Connect with us

LATEST NEWS

ಮೂರನೇ ದಾಖಲೆ ಬರೆದ ಉಡುಪಿಯ ಕಲಾವಿದ; ವರ್ಲ್ಡ್ ರೆಕಾರ್ಡ್ ಸೇರಿದ ಅಪೂರ್ವ ಕಲಾಕೃತಿ

Published

on

ಉಡುಪಿ : ಅಶ್ವತ್ಥದ ಎಲೆಯಲ್ಲಿ ನಾನಾ ಸೆಲೆಬ್ರಿಟಿಗಳ ಚಿತ್ರ ಬಿಡಿಸುವ ಮೂಲಕ ಗಮನ ಸೆಳೆದಿರುವ ಉಡುಪಿಯ ಕಲಾವಿದ ಮಹೇಶ್ ಮರ್ಣೆ ಅವರ ಸಾಧನೆಗೆ ಮತ್ತೊಂದು ಗೌರವ ದಕ್ಕಿದೆ. ಮೂರನೇ  ದಾಖಲೆಯ ಗರಿಯೊಂದನ್ನು ಮುಡಿಗೇರಿಸಿಕೊಂಡಿದ್ದಾರೆ.

ಉಡುಪಿಯ ಮರ್ಣೆ ಗ್ರಾಮದ ಶ್ರೀಧರ ಆಚಾರ್ಯ ಮತ್ತು ಲಲಿತ ದಂಪತಿ ಪುತ್ರರಾದ ಕಲಾವಿದ ಮಹೇಶ್ ಮರ್ಣೆ, ಇತ್ತೀಚಿಗೆ ಎರಡು ಗಂಟೆ 30 ನಿಮಿಷಗಳ ಕಾಲ ಉರಿ ಬಿಸಿಲಿನಲ್ಲಿ ಕುಳಿತು ಅಪರೂಪದ ಚಿತ್ರ ಒಂದನ್ನು ರಚಿಸಿದ್ದರು. ಸೂರ್ಯನ  ಕಿರಣಗಳಿಂದ ಮರದ ಹಲಗೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು  ಅವರ ಭಾವಚಿತ್ರವನ್ನು ಚಿತ್ರಿಸಿದ್ದರು. ಈ ಕಲಾಕೃತಿಯನ್ನು ರಾಷ್ಟ್ರಪತಿ ಮೆಚ್ಚಿ ಸಂದೇಶ ಕಳುಹಿಸಿದ್ದರು.

ಇದನ್ನೂ ಓದಿ  : ಎಲಿಮಿನೇಟ್ ಆದ ಸ್ಪರ್ಧಿಗಳ ರೀ ಎಂಟ್ರಿ; ಕುತೂಹಲ ಕೆರಳಿಸಿದ ಎಲಿಮಿನೇಷನ್

ಇದೀಗ ಈ ಕಲಾಕೃತಿಯು ಕಿಂಗ್ಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿದೆ. ಇದು ಮಹೇಶ್ ಮರ್ಣೆ ಹೆಸರಿಗೆ ಸೇರ್ಪಡೆಯಾದ ಮೂರನೇ ದಾಖಲೆಯಾಗಿದ್ದು, ಅವರ ಸುಪ್ರಸಿದ್ಧ ಕಲಾತ್ಮಕ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.

LATEST NEWS

3 ವರ್ಷದ ‌ಬಾಲಕಿಯ ಕೆನ್ನೆಗೆ ಬರೆ ಹಾಕಿದ ಅಂಗನವಾಡಿ ಕಾರ್ಯಕರ್ತೆ

Published

on

ಬಾಗಲಕೋಟೆ: 3 ವರ್ಷದ ಪುಟಾಣಿ ಮಗುವಿನ ಕೆನ್ನೆಯ ಮೇಲೆ ಅಡುಗೆ ಮಾಡುವ ಸೌಟಿನಿಂದ ಕೆನ್ನೆಗೆ ಬರೆ ಎಳೆದ ಘಟನೆ ಮುಧೋಳ ತಾಲೂಕಿನ ಗುಲಗಾ ಜಂಬಗಿ ಗ್ರಾಮದ ಅಂಗನವಾಡಿಯಲ್ಲಿ ನಡೆದಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಅಮಾನತು ಮಾಡಲಾಗಿದೆ.

ಮಗುವಿನ ಕೆನ್ನೆಯ ಮೇಲೆ ಅಂಗನವಾಡಿ ಸಹಾಯಕಿ ಶಾರವ್ವ ಪಂಚಗಾವಿ ಅಡುಗೆ ಮಾಡುವ ಸೌಟಿನಿಂದ ಕೆನ್ನೆಗೆ ಬರೆ ಎಳೆದಿದ್ದಳು. ಮನೆಗೆ ಬಂದ ಮಗಳ ಮುಖವನ್ನು ನೋಡಿ ಕೋಪಗೊಂಡ ತಂದೆ ಪ್ರದೀಪ್ ಬಾಗಲಿ ಅವ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾರೆ.

ಇವರ ದೂರನ್ನು ಆಧರಿಸಿ ತನಿಖೆ ನಡೆಸಲಾಗಿತ್ತು. ಬಳಿಕ ಮುಧೋಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಅಂಗನವಾಡಿ ಸಹಾಯಕಿ ಬಾಲಕಿ ಕೆನ್ನೆಗೆ ಬರೆ ಎಳೆದಿದ್ದು ದೃಢಪಟ್ಟಿದೆ.

ಕರ್ತವ್ಯ ನಿರ್ಲಕ್ಷ್ಯ ಎಸಗಿದ್ದಕ್ಕೆ ಅಂಗನವಾಡಿ ಸಹಾಯಕಿ ಶಾರವ್ವ ಪಂಚಗಾವಿ ಮತ್ತು ಕಾರ್ಯಕರ್ತೆ ಶೋಭಾ ಹೊಳೆಪ್ಪನವರ್ ಅವರನ್ನು ಮುಧೋಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Continue Reading

FILM

ನಟಿಯಾಗಿದ್ದ ಸಾಯಿಪಲ್ಲವಿ ಗಮನ ಈಗ ನಿರ್ದೇಶನದತ್ತ

Published

on

ಸಾಕಷ್ಟು ಮೇಕಪ್ ಮಾಡಿಕೊಂಡು, ಗ್ಲಾಮರಸ್ ಡ್ರೆಸ್ ಹಾಕಿಕೊಂಡು ನಟಿಯರು ಮಿಂಚುತ್ತಿರುವ ಈ ಕಾಲದಲ್ಲಿ ದಕ್ಷಿಣದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಸಾಯಿ ಪಲ್ಲವಿ ತಮ್ಮ ಸರಳತೆ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಪ್ರಸ್ತುತ ಸಾಯಿ ಪಲ್ಲವಿ ಅವರು ನಿರ್ದೇಶನದತ್ತ ಗಮನ ಹರಿಸುವ ಆಲೋಚನೆ ಹೊಂದಿದ್ದು, ಭವಿಷ್ಯದ ಯೋಜನೆಯ ಬಗ್ಗೆ ನಟ ನಾಗ ಚೈತನ್ಯ ಮಾತನಾಡಿದ್ದಾರೆ.

ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ ‘ಥಾಂಡೇಲ್’ ಸಿನಿಮಾ ಇಂದು (ಫೆ.7) ರಿಲೀಸ್ ಆಗಿದ್ದು, ಬಹು ನಿರೀಕ್ಷೆ ಸೃಷ್ಟಿಸಿದೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಅವರ ಪಾತ್ರ ಹೆಚ್ಚು ಹೈಲೈಟ್ ಆಗುವ ನಿರೀಕ್ಷೆ ಇದೆ. ಈ ಚಿತ್ರ ಪ್ರಚಾರ ವೇಳೆ ಅವರ ನಿರ್ದೇಶನದ ಪ್ಲ್ಯಾನ್ ಬಗ್ಗೆ ನಟ ಮಾತನಾಡಿದ್ದಾರೆ. ಸಂದರ್ಶನದ ವೇಳೆ ನೆರೆದಿದ್ದ ಅಭಿಮಾನಿಗಳಿಗೆ ಪ್ರಶ್ನೆ ಮಾಡಲು ಅವಕಾಶ ನೀಡಲಾಗಿದ್ದು, ಸಾಯಿ ಪಲ್ಲವಿ ಅವರಿಗೆ ‘ನೀವು ಫಿಲ್ಮ್ ಡೈರೆಕ್ಷನ್ ಮಾಡುವ ಸಾಧ್ಯತೆ ಇದೆಯೇ’ ಎಂದು ಕೇಳಲಾಯಿತು. ಇದಕ್ಕೆ ‘ಇಲ್ಲ’ ಎನ್ನುವ ಉತ್ತರವನ್ನು ಅವರು ನೀಡಿದರು. ‘ಇದು ಸುಳ್ಳು. ಒಂದು ಸಿನಿಮಾ ನಿರ್ದೇಶನ ಮಾಡಬಹುದು ಎಂದು ಅವರು ನನ್ನ ಬಳಿ ಹೇಳಿಕೊಂಡಿದ್ದಾರೆ. ನನ್ನನ್ನು ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳೋದಾಗಿಯೂ ಹೇಳಿದ್ದಾರೆ’ ಎಂದು ನಾಗ ಚೈತನ್ಯ ಅವರು ವಾದಿಸಿದಾಗ ‘ಅದು ನನಗೆ ನೆನಪಿದೆ’ ಎಂದು ಸಾಯಿ ಪಲ್ಲವಿ ಹೇಳಿದರು.

ಇದನ್ನೂ ಓದಿ : ಬಾಲಿವುಡ್ ಕಿಂಗ್ ಖಾನ್ ಪುತ್ರನಿಗೆ ಬೆಂಬಲ ನೀಡಿದ ಚಿತ್ರರಂಗ !

ಸಿನಿಮಾ ನಿರ್ದೇಶನದ ಮಾತುಕಥೆ ಮುಗಿದ ಬಳಿಕ, ಫ್ಯಾನ್ಸ್ಫ ಫುಲ್ ಥ್ರಿಲ್ ಆಗಿದ್ದಾರೆ. ಈ ಹೊಸ ಚಿತ್ರ ಶೀಘ್ರವೇ ಸೆಟ್ಟೇರಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಆದರೆ, ನಿರ್ದೇಶನ ಮಾಡೋದು ಅದು ಅಷ್ಟು ಸುಲಭದ ಮಾತಲ್ಲ. ಸಿನಿಮಾ ನಿರ್ದೇಶಿಸಲು ಸಾಕಷ್ಟು ಸಿದ್ಧತೆ ಬೇಕಾಗುತ್ತದೆ. ಆ ಬಳಿಕವೇ ಸಿನಿಮಾ ನಿರ್ದೇಶನಕ್ಕೆ ಇಳಿಯಬೇಕಾಗುತ್ತದೆ. ಸಾಯಿ ಪಲ್ಲವಿ ಅವರು ಸದ್ಯ ‘ರಾಮಾಯಣ’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಹಿಂದಿ ಭಾಷೆಯ ಈ ಚಿತ್ರದಲ್ಲಿ ಸೀತೆಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ.

Continue Reading

FILM

ಬಾಲಿವುಡ್ ಕಿಂಗ್ ಖಾನ್ ಪುತ್ರನಿಗೆ ಬೆಂಬಲ ನೀಡಿದ ಚಿತ್ರರಂಗ !

Published

on

ಮಂಗಳೂರು/ಮುಂಬೈ : ಸ್ಟಾರ್ ಹೀರೋಗಳ ಪುತ್ರರು ನಟನಾ ಪರಂಪರೆಯನ್ನು ಮುಂದುವರಿಸಿಕೊಂಡು ನಾಯಕರಾಗಿ ಪಾದಾರ್ಪಣೆ ಮಾಡುವುದು ಸಾಮಾನ್ಯ. ಆದರೆ, ಶಾರುಖ್ ಖಾನ್ ಅವರ ಮಗ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಹೌದು, ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ‘ದಿ ಬ್ಯಾಡಸ್ ಆಫ್ ಬಾಲಿವುಡ್’ ಎಂಬ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇದು ಒಟಿಟಿ (OTT) ಪ್ಲಾಟ್‌ಫಾರ್ಮ್, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ನೆಟ್‌ಫ್ಲಿಕ್ಸ್ ಹಾಗೂ ಶಾರುಖ್ ಅವರ ರೆಡ್ ಚಿಲ್ಲೀಸ್ ಸಹಯೋಗದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ.

ಇದನ್ನೂ ಓದಿ: ಸ್ವಂತ ಮಗಳ ಮೇಲೆಯೇ ಆತ್ಯಾಚಾರವೆಸಗಿ ಗರ್ಭವತಿ ಮಾಡಿದ ತಂದೆ

ಈ ಸಿನಿಮಾಗೆ ನಾಯಕ ನಟನಾಗಿ ‘ಕಿಲ್’ ಚಿತ್ರದ ಮೂಲಕ ಬ್ಲಾಕ್ ಬ್ಲಸ್ಟರ್ ಹಿಟ್ ಪಡೆದ ಲಕ್ಷ್ಯ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಸಹೇರ್ ಬಾಂಬಾ ನಟಿಸುತ್ತಿದ್ದಾರೆ. ಬಾಬಿ ಡಿಯೋಲ್ ಮತ್ತು ಮೋನಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ಮಿಂಚಲಿದ್ದಾರೆ.

ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಮುಖ ತಾರೆಗಳು

ಆರ್ಯನ್ ಖಾನ್ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಬಾಲಿವುಡ್‌ನ ಮೂವರು ಖಾನ್‌ಗಳಾದ ಶಾರುಖ್, ಅಮೀರ್ ಮತ್ತು ಸಲ್ಮಾನ್ ಇದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೊಂದಿಗೆ ರಣವೀರ್ ಸಿಂಗ್, ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ನಿರ್ದೇಶಕರಾದ ರಾಜಮೌಳಿ ಮತ್ತು ಕರಣ್ ಜೋಹರ್ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಈ ಎಲ್ಲಾ ಕಾರಣಗಳಿಂದ ನೆಟ್ಟಿಗರು ಇಡೀ ಚಿತ್ರರಂಗವೇ ಸ್ಟಾರ್ ನಾಯಕನ ಮಗನ ಬೆಂಬಲಕ್ಕೆ ನಿಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಶಾರುಖ್ ಖಾನ್ ಅವರ ಮಗ ನಿರ್ದೇಶಕನಾಗಿ ಯಾವ ರೀತಿಯ ಕಥೆ ಹೆಣೆಯುತ್ತಾರೆ ಎಂದು ಕಾದು ನೋಡಬೇಕಿದೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page