Connect with us

LATEST NEWS

ಅಮೆರಿಕ ಗಡಗಡ… ಒಳಾಂಗಣದಲ್ಲಿ ಟ್ರಂಪ್ ಪ್ರಮಾಣವಚನ

Published

on

ಮಂಗಳೂರು/ವಾಷಿಂಗ್ಟನ್ : ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಸೋಮವಾರ (ಜನವರಿ 20ರಂದು) ಕ್ಯಾಪಿಟಲ್ ಕಟ್ಟಡದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಮೆರಿಕ ಅಧ್ಯಕ್ಷರ ಪದಗ್ರಹಣವು ಈ ರೀತಿ ಒಳಾಂಗಣದಲ್ಲಿ ಆಗುತ್ತಿರುವುದು 40 ವರ್ಷಗಳಲ್ಲಿ ಇದೇ ಮೊದಲು.

ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆಯಿಂದಾಗಿ ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸ್ಥಳ ಬದಲಾಗಿದೆ. ಹೊರಾಂಗಣದಲ್ಲಿ ನಡೆಯಬೇಕಿದ್ದ ಪ್ರಮಾಣವಚನ ಕಾರ್ಯಕ್ರಮವು US ಕ್ಯಾಪಿಟಲ್ ಒಳಗೆ ನಡೆಯಲಿದೆ. ಅದಕ್ಕೆ ಕಾರಣ ವಿಪರೀತ ಚಳಿ. 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವ್ಯತ್ಯಾಸ ಆಗಿದೆ. ಈ ಸಮಾರಂಭವು ಸಾಂಪ್ರದಾಯಿಕವಾಗಿ ಯುಎಸ್ ಕ್ಯಾಪಿಟಲ್‌ನ ಹೊರಗಿನ ನ್ಯಾಷನಲ್ ಮಾಲ್‌ನಲ್ಲಿ ನಡೆಯುತ್ತಿತ್ತು.

ಇದನ್ನೂ ಓದಿ:WATCH : ಆ ಒಂದು ರೀಲ್ಸ್‌ನಿಂದ ಗಿನ್ನಿಸ್ ದಾಖಲೆ ಬರೆದ ಕೇರಳದ ಯುವಕ

‘ಆರ್ಕ್ಟಿಕ್ ಸ್ಪೋಟದಿಂದಾಗಿ ತೀವ್ರ ಚಳಿಗಾಳಿ ಬೀಸುತ್ತಿದ್ದು, ಜನರು ಪರಿತಪಿಸುತ್ತಿದ್ದಾರೆ. ನಾಗರಿಕರು ಸಂಕಷ್ಟ ಅನುಭವಿಸುವುದನ್ನು ನೋಡಲಾರೆ. ಹಾಗಾಗಿ, ಪ್ರಮಾಣವಚನ, ಪ್ರಾರ್ಥನೆ ಮತ್ತು ಇತರ ಭಾಷಣ ಕಾರ್ಯಕ್ರಮಗಳನ್ನು ಯುಎಸ್ ಕ್ಯಾಪಿಟಲ್‌ಗೆ ಸ್ಥಳಾಂತರಿಸುವಂತೆ ಆದೇಶಿಸಿದ್ದೇನೆ’ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರುತ್’ನಲ್ಲಿ ಟ್ರಂಪ್ ಹೇಳಿದ್ದಾರೆ.

ಜನವರಿ 20ರಂದು ಟ್ರಂಪ್ ಪ್ರಮಾಣವಚನ ನಡೆಯುವ ಸಮಯಕ್ಕೆ ವಾಷಿಂಗ್ಟನ್‌ನ ತಾಪಮಾನವು-7 ಡಿಗ್ರಿ ಸೆಲ್ಸಿಯಸ್ ಇರಲಿದೆ. ಆದರೆ, ತಂಪು ಗಾಳಿ ಬೀಸುವುದರಿಂದ ವಿಪರೀತ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

40 ವರ್ಷಗಳ ಹಿಂದೆ ಇದೇ ರೀತಿ ಆಗಿತ್ತು
ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಕೂಡ ಚಳಿಯಿಂದಾಗಿ ಪ್ರಮಾಣ ವಚನ ಸಮಾರಂಭದ ಸ್ಥಳ ಬದಲಾಯಿಸಿದ್ದರು. 1985ರಲ್ಲೂ ಇದೇ ರೀತಿ ಆಗಿತ್ತು. ರಿಪಬ್ಲಿಕನ್ ಪಕ್ಷದಿಂದ ಚುನಾಯಿತರಾಗಿದ್ದ ರೊನಾಲ್ಡ್ ರೇಗನ್ ಅವರು ತೀವ್ರ ಚಳಿಯಿಂದಾಗಿ ಪದಗ್ರಹಣ ಕಾರ್ಯಕ್ರಮವನ್ನು ರೋಟುಂಡಾದಲ್ಲಿ ನಡೆಸಿದ್ದರು. ಆಗ, ತಾಪಮಾನವು-23 ಡಿಗ್ರಿ ಸೆಲ್ಸಿಯಸ್‌ನಿಂದ-29 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು.

LATEST NEWS

2 ಮಕ್ಕಳ ತಾಯಿ ವಾರದಲ್ಲಿ 5 ದಿನ ವಿಮಾನದಲ್ಲಿ ಪ್ರಯಾಣ

Published

on

ಮಂಗಳೂರು/ಕೌಲಾಲಂಪುರ : ಕೆಲಸ ಎಂಬುದು ಮನುಷ್ಯನ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಕೆಲವರಿಗೆ ಕೆಲಸದ ಜೊತೆ ಕುಟುಂಬಕ್ಕೆ ಸಮಯ ಕೊಡುವುದಕ್ಕೆ ಆಗುವುದಿಲ್ಲ. ಆದರೆ ಇನ್ನು ಕೆಲವರು ಎರಡನ್ನೂ ಸಮತೋಲನವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ.

ಇದೇ ರೀತಿ “ವರ್ಕ್ ಲೈಫ್ ಬ್ಯಾಲೆನ್ಸ್‌’ಗಾಗಿ 2 ಮಕ್ಕಳ ತಾಯಿ ವಾರದಲ್ಲಿ 5 ದಿನಗಳು ವಿಮಾನದಲ್ಲಿ ಪ್ರಯಾಣಿಸುವ ಮೂಲಕ ಕೆಲಸದ ಜತೆಗೆ, ಮಕ್ಕಳಿಗೂ ಸಮಯ ನೀಡುತ್ತಿದ್ದಾರೆ.

ಭಾರತೀಯ ಮೂಲದ ರೇಚಲ್ ಕೌರ್ ಮಲೇಷ್ಯಾದ ಕೌಲಾಲಂಪುರದಲ್ಲಿರುವ ಏರ್ ಏಷ್ಯಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕುಟುಂಬವು ಪೆನಾಂಗ್‌ನಲ್ಲಿ ವಾಸಿಸುತ್ತಿದೆ. ರೇಚಲ್‌ಗೆ ಇಬ್ಬರು ಮಕ್ಕಳಿದ್ದು, ಅವರೊಂದಿಗೆ ಸಮಯ ಕಳೆಯಲು ಪ್ರತಿ ದಿನ ಬೆಳಗ್ಗೆ 4 ಗಂಟೆಗೆ ಎದ್ದು, 5.55ಕ್ಕೆ ವಿಮಾನದಲ್ಲಿ 398 ಕಿ.ಮೀ. ಪ್ರಯಾಣಿಸಿ ಕಚೇರಿಗೆ ತಲುಪುತ್ತಾರೆ.

ಬಳಿಕ ಸಂಜೆ ವಿಮಾನದಲ್ಲಿ ಹೊರಟು 8 ಗಂಟೆಗೆ ಮನೆ ತಲುಪಿ ಮಕ್ಕಳೊಂದಿಗೆ ಸಮಯ ಕಳೆಯುತ್ತಾರೆ. ಹೀಗೆ ಒಟ್ಟು 796 ಕಿ.ಮೀ. ದೂರ ಪ್ರಯಾಣಿಸುತ್ತಿರುತ್ತಾರೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾಗೆ ಆಘಾತ

ಕೌರ್ ವಾರದಲ್ಲಿ 5 ದಿನಗಳು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೂ ಖರ್ಚು ಕಡಿಮೆಯಂತೆ. ಈ ಹಿಂದೆ ಟಿಕೆಟ್ ಮತ್ತು ಇತರ ವೆಚ್ಚಕ್ಕಾಗಿ 41,000 ರೂ. ವೆಚ್ಚ ಮಾಡುತ್ತಿದ್ದೆ. ಈಗ ಅದು 21,000 ರೂ.ಗೆ ಇಳಿಕೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ಕೌಲಾಲಂಪುರದಲ್ಲೇ ಬಾಡಿಗೆ ಮನೆ ಪಡೆದಿದ್ದ ರೇಚಲ್ ವಾರಕ್ಕೊಮ್ಮೆ ಕುಟುಂಬವನ್ನು ಭೇಟಿಯಾಗುತ್ತಿದ್ದರು.

ಇದು ಸಾಮಾನ್ಯವಾದ ವಿಷಯವಲ್ಲ, ಸಮಯವನ್ನು ವ್ಯರ್ಥ ಮಾಡದೇ ಮಕ್ಕಳಿಗಾಗಿ ರೇಚಲ್ ಕೌರ್ ವಾರದಲ್ಲಿ 5 ದಿನ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ.

 

 

Continue Reading

LATEST NEWS

ಮಹಿಳೆಯರಿಗೆ ಇನ್ನು ಮುಂದೆ ವರ್ಕ್​ ಫ್ರಂ ಹೋಂ; ಸರ್ಕಾರದಿಂದ ಹೊಸ ನಿಯಮ ಜಾರಿ

Published

on

ಆಂಧ್ರಪ್ರದೇಶ: ಮಹಿಳಾ ಉದ್ಯೋಗಿಗಳಿಗೆ ವರ್ಕ್​ ಫ್ರಂ ಹೋಂ ನಿಯಮ ಜಾರಿಗೆ ತರಲು ಆಂಧ್ರಪ್ರದೇಶ ಸರ್ಕಾರವು ಮುಂದಾಗಿದೆ. ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಈ ಕುರಿತು ಮಾಹಿತಿ ನೀಡಿದ್ದಾರೆ.

ಕೋವಿಡ್ 19 ಸಮಯದಲ್ಲಿ ಕೆಲಸದ ಸಂಸ್ಕೃತಿ ಬದಲಾಗಿದೆ. ತಂತ್ರಜ್ಞಾನದ ಲಭ್ಯತೆಯು ಮನೆಯಿಂದಲೇ ಕೆಲಸ ಮಾಡುವ ಪರಿಕಲ್ಪನೆಯನ್ನು ಉತ್ತೇಜಿಸಿದೆ. ಅದರಲ್ಲೂ ಐಟಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿ ವರ್ಕ್​ ಫ್ರಂ ಹೋಂ ನೀತಿಯನ್ನು ಜಾರಿಗೆ ಮುಂದಾಗಿದೆ.

ಆಂಧ್ರಪ್ರದೇಶ ಐಟಿ ಮತ್ತು ಜಿಸಿಸಿ ನೀತಿ 4.0 ಅಡಿಯಲ್ಲಿ, ಸರ್ಕಾರವು ಪ್ರತಿ ನಗರ, ಪಟ್ಟಣ ಮತ್ತು ಮಂಡಲಗಳಲ್ಲಿ ಐಟಿ ಕಚೇರಿಗಳನ್ನು ಸ್ಥಾಪಿಸಲು ಡೆವಲಪರ್‌ಗಳನ್ನು ಪ್ರೋತ್ಸಾಹಿಸುತ್ತಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಐಟಿ ಮತ್ತು ಜಿಸಿಸಿ ಸಂಸ್ಥೆಗಳಿಗೆ ಇದು ಬೆಂಬಲವನ್ನು ನೀಡುತ್ತಿದೆ. ಈ ಉಪಕ್ರಮವು ವಿಶೇಷವಾಗಿ ಮಹಿಳಾ ವೃತ್ತಿಪರರ ಉದ್ಯೋಗಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಅವರು ಹೊಂದಿಕೊಳ್ಳುವ ರಿಮೋಟ್ ಅಥವಾ ಹೈಬ್ರಿಡ್ ಕೆಲಸದ ಆಯ್ಕೆಗಳಿಂದ ಪ್ರಯೋಜನ ಪಡೆಯುತ್ತಾರೆ.

ಇನ್ನು ಇದೇ ವೇಳೆ ಆಂಧ್ರ ಪ್ರದೇಶ ಸರ್ಕಾರವು ರಾಜ್ಯದಲ್ಲಿ ವರ್ಕ್​ ಫ್ರಮ್​ ಆಫೀಸ್ ಯೋಜನೆಯ ಕಾರಣದಿಂದ ಕೆಲಸದಿಂದ ಹೊರಗುಳಿದಿರುವ ಅಥವಾ ಕಡಿಮೆ ಸಂಬಳ ಪಡೆಯುತ್ತಿರುವ ಮಹಿಳೆಯರಿಗೆ ಸಹಾಯ ಮಾಡುವುದ್ದಕ್ಕಾಗಿ ಪ್ರಾಯೋಗಿಕ ಉದ್ಯೋಗ-ಆಧಾರಿತ ಕೌಶಲ್ಯವನ್ನು ನಿಮ್ಮ ಮನೆ ಬಾಗಿಲಿಗೆ ತರಲು ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗಿದೆ.

Continue Reading

LATEST NEWS

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾಗೆ ಆಘಾತ

Published

on

ಮಂಗಳೂರು/ಮುಂಬೈ : ಚಾಂಪಿಯನ್ಸ್ ಟ್ರೋಫಿಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಟೀಂ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ.

ಭಾರತ ತಂಡದ ಬೆನ್ನೆಲುಬು ಜಸ್‌ಪ್ರಿತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿಯನ್ನು ಆಡುವುದಿಲ್ಲ ಎಂದು ಬಿಸಿಸಿಐ ಅಧಿಕೃತವಾಗಿ ಹೇಳಿದೆ.

ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದ ವೇಳೆ ಜಸ್​ಪ್ರೀತ್ ಬುಮ್ರಾ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಕೊನೆಯ ಇನಿಂಗ್ಸ್​ನಲ್ಲಿ ಅವರು ಬೌಲಿಂಗ್ ಮಾಡಿರಲಿಲ್ಲ. ಅಲ್ಲದೆ ಇದೇ ನೋವಿನ ಕಾರಣ ಅವರು ಮುಂಬರುವ ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಗುಳಿದಿದ್ದಾರೆ. ಹೀಗಾಗಿ ಈ ಬಾರಿಯ ಐಸಿಸಿ ಟೂರ್ನಿಯಲ್ಲಿ ಬುಮ್ರಾ ಕಾಣಿಸಿಕೊಳ್ಳುವುದಿಲ್ಲ.

ಇದನ್ನೂ ಓದಿ: ಉ*ಗ್ರರ ಟಾರ್ಗೆಟ್ ಆದ ಪ್ರಧಾನಿ ಮೋದಿ..! ವಿಮಾನದ ಮೇಲೆ ದಾ*ಳಿಯ ಬೆದರಿಕೆ..!

ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಉಳಿದಿವೆ. ಅದಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗಿ ಜಸ್​ಪ್ರೀತ್ ಬುಮ್ರಾ ಫಿಟ್​ನೆಸ್ ಸಮಸ್ಯೆಯ ಕಾರಣ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ.

ಬೆನ್ನು ನೋವಿನ ಸಮಸ್ಯೆಯ ಕಾರಣ ಬುಮ್ರಾ ಇಂಗ್ಲೆಂಡ್ ವಿರುದ್ದದ ಸರಣಿಯಿಂದ ಹೊರಗುಳಿದಿದ್ದರು. ಇದಾಗ್ಯೂ ಅವರು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು. ಆದರೀಗ ಅವರು ಸಂಪೂರ್ಣ ಫಿಟ್‌ನೆಸ್ ಸಾಧಿಸಲು ಕನಿಷ್ಠ ಮೂರು ವಾರಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಬುಮ್ರಾ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿದಿದ್ದಾರೆ.

ಇತ್ತ ಜಸ್‌ಪ್ರೀತ್ ಬುಮ್ರಾ ಅಲಭ್ಯರಾಗಿರುವ ಕಾರಣ ಅವರ ಸ್ಥಾನದಲ್ಲಿ ಹರ್ಷಿತ್ ರಾಣಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವರುಣ್ ಇನ್-ಯಶಸ್ವಿ ಔಟ್

ಚಾಂಪಿಯನ್ಸ್  ಟ್ರೋಫಿಗಾಗಿ 15 ಸದಸ್ಯರ ತಂಡದಲ್ಲಿ ಹೆಚ್ಚುವರಿ ಆರಂಭಿಕನಾಗಿ ಸ್ಥಾನ ಪಡೆದಿದ್ದ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಅವರ ಬದಲಿಗೆ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಈ ಮೂಲಕ ಟೀಂ ಇಂಡಿಯಾ ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಇದೀಗ ಅಂತಿಮ ಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದೆ.

ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ: ರೋಹಿತ್ ಶರ್ಮಾ (ಕ್ಯಾಪ್ಟನ್), ಶುಭ್‌ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page