Connect with us

LATEST NEWS

ಉಡುಪಿ: ವಾಕಿಂಗ್‌ಗೆ ಹೋದ ವ್ಯಕ್ತಿಗೆ ಅಂಬುಲೆನ್ಸ್ ಢಿಕ್ಕಿ-ಸಾವು

Published

on

ಉಡುಪಿ: ಕಾಪುವಿನ ಕೋತಲ್ ಕಟ್ಟೆ ರಾಹೆ 66ರಲ್ಲಿ ವಾಕಿಂಗ್ ಹೋದ ವ್ಯಕ್ತಿಗೆ ಅಂಬುಲೆನ್ಸ್ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ.


ಮೃತ ವ್ಯಕ್ತಿಯನ್ನು ಊಳಿಯಾರಗೋಳಿ ಗ್ರಾಮದ ಕೆಳತೋಟ ನಿವಾಸಿ 65 ವರ್ಷದ ಗೋವಿಂದ ಪೂಜಾರಿ ಎಂದು ಗುರುತಿಸಲಾಗಿದೆ. ಗೋವಿಂದ ಪೂಜಾರಿ ರಸ್ತೆ ದಾಟಲು ನಿಂತಿದ್ದ ಸಮಯ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಅಂಬುಲೆನ್ಸ್ ತೀರಾ ಬಲ ಬದಿಗೆ ಬಂದು ಅವರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಗೋವಿಂದ ಪೂಜಾರಿಯವರು ಗಾಯಗೊಂಡಿದ್ದು, ಅವರನ್ನು ತುರ್ತಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಅಂಬುಲೆನ್ಸ್‌ನ ಎದುರು ಭಾಗ ನಜ್ಜುಗುಜ್ಜಾಗಿದೆ.

ಅಂಬುಲೆನ್ಸ್‌ನಲ್ಲಿದ್ದ ರೋಗಿಯನ್ನು ಮತ್ತೊಂದು ಅಂಬುಲೆನ್ಸ್ನಲ್ಲಿ ಮಂಗಳೂರಿಗೆ ಸಾಗಿಸಲಾಗಿದೆ. ಘಟನೆಯಲ್ಲಿ ಚಾಲಕ ಮಣಿಯವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಶಿವಮೊಗ್ಗದ ಅಂಬುಲೆನ್ಸ್ ಚಾಲಕ ಮಣಿಯ ವಿರುದ್ದ ಕೈಪುಂಜಾಲು ನಿವಾಸಿ ಯೋಗೀಶ್ ಪೂಜಾರಿಯವರ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಪ್ರಧಾನಿ ಹುದ್ದೆಯ ನಂತರ ಭಾರತದಲ್ಲಿ ಅತ್ಯಂತ ಕಠಿಣ ಕೆಲಸ ಮಾಡುವ ವ್ಯಕ್ತಿ ಇವರಂತೆ: ಶಶಿ ತರೂರ್‌ ಹೇಳಿದ್ಯಾರನ್ನ?

Published

on

ನಾಗ್ಪುರ: ನ್ಯೂಜಿಲೆಂಡ್‌ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದು ಹರಿದಾಡುತ್ತಿದ್ದ ಹೊಸ ಸಂಚಲನ ಮೂಡಿಸಿದೆ.


ಹೌದು, ಪ್ರಧಾನಿ ಹುದ್ದೆಯ ನಂತರ ಅತ್ಯಂತ ಕಠಿಣ ಕೆಲಸ ನಿರ್ವಹಿಸುತ್ತಿರುವುದು ಟೀಮ್‌ ಇಂಡಿಯಾ ಕೋಚ್‌ ಗೌತಮ್‌ ಗಂಭೀರ್‌ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿದ್ದಾರೆ.

ನಾಗ್ಪುರದಲ್ಲಿ ನಡೆದ ಭಾರತ-ನ್ಯೂಝಿಲೆಂಡ್‌ ಟಿ20 ಪಂದ್ಯಕ್ಕೂ ಮುನ್ನ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಗೌತಮ್‌ ಗಂಭೀರ್‌ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದರು.

ಶಶಿ ತರೂರ್‌ ಪೋಸ್ಟ್‌ 

ಈ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಸಂಸದ ಶಶಿ ತರೂರ್‌, ನಾಗ್ಪುರದಲ್ಲಿ, ನನ್ನ ಹಳೆಯ ಸ್ನೇಹಿತ ಗೌತಮ್‌ ಗಂಭೀರ್‌ ಅವರೊಂದಿಗೆ ಒಳ್ಳೆಯ ಮತ್ತು ಮುಕ್ತ ಚರ್ಚೆಯನ್ನು ಆನಂದಿಸಿದೆ, ಭಾರತೀಯ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಪಾತ್ರವನ್ನು ದೇಶದ ಪ್ರಧಾನ ಮಂತ್ರಿಯ ನಂತರ ಅತ್ಯಂತ ಕಠಿಣ ಕೆಲಸ ಎಂದು ಕರೆದಿದ್ದಾರೆ. ಈ ಹೋಲಿಕೆಯ ಹಿಂದೆ ಗಾಢವಾದ ಅರ್ಥವಿದೆ.

ಪ್ರತಿದಿನ ಲಕ್ಷಾಂತರ ಜನರು ಅವರ ನಿರ್ಧಾರಗಳನ್ನು ಪ್ರಶ್ನಿಸುತ್ತಾರೆ. ಆದರೆ, ಅವರು ಸಂಪೂರ್ಣ ಶಾಂತತೆ ಮತ್ತು ದೃಢನಿಶ್ಚಯದಿಂದ, ಹಿಂಜರಿಯದೆ ಮುಂದುವರಿಯುತ್ತಿದ್ದಾರೆ. ಅವರ ಶಾಂತ ಸಂಕಲ್ಪ ಮತ್ತು ಸಮರ್ಥ ನಾಯಕತ್ವವನ್ನು ಶ್ಲಾಘಿಸಬೇಕು. ಮುಂದಿನ ಸವಾಲುಗಳಿಗೆ ಅವರಿಗೆ ಶುಭ ಹಾರೈಸುತ್ತೇನೆ ಎಂದು ಶಶಿ ತರೂರ್‌ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಶಶಿ ತರೂರ್‌ ಅವರ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಗೌತಮ್‌ ಗಂಭೀರ್‌, ಧನ್ಯವಾದಗಳು… ತರೂರ್‌ ಮಾತುಗಳು ತಮಗೆ ಸ್ಪೂರ್ತಿ ನೀಡಿವೆ ಎಂದು ಹೇಳಿದ್ದಾರೆ. ತಂಡದ ಮುಖ್ಯಸ್ಥರಾಗಿ ತಮ್ಮ ಮೇಲಿರುವ ಒತ್ತಡವನ್ನು ಅರಿತುಕೊಂಡಿರುವುದಾಗಿ ತಿಳಿಸಿದ್ದು, ಅದನ್ನು ಸವಾಲಾಗಿ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್‌ರಿಗೆ ‘ಕನ್ನಡ ಪಯಸ್ವಿನಿ ಅವಾರ್ಡ್- 2026’ ಪ್ರದಾನ 

ಎಲ್ಲಾ ಗದ್ದಲ ಮತ್ತು ಟೀಕೆಗಳು ಕಡಿಮೆಯಾದಾಗ, ತರಬೇತುದಾರರ ಅಪರಿಮಿತ ಶಕ್ತಿಯ ಹಿಂದಿನ ಸತ್ಯ ಮತ್ತು ತರ್ಕವು ಸ್ಪಷ್ಟವಾಗುತ್ತದೆ. ಅಲ್ಲಿಯವರೆಗೆ, ಅತ್ಯುತ್ತಮವಾಗಿರುವ ನನ್ನವರ ವಿರುದ್ದವೇ ನನ್ನನ್ನು ಎತ್ತಿಕಟ್ಟುತ್ತಿರುವುದನ್ನು ನೋಡುವುದೇ ಕುತೂಹಲಕಾರಿ ಎಂದು ಗಂಭೀರ್‌ ಬರೆದುಕೊಂಡಿದ್ದಾರೆ.

Continue Reading

LATEST NEWS

ಲಾಡ್ಜ್‌ನ ಹಿಂಭಾಗದ ಪಾಳು ಬಿ*ದ್ದ ಪಾರ್ಕ್‌ನಲ್ಲಿ ಯುವಕನ ಶ*ವ ಪತ್ತೆ

Published

on

ಮಂಗಳೂರು/ಕಲಬುರಗಿ : ಲಾಡ್ಜ್ ಒಂದರ ಹಿಂಭಾಗದ ಪಾಳು ಬಿ*ದ್ದ ಪಾರ್ಕ್‌ನಲ್ಲಿ ಯುವಕನನ್ನು ಮಾರ*ಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹ*ತ್ಯೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

21 ವರ್ಷದ ಸಯ್ಯದ್ ಮೆಹಬೂಬ್ ಅಲಿಯಾಸ್ ಬಾಡಿ ಹ*ತ್ಯೆಗೊಳಗಾದ ಯುವಕ. ಅಪರಿಚಿತ ದುಷ್ಕರ್ಮಿಗಳು ತಡರಾತ್ರಿ ಈ ಕೃ*ತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನೆಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಫಾರೆನ್ಸಿಕ್ ತಂಡ ಹಾಗೂ ಶ್ವಾನ ದಳದಿಂದಲೂ ತನಿಖೆ ಕೈಗೊಳ್ಳಲಾಗಿದೆ. ಮೆಹಬೂಬ್ ಕೆಲ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎನ್ನಲಾಗಿದೆ. ಹಳೆಯ ದ್ವೇಷದ ಹಿನ್ನೆಲೆ ಈ ಕೊ*ಲೆ ನಡೆದಿರುವ ಸಾಧ್ಯತೆಯಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಕೇರಳ: ಯುವತಿಯ ರೀಲ್ಸ್‌ ಹುಚ್ಚಿಗೆ ವ್ಯಕ್ತಿ ಆತ್ಮಹತ್ಯೆ ಪ್ರಕರಣ; ವ್ಲೋಗರ್ ಶಿಂಜಿತಾ ಮುಸ್ತಫಾ ಬಂಧನ

ಈ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Continue Reading

LATEST NEWS

ಕರಾಚಿ ಶಾಪಿಂಗ್ ಮಾಲ್‌ನಲ್ಲಿ ಅ*ಗ್ನಿ ಅವ*ಘಡ; ಒಂದೇ ಮಳಿಗೆಯಲ್ಲಿತ್ತು 30 ಶ*ವಗಳು

Published

on

ಮಂಗಳೂರು/ಕರಾಚಿ : ಕರಾಚಿಯ ಗುಲ್ ಪ್ಲಾಜಾ ಶಾಪಿಂಗ್‌ ಮಾಲ್‌ ನಲ್ಲಿ ಉಂಟಾದ ಅ*ಗ್ನಿ ಅವ*ಘಡದಲ್ಲಿ ಸಾ*ವನ್ನಪ್ಪಿದವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಒಂದೇ ಮಳಿಗೆಯಲ್ಲಿ 30 ಶ*ವಗಳು ಪತ್ತೆಯಾಗಿರೋದು ಶಾ*ಕ್ ಕೊಟ್ಟಿದೆ.  ಸಾ*ವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆಯಿದೆ.

ಪಾಕಿಸ್ತಾನದ ಮನಿ ಕ್ಯಾಪಿಟಲ್‌ ಎಂದೇ ಖ್ಯಾತಿಗಳಿಂದ  ಕರಾಚಿ ಸದರ್‌ ಪ್ರದೇಶದಲ್ಲಿರುವ ಗುಲ್‌ ಶಾಪಿಂಗ್‌ ಮಾಲ್‌ನ ನೆಲಮಾಳಿಗೆಯಲ್ಲಿ ಜ.17 ರಂದು ಬೆಂ*ಕಿ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂ*ಕಿ ಬಳಿಕ ಕ್ಷಣಾರ್ಧದಲ್ಲಿ ಇಡೀ ಮಾಲ್‌ಗೆ ವ್ಯಾಪಿಸಿತ್ತು.

1,200 ಮಳಿಗೆಗಳನ್ನು ಹೊಂದಿರುವ  ಗುಲ್ ಪ್ಲಾಜಾ ಶಾಪಿಂಗ್‌ ಮಾಲ್‌ನಲ್ಲಿ 36 ಗಂಟೆಗಳ ಬಳಿಕ ಬೆಂ*ಕಿಯನ್ನು ನಿಯಂತ್ರಣಕ್ಕೆ ತರಲಾಗಿತ್ತು. ಬೆಂ*ಕಿಯನ್ನ ಮುಚ್ಚುವುದಕ್ಕಾಗಿ ಒಳಗಿದ್ದ ಹಲವು ಮಳಿಗೆಗಳ ಶೆಟರ್‌ಗಳನ್ನ ಬಂದ್‌ ಮಾಡಲಾಗಿತ್ತು.

ಇದನ್ನೂ ಓದಿ : ಕೇರಳ: ಯುವತಿಯ ರೀಲ್ಸ್‌ ಹುಚ್ಚಿಗೆ ವ್ಯಕ್ತಿ ಆತ್ಮಹತ್ಯೆ ಪ್ರಕರಣ; ವ್ಲೋಗರ್ ಶಿಂಜಿತಾ ಮುಸ್ತಫಾ ಬಂಧನ

ಬೆಂಕಿ ನಿಯಂತ್ರಣಕ್ಕೆ ಬಂದ ಬಳಿಕ  ಮಾಲ್ ಒಳಗೆ ಪರಿಶೀಲನೆ ನಡೆಸಲಾಯಿತು. ಈ ವೇಳೆ  ‘ದುಬೈ ಕ್ರಾಕರಿ’ ಎಂಬ ಒಂದೇ ಮಳಿಗೆಯಲ್ಲಿ ಸುಮಾರು 30 ಶ*ವಗಳು ಪತ್ತೆಯಾಗಿವೆ. ಬೆಂ*ಕಿಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಹಾಗೂ ಮಳಿಗೆಯವರು ಶೆಟ್ಟರ್ ಮುಚ್ಚಿಕೊಂಡಿದ್ದಾರೆ. ಈ ವೇಳೆ ದಟ್ಟ ಹೊಗೆ ತುಂಬಿಕೊಂಡು ಸಾ*ವನ್ನಪ್ಪಿರುವ ಸಾಧ್ಯತೆಯಿದೆ ಎಂದು ಶಂಕೆ ವ್ಯಕ್ತವಾಗಿದೆ. ಅಲ್ಲದೇ ಹಲವು ಮಂದಿ ಕಾಣೆಯಾಗಿದ್ದಾರೆಂದು ತಿಳಿದು ಬಂದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page