆ ಕ್ಲೋಯ್ ಗಮನಿಸಿದ್ದು, ಬಳಿಕ ನನ್ನ ಗಮನಕ್ಕೆ ತಂದಳು. ನಾವೆಲ್ಲರೂ ಸೇರಿ ಆ ಡೈಮಂಡ್ ನೆಕ್ಲೆಸ್‌ನ ಹರಳನ್ನು ಹುಡುಕಿದೆವು ಆದರೆ ಕೊನೆಗೂ ದುಬಾರಿ ಆ ವಜ್ರದ ಹರಳು ಸಿಗಲಿಲ್ಲ” ಎಂದು ಹೇಳಿದ್ದಾರೆ.

Continue Reading

FILM

ಕಟೀಲು ಕ್ಷೇತ್ರಕ್ಕೆ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಭೇಟಿ

Published

on

ಕಿನ್ನಿಗೋಳಿ :  ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಇತ್ತೀಚೆಗೆ  ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಶಿಲ್ಪಾ ಶೆಟ್ಟಿ, ಕಂಗನಾ ರಾಣಾವತ್ ಮೊದಲಾದ ಸಿನಿ ತಾರೆಯರು ಆಗಮಿಸಿದ್ದರು.

ಇದೀಗ ,ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕಟೀಲಮ್ಮನ ದರ್ಶನ ಪಡೆದಿದ್ದಾರೆ. ಅವರಿಗೆ ಗೋಪಾಕೃಷ್ಣ ಆಸ್ರಣ್ಣ ಪ್ರಸಾದ ನೀಡಿದರು.

 

Continue Reading

FILM

60ನೇ ವಯಸ್ಸಿನಲ್ಲಿ 3ನೇ ಮದುವೆಗೆ ಸಜ್ಜಾದ ಬಾಲಿವುಡ್ ನಟ ಅಮೀರ್ ಖಾನ್

Published

on

ಬಾಲಿವುಡ್‌ ನಟ ಅಮೀರ್ ಖಾನ್‌ ಇದೀಗ 60 ನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದಾರೆ. ಇದೇ ವೇಳೆ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಅಮೀರ್ ಖಾನ್ ತಮ್ಮ ಜನ್ಮದಿನ ಸಂಭ್ರಮಾಚರಣೆ ವೇಳೆಯೇ ಮೂರನೇ ಗರ್ಲ್‌ ಫ್ರೆಂಡ್‌ ಗೌರಿ ಎನ್ನುವವರನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

ಆಮಿರ್ ಖಾನ್‌ 1986ರಲ್ಲಿ ರೀನಾ ದತ್ತ ಅವರನ್ನು ಮದುವೆಯಾಗಿದ್ದರು, ಬಳಿಕ ಅವರಿಂದ ದೂರಾಗಿ 2005ರಲ್ಲಿ ಕಿರಣ್ ರಾವ್ ಎನ್ನುವವರನ್ನು ಮದುವೆಯಾದರು. 2021ರಲ್ಲಿ ಕಿರಣ್ ರಾವ್ ಜೊತೆಗಿನ ಸಂಬಂಧಕ್ಕೆ ಅಂತ್ಯ ಹಾಡಿ ವಿಚ್ಛೇದನ ಪಡೆದಿದ್ದರು. ಈಗಾಗಲೇ ಎರಡು ಮದುವೆಯಾಗಿ ವಿಚ್ಛೇದನ ಪಡೆದುಕೊಂಡು ಒಂಟಿಯಾಗಿದ್ದ ಆಮಿರ್ ಖಾನ್‌ ಇದೀಗ ಮೂರನೇ ಮದುವೆಗೆ ಸಜ್ಜಾಗಿರುವ ವಿಷಯ ತಿಳಿದು ಅಭೀಮಾನಿಗಳು ಫುಲ್ ಶಾಕ್ ಆಗಿದ್ದಾರೆ.

ನಿನ್ನೆ (ಮಾ.13) ಆಮಿರ್ ಖಾನ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿದ್ದು, ಈ ವೇಳೆ ತಮ್ಮ ಜೊತೆಯಲ್ಲಿದ್ದ ಗೌರಿ ಅವರನ್ನು ಪರಿಚಯಿಸಿ ಇವರೇ ತಮ್ಮ ಪ್ರೀತಿ ಎಂದು ಹೇಳಿಕೊಂಡಿದ್ದಾರೆ. ಅಮೀರ್ ಖಾನ್ ತಮ್ಮ ಪ್ರೋಡಕ್ಷನ್ ಹೌಸ್‌ನಲ್ಲಿ ಕೆಲಸ ಮಾಡುವ ಗೌರಿ ಎನ್ನುವ ಮಹಿಳೆಯನ್ನೇ ಆಮಿರ್ ಖಾನ್‌ ಪ್ರೀತಿಸುತ್ತಿದ್ದಾರೆ. 25 ವರ್ಷಗಳಿಂದ ಆಮಿರ್ ಖಾನ್‌ ಹಾಗೂ ಗೌರಿ ಪರಿಚಯಸ್ಥರಾಗಿದ್ದು, ಕಳೆದ 18 ತಿಂಗಳುಗಳಿಂದ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ಈ ಬಗ್ಗೆ ಸ್ವತಃ ಹೇಳಿಕೊಂಡಿರುವ ಆಮಿರ್ ಖಾನ್‌, ಗೌರಿ ಅವರ ಫೋಟೋವನ್ನು ಎಲ್ಲಿಯೂ ವೈರಲ್‌ ಮಾಡದಂತೆ ಹುಟ್ಟುಹಬ್ಬದ ಆಚರಣೆಗೆ ಬಂದವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page