Connect with us

FILM

ವಿಚ್ಛೇದನದ ಸುದ್ದಿಗೆ ಉತ್ತರ ಕೊಟ್ಟ ಐಶ್ – ಅಭಿ ಆ್ಯನಿವರ್ಸರಿ ಫೋಟೋ!

Published

on

ಮುಂಬೈ : ಬಾಲಿವುಡ್ ಅಂಗಳಲ್ಲಿ ಟ್ರೆಂಡಿಂಗ್ ನಲ್ಲಿರುವ ಸ್ಟಾರ್ ದಂಪತಿಯಲ್ಲಿ ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ಮೊದಲಿನ ಸಾಲಿನಲ್ಲಿ ಇದ್ದಾರೆ. ಅವರ ಚಲನವಲನ, ಜೊತೆಗೆ ಅವರಿಬ್ಬರ ವಿಚ್ಛೇದನ ವಿಚಾರ ಯಾವಾಗಲೂ ಕೇಳಿ ಬರುತ್ತಿರುತ್ತದೆ. ಅವರಿಬ್ಬರು ಬೇರೆಯಾಗುತ್ತಾರೆ ಎಂದು ಸುದ್ದಿ ಹರಿದಾಡುತ್ತಲೇ ಇರುತ್ತದೆ.


ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ 2007ರ ಏಪ್ರಿಲ್ 20 ರಂದು ವಿವಾಹವಾದರು. ಇಬ್ಬರಿಗೂ ಆರಾಧ್ಯ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ. ಆರಂಭದಿಂದಲೂ ಇವರಿಬ್ಬರ ಬಗ್ಗೆ ಅಪಸ್ವರ ಕೇಳಿ ಬರುತ್ತಿತ್ತು. ದಂಪತಿ ನಡುವೆ ಯಾವುದೂ ಸರಿಯಿಲ್ಲ. ಬೇರೆ ಬೇರೆ ಆಗುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿರುತ್ತದೆ.

ಐಶ್ – ಅಭಿ ಮಾತ್ರವಲ್ಲ ಐಶ್ ಅತ್ತೆ ಜಯಾ ಬಚ್ಚನ್ ಜೊತೆಯೂ ಮುನಿಸಲ್ಲಿದ್ದಾರೆ ಎನ್ನಲಾಗುತ್ತಿರುತ್ತದೆ. ಅತ್ತೆ – ಸೊಸೆ ಬೇರೆ ಬೇರೆ ಮನೆಯಲ್ಲಿ ವಾಸವಾಗಿದ್ದಾರೆ ಎಂದೇ ಹೇಳಲಾಗುತ್ತಿದೆ. ಈ ಎಲ್ಲಾ ವಿಚಾರಗಳ ನಡುವೆ ಐಶ್ – ಅಭಿ ತಮ್ಮ 17 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ : ನೇಹಾ ಹ*ತ್ಯೆ ಪ್ರಕರಣ : ಏನಂದ್ರು ನಟ ದರ್ಶನ್?

ಫೋಟೋ ಹಂಚಿಕೊಂಡ ದಂಪತಿ :

ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ದಂಪತಿಯ ದಾಂಪತ್ಯ ಜೀವನಕ್ಕೆ 17 ವರ್ಷ ತುಂಬಿದೆ. ಇವರಿಬ್ಬರು ಬೇರೆಯಾಗುತ್ತಾರೆ ಎಂಬ ಸುದ್ದಿಗೆ ಈ ಫೋಟೋ ಬ್ರೇಕ್ ನೀಡಿದೆ. ಈ ಹಿಂದೆಯೂ ಅವರು ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡು ‘ಡಿವೋರ್ಸ್’ ಸುದ್ದಿಗೆ ವಿರಾಮ(Break) ನೀಡುತ್ತಿದ್ದರು. ಆದರೆ, ಅದು ಪೂರ್ಣ ವಿರಾಮ(full stop) ಆಗಿರಲಿಲ್ಲ. ಮತ್ತೆ ಮತ್ತೆ ಐಶ್ – ಅಭಿ ಡಿವೋರ್ಸ್ ವಿಚಾರ ಹರಿದಾಡುತ್ತಿತ್ತು.


ಇದೀಗ ಮತ್ತೆ ಐಶ್ – ಅಭಿ ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಫೋಟೋ ಹಂಚಿಕೊಂಡು ಗಾಳಿ ಸುದ್ದಿಗೆ ಬ್ರೇಕ್ ನೀಡಿದ್ದಾರೆ. ಹೌದು, ಈ ಫೋಟೋದಲ್ಲಿ ಐಶ್ – ಅಭಿ – ಆರಾಧ್ಯ ಜೊತೆಯಾಗಿ ನಿಂತಿದ್ದಾರೆ. ಇದು ಸೆಲ್ಫಿ ಕ್ಲಿಕ್. ಈ ಫೋಟೋವನ್ನು ಹಾರ್ಟ್ ಸಿಂಬಲ್ ನೊಂದಿಗೆ ದಂಪತಿ ಹಂಚಿಕೊಂಡಿದ್ದಾರೆ.

ಅಭಿಮಾನಿಗಳು ಏನಂದ್ರು? :

ಇನ್ನು ಐಶ್ವರ್ಯ ರೈ – ಅಭಿಷೇಕ್ ಬಚ್ಚನ್ ಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಅಲ್ಲದೇ, ಕೊನೆಗೂ ಇದು ವಿಚ್ಛೇದನದ ಗಾಳಿ ಸುದ್ದಿಗೆ ವಿಶ್ರಾಂತಿ ನೀಡಿದೆ. ನಿಜಕ್ಕೂ ರಿಲೀಫ್ ಎಂದು ಕಮೆಂಟ್ ಮಾಡಿದ್ದಾರೆ. ಡಿವೋರ್ಸ್ ಗಾಳಿ ಸುದ್ದಿಯನ್ನು ಇದು ಹೊಡೆದುರುಳಿಸಿದೆ ಎಂದಿದ್ದಾರೆ.

Advertisement
1 Comment

Leave a Reply

Your email address will not be published. Required fields are marked *

FILM

ಖ್ಯಾತ ಹಿರಿಯ ನಟಿ ಬಿಂದು ಘೋಷ್ ವಿಧಿವಶ …!

Published

on

ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಬಿಂದು ಘೊಷ್ ದೀರ್ಘಕಾಲದ ಅನಾರೋಗ್ಯದಿಂದ ನಿನ್ನೆ (ಮಾ.16) ನಿಧನರಾಗಿದ್ದಾರೆ. ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದ ನಟಿ ಬಿಂದು ಘೋಷ್ ಅಗಲಿಕೆಯು ಆಪ್ತರಿಗೆ ಮತ್ತು ಅಭಿಮಾನಿಗಳಿಗೆ ನೋವುಂಟುಮಾಡಿದೆ. ಬಿಂದು ಘೋಷ್ ಆತ್ಮಕ್ಕೆ ಶಾಂತಿ ಸಿಗಲಿ ಸೋಶಿಯಲ್ ಮೀಡಿಯಾ ಮೂಲಕ ಎಲ್ಲರೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ತಮಿಳು ಮಾತ್ರಲ್ಲದೇ ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಕೂಡ ನಟಿಸಿದ್ದ ಬಿಂದು ಘೋಷ್ 1982ರಲ್ಲಿ ಅವರು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ಬಿಂದು ನಟಿಸಿದ ಮೊದಲ ಸಿನಿಮಾ ‘ಕೋಳಿ ಕೂವುದು’. ಅದರಲ್ಲಿ ಪ್ರಭು ಗಣೇಶನ್ ನಾಯಕ ನಟನಾಗಿದ್ದರು. ಮೊದಲ ಸಿನಿಮಾದ ನಂತರ ಬಿಂದು ಘೋಷ್ ಅವರಿಗೆ ಸಾಕಷ್ಟು ಅವಕಾಶಗಳು ಸಿಕ್ಕವು. ಉರುವಂಗಲ್ ಮಲರಂ, ಡೌರಿ ಕಲ್ಯಾಣಂ, ತಲೈ ಮಗನ್, ಸೂರಕೊಟ್ಟೈ ಸಿಂಗಕುಟ್ಟಿ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದರು. ರಜನಿಕಾಂತ್, ಕಮಲ್ ಹಾಸನ್, ಶಿವಾಜಿ ಗಣೇಶನ್, ವಿಜಯಕಾಂತ್, ಪ್ರಭು ಗಣೇಶನ್ ಮುಂತಾದ ನಟರ ಜೊತೆ ಬಿಂದು ಘೋಷ್ ಅವರು ಅಭಿನಯಿಸಿದ್ದರು.

‘ವೇಳೈ ಪುರ ಒಂಡ್ರು’ ಸಿನಿಮಾದಲ್ಲಿನ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು. ಬಿಂದು ಘೋಷ್‌ಗೆ 76 ವರ್ಷ ವಯಸ್ಸಾಗಿತ್ತು. ಬಿಂದು ಇನ್ನಿಲ್ಲ ಎಂಬುದನ್ನು ತಿಳಿದು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಅನಾರೋಗ್ಯಕ್ಕೆ ಒಳಗಾದ ಬಿಂದು ಅವರಿಗೆ ಆರ್ಥಿಕ ಸಂಕಷ್ಟ ಕೂಡ ಉಂಟಾಗಿತ್ತು. ಅವರ ಚಿಕಿತ್ಸೆಗೆ ಚಿತ್ರರಂಗದ ಕೆಲವರು ಸಹಾಯ ಮಾಡಿದ್ದರು. ನಟ ಬಾಲ, ರಿಚರ್ಡ್​ ಮತ್ತು ರಾಮಲಿಂಗಂ ಅವರು ಆರ್ಥಿಕ ಬೆಂಬಲ ನೀಡಿದ್ದಕ್ಕೆ ಬಿಂದು ಅವರು ಧನ್ಯವಾದ ತಿಳಿಸಿದ್ದರು.

Continue Reading

FILM

ನಗುಮೊಗದೊಡೆಯನ 50ನೇ ವರ್ಷದ ಜನ್ಮದಿನ; ಅಪ್ಪು ಸಮಾಧಿಗೆ ಭೇಟಿ ನೀಡುತ್ತಿರುವ ಕುಟುಂಬಸ್ಥರು, ಅಭಿಮಾನಿಗಳು

Published

on

ರಾಜ್ಯದಾದ್ಯಂತ ಲಕ್ಷಾಂತರ ಅಭಿಮಾನಿಗಳು ನಟ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ 50ನೇ ವರ್ಷದ ಬರ್ತ್​ಡೇ ಆಗಿದ್ದರಿಂದ ಸ್ಪೆಷಲ್ ಆಗಿ ಆಚರಿಸುತ್ತಿದ್ದಾರೆ. ಪುನೀತ್‌ ಅವರ ಸಮಾಧಿ ಸ್ಥಳಕ್ಕೆ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ. ಇದೇ ಸಂದರ್ಭ ಮರುಬಿಡುಗಡೆಯಾಗಿರುವ ‘ಅಪ್ಪು’ ಸಿನಿಮಾ ಚಿತ್ರಮಂದಿರಗಳಲ್ಲಿ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿಯೂ ಸಹ ಪುನೀತ್ ಅವರಿಗೆ ಜನ್ಮದಿನದ ಶುಭಾಶಯ ಕೋರುವ ಮೂಲಕ ಸರ್ವರೂ ಅಪ್ಪುವನ್ನು ಸ್ಮರಿಸುತ್ತಿದ್ದಾರೆ.

ಕರುನಾಡ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ ಇಂದು ನಮ್ಮೊಂದಿಗೆ ಇದ್ದಿದ್ದರೆ ಅದ್ದೂರಿಯಾಗಿ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಅವರಿಲ್ಲದೇ ಅಭಿಮಾನಿಗಳು ಜನ್ಮದಿನ ಆಚರಿಸುವಂತಾಗಿದೆ. ಪ್ರತಿವರ್ಷ ಮಾರ್ಚ್​ 17 ಬಂತೆಂದರೆ ʼಅಪ್ಪುʼ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಪುನೀತ್ ಅವರ ಬರ್ತ್​ಡೇ ಪ್ರಯುಕ್ತ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾರೆ. ಈ ಬಾರಿಯೂ ಅದು ಮುಂದುವರಿದಿದೆ. ಅನ್ನದಾನ, ರಕ್ತದಾನ, ನೇತ್ರದಾನ ಸೇರಿದಂತೆ ಅನೇಕ ಕಾರ್ಯಗಳನ್ನು ರಾಜ್ಯಾದ್ಯಂತ ಕೈಕೊಳ್ಳುತ್ತಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ʼಅಪ್ಪುʼ ನೀಡಿದ ಕೊಡುಗೆಯನ್ನ ಮರೆಯುವಂತಿಲ್ಲ. ಬಾಲನಟನಾಗಿಯೇ ಅಭಿಮಾನಿಗಳ ಮನಗೆದ್ದಿದ್ದ ಪುನೀತ್ ಹೀರೋ ಆಗಿಯೂ ಮೊದಲ ಚಿತ್ರದಿಂದಲೇ ಯಶಸ್ಸು ಕಂಡರು. ಅಭಿನಯ, ಡ್ಯಾನ್ಸ್, ಫೈಟಿಂಗ್​ನಲ್ಲಿ ಪುನೀತ್‌ಗೆ ಸರಿಸಾಟಿ ಯಾರೂ ಇರಲಿಲ್ಲ. ಅದೇ ರೀತಿ ಜನಪರ ಕಾರ್ಯಗಳ ಮೂಲಕವೂ ಅವರು ‘ರಿಯಲ್ ಹೀರೋ’ ಎನಿಸಿಕೊಂಡಿದ್ದರು. ಪುನೀತ್‌ ಅವರ ಗುಣಗಳೇ ಕೋಟ್ಯಂತರ ಅಭಿಮಾನಿಗಳಿಗೆ ಮಾದರಿ ಆಗಿವೆ. ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಪುನೀತ್ ಅವರು ಸಕ್ರಿಯರಾಗಿದ್ದರು. ತಮ್ಮ ‘PRK ಪ್ರೊಡಕ್ಷನ್ಸ್’ ಮೂಲಕ ಅವರು ಹಲವಾರು ಸಿನಿಮಾಗಳನ್ನು ನಿರ್ಮಿಸುವ ಗುರಿ ಹೊಂದಿದ್ದರು. ಈ ಒಂದು ಕಾಯಕವನ್ನು ಇದೀಗ ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮುಂದುವರಿಸುತ್ತಿದ್ದಾರೆ. ಜನ್ಮದಿನದ ಪ್ರಯುಕ್ತ ಅನೇಕರು ʼಅಪ್ಪುʼ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ.

Continue Reading

FILM

ರೆಬೆಲ್‌ ಸ್ಟಾರ್‌ ಅಂಬರೀಶ್ ಮೊಮ್ಮಗನ ಹೆಸರೇನು ಗೊತ್ತಾ?

Published

on

ಬೆಂಗಳೂರು: ಅಭಿಷೇಕ್-ಅವಿವಾಗೆ 2024ರ ನವೆಂಬರ್ 12ರಂದು ಗಂಡು ಮಗು ಜನಿಸಿತ್ತು. ಈ ಮಗುವಿಗೆ ಇಂದು ನಾಮಕರಣ ಶಾಸ್ತ್ರ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ ಒಂದರಲ್ಲಿ ಬಹಳ ಅದ್ದೂರಿಯಾಗಿ ನಾಮಕರಣ ಶಾಸ್ತ್ರ ನೆರವೇರಿದೆ.

ಇನ್ನು ರಬೆಲ್ ಅಂಬರೀಶ್ ಮೊಮ್ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ. ಅಭೀಷೇಕ್ ಅವರು ತಮ್ಮ ಮಗುವಿಗೆ ಅಪ್ಪನ ಮೂಲ ಹೆಸರನ್ನೇ ಹಿಟ್ಟಿದ್ದಾರೆ. ಅಂಬರೀಶ್ ಅವರ ಮೂಲ ಹೆಸರು ಅಮರ್‌ನಾಥ್ ಎಂದು ಆಗಿತ್ತು. ಹೀಗಾಗಿ ಈ ಹೆಸರನ್ನೇ ಆಯ್ಕೆ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅಂಬರೀಶ್‌ನ ಆಪ್ತವಲಯದವರು ಹಾಗೂ ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

Continue Reading
Advertisement

Trending

Copyright © 2025 Namma Kudla News

You cannot copy content of this page