Connect with us

LATEST NEWS

ಕಾಶ್ಮೀರದಲ್ಲಿ ಹೊಸ ಕ್ರಿಮಿನಲ್ ಕಾನೂನು ಅನುಷ್ಠಾನದ ಬಗ್ಗೆ ಅಮಿತ್ ಶಾ ಸಭೆ

Published

on

ಮಂಗಳೂರು/ನವದೆಹಲಿ  : ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು(ಫೆ.18) ಪರಿಶೀಲನಾ ಸಭೆ ನಡೆಸಿದರು. ಜಮ್ಮು ಮತ್ತು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸಮ್ಮುಖದಲ್ಲಿ ನವದೆಹಲಿ ಉತ್ತರ ಬ್ಲಾಕ್‌ನಲ್ಲಿ ಈ ಸಭೆ ನಡೆಯಿತು.

ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಅವರು ಈಗಾಗಲೇ ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ಹರ್ಯಾಣ ಸರ್ಕಾರಗಳೊಂದಿಗೆ ಸಭೆ ನಡೆಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಈ ಕಾಯ್ದೆಗಳನ್ನು ಹೊಸದಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಈ ಮೂರು ಕಾನೂನುಗಳು ಕ್ರಮವಾಗಿ 163 ವರ್ಷಗಳ ಹಿಂದೆ ಅಂದರೆ, ಬ್ರಿಟಿಷ್ ಕಾಲದಲ್ಲಿ ರೂಪುಗೊಂಡ ಭಾರತೀಯ ದಂಡ ಸಂಹಿತೆ(ಐಪಿಸಿ), 126 ವರ್ಷಗಳ ಹಿಂದಿನ ಅಪರಾಧ  ದಂಡ ಪ್ರಕ್ರಿಯಾ ಸಂಹಿತೆ ಮತ್ತು 151 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಜಾರಿಗೆ ಬರಲಿವೆ.

ಇದನ್ನೂ ಓದಿ : ಪಾಕ್‌ಗೆ ಕಾರವಾರ ನೌಕಾನೆಲೆಯ ಸೂಕ್ಷ್ಮ ಮಾಹಿತಿ ಸೋರಿಕೆ; ಎನ್‌ಐಎಯಿಂದ ಇಬ್ಬರ ಬಂಧನ

ಸಭೆಯಲ್ಲಿ ಗೃಹ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಹಾನಿರ್ದೇಶಕರು, ಕೇಂದ್ರ ಗೃಹ ಸಚಿವಾಲಯ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

 

 

LATEST NEWS

ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಸೀಮಾ ಹೈದರ್ ಮರಳಿ ಪಾಕ್‌ಗೆ ಹೋಗ್ತಾರಾ..!?

Published

on

ಮಂಗಳೂರು/ನವದೆಹಲಿ: ಪಬ್‌ಜೀ ಪ್ರಿಯಕರ ಸಚಿನ್ ಪ್ರೀತಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಸೀಮಾ ಹೈದರ್ ಸಾಕಷ್ಟು ಸುದ್ದಿಯಾಗಿದ್ದರು. ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು, ಅದಕ್ಕೆ ಕಾರಣ ಭಾರತ ಸರ್ಕಾರ ನಿನ್ನೆ ಕೈಗೊಂಡ ಆ ಒಂದು ಕಠಿಣ ಕ್ರಮ.


ಹೌದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಉಗ್ರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತ ಸರ್ಕಾರ ಅನುಮಾನ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸಮಿತಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಇದರ ಪ್ರಕಾರ ಪಾಕಿಸ್ತಾನಕ್ಕೆ ಹೋಗಿರುವ ಭಾರತ ಪ್ರಜೆಗಳು ಮೇ.1ರ ಒಳಗಾಗಿ ಭಾರತಕ್ಕೆ ಮರಳಬೇಕು. ಅಲ್ಲದೇ ಭಾರತದಲ್ಲಿರೋ ಎಲ್ಲಾ ಪಾಕಿಸ್ತಾನಿ ಪ್ರಜೆಗಳು 48 ಗಂಟೆಗಳ ಒಳಗೆ ದೇಶವನ್ನು ತೊರೆಯುವಂತೆ ಆದೇಶಿಸಿದೆ. ಹೀಗಾಗಿ ಅನಧಿಕೃತವಾಗಿ ಭಾರತಕ್ಕೆ ಬಂದು ಇಲ್ಲಿಯೇ ಮತ್ತೊಂದು ಮದುವೆಯಾಗಿ ಮಗುವನ್ನು ಕೂಡ ಹೆತ್ತಿರುವ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಚರ್ಚೆಯಾಗುತ್ತಿದೆ.

ಈ ಬಗ್ಗೆ ನೆಟ್ಟಿಗರು ಅಕ್ರಮವಾಗಿ ಭಾರತಕ್ಕೆ ಬಂದ ಆಕೆಯನ್ನು ವಾಪಸ್ ಪಾಕಿಸ್ತಾನಕ್ಕೆ ಕಳುಹಿಸುವಂತೆ ಆಗ್ರಹಿಸುತ್ತಿದ್ದಾರೆ. ಹೀಗಿರುವಾಗಲೇ ಪಾಕಿಸ್ತಾನದಲ್ಲಿರುವ ಆಕೆಯ ಮಾಜಿ ಪತಿ ಗುಲಾಂ ಹೈದರ್ ಅವರ ವೀಡಿಯೋವೊಂದು ವೈರಲ್ ಆಗಿದೆ.

ಸೀಮಾ ಹೈದರ್ ಮಾಜಿ ಪತಿ ಹೇಳಿದ್ದೇನು?
ಸೀಮಾ ಹೈದರ್ ಅವರ ಮೊದಲ ಪತಿ ಗುಲಾಮ್ ಹೈದರ್ ವೀಡಿಯೋವೊಂದನ್ನು ಮಾಡಿದ್ದು, ಅದರಲ್ಲಿ ಅವರು ಹೀಗೆ ಹೇಳಿದ್ದಾರೆ. ‘ಇಂದಿಗೂ ನಾನು ಸೀಮಾ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಬೇಕೆಂದು ಹೇಳಲು ಬಯಸುತ್ತೇನೆ. ಕಳೆದ ಎರಡು ವರ್ಷಗಳಿಂದ ನಾನು ನನ್ನ ಮಕ್ಕಳಿಗಾಗಿ ಹಾತೊರೆಯುತ್ತಿದ್ದೇನೆ. ಭಾರತ ಸರ್ಕಾರ ನನ್ನ ಮಕ್ಕಳನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಬೇಕು. ಸೀಮಾಳನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಾಗದಿದ್ದರೆ, ಅವಳನ್ನು ಅಲ್ಲಿಯೇ ಶಿಕ್ಷಿಸಿ. ಅವಳಿಗೆ ಸಹಾಯ ಮಾಡುತ್ತಿರುವವನಿಗೆ, ಅಂದರೆ ಅವಳ ದತ್ತು ಸಹೋದರ ಎಪಿ ಸಿಂಗ್‌ಗೆ ನಾಚಿಕೆಯಾಗಬೇಕು ಎಂದು ಸೀಮಾ ಹೈದರ್‌ಳ ಪಾಕಿಸ್ತಾನಿ ಪತಿ ವೀಡಿಯೋದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಪಾಕ್ ಟು ಭಾರತ ಲವ್ ಸ್ಟೋರಿ; ಮಗುವಿಗೆ ಜನ್ಮ ನೀಡಿದ ಸೀಮಾ ಹೈದರ್

ಇನ್ನು ಸೀಮಾ ಹೈದರ್‌ನ್ನು ದತ್ತು ತಂಗಿಯಾಗಿ ಪಡೆದಿರುವ ಸುಪ್ರೀಂಕೋರ್ಟ್ ವಕೀಲ ಎಪಿ ಸಿಂಗ್ ವಿರುದ್ದ ಗುಲಾಮ್ ಹೈದರ್ ಕಿಡಿಕಾರಿದ್ದಾರೆ. ‘ವಕೀಲ ಎಪಿ ಸಿಂಗ್‌ಗೆ ನಾಚಿಕೆಯಾಗಬೇಕು. ಅವನೊಳಗೆ ಮಾನವೀಯತೆ ಸತ್ತುಹೋಗಿದೆ. ಅವನು ಮನುಷ್ಯ ಎಂದು ಕರೆಯಲು ಅರ್ಹನಲ್ಲ. ಸೀಮಾ ಅವನಿಗಿಂತಲೂ ಹೆಚ್ಚು ನಾಚಿಕೆಯಿಲ್ಲದವಳು. ನನ್ನ ಮಕ್ಕಳಿಗೆ ರಕ್ತಸಂಬಂಧವೂ ಇಲ್ಲದ ಸಚಿನ್ ಮತ್ತು ನೇತ್ರಪಾಲ್ ಅವರೊಂದಿಗೆ ಆಕೆ ಇದ್ದಾಳೆ. ಆದರೆ, ನನಗೆ ನನ್ನ ಮಕ್ಕಳೊಂದಿಗೆ ರಕ್ತಸಂಬಂಧವಿದೆ ಮತ್ತು ನನ್ನ ಮಕ್ಕಳಿಂದ ದೂರವಿರುವವನು ನಾನೇ’ ಎಂದು ಸೀಮಾಳ ಪಾಕಿಸ್ತಾನಿ ಪತಿ ಗುಲಾಂ ಹೈದರ್ ಬೇಸರ ವ್ಯಕ್ತಪಡಿಸಿದ್ದಾನೆ.

‘ನನ್ನ ಮಕ್ಕಳನ್ನು ಮರಳಿ ಕಳುಹಿಸುವಂತೆ ಬೇಡಿಕೆ ಇಟ್ಟಿರುವ ಆತ ಕಾಲಿನಲ್ಲಿದ್ದ ಚಪ್ಪಲಿಯನ್ನು ವೀಡಿಯೋದಲ್ಲಿ ತೋರಿಸಿದ್ದು, ಸೀಮಾ ಹಾಗೂ ವಕೀಲ ಎಪಿ ಸಿಂಗ್ ನನ್ನ ಮುಂದೆ ಬಂದರೆ ನಾನು ಅವರನ್ನು ಕೆಟ್ಟದಾಗಿ ಹೊಡೆಯುತ್ತೇನೆ’ ಎಂದು ಹೇಳಿದ್ದಾನೆ.

ಸೀಮಾ ಹೈದರ್ ಹಾಗೂ ಲಾಯರ್ ಎಪಿ ಸಿಂಗ್ ವಿರುದ್ದ ಆಕ್ರೋಶಗೊಂಡಿರುವ ಮಾಜಿ ಪತಿ ಗುಲಾಂ ಹೈದರ್, ತನ್ನ ಮಕ್ಕಳನ್ನು ನೋಡಬೇಕು ಎಂದು ಹಂಬಲಿಸುತ್ತಿದ್ದಾನೆ. ಇನ್ನೊಂದೆಡೆ ಭಾರತ ಸರ್ಕಾರದ ಹೊಸ ಆದೇಶ ಸೀಮಾ ಹೈದರ್‌ ಮತ್ತು ಪತಿ ಸಚಿನ್ ಮೀನಾ ತಲೆನೋವಿಗೆ ಕಾರಣವಾಗಿದೆ.

Continue Reading

LATEST NEWS

ಪಾಕ್‌ಗೆ ಮತ್ತೊಂದು ಶಾ*ಕ್ ಕೊಟ್ಟ ಭಾರತ;  ಸೋಶಿಯಲ್ ಮೀಡಿಯಾ ಖಾತೆಗಳಿಗೆ ನಿರ್ಬಂಧ

Published

on

ಮಂಗಳೂರು/ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭ*ಯೋತ್ಪಾದಕ ದಾ*ಳಿಯಿಂದ ಭಾರತ ಆಕ್ರೋಶಗೊಂಡಿದೆ. ಪಾಕಿಸ್ತಾನದ ವಿರುದ್ಧ ಹಲವು ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಿದೆ.

ಸಾಂದರ್ಭಿಕ ಚಿತ್ರ

ಇದೀಗ ಭಾರತವು ಪಾಕಿಸ್ತಾನ ಸರ್ಕಾರದ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳನ್ನು ನಿರ್ಬಂಧಿಸಿದೆ. ಹೀಗಾಗಿ ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಎಕ್ಸ್‌, ಫೇಸ್‌ ಬುಕ್ ಖಾತೆಗಳ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ.

ಪಾಕ್ ಜೊತೆಗಿನ ತನ್ನ ಸಂಬಂಧಕ್ಕೆ ಕೆಲವೊಂದು ಕಡಿವಾಣ  ಹಾಕುವ ಕ್ರಮಕ್ಕೆ ಭಾರತ ಮುಂದಾಗಿದೆ. ಪಾಕ್ ಪ್ರಜೆಗಳಿಗೆ ನೀಡಲಾಗುತ್ತಿದ್ದ ಸಾರ್ಕ್ ವೀಸಾ ವಿನಾಯಿತಿ ಯೋಜನೆಯನ್ನು ರದ್ದು ಮಾಡಿದೆ. ಪಾಕಿಸ್ತಾನದ ರಾಯಭಾರಿ ಕಚೇರಿಯಿಂದ ರಕ್ಷಣಾ ಸಲಹೆಗಾರರನ್ನು ಹೊರಹಾಕಿದೆ.

ಇದನ್ನೂ ಓದಿ  : ಸೀರೆ ಬುಕ್ ಮಾಡಿದ ಮಹಿಳಾ ಐಎಎಸ್ ಅಧಿಕಾರಿಗೆ ವಂಚನೆ; ಯೂಟ್ಯೂಬರ್ ವಿರುದ್ಧ ಕೇಸ್

ಪಾಕ್ ಭಾರತ ನಡುವಿನ ಅಟ್ಟಾರಿ ಚೆಕ್ ಪೋಸ್ಟ್‌ನ್ನು ಭಾರತ ಮುಚ್ಚಿದೆ. 1960 ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದು ಮಾಡಿದ್ದು, ಇದೀಗ ಸೋಶಿಯಲ್ ಮೀಡಿಯಾ ಖಾತೆ ಮೇಲೆ ಸಮರ ಸಾರಿದೆ. ಪಾಕ್ ಸರ್ಕಾರದ ಅಧಿಕೃತ ಎಕ್ಸ್ ಸೇರಿದಂತೆ ಇತರೆ ಸೋಶಿಯಲ್ ಮೀಡಿಯಾ ಖಾತೆಗಳಿಗೆ ನಿಷೇಧ ಹೇರಿದೆ.

 

 

 

Continue Reading

LATEST NEWS

ಏ.29 ರವರೆಗೆ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

Published

on

ಬೆಂಗಳೂರು: ವಾಯುಭಾರ ಕುಸಿತಗೊಂಡ ಹಿನ್ನೆಲೆ ರಾಜ್ಯದಲ್ಲಿ ಏ.29ರವರೆಗೂ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ, ಗದಗ, ಧಾರವಾಡ, ಕೊಪ್ಪಳ, ರಾಯಚೂರು, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ, ದಾವಣಗೆರೆ, ಬಳ್ಳಾರಿ, ವಿಜಯನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಏ.29 ರವರೆಗೂ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಕನ್ನಡ, ವಿಜಯಪುರ, ಕೊಪ್ಪಳ, ಯಾದಗಿರಿ, ಕಲಬುರ್ಗಿ, ಹಾಸನ, ಮೈಸೂರು, ಕೊಡಗು, ತುಮಕೂರು, ಮಂಡ್ಯ, ಚಿಕ್ಕಮಂಗಳೂರು, ರಾಮನಗರ, ಬೆಂಗಳೂರು ನಗರ, ಗ್ರಾಮಾಂತರ ಚಿಕ್ಕಬಳ್ಳಾಪುರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page