Connect with us

FILM

20 ವರ್ಷದ ಯುವತಿ ವಿರುದ್ದ ಕೇಸ್ ದಾಖಲಿಸಿದ ಖ್ಯಾತ ನಟಿ ಅನುಪಮಾ ಪರಮೇಶ್ವರನ್‌; ಪೋಸ್ಟ್‌ನಲ್ಲೇನಿದೆ?

Published

on

ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಅವರು 20 ವರ್ಷದ ಯುವತಿ ವಿರುದ್ದ ಕೇರಳ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.

ಹೌದು, ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ ಅವರ ಫೋಟೋವನ್ನು ಆಕ್ಷೇಪಾರ್ಹ ರೀತಿಯಲ್ಲಿ ಎಡಿಟ್ ಮಾಡಿ, ಸುಳ್ಳು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ನಟಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಅನುಪಮಾ ಪರಮೇಶ್ವರನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

“ಇತ್ತೀಚಿನ ದಿನಗಳಲ್ಲಿ ಒಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನನ್ನ ಫೋಟೋ ಬಳಸಿಕೊಂಡು, ತಪ್ಪು ಮಾಹಿತಿಯನ್ನು ಹಬ್ಬಿಸಲಾಗುತ್ತಿದೆ. ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ರೀತಿ ಬಳಸಿಕೊಂಡು ನನ್ನ ಪರಿಚಯದವರು ಹಾಗೂ ಕುಟುಂಬದವರನ್ನು ಟ್ಯಾಗ್ ಮಾಡಲಾಗುತ್ತಿತ್ತು. ಇದರಿಂದ ನನ್ನ ಮನಸ್ಸಿಗೆ ತೀವ್ರ ನೋವುಂಟಾಗಿದೆ” ಎಂದು ನಟಿ ಬರೆದುಕೊಂಡಿದ್ದಾರೆ.

“ಈ ಬಗ್ಗೆ ತನಿಖೆ ಮಾಡಿದಾಗ ಗೊತ್ತಾಗಿದ್ದು ಏನೆಂದರೆ, ನನ್ನ ಬಗ್ಗೆ ದ್ವೇಷ ಹರಡಲು ಮತ್ತು ನನ್ನ ಬಗ್ಗೆ ಕೆಟ್ಟ ಕಮೆಂಟ್ ಮಾಡಲು ಒಬ್ಬರೇ ವ್ಯಕ್ತಿ ಹಲವು ಫೇಕ್ ಅಕೌಂಟ್ ಮಾಡಿಕೊಂಡಿದ್ದಾರೆ. ಇದು ಗೊತ್ತಾದಾಗ ನಾನು ಕೇರಳ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದೆ. ಈ ಕೃತ್ಯದ ಹಿಂದೆ ಇರುವ ವ್ಯಕ್ತಿ ಯಾರು ಎಂಬುದು ಪೊಲೀಸರ ಸಹಕಾರದಿಂದ ತಿಳಿಯಿತು” ಎಂದಿದ್ದಾರೆ ಅನುಪಮಾ ಪರಮೇಶ್ವರನ್.

ಇದನ್ನೂ ಓದಿ: ವಿಶ್ವಕಪ್ ಗೆದ್ದ ರಿಚಾ ಘೋಷ್‌ಗೆ ಪೊಲೀಸ್ ಹುದ್ದೆ; ನೇಮಕಾತಿ ಪತ್ರ ಹಸ್ತಾಂತರಿಸಿದ ಸಿಎಂ ಮಮತಾ ಬ್ಯಾನರ್ಜಿ

‘ನನಗೆ ಆಶ್ಚರ್ಯ ಆಗಿದ್ದು ಏನೆಂದರೆ, ಈ ಕೃತ್ಯ ಮಾಡಿರುವುದು ತಮಿಳುನಾಡಿನ 20 ವರ್ಷದ ಹುಡುಗಿ! ಆಕೆಯ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಅವಳ ಗುರುತನ್ನ ಬಹಿರಂಗ ಮಾಡುತ್ತಿಲ್ಲ. ಯಾಕೆಂದರೆ, ಆಕೆಯ ಭವಿಷ್ಯ ಮತ್ತು ಮನಶಾಂತಿಗೆ ತೊಂದರೆ ಆಗಬಾರದು’ ಎಂದು ಅನುಪಮಾ ಪರಮೇಶ್ವರನ್ ಅವರು ಹೇಳಿದ್ದಾರೆ. ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ನೋಡಿ, ಎಲ್ಲರಿಗೂ ಒಂದು ವಿಷಯ ಅರ್ಥವಾಗಬೇಕು.. ಮೊಬೈಲ್ ಫೋನ್ ಮತ್ತು ಸೋಷಿಯಲ್ ಮೀಡಿಯಾ ಇದೆ ಎಂದ ಮಾತ್ರಕ್ಕೆ ಬೇರೆಯವರ ಘನತೆಗೆ ಧಕ್ಕೆ ತರುವ ಅಧಿಕಾರ ಯಾರಿಗೂ ಇಲ್ಲ. ಆನ್‌ಲೈನ್‌ಲ್ಲಿ ನೀವು ಮಾಡುವ ಎಲ್ಲಾ ಕೆಲಸಕ್ಕೂ ಹೆಜ್ಜೆ ಗುರುತುಗಳು ಇರುತ್ತವೆ.. ಎಲ್ಲದಕ್ಕೂ ಉತ್ತರ ಕೊಡಬೇಕಾಗಿ ಬರುತ್ತದೆ. ನಾನು ಹಾಕಿರುವ ಕೇಸ್ ತನಿಖೆ ನಡೆಯುತ್ತಿದೆ. ಆಕೆಯೂ ಅಷ್ಟೇ, ತಾನು ಮಾಡಿದ ಕೆಟ್ಟ ಕೆಲಸಕ್ಕೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

FILM

16 ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿದ ‘ಜೈ’

Published

on

ಮಂಗಳೂರು : ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ ‘ಜೈ’  ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.  16 ಚಿತ್ರ ಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿದೆ. ನಿನ್ನೆ(ಡಿ. 08) 32ಕ್ಕೂ ಹೆಚ್ಚು ಹೌಸ್ ಫುಲ್ ಶೋ ಗಳನ್ನು ಕಂಡಿದೆ. ತುಳು ಚಿತ್ರರಂಗದಲ್ಲೇ ಹೊಸ ರೆಕಾರ್ಡ್ ಕೂಡ ಮಾಡಿದೆ.

ರೂಪೇಶ್ ಶೆಟ್ಟಿ ನಟನೆ, ನಿರ್ದೇಶನ ಎರಡರಲ್ಲೂ ಗೆದ್ದಿದ್ದಾರೆ. ವಿಶ್ವದಾದ್ಯಂತ ನವೆಂಬರ್ 14 ರಂದು ತೆರೆಗೆ ಬಂದಿರುವ ಜೈ ಸಿನಿಮಾ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್ ಹಾಗೂ ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಆ್ಯಕ್ಷನ್, ಡ್ರಾಮಾ ಮತ್ತು ಎಮೋಷನ್‌ಗಳ ಸಮನ್ವಯವಿದೆ.

ಇದನ್ನೂ ಓದಿ : ಬಾರ್ಡರ್ 2 : ಅಹಾನ್ ಶೆಟ್ಟಿ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ಚಿತ್ರದ ಕಥೆ ಹಾಗೂ ಸಂಭಾಷಣೆ ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದು, ಕ್ಯಾಮೆರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ್ಹಾ, ಸಂಕಲನ ರಾಹುಲ್ ವಸಿಷ್ಠ ಅವರದ್ದು.  ಇದೀಗ ಈ ಸಿನಿಮಾಕ್ಕಾಗಿ ಹಾಕಿರುವ ಶ್ರಮ ಸಾರ್ಥಕವಾದ ನಿಟ್ಟಿನಲ್ಲಿ ಚಿತ್ರತಂಡ ಪ್ರೇಕ್ಷಕರ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದ ತಿಳಿಸಿದೆ.

 

Continue Reading

FILM

ಬಾರ್ಡರ್ 2 : ಅಹಾನ್ ಶೆಟ್ಟಿ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

Published

on

ಮಂಗಳೂರು/ಮುಂಬೈ : 1997ರಲ್ಲಿ ತೆರೆಕಂಡು ಜನಮನ ಗೆದ್ದಿದ್ದ ಚಿತ್ರ ಬಾರ್ಡರ್. ಇದೀಗ ಅದರ ಸೀಕ್ವೆಲ್ ಬರಲು ಸಿದ್ಧವಾಗಿದೆ.  ಈ ಬಹುನಿರೀಕ್ಷಿತ ಚಿತ್ರದಲ್ಲಿ ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್ ದೋಸಾಂಜ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಖ್ಯಾತ ನಟ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿಯೂ ಪ್ರಮುಖ ಪಾತ್ರವಾಗಿರೋದು ಸಕತ್ ಸುದ್ದಿಯಾಗಿತ್ತು. ಇದೀಗ ಅಹಾನ್ ಶೆಟ್ಟಿಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ಗಳಿಸುತ್ತಿದೆ.

ಯೋಧನಾಗಿ ಸಿನಿಮಾದಲ್ಲಿ ಅಹಾನ್ ನಟಿಸಿದ್ದು, ಬಿಡುಗಡೆಗೊಂಡಿರುವ ಪೋಸ್ಟರ್ ನಲ್ಲಿ ಮಿಲಿಟರಿ ಗನ್ ಹಿಡಿದು ಕರ್ತವ್ಯ ನಿರತನಾಗಿರುವ ಯೋಧನ ಲುಕ್ ಕಾಣಬಹುದು. ಮುಖದಲ್ಲಿ ರಕ್ತ, ಆಕ್ರೋಶಭರಿತ ಭಾವ ಕಾಣಬಹುದು.

ಇದನ್ನೂ ಓದಿ : ಕಾವ್ಯಾ ನಾಮಿನೇಟ್ ಮಾಡಿದ್ಯಾರನ್ನ ಗೊತ್ತಾ!? ರಣರಂಗವಾಯ್ತು ‘ಬಿಗ್’ ಮನೆ

1997ರಲ್ಲಿ ತೆರೆಕಂಡ ಬಾರ್ಡರ್ ಚಿತ್ರವನ್ನು ಜೆ.ಪಿ.ದತ್ತಾ ನಿರ್ದೇಶಿಸಿದ್ದರು. ಇದೀಗ ಅದರ ಮುಂದುವರಿದ ಭಾಗ ಬಾರ್ಡರ್ 2 ವನ್ನು ಅನುರಾಗ್ ಸಿಂಗ್ ನಿರ್ದೇಶಿಸಿದ್ದಾರೆ. ಅಂದಹಾಗೆ, ಬಾರ್ಡರ್ 2, 2026ರ ಜನವರಿ 23 ರಂದು ತೆರೆಗಪ್ಪಳಿಸಲಿದೆ.

 

 

Continue Reading

FILM

ಅತ್ತ ಥಿಯೇಟರ್‌ಗೆ ಬರ್ತಾ ಇದ್ದೀನಿ ಚಿನ್ನ…ಇತ್ತ ಜೈಲಿನಲ್ಲಿ ಖೈದಿಗಳಿಗೆ ‘ಡೆವಿಲ್’ ಕಾಟ

Published

on

ಮಂಗಳೂರು/ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಡೆವಿಲ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಅಭಿಮಾನಿಗಳು ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.  ಡಿಸೆಂಬರ್ 11 ರಂದು ಸಿನಿಮಾ ತೆರೆಗೆ ಬರಲಿದ್ದು, ಈಗಾಗಲೇ ಬುಕ್ಕಿಂಗ್ ಆರಂಭಗೊಂಡಿದೆ.   ಬರ್ತಿದ್ದೀನಿ ಚಿನ್ನ ಎಂದು ಥಿಯೇಟರ್‌ಗೆ ಲಗ್ಗೆ ಇಡಲಿರೋ ಡಿಬಾಸ್‌ಗಾಗಿ ಅತ್ತ ಅಭಿಮಾನಿಗಳು ಕಾಯುತ್ತಿದ್ದು, ಇತ್ತ ಜೈಲಿನಲ್ಲಿ ‘ಡೆವಿಲ್’ ಕಾಟ ಶುರುವಾಗಿದೆಯಂತೆ. ಹೌದು,  ದರ್ಶನ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ಸಹಖೈದಿಗಳಿಗೆ ಕಿರುಕು*ಳ ನೀಡಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ, ದರ್ಶನ್ ತನ್ನದೇ ಸೆಲ್‌ನಲ್ಲಿರುವ ಸಹಖೈದಿಗಳಿಗೆ ಕಿರುಕು*ಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.  ಅನುಕುಮಾರ್, ಜಗ್ಗ, ನಾಗರಾಜು, ಪ್ರದೋಶ್, ಲಕ್ಷ್ಮಣ್ ದರ್ಶನ್ ಜೊತೆ ಒಂದೇ ಸೆಲ್​ನಲ್ಲಿದ್ದಾರೆ. ಇವರೆಲ್ಲರೂ ರೇಣುಕಾಸ್ವಾಮಿ ಕೊ*ಲೆ ಕೇಸ್​ ಅಲ್ಲಿ  ಜೈಲು ಸೇರಿದವರು. ನಾಗರಾಜುನನ್ನು ಹೊರತುಪಡಿಸಿ ಉಳಿದ ಆರೋಪಿಗಳಿಗೆ ದರ್ಶನ್ ಮಾನಸಿಕ ಹಾಗೂ ದೈಹಿಕ ಹಿಂ*ಸೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಜಗ್ಗ ಹಾಗೂ ದರ್ಶನ್ ಮಧ್ಯೆ ದೊಡ್ಡ ಜಗಳ ನಡೆದಿದ್ದು,  ಇಬ್ಬರ ಜಗಳ ಜೋರಾಗುತ್ತಿದ್ದಂತೆ ಜೈಲಿನ ಅಧಿಕಾರಿಗಳು ಬಂದು ಜಗಳ ಬಿಡಿಸಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ,  ಮಲಗಿದ್ದ ಸಹಖೈದಿಗಳನ್ನು ಕಾಲಿನಲ್ಲಿ ಒದ್ದು ಎಬ್ಬಿಸಿರೋ ದರ್ಶನ್ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ : ನಟಿ ಮೇಲೆ ಲೈಂ*ಗಿಕ ದೌರ್ಜ*ನ್ಯ ಪ್ರಕರಣ : ನಟ ದಿಲೀಪ್ ಖುಲಾಸೆ

ವಕೀಲರ ನೇಮಕ ವಿಚಾರವಾಗಿಯೂ ಗಲಾಟೆ ನಡೆದಿದ್ದು, ನಾನು ಇಲ್ಲೆ ಇದ್ದರೆ ಸಾ*ಯೋದಾಗಿ ಅನುಕುಮಾರ್ ಹೇಳಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.  ಅಲ್ಲದೇ, ಚಿತ್ರದುರ್ಗ ಜೈಲಿಗೆ ತಮ್ಮನ್ನು ಶಿಫ್ಟ್ ಮಾಡುವಂತೆ ಜಗ್ಗ, ಅನುಕುಮಾರ್ ಕೇಳಿಕೊಂಡಿದ್ದಾರೆ ಎಂಬ ವಿಚಾರವೂ ಸದ್ದು ಮಾಡುತ್ತಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page