Connect with us

LATEST NEWS

ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ

Published

on

ಬೆಂಗಳೂರು: ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿನ ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಉಂಟಾಗಿದೆ. ಇದರಿಂದಾಗಿ ಪ್ಲಾಸ್ಟಿಕ್ ಕಾರ್ಖಾನೆ ಹೊತ್ತಿ ಉರಿಯುತ್ತಿದೆ.

ಸ್ಥಳಕ್ಕೆ ಆಗಮಿಸಿರುವಂತ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಕಿಯ ಹೊಗೆ ಸುತ್ತಮುತ್ತಲ ವ್ಯಾಪ್ತಿಗೆ ಆವರಿಸಿದ್ದು, ಜನರು ಭಯಭೀತರಾಗಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

LATEST NEWS

ಹಬ್ಬಕ್ಕೆಂದು ಊರಿಗೆ ಹೋಗುತ್ತೀರಾ..? ಹಾಗಾದರೆ ಬಸ್ ಟಿಕೆಟ್ ದರ ಎಷ್ಟಿದೆ ನೋಡಿ

Published

on

ಬೆಂಗಳೂರು: ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಮೂರು ದಿನಗಳ ರಜೆ ಇದೆ ಎಂದು ಅನೇಕ ಜನರು ಊರಿನ ಕಡೆ ಹೋಗಲು ತಯಾರಾಗಿದ್ದಾರೆ. ಆದರೆ ಹಬ್ಬಕ್ಕೆ ಊರಿಗೆ ಹೊರಟವರಿಗೆ ಇದೀಗ ಬಿಗ್‌ ಶಾಕ್ ಎದುರಾಗಿದೆ. ಖಾಸಗಿ ಬಸ್ ಟಿಕೆಟ್ ದರವು 3 ಪಟ್ಟು ಹೆಚ್ಚಾಗಿದೆ.

ಮಾರ್ಚ್- 29 ಶನಿವಾರ, ಮಾರ್ಚ್‌ – 30 ಯುಗಾದಿ ಹಬ್ಬ ಹಾಗೂ ಮಾರ್ಚ್‌ 31 ರಂಜಾನ್ ಹಬ್ಬ ಹೀಗೆ ಒಟ್ಟು ಮೂರು ದಿನಗಳ ಕಾಲ ರಜೆ ಇರುತ್ತದೆ. ಹೀಗಾಗಿ ಮಾರ್ಚ್ 28ರ ಶುಕ್ರವಾರ ರಾತ್ರಿ ಊರಿಗೆ ತೆರಳಲು ಜನರು ಪ್ಲಾನ್ ಮಾಡುತ್ತಿದ್ದಾರೆ. ಆದರೆ ಖಾಸಗಿ ಬಸ್ ಗಳಲ್ಲಿ ದುಪ್ಪಟ್ಟು ದರ ಏರಿಕೆ ಮಾಡಲಾಗಿದೆ.

ಯಾವ ಊರಿಗೆ ಎಷ್ಟು ಬಸ್ ಟಿಕೆಟ್ ದರ?

ಬೆಂಗಳೂರು-ದಾವಣಗೆರೆ

ಪ್ರಸ್ತುತ ದರ = 450-1300
ಹಬ್ಬದ ದರ = 750-5500

ಬೆಂಗಳೂರು-ಧಾರವಾಡ

ಪ್ರಸ್ತುತ ದರ = 600-1100
ಹಬ್ಬದ ದರ = 1069-5500

ಬೆಂಗಳೂರು-ಹುಬ್ಬಳ್ಳಿ

ಪ್ರಸ್ತುತ ದರ=475-1100
ಹಬ್ಬದ ದರ=1200-4200

ಬೆಂಗಳೂರು-ಬೆಳಗಾವಿ

ಪ್ರಸ್ತುತ ದರ=389-1200
ಹಬ್ಬದ ದರ=1129-5500

ಬೆಂಗಳೂರು-ಮಂಗಳೂರು

ಪ್ರಸ್ತುತ ದರ=650-1300
ಹಬ್ಬದ ದರ=1200-4500

ಬೆಂಗಳೂರು-ಕಲ್ಬುರ್ಗಿ

ಪ್ರಸ್ತುತ ದರ=750-1000
ಹಬ್ಬದ ದರ=1200-2200

ಬೆಂಗಳೂರು-ರಾಯಚೂರು

ಪ್ರಸ್ತುತ ದರ=650-990
ಹಬ್ಬದ ದರ=1100-2990

ಬೆಂಗಳೂರು-ಹಾಸನ

ಪ್ರಸ್ತುತ ದರ=463-1000
ಹಬ್ಬದ ದರ=750-1600

ಬೆಂಗಳೂರು-ಯಾದಗಿರಿ

ಪ್ರಸ್ತುತ ದರ=699-900
ಹಬ್ಬದ ದರ=1300-2200

ಬೆಂಗಳೂರು-ಶಿವಮೊಗ್ಗ

ಪ್ರಸ್ತುತ ದರ =500-990
ಹಬ್ಬದ ದರ =1199-1800

ಈ ಕುರಿತು ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ, ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಗಳಿಗೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ನಾವು 50 ರಿಂದ 60 ರಷ್ಟು ಟಿಕೆಟ್ ದರ ಏರಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

Continue Reading

DAKSHINA KANNADA

ಹಳೆ ಮೀಸಲು ಪಟ್ಟಿಯಂತೆ ಪಾಲಿಕೆ ಚುನಾವಣೆ ..!? ಶೀಘ್ರವೇ ಆಗಲಿದೆ ಘೋಷಣೆ..!

Published

on

ಮಂಗಳೂರು / ಮೈಸೂರು: ಮಂಗಳೂರು ಸೇರಿದಂತೆ ರಾಜ್ಯದ ಐದು ಮಹಾನಗರ ಪಾಲಿಕೆಗೆ ಈ ವರ್ಷದಲ್ಲೇ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ. ಸರ್ಕಾರದಿಂದ ಈ ಐದೂ ಮಹಾನಗರ ಪಾಲಿಕೆಗಳ ಮೀಸಲು ಪಟ್ಟಿ ನೀಡಿದ್ರೆ ಅದರಂತೆ ಚುನಾವಣೆ ನಡೆಯಲಿದೆ. ಇಲ್ಲವಾದಲ್ಲಿ ಹೈ ಕೋರ್ಟ್ ಮೊರೆ ಹೋಗಿ ಹಳೆ ಮೀಸಲು ಪಟ್ಟಿಯಂತೆ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ.


ಮಂಗಳೂರು ಸೇರಿದಂತೆ ಮೈಸೂರು, ಶಿವಮೊಗ್ಗ, ದಾವರಣಗೆರೆ, ತುಮಕೂರು ಈ ಐದು ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿದಿಗಳ ಅವದಿ ಮುಕ್ತಾಯಗೊಂಡಿದೆ. ಈ ಐದೂ ಮಹಾನಗರ ಪಾಲಿಕೆಯಲ್ಲಿ ಚುನಾವಣೆ ನಡೆಸಬೇಕಾಗಿದ್ದು, ಚುನಾವಣಾ ಆಯೋಗ ರಾಜ್ಯ ಸರ್ಕಾರದ ಬಳಿ ಮೀಸಲು ಪಟ್ಟಿ ನೀಡಲು ಮನವಿ ಮಾಡಿದೆ. ನಿಯಮಾನುಸಾರ ಸರ್ಕಾರ ಮೀಸಲು ಪಟ್ಟಿ ಕೊಟ್ಟ ಬಳಿಕ ಅದರಂತೆ ಚುನಾವಣೆ ನಡೆಸಲಾಗುತ್ತದೆ. ಆದ್ರೆ ಸರ್ಕಾರ ಇನ್ನೂ ಮೀಸಲು ಪಟ್ಟಿ ನೀಡುವ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೊಂದು ವೇಳೆ ಮೀಸಲು ಪಟ್ಟಿ ನೀಡದೇ ಇದ್ರೆ ಈ ಹಿಂದಿನ ಮೀಸಲು ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣ ಆಯಕ್ತು ಜಿ.ಎಸ್. ಸಂಗ್ರೇಶಿ ಮಾಹಿತಿ ನೀಡಿದ್ದಾರೆ. ಮತದಾರರ ಪಟ್ಟಿ ಸಿದ್ಧವಾಗಿದೆಯಾದ್ರೂ ಮೀಸಲು ಪಟ್ಟಿಗಾಗಿ ಮಾತ್ರ ಕಾಯಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Continue Reading

BIG BOSS

ರೀಲ್ಸ್‌ ಮಾಡಿ ಅರೆಸ್ಟ್ ಆಗಿದ್ದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಾದ ವಿನಯ್‌, ರಜತ್‌ ಮಧ್ಯರಾತ್ರಿಯೇ ರಿಲೀಸ್‌

Published

on

ಬೆಂಗಳೂರು: ಲಾಂಗ್‌ ಹಿಡಿದು ರೀಲ್ಸ್‌ ಮಾಡಿ ಅರೆಸ್ಟ್ ಆಗಿದ್ದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಾದ ವಿನಯ್‌ ಮತ್ತು ರಜತ್‌ ಕೇಸ್‌ಗೆ ಇದೀಗ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ.

ಬಸವೇಶ್ವರ ನಗರ ಪೊಲೀಸರು ನಿನ್ನೆ ಮಧ್ಯರಾತ್ರಿಯೇ ಅವರನ್ನು ಬಿಡುಗಡೆ ಮಾಡಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಲಾಂಗ್‌ ಹಿಡಿದು 18 ಸೆಕೆಂಡ್‌ಗಳ ಕಾಲ ರೀಲ್ಸ್ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್ ಹಾಗೂ ವಿನಯ್ ಇವರನ್ನು ನಿನ್ನೆ ಮಧ್ಯಾಹ್ನ ಬಂಧಿಸಿದ್ದರು. ಆದರೆ ಮಧ್ಯರಾತ್ರಿಯೇ ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದಾರೆ.

ಶಸ್ತ್ರಾಸ್ತ್ರ ಕಾಯ್ದೆಯಡಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದರು. ಆದರೆ, ತಾವು ರೀಲ್ಸ್‌ಗೆ ಬಳಸಿರುವುದು ಫೈಬರ್‌ ಮಚ್ಚು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ರೀಲ್ಸ್‌ನಲ್ಲಿ ಬಳಸಿದ್ದ ಮಚ್ಚನ್ನು ಆರೋಪಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳ ಮಾತನ್ನೇ ನಂಬಿ ಫೈಬರ್ ಮಚ್ಚು ಎನ್ನುವ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.

ಬೆಳಗ್ಗೆ 10:30 ಕ್ಕೆ ಬರುವಂತೆ ನೋಟಿಸ್ ನೀಡಿ ಆರೋಪಿಗಳನ್ನು ಪೊಲೀಸರು ಕಳುಹಿಸಿದ್ದರು. ಸಾಮಾನ್ಯ ಜನರು ಇದ್ದಿದ್ದರೆ ಇದೇ ರೀತಿ ಮಾಡುತ್ತಿದ್ದರಾ ಪೊಲೀಸರು ಎಂಬ ಪ್ರಶ್ನೆ ವ್ಯಕ್ತವಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page