Connect with us

LATEST NEWS

ಒಂದೆಡೆ ಕೊರಗಜ್ಜ ವೇಷದ ಟ್ಯಾಬ್ಲೋ…ಮತ್ತೊಂದೆಡೆ ಹರಕೆ ರೂಪದಲ್ಲಿ ನೀಡಿದ ಮದ್ಯದ ಬಾಟಲು ಕದಿಯುವ ಯತ್ನ!

Published

on

ಉಡುಪಿ : ಬಬ್ಬು ಸ್ವಾಮಿ ಹಾಗೂ ಪರಿವಾರ ದೈವಗಳ ಸನ್ನಿಧಿಯಲ್ಲಿ ಕೊರಗಜ್ಜನ ವೇಷ ಧರಿಸಿ ಅವಮಾನ ಮಾಡಿದ್ದು ಮಾತ್ರವಲ್ಲದೇ, ಹರಕೆ ರೂಪದಲ್ಲಿ ದೈವಕ್ಕೆ  ಸಮರ್ಪಿಸಿದ ಮದ್ಯವನ್ನು ಕದಿಯಲೆತ್ನಿಸಿದ ಯುವಕನಿಗೆ ಭಕ್ತರು ಧರ್ಮದೇಟು ನೀಡಿರುವ ಘಟನೆ ಶನಿವಾರ (ಫೆ.22)  ಉಡುಪಿ ಜಿಲ್ಲೆಯ ನೆಲ್ಲಿಕಟ್ಟೆಯಲ್ಲಿರುವ ಬಬ್ಬು ಸ್ವಾಮಿ ಹಾಗೂ ಪರಿವಾರ ದೈವಗಳ ಸನ್ನಿಧಿಯಲ್ಲಿ ನಡೆದಿದೆ.

ಟ್ಲಾಬ್ಲೊ ಮೆರವಣಿಗೆ ಮಾಡಿ ದೈವಕ್ಕೆ ಅವಮಾನ :

ಕರವಾಳಿ ಅಂದ್ರೆ ದೈವ ಆರಾಧನೆ ತವರೂರು.ಇಲ್ಲಿಯ ಜನ ದೇವರ ಮೇಲೆ ಎಷ್ಟು ಭಕ್ತಿ ಹೊಂದಿದ್ದಾರೆ ಗೊತ್ತಿಲ್ಲ ಅದ್ರೆ ದೈವ ಆರಾಧನೆ ಅಪಾರವಾದ ನಂಬಿಕೆಯನ್ನು ಹೊಂದಿದ್ದಾರೆ. ಹಾಗಾಗಿ ದೈವಗಳಿಗೆ ಅಪಮಾನವಾದರೆ ಸಹಿಸುವುದಿಲ್ಲ. ಇದೀಗ ದೈವಕ್ಕೆ ತೀವ್ರ ಅವಮಾನವಾಗುವ ಘಟನೆಯೊಂದು ಉಡುಪಿ ನಗರದಲ್ಲಿ ನಡೆದಿದ್ದು, ಮೆರವಣಿಗೆ ಒಂದರಲ್ಲಿ ತೆರಳುತ್ತಿದ್ದ ಟ್ಯಾಬ್ಲೊದಲ್ಲಿ ಕೊರಗಜ್ಜನ ವೇಷ ಹಾಕಿ ಇದ್ದದನ್ನು ಕಂಡು ಸಾರ್ವಜನಿಕರು ತಡೆದಿದ್ದಾರೆ. ‘ದೈವ ಆರಾಧನೆ ನೆಲದಲ್ಲಿ ದೈವಗಳಿಗೆ ಅಪಮಾನ ಅಗಬಾರದು. ನಮ್ಮ ನಂಬಿಕೆಯನ್ನು ಶ್ರದ್ಧೆಯನ್ನು ಅವಮಾನಿಸುವುದನ್ನು ಎಲ್ಲ ಕಡೆಯಲ್ಲಿ ತಡೆಯಬೇಕು’ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರಗಜ್ಜನಿಗೆ ನೀಡಿದ ಬಾಟಲಿ ಕಳ್ಳತನ ಯತ್ನ :

ಕಷ್ಟ ಬಂದಾಗ ಕರವಾಳಿ ಮಂದಿ ದೈವದ ಮೊರೆಹೋಗುತ್ತಾರೆ. ಅದರಲ್ಲೂ ಹೆಚ್ಚಿನವರು ಕಷ್ಟ ಪರಿಹಾರಕ್ಕಾಗಿ ಕೊರಗಜ್ಜನ ಮೊರೆಹೋಗುತ್ತಾರೆ. ಅಂತೆಯೇ ನೆಲ್ಲಿಕಟ್ಟೆಯಲ್ಲಿರುವ ಬಬ್ಬು ಸ್ವಾಮಿ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಶನಿವಾರ ರಾತ್ರಿ ನಡೆದಿತ್ತು. ಸಾವಿರಾರು ಮಂದಿ ಭಕ್ತರು ಕೊರಗಜ್ಜನ ಸನ್ನಿಧಿಯಲ್ಲಿ ಸಂಪ್ರದಾಯದ ಪ್ರಕಾರ ಮದ್ಯದ ಬಾಟಲುಗಳನ್ನು ಹರಕೆ ರೂಪದಲ್ಲಿ ನೀಡುತ್ತಿದ್ದರು. ಈ ಸಂದರ್ಭ ಓರ್ವ ಕುಡುಕ ಬಾಟಲಿ ಎಗರಿಸಲು ಯತ್ನಿಸಿದ್ದನ್ನು ಗಮನಿಸಿದ ಕೆಲವರು ಯುವಕನಿಗೆ ಗದರಿಸಿದ್ದಾರೆ. ತಕ್ಷಣವೇ ಭಯಭೀತನಾದ ಯುವಕ ಮದ್ಯದ ಬಾಟಲಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆದರೆ ದೈವದ ಕಾರ್ಣಿಕವೆಂಬಂತೆ ಆ ವಳೆ ರೆಡ್‌ಹ್ಯಾಂಡಾಗಿ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ.

BELTHANGADY

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ; ಮೂವರು ಗಂಭೀರ

Published

on

ಬೆಳ್ತಂಗಡಿ : ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದು ಮೂವರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ಸಮಿಪದ ಗುರುವಾಯನಕೆರೆ-ಕಾರ್ಕಳ ರಸ್ತೆಯ ಅಳದಂಗಡಿಯ ಕೆದ್ದುವಿನಲ್ಲಿ ನಿನ್ನೆ (ಏ.21) ಸಂಜೆ ನಡೆದಿದೆ.

ಅಳದಂಗಡಿಯಿಂದ ಗುರುವಾಯನಕೆರೆ ಕಡೆ ಹೋಗುತ್ತಿದ್ದ ಕಾರು ಹಾಗೂ ಗುರುವಾಯನಕೆರೆಯಿಂದ ಕಾರ್ಕಳದತ್ತ ಪ್ರಯಾಣ ಮಾಡುತ್ತಿದ್ದ ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದೆ.

ಈ ಘಟನೆಯಲ್ಲಿ ಗೇರುಕಟ್ಟೆಯ ಕುಸುಮಾವತಿ (75), ಭಾಗ್ಯವತಿ (50), ವೈಭವ್‌ (23) ಎಂಬುವವರು ಗಂಭೀರ ಗಾಯಗೊಂಡಿದ್ದು, ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Continue Reading

LATEST NEWS

ಕಾಣಿಕೆ ಡಬ್ಬಿ ಒಡೆದು ಕಳ್ಳತನ; ಕಿಡಿಗೇಡಿಗಳು ಪರಾರಿ

Published

on

ಮಲ್ಪೆ : ಕರಾವಳಿ ದೈವ, ದೇವರ ಆರಾಧನೆಗೆ ಹೆಸರಾದ ನಾಡು. ಆದರೆ ಇಂತಹ ಪುಣ್ಯ ಭೂಮಿಯಲ್ಲೂ ದುಷ್ಕೃತ್ಯಗಳು ಹೆಚ್ಚಾಗುತ್ತಿದೆ. ಇದೀಗ ದೈಸ್ಥಾನದ ಡಬ್ಬಿಯನ್ನೇ ಹೊಡೆದು , ಕಳ್ಳತ ಮಾಡಿ, ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.

ಮಲ್ಪೆಯ ಕೊಡವೂರು ಪಾಳೆಕಟ್ಟೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ದೇವರಬೆಟ್ಟು ಆವರಣ ಗೋಡೆಯ ಹೊರಭಾಗದಲ್ಲಿ ಇಟ್ಟಿದಂತಹ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿರುವ ಹಣವನ್ನು ಕಳವು ಮಾಡಿ ಖದೀಮರು ಪರಾರಿಯಾಗಿದ್ದಾರೆ.

ಎ.19 ರಂದು ಸಂಜೆ 6 ರಿಂದ 8.45 ರ ಸುಮಾರಿಗೆ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಕಾಣಿಕೆ ಡಬ್ಬಿಯಲ್ಲಿದ್ದ 15ಸಾವಿರ ಹಣ ಕಳವು ಮಾಡಲಾಗಿರುವ ಕುರಿತು ಮಲ್ಪೆ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ತಿಳಿಸಲಾಗಿದೆ.

Continue Reading

bangalore

ಜನಿವಾರಕ್ಕೆ ಕತ್ತರಿ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು : ಸಿಎಂ ಸಿದ್ಧರಾಮಯ್ಯ

Published

on

ಬೆಂಗಳೂರು : ಈಗಾಗಲೇ ರಾಜ್ಯದಾದ್ಯಂತ ಸದ್ದು ಮಾಡುತ್ತಿರುವ ಜನಿವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಡೆದ ಪ್ರೆಸ್‌ಮೀಟ್‌ನಲ್ಲಿ ಸಿ.ಎಂ.ಸಿದ್ಧರಾಮಯ್ಯ ಮಾತನಾಡಿದ್ದಾರೆ. “ಸಿಇಟಿ ಪರೀಕ್ಷೆ ವೇಳೆ ಬೀದರ್, ಶಿವಮೊಗ್ಗ, ಸಾಗರ, ಧಾರವಾಡಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರಕ್ಕೆ ಕತ್ತರಿ ಹಾಕಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಮುಖ್ಯಮಂತ್ರಿ ತಿಳಿಸಿದರು.

ಜನಿವಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು :

“ವಿದ್ಯಾರ್ಥಿಗಳ ಜನಿವಾರ ಕತ್ತರಿಸಿರುವ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ತೆಗೆದುಕೊಳ್ಳಬೇಕು. ಜನಿವಾರವನ್ನು ಕೇವಲ ಬ್ರಾಹ್ಮಣ ಸಮಾಜದವರಷ್ಟೇ ಹಾಕುವುದಿಲ್ಲ. ಬೇರೆ ಬೇರೆ ಸಮುದಾಯಗಳು ಪವಿತ್ರ ದಾರವನ್ನು ಧರಿಸುತ್ತಿದ್ದಾರೆ. ಆ ಎಲ್ಲ ಸಮುದಾಯಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

ಜನಿವಾರ ಪ್ರಕರಣಕ್ಕೆ ಶಾಶ್ವತ ಪರಿಹಾರ :

ಸಿಇಟಿಯಲ್ಲಿ ನಡೆದ ಜನಿವಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಸರಕಾರ, ಈ ಸಂಬಂಧ ಪ್ರತ್ಯೇಕ ತಜ್ಞರ ಸಮಿತಿ ರಚಿಸಲು ನಿರ್ಧರಿಸಿದೆ. ಇಂಥ ಘಟನೆ ಪುನರಾವರ್ತನೆ ಆಗದಿರಲು ಶಾಶ್ವತ ಪರಿಹಾರ ಕಂಡು ಕೊಳ್ಳಲು ಈಗ ಸರಕಾರ ಪ್ರತ್ಯೇಕ ತಜ್ಞರ ಸಮಿತಿ ರಚಿಸಲು ಉದ್ದೇಶಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page