Connect with us

LATEST NEWS

ಸಕ್ಕರೆ ನಾಡಿನಲ್ಲಿ ಕಮಲದ ಕಲರವ : ಮಂಡ್ಯದಲ್ಲಿ ಚುನಾವಣಾ ಕಹಳೆ ಮೊಳಗಿಸಿದ ಅಮಿತ್​ ಶಾ.!

Published

on

ಜೆಡಿಎಸ್ ಮತ್ತು ಕಾಂಗ್ರೆಸ್ ಕ್ರಿಮಿನಲ್ ವ್ಯಕ್ತಿಗಳನ್ನ ಪೋಷಿಸುವ ಕೆಲಸ ಮಾಡುತ್ತಿದೆ. ದಲಿತರು, ಆದಿವಾಸಿಗಳಿಗೆ ಅನ್ಯಾಯ ಆಗೋ ಕೆಲಸ ಜೆಡಿಎಸ್, ಕಾಂಗ್ರೆಸ್​ನಿಂದ ಆಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಮಂಡ್ಯ: ಜೆಡಿಎಸ್​ ಭದ್ರಕೋಟೆ ಮಂಡ್ಯದಲ್ಲಿ ಬಿಜೆಪಿಯ ಚಾಣಾಕ್ಯ ಅಮಿತ್​ ಶಾ ರಣಕಹಳೆ ಮೊಳಗಿಸಿದ್ದಾರೆ. ಮದ್ದೂರಿನಲ್ಲಿ ಮೆಗಾ ಡೇರಿ ಉದ್ಘಾಟಿಸಿ ಮಂಡ್ಯ ನಗರಕ್ಕೆ ಆಗಮಿಸಿದ ಅಮಿತ್​ ಶಾ, ವಿವಿ ಮೈದಾನದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡರು.

ರಾಜ್ಯದ ಬಿಜೆಪಿ ನಾಯಕರ ದಂಡೇ ನೆರೆದಿದ್ದ ಬೃಹತ್​ ಸಮಾರಂಭದಲ್ಲಿ ನೆರೆದಿದ್ದ ಸಹಸ್ರಾರು ಜನರನ್ನು ಉದ್ದೇಶಿಸಿ ಭಾಷಣ ಆರಂಭಿಸಿದ ಅಮಿತ್ ಶಾ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಅವರಿಗೆ ಸಂತಾಪ ಸೂಚಿಸಿದರು.

ಮೇಲುಕೋಟೆ ಚಲುವನಾರಾಯಣ, ಆದಿಚುಂಚನಗಿರಿ ಕಾಲಭೈರವೇಶ್ವರ, ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ, ಮದ್ದೂರಿನ ನರಸಿಂಹ ಸ್ವಾಮಿ, ಆದಿಶಂಕರ, ರಾಮಾನುಜಾಚಾರ್ಯ, ಬಸವಣ್ಣ, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ ಅವರನ್ನ ಸ್ಮರಿಸಿದರು.

ಯಡಿಯೂರಪ್ಪ ಅವರ ಜನ್ಮಸ್ಥಳ ಕೂಡ ಮಂಡ್ಯ, ನಾನು ಕೂಡ ಮಂಡ್ಯವನ್ನು ಸ್ಮರಿಸುತ್ತೇನೆ.

ಕರ್ನಾಟಕದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಕಾರಣವಾಗಿದೆ.

ಮೋದಿ ನೇತೃತ್ವಕ್ಕೆ‌ ಶೇ.52 ವೋಟ್​ ಕೊಡುವ ಮೂಲಕ 22 ಲೋಕಸಭಾ ಸ್ಥಾನ ಕೊಟ್ಟಿದ್ದೀರಿ. ಈ ಬಾರಿ ಮೈಸೂರು- ಮಂಡ್ಯದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗಲಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರ ಪರಿವಾರ. ಕಾಂಗ್ರೆಸ್​ನಲ್ಲಿ ಭ್ರಷ್ಟಾಚಾರ ತುಂಬಿದೆ. ಈ ಪರಿವಾರ ಮತ್ತು ಭ್ರಷ್ಟಾಚಾರವನ್ನ ಕಿತ್ತೊಗೆದು ಯಶಸ್ವಿಯಾಗಿ ಅಡಳಿತ ನಡೆಸುವ ಕೆಲಸ ಮಾಡಬೇಕಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಕ್ರಿಮಿನಲ್ ವ್ಯಕ್ತಿಗಳನ್ನ ಪೋಷಿಸುವ ಕೆಲಸ ಮಾಡುತ್ತಿದೆ. ದಲಿತರು, ಆದಿವಾಸಿಗಳಿಗೆ ಅನ್ಯಾಯ ಆಗೋ ಕೆಲಸ ಜೆಡಿಎಸ್, ಕಾಂಗ್ರೆಸ್​ನಿಂದ ಆಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಬಿಜೆಪಿಯಲ್ಲಿ ಇಬ್ಬರು ದಲಿತರನ್ನ ರಾಮನಾಥ ಕೋವಿಂದ್, ದ್ರೌಪದಿ ಮುರ್ಮು ಅವರನ್ನ ರಾಷ್ಟ್ರಪತಿ ಮಾಡೋ ಕೆಲಸ ಮಾಡಿದ್ದೇವೆ.

ನಾವೆಲ್ಲರೂ ಈ ದೇಶದ ಬಡವರಿಗೆ ಆಹಾರ ಒದಗಿಸಿ, ‌ಅನೇಕ ಕಾರ್ಯಕ್ರಮಗಳನ್ನು ಕೊಡುವ ಕೆಲಸ ಮಾಡಿದ್ದೇವೆ. ಬಡವರ ಮನೆಗಳಿಗೆ ಬೆಳಕು, ಶೌಚಗೃಹ ನೀಡುವ ಮೂಲಕ ಗೌರವಯುತ ಬದುಕು ಕಲ್ಪಿಸಿಕೊಡುವ ಕೆಲಸ ಮಾಡಿದ್ದೇವೆ ಎಂದರು.

ಹಳೇ ಮೈಸೂರು ಭಾಗದ ಜನರು ಮೋದಿ ಮತ್ತು ಬೊಮ್ಮಾಯಿ ನೇತೃತ್ವಕ್ಕೆ ಬೆಂಬಲ ಕೊಡಬೇಕಿದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪಿಎಫ್​ಐ ಅವರ 150 ಕೇಸ್​ಗಳನ್ನು ವಾಪಸ್ ಪಡೆದಿದ್ದರು. ಇದು ಎಂತಹ ಅನಾಹುತಕ್ಕೆ ಕಾರವಾಗಿತ್ತು ಅನ್ನೋದು ಗೊತ್ತಿದೆ.

ನರೇಂದ್ರ ಮೋದಿ ಸರ್ಕಾರ ಪಿಎಫ್​ಐ ಬ್ಯಾನ್ ಮಾಡೋ ಕೆಲಸ ಮಾಡಿದೆ. ಭಾರತವನ್ನ ಸದೃಢವಾಗಿ ಮಾಡಿ, ಭಾರತ ಶಕ್ತಿಯನ್ನ ತೋರಿಸೋ ಕೆಲಸ ಮಾಡಬೇಕಿದೆ.

ಹೀಗಾಗಿ ಬಿಜೆಪಿಯನ್ನ ಈ ಭಾಗದಲ್ಲಿ ಅತಿಹೆಚ್ಚು ಬೆಂಬಲಿಸಬೇಕಿದೆ ಎಂದು ಅಮಿತ್ ಶಾ ಮನವಿ ಮಾಡಿದರು.

LATEST NEWS

ಬೆಟ್ಟ ಹತ್ತುವಾಗ ಕಾಲು ಜಾರಿ ಬಿ*ದ್ದು ವೃದ್ಧ ಸಾ*ವು

Published

on

ಮಂಗಳೂರು/ರಾಮನಗರ : ಬೆಟ್ಟ ಹತ್ತುವಾಗ ಕಾಲು ಜಾ*ರಿ ಬಿ*ದ್ದು ವೃದ್ಧ ಸಾ*ವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ರೇವಣಸಿದ್ದೇಶ್ವರ ಬೆಟ್ಟದಲ್ಲಿ ನಡೆದಿದೆ. ಬಿಡದಿ ಹೋಬಳಿಯ ಕೆಂಪನಹಳ್ಳಿ ನಿವಾಸಿ, 65 ವರ್ಷದ ರೇವಣ್ಣ ಮೃ*ತ ದು*ರ್ದೈವಿ.

ಕುಟುಂಬ ಸಮೇತ ರೇವಣಸಿದ್ದೇಶ್ವರ ಬೆಟ್ಟಕ್ಕೆ ಬಂದಿದ್ದ ರೇವಣ್ಣ ದೇವರ ದರ್ಶನ ಮಾಡಲು ಬೆಟ್ಟ ಹತ್ತುವಾಗ ಕಾಲು ಜಾ*ರಿ ಕಂದಕಕ್ಕೆ ಬಿ*ದ್ದು, ಸ್ಥಳದಲ್ಲೇ ಕೊನೆಯು*ಸಿರೆಳೆದಿದ್ದಾರೆ.

ಇದನ್ನೂ ಓದಿ : ಹಾಲಿನ ಟ್ಯಾಂಕರ್‌ಗೆ ಡಿ*ಕ್ಕಿಯಾಗಿ ಸುಟ್ಟು ಕರಕಲಾದ ಕಾರು

ವಿಷಯ ತಿಳಿದು ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರೇವಣ್ಣ ಶ*ವ ಮೇಲಕ್ಕೆತ್ತಿದ್ದಾರೆ. ಘಟನೆ ಬಗ್ಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ : ಡಿಸ್ಕಸ್ ಥ್ರೋನಲ್ಲಿ ಮಂಗಳೂರಿನ ಕೃತಿ ಎನ್.ಪಿ ಪ್ರಥಮ

Published

on

ಮಂಗಳೂರು/ಬೆಂಗಳೂರು : ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ 17 ವರ್ಷದ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ 2025-2026 ನಡೆಯಿತು.

ಡಿಸ್ಕಸ್ ಥ್ರೋ ವಿಭಾಗದಲ್ಲಿ ಬಾಲವಿಕಾಸ ಇಂಗ್ಲೀಷ್ ಮೀಡಿಯಂ ಮಾಣಿಯ ವಿದ್ಯಾರ್ಥಿನಿ  ಕೃತಿ. ಎನ್.ಪಿ ಪ್ರಥಮ ಸ್ಥಾನ ಪಡೆದಿದ್ದು,  ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾಳೆ.

ಇದನ್ನೂ ಓದಿ : ಹಾಲಿನ ಟ್ಯಾಂಕರ್‌ಗೆ ಡಿ*ಕ್ಕಿಯಾಗಿ ಸುಟ್ಟು ಕರಕಲಾದ ಕಾರು

ಕೃತಿ ಗೋಳ್ತಮಜಲು ಗ್ರಾಮದ ನಿವಾಸಿ ದಿನೇಶ್.ಬಿ ಮತ್ತು ತೇಜಾಕ್ಷಿ ದಂಪತಿ ಪುತ್ರಿ.

Continue Reading

LATEST NEWS

ಹಾಲಿನ ಟ್ಯಾಂಕರ್‌ಗೆ ಡಿ*ಕ್ಕಿಯಾಗಿ ಸುಟ್ಟು ಕರಕಲಾದ ಕಾರು

Published

on

ಮಂಗಳೂರು/ರಾಮನಗರ : ಹಾಲಿನ ಟ್ಯಾಂಕರ್‌ ಗೆ ಹಿಂಬದಿಯಿಂದ ಡಿ*ಕ್ಕಿಯಾಗಿ ಕಾರೊಂದು ಹೊ*ತ್ತಿ ಉರಿದ ಘಟನೆ ರಾಮನಗರದ ಸಂಗಬಸವನದೊಡ್ಡಿ ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಡಸ್ಟರ್ ಕಾರು ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ವೇಗವಾಗಿ ಹೋಗುತ್ತಿದ್ದ ಚಾಲಕ ಸಂಗಬಸವನದೊಡ್ಡಿ ಬಳಿ ನಿಯಂತ್ರಣ ಕಳೆದುಕೊಂಡು ಮುಂದಿನಿಂದ ಹೋಗುತ್ತಿದ್ದ ಹಾಲಿನ ಟ್ಯಾಂಕರ್‌ ಗೆ ಗು*ದ್ದಿದ್ದಾನೆ. ಕೂಡಲೇ ಕಾರಿನಲ್ಲಿ ದಟ್ಟ ಹೊಗೆ ಕಾಣಿಸಿಕೊಳ್ಳತೊಡಗಿದೆ. ಅಪಾಯ ಅರಿತ ಕಾರಿನಲ್ಲಿದ್ದವರು ತಕ್ಷಣ ಕೆಳಕ್ಕಿಳಿದು ದೂರಕ್ಕೆ ಓಡಿದ್ದಾರೆ.  ಅದಾದ ಕೆಲವೇ ಕ್ಷಣದಲ್ಲಿ ಕಾರಿನಲ್ಲಿ ಬೆಂ*ಕಿ ಕಾಣಿಸಿಕೊಂಡು ಹೊ*ತ್ತಿ ಉ*ರಿದಿದೆ.

ಇದನ್ನೂ ಓದಿ : ಇಂದೆಂಥ ದುರವಸ್ಥೆ! 108 ಆ್ಯಂಬುಲೆನ್ಸ್ ಸಿಗದೆ ಪರದಾಟ; ಗೂಡ್ಸ್ ಟೆಂಪೋ ಮೂಲಕ ರೋಗಿ ಆಸ್ಪತ್ರೆಗೆ!

ಸ್ಥಳಕ್ಕೆ ಬಂದ ಅ*ಗ್ನಿಶಾಮಕ ದಳದ ಸಿಬ್ಬಂದಿ ಬೆಂ*ಕಿ ನಂದಿಸಿದ್ದಾರೆ. ಕಾರು ಸು*ಟ್ಟು ಕರಕಲಾಗಿದ್ದು, ಟ್ಯಾಂಕರ್‌ ನ ಹಿಂಭಾಗ ಜಖಂಗೊಂಡಿದೆ.  ಘಟನೆ ಬಗ್ಗೆ ರಾಮನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page