Connect with us

DAKSHINA KANNADA

ಮಂಗಳೂರು : ದೇಶ ವಿರೋಧಿ ಪೋಸ್ಟ್ ಮಾಡಿದ ವಿದ್ಯಾರ್ಥಿನಿ ವಿರುದ್ಧ ಭಾರೀ ಆಕ್ರೋಶ

Published

on

ಮಂಗಳೂರು : ಪೆಹಲ್ಗಾಮ್ ದಾಳಿ ಬಳಿಕ ಭಾರತ ಹಾಗೂ ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಅಮಾಯಕರ ಬಲಿಯನ್ನು ಸಹಿಸದ ಭಾರತ ಪ್ರತಿಕಾರವಾಗಿ ‘ಆಪರೇಷನ್ ಸಿಂಧೂರ್’ ಆರಂಭಿಸಿದೆ. ಬಳಿಕ ಪ್ರತಿಕಾರ ಯುದ್ಧಗಳು ನಡೆಯುತ್ತಲೇ ಇವೆ. ಇಡೀ ದೇಶವೇ ನಮ್ಮ ಸೈನ್ಯಕ್ಕೆ ಬೆನ್ನೆಲುಬಾಗಿ ನಿಂತು ಪ್ರಾರ್ಥಿಸುತ್ತಿರುವ ಈ ವೇಳೆ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ದೇಶವಿರೋಧಿ ಪೋಸ್ಟ್ ಒಂದನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ಮಂಗಳೂರಿನಾದ್ಯಂತ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಅಷ್ಟು ಮಾತ್ರವಲ್ಲದೆ ಆ ಪೋಸ್ಟ್‌ಗೆ ಪ್ರತಿಯಾಗಿ ಸಮರ್ಥನೆ  ಮಾಡಿಕೊಂಡಿದ್ದಾಳೆ.

 

ಪೋಸ್ಟ್‌ನಲ್ಲಿ ಏನಿದೆ ..?

ಮೂಲತಃ ಬೆಳ್ತಂಗಡಿ ಸಮೀಪದ ಬೆಳಾಲು ನಿವಾಸಿ ರೇಷ್ಮಾ ಎನ್ ಬಾರಿಗ ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸ್ನಾತಕ್ಕೋತ್ತರ ಪದವಿ ಪಡೆಯುತ್ತಿದ್ದಾಳೆ. ಇದೀಗ ಆಕೆ ಹಾಕಿರುವ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ರೇಷ್ಮಾ ‘ನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ ಅಲ್ಲಿ ನಂದಿ ಹೋಯಿತು ಬೆಳಕು ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ… ಬೆಳಕಿನ ವಿಜೃಂಭಣೆಗಾಗಿ ಹೋರಾಟ ಜಯಿಸಿದು ಕತ್ತಲು… ಎಲ್ಲೆಲ್ಲೂ ಕತ್ತಲು…! – ರೇಷ್ಮಾ ಎನ್ ಬಾರಿಗ #dikkaraoperationsindura’ ಎಂಬುವುದಾಗಿ ಬರೆದುಕೊಂಡಿದ್ದಾಳೆ. ಭಾರತದ ಪ್ರತಿಕಾರವನ್ನ ವಿರೋಧಿಸಿ ಭಯೋತ್ಪದನೆಯನ್ನ ಸಮರ್ಥಿಸುವ ಹೀನ ಮನಸ್ಥಿತಿಗೆ ದಿಕ್ಕಾರವಿರಲಿ, ಮಂಗಳೂರು ಕಾಲೇಜಿನ ದೇಶದ್ರೋಹಿ ವಿದ್ಯಾರ್ಥಿನಿಯ ಸಂದೇಶವನ್ನ ಗಮನಿಸಿ ಎಂದು ವಿದ್ಯಾರ್ಥಿ ಸಂಘಟನೆಗಳು ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಳಿಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ ಸಾರ್ವಜನಿಕರು ಕೂಡ ರೇಷ್ಮಾಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ವಿವಾದದಲ್ಲೂ ಸಮರ್ಥನೆ :

ದೇಶವಿರೋಧದ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ರೇಷ್ಮಾ ಎನ್‌ ಬಾರಿಗ ಮತ್ತೆ ಸಮರ್ಥನೆ ಪೋಸ್ಟ್‌ ಒಂದನ್ನು ನಿನ್ನೆ (ಮೇ.8) ಮತ್ತೆ ಹಂಚಿಕೊಂಡಿದ್ದಾಳೆ. ಅದರಲ್ಲಿ ‘ಭಾರತ ದೇಶದ ಮೇಲೆ ಅಪಾರ ಪ್ರೀತಿ ಇದೆ, ಗೌರವ  ನನಗಿದೆ. ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯು ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯಿಂದ ಬದುಕಬೇಕು ಎಂಬುದು ನನ್ನ ಕಾಳಜಿ. ಈ ದೇಶದಲ್ಲಿ ಹುಟ್ಟಿರುವ ಬಗ್ಗೆ ಹೆಮ್ಮೆ ಇದೆ. ಏಕೆಂದರೆ ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ಭಾರತ. ಈ ದೇಶದ. ಮಣ್ಣಿನ ಮಕ್ಕಳಾದ ನಾವು ದ್ವೇಷದ ಕಾರಣ, ಭಯೋತ್ಪಾದನೆಯ ಕಾರಣಕ್ಕಾಗಿ ಮಣ್ಣಾಗುವುದನ್ನು, ನೋವುಗಳನ್ನು ಅನುಭವಿಸುವುದು ನನಗಿಷ್ಟವಿಲ್ಲ. ಯಾವುದೇ ಯುದ್ಧ ಆದಾಗ ಮಡಿಯುವವರು ಒಂದೆಡೆಯಾದರೆ ಆಯಾ ದೇಶದ ಬಹುತೇಕರು ವಿವಿಧ ಕಾರಣಗಳಿಗಾಗಿ ನೋವು ಅನುಭವಿಸುವಂತಾಗುತ್ತದೆ. ಭಾರತದ ಮೇಲೆ ಭಯೋತ್ಪಾದನೆಯ ಕರಿನೆರಳು ಬೀಳದಿರಲಿ, ಶಾಂತಿ, ಸೌಹಾರ್ದ ನೆಲೆಸಲಿ. ಭಯೋತ್ಪಾದನೆ ನಿರ್ಮೂಲನೆಯಾಗಲಿ. ಸಾವು ನೋವು ಇಲ್ಲದಾಗಲಿ ಎನ್ನುವುದಷ್ಟೇ ನನ್ನ ಉದ್ದೇಶ. – ರೇಷ್ಮಾ ಎನ್ ಬಾರಿಗ’ ಎಂದು ಬರೆದುಕೊಂಡಿದ್ದಾಳೆ. ಅದರೆ ಆಕೆಯ ಸಮರ್ಥನೆ ವ್ಯರ್ಥವಾಗಿದೆ. ಈ ಕೂಡಲೇ ಆಕೆಯ ಇನ್ಸ್ಟಾಗ್ರಾಂ ಅಕೌಂಟ್, ಯೂ ಟ್ಯೂಬ್ ಎಲ್ಲವನ್ನೂ ರಿಪೋರ್ಟ್ ಮಾಡುವಂತೆ ಕಾಮೆಂಟ್‌ಗಳು ಬರುತ್ತಿದೆ. ಭಾರತದಲ್ಲಿ ಇದ್ದುಕೊಂಡು ದೇಶದ ಸತ್ಕಾರ್ಯವ ವಿರೋಧಿಸುವ ಮಂಗಳೂರಿನ ವಿದ್ಯಾರ್ಥಿನಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಲಾಗುತ್ತಿದೆ.

DAKSHINA KANNADA

ಸಮಗ್ರ ನೆಫ್ರಾಲಜಿ ಸೌಲಭ್ಯದ ಮೂಲಕ ನಿರಂತರ ಸೇವೆ ನೀಡಲಾಗುತ್ತಿದೆ : ಕೆಎಂಸಿ ಆಸ್ಪತ್ರೆ

Published

on

ಮಂಗಳೂರು : ವಿಶ್ವ ಕಿಡ್ನಿ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆ ಮಂಗಳೂರು , ಶೀಘ್ರ ರೋಗ ಪತ್ತೆ, ಚಿಕಿತ್ಸೆ ಮತ್ತು ಕಿಡ್ನಿ ಸಮಸ್ಯೆಯ ದೀರ್ಘ ಕಾಲದ ನಿರ್ವಹಣೆಯನ್ನು ಗುರಿಯಾಗಿಸಿ ತನ್ನ ಸಮಗ್ರ ಮೂತ್ರಪಿಂಡ (ಕಿಡ್ನಿ) ಆರೈಕೆಯ  ಸೇವೆಯನ್ನು ಒತ್ತಿ ಹೇಳಿದೆ. ಮೂತ್ರಪಿಂಡದ ಆರೋಗ್ಯ ಮತ್ತು ರೋಗ ತಡೆಗಟ್ಟುವ ಆರೈಕೆಯ ಕುರಿತು ಜಾಗೃತಿ ಹೆಚ್ಚಿಸುವ ಈ ನೇತೃತ್ವವನ್ನು ಆಸ್ಪತ್ರೆಯ ನೆಫ್ರಾಲಜಿ ವಿಭಾಗವು ಕೈಗೊಂಡಿದೆ.

ಈ ವಿಭಾಗವು ಅತ್ಯಾಧುನಿಕ ಕಿಡ್ನಿ ಕಸಿ ಸೇವೆಯನ್ನು ಹಾಗೂ ದಕ್ಷಿಣಕನ್ನಡದ ಅತಿದೊಡ್ಡದಾದ ಡಯಾಲಿಸಿಸ್‌ ಘಟಕವನ್ನು ಹೊಂದಿದ್ದು, 24 ಗಂಟೆ ನಿರಂತರ ಸೇವೆಗೆ ಮುಡಿಪಾಗಿರುವ ಮತ್ತು ಹೆಚ್ಚು ಅನುಭವಿ ನೆಫ್ರಾಲಜಿಸ್ಟ್‌ಗಳನ್ನು ಹೊಂದಿರುವ ಏಕೈಕ ಘಟಕವಾಗಿದ್ದು, ಸದಾ ರೋಗಿಯ ಆರೈಕೆಗೆ ಮುಡಿಪಾಗಿರುವ ಗುರಿಯನ್ನು ಹೊಂದಿದೆ.

ಈ ಬಗ್ಗೆ ಮಾತನಾಡಿದ ಹಿರಿಯ ನೆಫ್ರಾಲಜಿ ತಜ್ಞ, ಡಾ ಅಶೋಕ್‌ ಭಟ್‌, ವಿಶ್ವ ಕಿಡ್ನಿ ದಿನ  ಮೂತ್ರಪಿಂಡದ ಆರೋಗ್ಯವನ್ನು ಆದ್ಯತೆಯನ್ನಾಗಿ ಪರಿಗಣಿಸುವಂತೆ ನೆನಪಿಸುವ ದಿನ. ರೋಗ ಲಕ್ಷಣಗಳು ಸಮಸ್ಯೆ ಮುಂದುವರಿದ ಹಂತ ತಲುಪಿದಾಗ ಗೋಚರವಾಗುವ ಕಾರಣದಿಂದ  ಸಾಕಷ್ಟು ರೋಗಿಗಳು ಆರಂಭಿಕ ಹಂತದಲ್ಲಿ ಸಮಸ್ಯೆಯ ಕುರಿತು ಅರಿವು ಹೊಂದಿರುವುದಿಲ್ಲ. ಆರೋಗ್ಯಕರ ಜೀವನಶೈಲಿ ಹೊಂದುವುದು, ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣ, ಹೈಡ್ರೇಟ್‌ ಆಗಿರುವುದು, ನಿಯಮಿತ ರಕ್ತ, ಮೂತ್ರ ಹಾಗೂ ಆರೋಗ್ಯ ಪರೀಕ್ಷೆಯಿಂದ ಕಿಡ್ನಿ ರೋಗದ ಅಪಾಯವನ್ನು ತಗ್ಗಿಸಬಹುದು. ರೋಗ ತಡೆಗಟ್ಟುವುದೇ ದೀರ್ಘ ಕಾಲದ ಕಿಡ್ನಿ ಆರೋಗ್ಯಕ್ಕೆ ದಾರಿ. ಪ್ರತಿಯೊಬ್ಬರು ನೆಫ್ರೊಲಾಜಿ ತಜ್ಞರನ್ನು ಭೇಟಿ ಮಾಡಿ ಸಮಸ್ಯೆಗೆ ಸಲಹೆಯನ್ನು ಪಡೆಯಬೇಕು ಎಂದರು.

ಹಿರಿಯ ನೆಫ್ರಾಲಜಿ ತಜ್ಞ ಡಾ.ಸುಶಾಂತ್‌ ಕುಮಾರ್ ಮಾತನಾಡಿ, ಎಲ್ಲಾ ಕಿಡ್ನಿ ಸಮಸ್ಯೆಗೆ ಡಯಾಲಿಸಿಸ್‌ ಒಂದೇ ಪರಿಹಾರವಲ್ಲ. ಡಯಾಲಿಸಿಸ್‌ ಸಿಕೆಡಿಯಲ್ಲಿ 5ನೇ ಹಂತದಲ್ಲಿ ಅಥವಾ ತೀವ್ರ ಪ್ರಮಾಣದ ಸಮಸ್ಯೆಗಳು ಕಂಡು ಬಂದಾಗ ಆರಂಭಿಸಬೇಕಾಗುತ್ತದೆ. ಡಯಾಲಿಸಿಸ್‌ಗೆ ಹೋಲಿಸಿದಾಗ ಸಿಕೆಡಿ ಅಥವಾ ಕಿಡ್ನಿ ಫೆಲ್ಯೂರ್ ಸಮಸ್ಯೆಗೆ ಮೂತ್ರಪಿಂಡದ ಕಸಿ ಉತ್ತಮ ವಿಧಾನ. ಕಿಡ್ನಿ ಕಸಿ ಯಶಸ್ಸಿನ ಪ್ರಮಾಣವು ಹೆಚ್ಚಾಗಿದೆ. ಆದರೆ ಇದು ಸೂಕ್ತವಾದ ದಾನಿಗಳು ಸಿಕ್ಕಾಗ ಮಾತ್ರ ಸಾಧ್ಯ. ಮರಣ ಹೊಂದಿರುವವರಿಂದ ಅಂಗಾಂಗ ದಾನ ಪಡೆಯಲು ನಮ್ಮಲ್ಲಿ ಸರ್ಕಾರದ ಯೋಜನೆಯಾದ ಜೀವ ಸಾರ್ಥಕತೆ ಕಾರ್ಯಕ್ರಮವಿದೆ. ಅದೇ ರೀತಿ ಜೀವಂತ ದಾನಿಗಳಿಂದ ದಾನ ಪಡೆಯಲು ನಮ್ಮ ಆಸ್ಪತ್ರೆಯಲ್ಲಿ ಸಮಿತಿಯಿದ್ದು ಅಂಗಾಂಗ ದಾನ ಆ್ಯಕ್ಟ್‌ಗೆ ಅನುಗುಣವಾಗಿ ಎಲ್ಲಾ ರೀತಿಯ ಅನುಮತಿ, ಕಾನೂನು ಅಗತ್ಯತೆಗಳನ್ನು ಪೂರೈಸಲಾಗುತ್ತದೆ ಎಂದರು.

ಸೌಲಭ್ಯಗಳ ಕುರಿತು ಮಾತನಾಡಿದ ನೆಫ್ರಾಲಜಿ ವಿಭಾಗದ ಎಚ್‌ಒಡಿ ಡಾ.ಮಯೂರ್ ಪ್ರಭು, ಕೆಎಂಸಿ ಆಸ್ಪತ್ರೆ ಮಂಗಳೂರಿನಲ್ಲಿ ನಮ್ಮ ದಕ್ಷಿಣ ಕನ್ನಡದಲ್ಲೇ  ಅತಿದೊಡ್ಡ ಡಯಾಲಿಸಿಸ್‌  ಕೇಂದ್ರಗಳಲ್ಲಿ ಒಂದಾದ ಅಡ್ವಾನ್ಸ್ಡ್ ಡಯಾಲಿಸಿಸ್‌ ಸೇವೆ, ತಜ್ಞ ಮೂತ್ರಪಿಂಡ ಕಸಿ ತಂಡ ಮತ್ತು ಅಡ್ವಾನ್ಸ್ಡ್ ಡಯಾಗ್ನೋಸ್ಟಿಕ್‌ ಸೇವೆ ಬೆಂಬಲದ ಬಹು ವಿಭಾಗೀಯ ಚಿಕಿತ್ಸಾ ಸೇವೆಯನ್ನು ಒಳಗೊಂಡ ಸಮಗ್ರ ನೆಫ್ರಾಲಜಿ ಸೌಲಭ್ಯವನ್ನು ರೂಪಿಸಿದ್ದೇವೆ. ನಮ್ಮ ತಂಡವು ಅತಿದೊಡ್ಡ ತಜ್ಞರ ತಂಡವಾಗಿದ್ದು ವರ್ಷದ 365 ದಿನವೂ 24 ಗಂಟೆಗಳ ಆರೋಗ್ಯ ಸೇವೆಯನ್ನು ನೀಡುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಭಾರತಕ್ಕೆ ಹೊರಟಿದ್ದ ಸರಕು ಹಡಗಿನ ಮೇಲೆ ಇರಾನ್‌ ದಾ*ಳಿ

ನಾವು ರೋಗಿ ಕೇಂದ್ರಿತ ಸೇವೆಗಳಾದ ಬೆಡ್‌ಸೈಡ್‌ ಟ್ರೀಟ್‌ಮೆಂಟ್‌, ಐಸಿಯುನಲ್ಲಿ ಡಯಾಲಿಸಿಸ್‌ ಸೌಲಭ್ಯ, ಶೂನ್ಯ ಹರಡುವಿಕೆಯ ವಿಧಾನದೊಂದಿಗೆ ಎಚ್‌ಐವಿ ಮತ್ತು ಎಚ್‌ಬಿಎಸ್‌ಎಜಿ ಸೋಂಕಿತರಿಗೆ ವಿಶೇಷ ಡಯಾಲಿಸಿಸ್‌ ಸೌಲಭ್ಯ, ಸುಸಜ್ಜಿತ ಎಚ್‌ಡಿಎಫ್‌ ಡಯಾಲಿಸಿಸ್ ಘಟಕ ಮತ್ತು ನಿಯಮಿತ ಡಯಾಲಿಸಿಸ್ ಅಗತ್ಯವಿರುವ ಹಾಸಿಗೆ ಹಿಡಿದ ರೋಗಿಗಳಿಗೆ ಮೀಸಲಾದ ಸಾರಿಗೆ ಬೆಂಬಲವನ್ನು ಒದಗಿಸಲಾಗುತ್ತದೆ. ಈ ಪ್ರದೇಶದಲ್ಲಿ ರೋಗಿ-ಕೇಂದ್ರಿತ ನೆಫ್ರಾಲಜಿ ಸೇವೆಗಳನ್ನು ವಿಸ್ತರಿಸುವುದನ್ನು ಮುಂದುವರಿಸುವುದರೊಂದಿಗೆ ಮೂತ್ರಪಿಂಡದ ಕಾಯಿಲೆಗಳ ಜಾಗೃತಿ, ಆರಂಭಿಕ ಪತ್ತೆ ಮತ್ತು ಸುಧಾರಿತ ಚಿಕಿತ್ಸಾ ಆಯ್ಕೆಗಳನ್ನು ಬಲಪಡಿಸುವ ತನ್ನ ಬದ್ಧತೆಯನ್ನು ಆಸ್ಪತ್ರೆ ಪುನರುಚ್ಚರಿಸುತ್ತದೆ ಎಂದರು.

Continue Reading

DAKSHINA KANNADA

ಬಂಟ್ವಾಳ: ಮನೆಯಲ್ಲಿ ಅಕ್ರಮ ಎಂಡಿಎಂಎ ದಾಸ್ತಾನು; ನಾಲ್ವರು ಅರೆಸ್ಟ್

Published

on

ಬಂಟ್ವಾಳ: ಅಕ್ರಮವಾಗಿ ಮನೆಯಲ್ಲಿ ಎಂಡಿಎಂಎ ದಾಸ್ತಾನು ಮಾಡಿದ್ದ ನಾಲ್ವರು ಆರೋಪಿಗಳ ಸಹಿತ ಲಕ್ಷಾಂತರ ದೂ ಮೌಲ್ಯದ ಮಾದಕ ವಸ್ತುಗಳನ್ನು ವಿಟ್ಲ ಪೋಲೀಸರ ತಂಡ ವಶಕ್ಕೆ ಪಡೆದುಕೊಂಡ ಘಟನೆ ಬಂಟ್ವಾಳ ತಾಲ್ಲೂಕಿನ ನೇರಳಕಟ್ಟೆ ಎಂಬಲ್ಲಿ ನಡೆದಿದೆ.

ನೆಟ್ಲ ಮುಡ್ನೂರು ಗ್ರಾಮದ ಭಗವಂತ ಕೋಡಿ ನಿವಾಸಿ ಅಶ್ರಫ್ ಜಿ , ಹಫೀಝ್ ಯಾನೆ ಅಪ್ಪಿ, ಅಫ್ವಾನ್ ಮತ್ತು ಅಶ್ರಫ್ ಎನ್ ಎ ಬಂಧಿತ ಆರೋಪಿಗಳು.

ವಿಟ್ಲ ಠಾಣಾ ವ್ಯಾಪ್ತಿಯ ಬಂಟ್ವಾಳ ನೇರಳಕಟ್ಟೆ ಇಂದಿರಾ ನಗರ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ಅಶ್ರಫ್ ಜಿ ಎಂಬಾತನು ತನ್ನ ಮನೆಯಲ್ಲಿ ಮಾದಕ ವಸ್ತುವಾದ ಎಮ್.ಡಿ.ಎಮ್.ಎ ಯನ್ನು ಸ್ವಾಧೀನದಲ್ಲಿಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಮಾಹಿತಿ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರ ತಂಡ ದಾಳಿ ನಡೆಸಿದೆ.

ಈ ವೇಳೆ  ಅಶ್ರಫ್ ಜಿ ಎಂಬಾತನ ಜೊತೆ ಹಫೀಝ್ ಯಾನೆ ಅಪ್ಪಿ, ಅಫ್ವಾನ್ ಮತ್ತು ಅಶ್ರಫ್ ಎನ್ ಎ ಅವರೊಂದಿಗೆ ಈ ಮನೆಯಲ್ಲಿದ್ದ.

ಇದನ್ನೂ ಓದಿ: 30 ವರ್ಷಗಳಿಂದ ಕೊರಗ ಸಮುದಾಯದ ವ್ಯಕ್ತಿಯನ್ನು ಜೀತದಾಳಾಗಿಸಿ ದೌರ್ಜನ್ಯ ಆರೋಪ; ಮಹಿಳೆ ಬಂಧನ

ದಾಳಿಯ ವೇಳೆ ಮನೆಯೊಳಗೆ ದಾಸ್ತಾನು ಇರಿಸಲಾಗಿದ್ದ ಮಾದಕ ವಸ್ತುಗಳ ಸಹಿತ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಂಧಿತರಿಂದ ಒಂದು ಲಕ್ಷದ 79 ಸಾವಿರದ ಏಳುನೂರು ರೂ. ಮೌಲ್ಯದ 17.97 ಗ್ರಾಂ ಎಂಡಿಎಂಎಯನ್ನು ವಶಕ್ಕೆ ಪಡೆಯಲಾಗಿದೆ.

Continue Reading

DAKSHINA KANNADA

ರಾಜ್ಯದಲ್ಲಿ ಎಲ್ ಪಿಜಿ ಪೂರೈಕೆಯಲ್ಲಿ ವ್ಯತ್ಯಯ; ಕುಕ್ಕೆ ಕ್ಷೇತ್ರಕ್ಕೂ ತಟ್ಟಿದ ಬಿಸಿ.. ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ

Published

on

ಸುಬ್ರಹ್ಮಣ್ಯ: ಇರಾನ್-ಇಸ್ರೇಲ್ ಸಂಘರ್ಷದ ಕಾರಣದಿಂದಾಗಿ ರಾಜ್ಯದಲ್ಲಿ ಎಲ್‌ಪಿಜಿ (LPG) ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಇದೀಗ ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೂ ಇದರ ಬಿಸಿ ತಟ್ಟಿದೆ.


ಸುಬ್ರಹ್ಮಣ್ಯ ದೇಗುಲದಲ್ಲಿ ಪ್ರತಿದಿನ ಬೆಳಿಗ್ಗೆ ವಿವಿಧ ಬಗೆಯ ಉಪಹಾರ ನೀಡಲಾಗುತ್ತಿತ್ತು. ಇದೀಗ ಗ್ಯಾಸ್ ಪೊರೈಕೆ ವ್ಯತ್ಯಯದಿಂದ ಇಂದಿನಿಂದ ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಬೇಯಿಸುವ ತಿನಿಸು ಬದಲಾಗಿ ಅವಲಕ್ಕಿ, ಮೊಸರು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಗ್ಯಾಸ್ ಪೊರೈಕೆ ಸಂಸ್ಥೆಯವರಿಗೆ ದಿನಕ್ಕೆ 20 ಸಿಲಿಂಡರ್ ಗ್ಯಾಸ್ ಪೊರೈಕೆ ಮಾಡಲು ದೇವಸ್ಥಾನದ ವತಿಯಿಂದ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಇರಾನ್-ಇಸ್ರೇಲ್ ಸಂಘರ್ಷ: ಮಾ.12ರಂದು ಮಂಗಳೂರು- ಮಧ್ಯ ಪ್ರಾಚ್ಯ ಮಾರ್ಗದ 14 ವಿಮಾನಗಳು ರದ್ದು

ಇದರ ನಡುವೆ ಪೊರೈಕೆ ಆಗದೇ ಇದ್ದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದ ವಿತರಣೆಯಲ್ಲೂ ಕೆಲ ಬದಲಾವಣೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಬದಲಾವಣೆ ಮಾಡುವುದಿದ್ದಲ್ಲಿ ಈ ಬಗ್ಗೆ ದೇವಸ್ಥಾನದ ವತಿಯಿಂದ ಅಧಿಕೃತ ಮಾಹಿತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page