Connect with us

bangalore

ಬರಹದ ಮೂಲಕ ಮಹಿಳೆಯರಿಗೆ ಧೈರ್ಯ ತುಂಬಿದ ಆಟೋ ಡ್ರೈವರ್; ಅಂತದ್ದೇನಿದೆ?

Published

on

ಬೆಂಗಳೂರು: ಇತ್ತೀಚೆಗೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಹಾಗೂ ವಿವಿಧ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವ ಹಲವು ಉದಾಹರಣೆಗಳು ಇದೆ. ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ಬರುವ ಮಹಿಳೆಯರಲ್ಲಿ ಅಸುರಕ್ಷತೆಯ ಭಾವನೆ ಹೆಚ್ಚಾಗಿದೆ.


ಇಂತಹ ವಾತಾವರಣದ ನಡುವೆ ಬೆಂಗಳೂರಿನಲ್ಲಿ ಓರ್ವ ಆಟೋ ಚಾಲಕನ ವ್ಯಕ್ತಿತ್ವ ಎಲ್ಲರ ಗಮನ ಸೆಳೆದಿದೆ. ಚಾಲಕನ ಹಿಂದಿನ ಭಾಗದಲ್ಲಿ, ನಾನೂ ಒಬ್ಬ ಅಣ್ಣ/ತಂದೆ. ನಿಮ್ಮ ಸುರಕ್ಷತೆಯೇ ಮುಖ್ಯ. ಆರಾಮವಾಗಿ ಕುಳಿತುಕೊಳ್ಳಿ ಎಂದು ಬರೆದು ಆಟೋ ಚಾಲಕರೊಬ್ಬರು ಪ್ರಯಾಣಿಕರಿಗೆ ಧೈರ್ಯ ತುಂಬಿದ್ದಾರೆ.

ಈ ರೀತಿಯ ಬರಹವನ್ನು ಗಮನಿಸಿದ ಯುವತಿಯೊಬ್ಬರು, ರಾತ್ರಿ 12 ಗಂಟೆಗೆ ರ್ಯಾಪಿಡೊ ಆಟೋದಲ್ಲಿ ಪ್ರಯಾಣಿಸುತ್ತಿದ್ದೆ. ಆಟೋದಲ್ಲಿ ಕುಳಿತ ತಕ್ಷಣ ಈ ಬರಹ ಓದಿದೆ. ಆಗ ನನಗೆ ನಿಜವಾಗಿಯೂ ಸುರಕ್ಷಿತ ಭಾವನೆ ಮೂಡಿತು ಎಂದು ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವಿಳಾಸ ಕೇಳುವ ನೆಪದಲ್ಲಿ ವೃದ್ಧೆ ಕುತ್ತಿಗೆಯಿಂದ ಚಿನ್ನದ ಸರ ದೋಚಿದ ಕಳ್ಳರು

ಆದರೆ, ಆಟೋ ಚಾಲಕನ ಹೆಸರು, ವಿವರಗಳನ್ನು ಅವರು ಹಂಚಿಕೊಂಡಿಲ್ಲ. ಆತನ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

bangalore

ಕೆಎಸ್ಆರ್‌ಟಿಸಿ ಬಸ್‌-ಬೊಲೆರೋ ಪಿಕ್-ಅಪ್ ಡಿಕ್ಕಿ: ಚಾಲಕನ ಜೀವ ಉಳಿದಿದ್ದೇ ಒಂದು ಪವಾಡ

Published

on

ನೆಲಮಂಗಲ: ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ ಪಿಕ್‌-ಅಪ್‌ ಕೆಎಸ್‌ಆರ್‌ಟಿಸಿ ಬಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಘಟನೆ ನೆಲಮಂಗಲ ತಾಲೂಕಿನ ಕೆರೆಕತ್ತಗಿನೂರು ಗೇಟ್‌ ಬಳಿ ಬುಧವಾರ(ಜ.14) ನಡೆದಿದೆ.


ಅದೃಷ್ಟವಶಾತ್‌, ಬೊಲೆರೋ ಪಿಕ್‌-ಅಪ್‌ ಚಾಲಕ ಪವಾಡ ಎಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಪಿಕ್‌-ಅಪ್‌ನ ಮುಂಬಾಗ ಹಾನಿಗೊಳಗಾಗಿದೆ. ಎರಡು ದಿನದ ಹಿಂದೆ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಭೀಕರ ಅಪ*ಘಾತಕ್ಕೆ ಮೂವರು ವಿದ್ಯಾರ್ಥಿಗಳು ಬ*ಲಿ

ಈ ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿ ನಡೆದಿದೆ.

Continue Reading

bangalore

ಅಪಘಾತವೆಂದು ಬಿಂಬಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳ ರಹಸ್ಯ ಬಯಲು

Published

on

ಬೆಂಗಳೂರು: ಸಿನಿಮೀಯಾ ಶೈಲಿಯಲ್ಲಿ ಸೃಷ್ಟಿಸಲಾದ ಅಪಘಾತದ ಹಿಂದಿನ ರಹಸ್ಯ ಬಯಲಾಗಿದೆ. ಅಪಘಾತದ ನೆಪದಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡಲು ಪ್ಲಾನ್‌ ಹಾಕಿದ್ದ ತಂಡವೊಂದು, ಟೆಂಪೋದಿಂದ ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ಆತನ ಮೇಲೆ ಹಲ್ಲೆ ಮಾಡಿರುವ ಘಟನೆ ಚಿಕ್ಕಜಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಸೈಯದ್‌ ಯಾಸೀನ್‌ ಹಲ್ಲೆಗೊಳಗಾದ ವ್ಯಕ್ತಿ. ಜನವರಿ 7ರಂದು ಸಂಜೆ ಯಾಸೀನ್‌ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಉದ್ದೇಶ ಪೂರ್ವಕವಾಗಿ ಹಿಂಬದಿಯಿಂದ ಬಂದ ಟೆಂಪೋ ಬೈಕ್‌ಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಈ ಅಪಘಾತವನ್ನು ಸಂಚಾರಿ ನಿಯಮ ಉಲ್ಲಂಘನೆ ಎಂದು ಭಾವಿಸಿ ಚಿಕ್ಕಜಾಲ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆದರೆ, ಇದೀಗ ಯಾಸೀನ್‌ನ ವೈದ್ಯಕೀಯ ರಿಪೋರ್ಟ್‌ ಪೊಲೀಸರ ತನಿಖೆಯ ದಿಕ್ಕನ್ನೇ ತಿರುಗಿಸಿದೆ. ದೇಹದ ಮೇಲಿನ ಅಪಘಾತದ ಗಾಯಗಳನ್ನು ಹೊರತು ಪಡಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಗಂಭೀರ ಗುರುತುಗಳು ಪತ್ತೆಯಾಗಿವೆ. ಕಾಲಿನ ಮೂಳೆ ಮುರಿತದ ಜತೆಗೆ ಹೊಟ್ಟೆ ಮತ್ತು ಕುತ್ತಿಗೆಯ ಭಾಗದಲ್ಲಿ ತೀವ್ರವಾದ ಗಾಯಗಳಿದ್ದವು. ಡಿಕ್ಕಿ ಹೊಡೆದ ಬಳಿಕ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವುದಾಗಿ ಖಚಿತವಾಗಿದೆ.

ಇದನ್ನೂ ಓದಿ: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ 3 ಮೊಬೈಲ್‌ ಸಹಿತ ಸಿಮ್‌, ಚಾರ್ಜರ್‌ ಪತ್ತೆ

ಯಾಸೀನ್‌ನ ತಂದೆ ನೀಡಿದ ದೂರಿನ ಅನುಸಾರ, ಪೊಲೀಸರು ಕೆಹಕಶನ್ ಖಾಲಿದ್, ಫರ್ಹಾನ್ ಖಾಲಿದ್, ಉಸ್ಮಾನ್, ಹಾಶಿಮ್ ಮತ್ತು ಸೈಯದ್ ರಾಹಬೆರ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮದುವೆಯಾದ ಬಳಿಕ ಉಂಟಾದ ವೈಯಕ್ತಿಕ ದ್ವೇಷವೇ ಈ ಕೊಲೆಯ ಸಂಚಿಗೆ ಮೂಲ ಕಾರಣ ಎಂದು ಆರೋಪಿಸಲಾಗಿದೆ. ಚಿಕ್ಕಜಾಲ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Continue Reading

bangalore

ಅರ್ಧಂಬರ್ಧ ಬಟ್ಟೆ ಹಾಕ್ಬೇಡ ಅಂದಿದ್ದೇ ತಪ್ಪಾಯ್ತ-ವೃದ್ಧ ಮಹಿಳಾ ಹೋಮ್ ಗಾರ್ಡ್ ಮೇಲೆ ಯುವತಿ ಹಲ್ಲೆ

Published

on

ಬೆಂಗಳೂರು: ತುಂಡುಡುಗೆ ಹಾಕಿ ರಸ್ತೆಯಲ್ಲಿ ಓಡಾಡುತ್ತಿದ್ದ ಯುವತಿಯೊಬ್ಬಳಿಗೆ ಸರಿಯಾಗಿ ಬಟ್ಟೆ ಹಾಕಿಕೊಳ್ಳಿ ಬುದ್ಧಿವಾದ ಹೇಳಿದ ಗೃಹ ರಕ್ಷಕ ದಳದ ವೃದ್ಧ ಮಹಿಳಾ ಸಿಬ್ಬಂದಿಯ ಮೇಲೆ ಯುವತಿಯೋರ್ವಳು ಹಲ್ಲೆ ನಡೆಸಿದ್ದು ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಬೆಂಗಳೂರಿನ ಕೆ.ಆರ್‌.ಪುರಂ ಬಳಿ ಈ ಘಟನೆ ನಡೆದಿದೆ. ದಾಮಿನಿ ಹಲ್ಲೆ ನಡೆಸಿದ ಆರೋಪಿ ಯುವತಿ.

ವಯೋವೃದ್ದ ಮಹಿಳೆಗೆ ಮೂಗು, ಮುಖದಲ್ಲಿ ರಕ್ತ ಬಂದಿದೆ. ಕಳೆದ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ತುಂಡುಡುಗೆ ಹಾಕಿಕೊಂಡು ಹೋಗುತ್ತಿದ್ದ ಯುವತಿಯ ಮೇಲೆ ಕೆಲ ಯುವಕರು ಅನುಚಿತವಾಗಿ ವರ್ತಿಸಲು ಯತ್ನಿಸಿದ್ದು ಈ ವೇಳೆ ಆ ಯುವಕರಿಂದ ಯುವತಿಯನ್ನು ಇದೇ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಲಕ್ಷ್ಮಿ ನರಸಮ್ಮ ರಕ್ಷಿಸಿದ್ದಾರೆ. ಬಳಿಕ ಯುವತಿಗೆ ಬುದ್ದಿವಾದ ಹೇಳೋಣ ಎಂದು ಕೆಲ ಮಾತುಗಳನ್ನು ಹೇಳಿದ್ದಾರೆ.

ಈ ರಸ್ತೆಯಲ್ಲಿ ಹುಡುಗರು ಕೆಟ್ಟದ್ದಾಗಿ ವರ್ತಿಸುತ್ತಾರೆ. ನೀವು ಸರಿಯಾಗಿ ಒಳ್ಳೆಯ ಬಟ್ಟೆ ಹಾಕಿಕೊಂಡು ಓಡಾಡಿ. ಯಾರಾದರೂ ಹುಡುಗಿಯರು ಸಿಗ್ತಾರಾ ಎಂದು ಹುಡುಗರು ಕಾಯುತ್ತಿರುತ್ತಾರೆ ಎಂದು ಹೋಮ್ ಗಾರ್ಡ್ ಸಿಬ್ಬಂದಿ ಲಕ್ಷ್ಮಿ ನರಸಮ್ಮ, ಯುವತಿಗೆ ಹೇಳಿದ್ದಾರೆ. ಇದರಿಂದ ಸಿಟ್ಟಾದ ದಾಮಿನಿ ಅಲಿಯಾಸ್ ಮೋಹಿನಿ ತಕ್ಷಣವೇ ಹೋಮ್ ಗಾರ್ಡ್ ಸಿಬ್ಬಂದಿ ಲಕ್ಷ್ಮಿ ನರಸಮ್ಮ ಅವರ ತಲೆ ಕೂದಲು ಜುಟ್ಟು ಹಿಡಿದುಕೊಂಡು ಎಳೆದಾಡಿ ಹೊಡೆದಿದ್ದಾರೆ. ಇದರಿಂದ ಲಕ್ಷ್ಮಿ ನರಸಮ್ಮ ಅವರ ಮುಖ, ಮೂಗಿನಲ್ಲಿ ರಕ್ತ ಬಂದಿದೆ. ತಕ್ಷಣವೇ ಸ್ಥಳದಲ್ಲಿದ್ದ ಜನರು ಬಂದು ಈ ಯುವತಿಯಿಂದ ಲಕ್ಷ್ಮಿ ನರಸಮ್ಮ  ಅವರನ್ನು ಬಿಡಿಸಿ ರಕ್ಷಿಸಿದ್ದಾರೆ. ಬಳಿಕ ಹೋಮ್ ಗಾರ್ಡ್ಸ್ ಸಿಬ್ಬಂದಿ ಲಕ್ಷ್ಮಿ ನರಸಮ್ಮ ತಮ್ಮ ಮೇಲೆ ಹಲ್ಲೆ ಮಾಡಿದ ಯುವತಿ ದಾಮಿನಿ ಅಲಿಯಾಸ್ ಮೋಹಿನಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.


ಬಳಿಕ ಪೊಲೀಸರು ಬಂದು ದಾಮಿನಿ ಅಲಿಯಾಸ್ ಮೋಹಿನಿಯನ್ನು ಬಂಧಿಸಿದ್ದಾರೆ. ಬಳಿಕ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಕೋರ್ಟ್ ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದೆ. ಪದವೀಧರೆಯಾಗಿದ್ದರೂ ಕನಿಷ್ಠ ಸೌಜನ್ಯ, ಹಿರಿಯರಿಗೆ ಗೌರವ ಕೊಡುವ ಬುದ್ಧಿ ಇರುತ್ತಿದ್ದರೆ ಈ ಸಂಕಷ್ಟಕ್ಕೆ ಸಿಲುಕುತ್ತಿರಲಿಲ್ಲವೇನೋ…

Continue Reading
Advertisement

Trending

Copyright © 2025 Namma Kudla News

You cannot copy content of this page