Connect with us

FILM

ಖ್ಯಾತ ನಟನ ಜೊತೆ ಅನುಪಮಾ ಪರಮೇಶ್ವರನ್ ಲಿಪ್‌ಲಾಕ್ ..! ಫೋಟೋ ವೈರಲ್ ..!

Published

on

ಬಹು ಭಾಷಾ ನಟಿ ಅನುಮಪಾ ಪರಮೇಶ್ವರನ್ ಸದಾ ಯಾವುದಾದರೊಂದು ವಿಷಯದ ನಿಮಿತ್ತ ಸುದ್ಧಿಯಲ್ಲಿರುತ್ತಾರೆ. ಒಂದೆಡೆ ಸಿನಿಮಾಗಳನ್ನು ಮಾಡಿ ಫೇಮಸ್‌ ಆದರೆ ಇನ್ನೊಂದೆಡೆ ವೈಯಕ್ತಿಕ ಜೀವನದ ಕಾರಣಕ್ಕೂ ಆಗಾಗ ಚರ್ಚೆಯಲ್ಲಿರುತ್ತಾರೆ.ಪ್ರಸ್ತುತ ಅನುಪಮಾ ಅವರ ಹೊಸ ಫೋಟೋ ಒಂದು ಲೀಕ್ ಆಗಿದೆ. ಈ ಫೋಟೋದಲ್ಲಿ ನಟಿ ಅನುಪಮಾ ಪರಮೇಶ್ವರನ್ ಯುವ ಹೀರೋನ ಜೊತೆ ಕಿಸ್ ಮಾಡುತ್ತಿದ್ದಾರೆ. ಆ ಫೋಟೋದಲ್ಲಿ ಇರುವ ಬ್ಯಕ್ತಿ ಯಾರು ? ಅನುಪಮಾ ಜೊತೆ ಆತ ಲಿಪ್‌ಲಾಕ್ ಮಾಡಿದ್ದು ನಿಜನಾ ? ಇಲ್ಲಿದೆ ನೋಡಿ.

ಚಿಯಾನ್ ವಿಕ್ರಮ್ ಮಗ ಧ್ರುವ್ ವಿಕ್ರಮ್ ಜೊತೆ ಅನುಪಮಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ಧಿ ಸಖ್ಖತ್ ವೈರಲ್ ಆಗುತ್ತಿದೆ. ಅನುಪಮಾಗೆ 29 ವರ್ಷ ವಯಸ್ಸು. ಧ್ರುವ​ಗೆ 27 ವರ್ಷ ವಯಸ್ಸು. ಇವರು ಕಿಸ್ ಮಾಡುತ್ತಿರುವ ಫೋಟೋ ಆನ್​​ಲೈನ್​ನಲ್ಲಿ ಲೀಕ್ ಆಗಿದೆ. ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್​ಫಾರ್ಮ್​ ಒಂದರಲ್ಲಿ ‘ಬ್ಲ್ಯೂ ಮೂನ್’ ಎಂಬ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿತ್ತು. ಆ ಬಳಿಕ ಇದನ್ನು ಪ್ರೈವೇಟ್ ಮಾಡಲಾಗಿದೆ. ಈ ಪ್ಲೇಲಿಸ್ಟ್​ನ ಪ್ರಾಫೈಲ್ ಪಿಕ್ಚರ್​ ತುಂಬಾನೇ ಇಂಟಿಮೇಟ್ ಆಗಿದೆ. ಧ್ರುವ್ ಹಾಗೂ ಅನುಪಮಾ ಫ್ರೆಂಚ್ ಕಿಸ್ ಮಾಡುತ್ತಿದ್ದಾರೆ. ಹಿಂಭಾಗದಲ್ಲಿ ಚಂದಿರ ಇದ್ದಾನೆ. ಈ ಪ್ಲೇಲಿಸ್ಟ್​ನ ಸ್ಕ್ರೀನ್​ಶಾಟ್​ಗಳು ಎಲ್ಲ ಕಡೆಗಳಲ್ಲಿ ವೈರಲ್ ಆಗುತ್ತಿದೆ.

ಅನುಪಮಾ ಹಾಗೂ ಧ್ರುವ್ ಅವರು ‘ಬಿಸೋನ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಾರಿ ಸೆಲ್ವರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಪಾ. ರಂಜಿತ್ ಇದನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಶೂಟ್ ಕೂಡ ಪೂರ್ಣಗೊಂಡಿದೆ.  ಈ ಚಿತ್ರದಲ್ಲಿ ಬರೋ ದೃಶ್ಯ ಕೂಡ ಇದಾಗಿರಬಹುದು ಎಂಬುದು ಅನೇಕರ ಊಹೆ.‘ಇದು ಅಭಿಮಾನಿಗಳೇ ಮಾಡಿದ ಎಐ ಇಮೇಜ್’ ಎಂದು ಕೆಲವರು ಹೇಳಿದ್ದಾರೆ. ಅನೇಕರು ಇದನ್ನು ಪಬ್ಲಿಸಿಟಿ ಸ್ಟಂಟ್ ಎಂದು ಕರೆದಿದ್ದಾರೆ. ‘ಹೊಸ ಸಿನಿಮಾ ಪ್ರಚಾರಕ್ಕೆ ಈ ರೀತಿ ಮಾಡಿರಬಹುದು’ ಎಂದು ಕೆಲವರು ಹೇಳಿದ್ದಾರೆ. ‘ಒಳ್ಳೆಯ ಕಪಲ್’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಅನುಪಮಾ ಪರಮೇಶ್ವರನ್ ಅವರು ಮೊದಲು ಈ ರೀತಿಯ ಬೋಲ್ಡ್ ಪಾತ್ರಗಳ ವಿಚಾರದಲ್ಲಿ ಮಡಿವಂತಿಕೆ ಕಾಪಾಡಿಕೊಂಡು ಬಂದಿದ್ದರು. ಆದರೆ, ದಿನ ಕಳೆದಂತೆ ಅವರು ಮೈ ಚಳಿ ಬಿಟ್ಟು ನಟಿಸೋಕೆ ಆರಂಭಿಸಿದರು. ಈಗ ಬೋಲ್ಡ್ ಪಾತ್ರಗಳನ್ನು ಅವರು ಖುಷಿಯಿಂದ ಒಪ್ಪಿ ನಟಿಸುತ್ತಿದ್ದಾರೆ.

FILM

‘ನಮ್ಮನ್ನ ಯಾಕೆ ಮದುವೆಗೆ ಕರೆದಿಲ್ಲ?’: ವಿಜಯ್-ರಶ್ಮಿಕಾ ವಿರುದ್ಧ ಮುನಿಸಿಕೊಂಡ ಪುಟ್ಟ ಅಭಿಮಾನಿ!

Published

on

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗೆ ಉದಯಪುರದಲ್ಲಿ ವಿವಾಹವಾದರು. ಈ ಮದುವೆಗೆ ತನ್ನನ್ನು ಕರೆದಿಲ್ಲ ಎಂದು ಪುಟ್ಟ ಅಭಿಮಾನಿಯೊಬ್ಬರು ಕೋಪದಿಂದ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಆ ಪುಟ್ಟ ಬಾಲಕಿ ವಿಡಿಯೋದಲ್ಲಿ, “ನಾನು ಕೂಡ ನಿಮ್ಮ ಅಭಿಮಾನಿಯಲ್ಲವೇ? ನಮ್ಮನ್ನು ಯಾಕೆ ಮದುವೆಗೆ ಕರೆಯಲಿಲ್ಲ?” ಎಂದು ಮುಗ್ಧವಾಗಿ ಪ್ರಶ್ನಿಸಿದ್ದಾಳೆ.
ಈ ವಿಡಿಯೋಗೆ ವಿಜಯ್ ಅವರು ತುಂಬಾ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. “ಬುಜ್ಜಿ ತಲ್ಲಿ.. ನಿನ್ನನ್ನು ಮನೆಗೆ ಊಟಕ್ಕೆ ಕರೆಯುತ್ತೇನೆ. ನಿನಗೆ ಇಷ್ಟವಾದ ಅಡುಗೆ ಮತ್ತು ಸಿಹಿತಿಂಡಿಗಳನ್ನು ಹೇಳು, ಮನೆಯಲ್ಲಿ ಎಲ್ಲವನ್ನೂ ಮಾಡಿಸಿ ಒಟ್ಟಿಗೆ ತಿನ್ನೋಣ” ಎಂದು ಕಮೆಂಟ್ ಮಾಡಿದ್ದಾರೆ.

ನಟಿ ರಶ್ಮಿಕಾ ಕೂಡ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಆ ಬಾಲಕಿಗೆ ವಿಶೇಷ ಉಡುಗೊರೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್!

ಈ ದಂಪತಿಗಳು ತಮ್ಮ ಮದುವೆಯ ನಂತರ ದೇವಸ್ಥಾನಗಳಲ್ಲಿ ಸಿಹಿತಿಂಡಿ ಹಂಚುವ ಮೂಲಕ ಮತ್ತು ಅಭಿಮಾನಿಗಳೊಂದಿಗೆ ವಿಶೇಷ ಊಟ ಮಾಡುವ ಮೂಲಕ ಸಂಭ್ರಮವನ್ನು ಆಚರಿಸಿದ್ದರು.

Continue Reading

FILM

ಆದಿಲಕ್ಷ್ಮೀ ಪುರಾಣ ಸೀರಿಯಲ್‌ನಿಂದ ಹೊರನಡೆದ ನಟಿ!

Published

on

ಮಂಗಳೂರು/ಬೆಂಗಳೂರು : ಆದಿಲಕ್ಷ್ಮೀ ಪುರಾಣ ಇತ್ತೀಚೆಗೆ ಆರಂಭಗೊಂಡಿರುವ ಧಾರಾವಾಹಿ. ಆರಂಭದಿಂದಲೇ ಜನರ ಮೆಚ್ಚುಗೆ ಗಳಿಸುತ್ತಾ ಸಾಗುತ್ತಿರುವ ಸೀರಿಯಲ್. ಕಥೆ, ಪಾತ್ರವರ್ಗ ಎಲ್ಲವೂ ಜನರಿಗೆ ಇಷ್ಟವಾಗಿದೆ. ಆದರೆ, ಇದೀಗ ಈ ಧಾರಾವಾಹಿಯ ಅಭಿಮಾನಿಗಳಿಗೆ ಬೇಸರ ತರಿಸುವ ವಿಚಾರವೊಂದು ಹೊರ ಬಿದ್ದಿದೆ. ಹೌದು, ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ನಟಿಯೊಬ್ಬರು ಹೊರಬಂದಿದ್ದಾರೆ.

ರಕ್ಷಿತಾ ಔಟ್:

ಈ ಧಾರಾವಾಹಿಯಲ್ಲಿ ಒಂದೆಡೆ ಲಕ್ಷ್ಮೀ ಪಾತ್ರವೂ ಪ್ರಧಾನವಾಗಿದ್ದಾರೆ. ಅಮೃತಾ ಪಾತ್ರ ಕೂಡ ಪ್ರಮುಖವಾಗಿದೆ. ಈಗಾಗಲೇ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದಿದ್ದ ರಕ್ಷಿತಾ, ಅಮೃತಾ ಆಗಿ ಜನಮನ ಗೆದ್ದಿದ್ದರು. ಆದರೆ, ಈಗ ಧಾರಾವಾಹಿಯಿಂದ ಹೊರಬಂದಿದ್ದಾರೆ ಎಂಬ ವಿಚಾರ ಸದ್ದು ಮಾಡುತ್ತಿದೆ.

ರಕ್ಷಿತಾ ಚೆನ್ನಾಗಿ ಓದಿಕೊಂಡಿದ್ದರು. ಆದರೆ, ಬಣ್ಣದ ಲೋಕ ಅವರನ್ನು ಸೆಳೆದಿತ್ತು. ನಾಲ್ಕು ಕಂಪೆನಿಗಳ ಜಾಬ್ ಆಫರ್ ಲೆಟರ್ ತ್ಯಜಿಸಿ ಆಕೆ ಕಿರುತೆರೆಗೆ ಲಗ್ಗೆ ಇಟ್ಟಿದ್ದರು. ಮಧುಮಗಳು ಧಾರಾವಾಹಿ ಮೂಲಕ ಗಮನ ಸೆಳೆದಿದ್ದ ಅವರು, ಆದಿಲಕ್ಷ್ಮೀ ಪುರಾಣದ ಮೂಲಕ ಮತ್ತಷ್ಟು ಜನಪ್ರಿಯರಾಗಿದ್ದರು.

ಧಾರಾವಾಹಿ ತೊರೆದಿದ್ದು ಯಾಕೆ?

ಆದಿಲಕ್ಷ್ಮೀ ಪುರಾಣ ಎರಡು ಜೋಡಿ ಮದುವೆಯ ಮೇಲೆ ಹೆಣೆಯಲಾದ ಕಥೆ. ಅಮೃತಾ ಇಷ್ಟವಿಲ್ಲದೆ ಸಂಜೀವನನ್ನು ಮದುವೆಯಾದ್ರೆ, ಅತ್ತ ಅನಿರೀಕ್ಷಿತ ತಿರುವು ಎಂಬಂತೆ ಆದಿ ಲಕ್ಷ್ಮೀ ಮದುವೆಯಾಗುತ್ತಾರೆ. ಮುಂದೇನು ಎಂಬ ಕುತೂಹಲದೊಂದಿಗೆ ಧಾರಾವಾಹಿ ಸಾಗುತ್ತಿದೆ. ಇದೀಗ ಅಮೃತಾ ಪಾತ್ರದಲ್ಲಿ ನಟಿಸಿದ್ದ ರಕ್ಷಿತಾ ಸೀರಿಯಲ್‌ನಿಂದ ಹೊರಗೆ ಬಂದಿರುವುದು ಅಭಿಮಾನಿಗಳಿಗೆ ಶಾ*ಕ್ ಕೊಟ್ಟಿದೆ. ರಕ್ಷಿತಾ ಧಾರಾವಾಹಿಯಿಂದ ಹೊರಬಂದಿರುವ ಬಗ್ಗೆ ಸೀರಿಯಲ್ ತಂಡವಾಗಲಿ, ರಕ್ಷಿತಾವಾಗಲಿ ಮಾಹಿತಿ ಹಂಚಿಕೊಂಡಿಲ್ಲ.

ಇದನ್ನೂ ಓದಿ : ದಳಪತಿ ವಿಜಯ್ ಪತ್ನಿ ಸಂಗೀತಾರಿಂದ ಕೋರ್ಟ್‌ಗೆ ಹೊಸ ಅರ್ಜಿ!

ರಕ್ಷಿತಾ ಜಾಗಕ್ಕೆ ಯಾರು?

ಅಮೃತಾ ಆಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ರಕ್ಷಿತಾ ಸೀರಿಯಲ್ ತೊರೆದಿದ್ದು, ಆ ಜಾಗಕ್ಕೆ ಹೊಸ ನಟಿಯ ಎಂಟ್ರಿಯಾಗಿದೆ. ಮಾನಸಿ ಜೋಷಿ ಅಮೃತಾ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ಪಾರು ಧಾರಾವಾಹಿಯಲ್ಲಿ ಮಾನಸಿ ನಟಿಸಿ ಮೆಚ್ಚುಗೆ ಗಳಿಸಿದ್ದರು.  ರಕ್ಷಿತಾ ಧಾರಾವಾಹಿಯಿಂದ ಹೊರನಡೆದಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Continue Reading

FILM

ದಳಪತಿ ವಿಜಯ್ ಪತ್ನಿ ಸಂಗೀತಾರಿಂದ ಕೋರ್ಟ್‌ಗೆ ಹೊಸ ಅರ್ಜಿ!

Published

on

ತಮಿಳು ನಟ ಮತ್ತು ಟಿ.ವಿ.ಕೆ ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ, ತಮ್ಮ ನಡೆಯುತ್ತಿರುವ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೊಸ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ.


ಚೆನ್ನೈನ ನೀಲಂಕರೈನಲ್ಲಿರುವ ತಮ್ಮ ವೈವಾಹಿಕ ಮನೆಯಲ್ಲಿ ವಾಸಿಸುವ ಹಕ್ಕನ್ನು ನೀಡುವಂತೆ ಮತ್ತು ಪ್ರಕರಣ ಇತ್ಯರ್ಥವಾಗುವವರೆಗೆ ಅಲ್ಲಿಂದ ತಮ್ಮನ್ನು ಹೊರಹಾಕದಂತೆ ರಕ್ಷಣೆ ನೀಡಲು ಸಂಗೀತಾ ಅವರು ಮಧ್ಯಂತರ ಆದೇಶವನ್ನು ಕೋರಿದ್ದಾರೆ.

ಸಂಗೀತಾ ಅವರು ಬ್ರಿಟಿಷ್ ನಾಗರಿಕಳಾಗಿದ್ದು, ಚೆನ್ನೈನಲ್ಲಿ ತಮಗೆ ಬೇರೆ ಸ್ವಂತ ಮನೆ ಇಲ್ಲದಿರುವುದರಿಂದ ಇದೇ ಮನೆಯಲ್ಲಿ ಉಳಿಯಲು ಅನುಮತಿ ನೀಡಬೇಕೆಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ವಿಜಯ್ ಅವರ ವಕೀಲರು ಮನೆಯಿಂದ ಹೊರಹೋಗುವಂತೆ ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್‌ರ ‘ಜನ ನಾಯಗನ್’ ಚಿತ್ರಕ್ಕೆ ಮತ್ತೆ ಸಂಕಷ್ಟ

ಈ ಪ್ರಕರಣವು ಪ್ರಸ್ತುತ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿದ್ದು, ಮುಂದಿನ ವಿಚಾರಣೆಯು ಮಾರ್ಚ್ 30ರಂದು ನಡೆಯುವ ಸಾಧ್ಯತೆಯಿದೆ. ಅಂದು ನಟ ವಿಜಯ್ ಅವರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ವಿಜಯ್ ಮತ್ತು ಸಂಗೀತಾ 1999 ರಲ್ಲಿ ವಿವಾಹವಾಗಿದ್ದು, 27 ವರ್ಷಗಳ ದಾಂಪತ್ಯದ ನಂತರ ಈಗ ವಿಚ್ಛೇದನದ ಹಂತಕ್ಕೆ ತಲುಪಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page