Connect with us

bangalore

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಲ್‌-ಹಿಂದ್ ಉಗ್ರ ಸಾವು

Published

on

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಅಲ್‌-ಹಿಂದ್ ಸಂಘಟನೆಯ ಶಂಕಿತ ಉಗ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ತಮಿಳುನಾಡು ಮೂಲದ ಸಾದಿಕ್‌ ಪಾಷಾ(47) ಮೃತ ಕೈದಿ.


ಕಳೆದ ಮೂರು ತಿಂಗಳಿನಿಂದ ಸಾದಿಕ್ ಪಾಷಾ ತೀವ್ರ ರಕ್ತದೊತ್ತಡ ಮತ್ತು ಮಧುಮೇಹ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ. ಜೈಲಿನಲ್ಲಿ ಆತನ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮೊದಲು ಜಯದೇವ ಹೃದ್ರೋಗ ಸಂಸ್ಥೆಗೆ ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ(ಫೆ. 6) ತಡರಾತ್ರಿ ಆತ ಮೃತಪಟ್ಟಿದ್ದಾನೆ.

ಕೋಲಾರದ ಸೊನ್ನೆನಹಳ್ಳಿ ನಿವಾಸಿಯಾಗಿದ್ದ ಈತನನ್ನು 2020ರಲ್ಲಿ ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ನಡೆದ ಸ್ಫೋಟಕ ವಸ್ತುಗಳ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಮತ್ತು ಮಡಿಪಾಳ ಉಪವಿಭಾಗದ ಅಂದಿನ ಎಸಿಪಿ ಸುಧೀರ್ ಹೆಗ್ಡೆ ನೇತೃತ್ವದ ತಂಡ ಜನವರಿಯಲ್ಲಿ ಸುಮಾರು ಆರೇಳು ಮಂದಿಯನ್ನು ಬಂಧಿಸಿತ್ತು. ಈ ಸಂಬಂಧ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಇದನ್ನೂ ಓದಿ: ಮೈಸೂರು: ಬೆಳ್ಳಂಬೆಳಗ್ಗೆ ಭೀಕರ ಅಗ್ನಿ ದುರಂತ; 12ಕ್ಕೂ ಹೆಚ್ಚು ಗೋದಾಮುಗಳು ಬೆಂಕಿಗಾಹುತಿ!

ಬಳೀಕ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಿತು. ಐಸಿಸ್ ಪ್ರೇರಿತ ಅಲ್‌-ಹಿಂದ್ ಸಂಘಟನೆಯ ಮೂಲಕ ದಕ್ಷಿಣ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ ಮತ್ತು ಯುವಕರನ್ನು ಉಗ್ರಗಾಮಿ ಸಂಘಟನೆಗೆ ಸೇರಿಸಲು ಪ್ರಚೋದಿಸಿದ ಆರೋಪ ಈತನ ಮೇಲಿತ್ತು. ಮನೆಯಲ್ಲಿ ಕೆಲ ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು.

bangalore

ಕುಡಿದ ಮತ್ತಿನಲ್ಲಿ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು: ಅಂತ್ಯಕ್ರಿಯೆ ವೇಳೆ ಬಯಲಾಯ್ತು ಕೊಲೆ ರಹಸ್ಯ!

Published

on

ಬೆಂಗಳೂರು: ನಶೆಯಲ್ಲಿ ಮೊದಲ ಮಹಡಿಯಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಪ್ರಕರಣವೊಂದು ಈಗ ಕೊಲೆ ರಹಸ್ಯವಾಗಿ ಬದಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನಾಯತ್ ಮೃತಪಟ್ಟ ವ್ಯಕ್ತಿ. ಮಸೂರ್ ಅಹ್ಮದ್ ಎಂಬಾತ ಆರೋಪಿ ಎಂದು ಗುರುತಿಸಲಾಗಿದೆ. ಮೃತ ಇನಾಯತ್ ಮೆಕಾನಿಕ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ.


ಮೃತ ಇನಾಯತ್‌ ಬೆಂಗಳೂರಿನ ವಿವೇಕ ನಗರದ ಆಸ್ಟೀನ್‌ ಟೌನ್‌ನಲ್ಲಿ ತನ್ನ ಮಾವ ಮಸೂರ್‌ ಅಹ್ಮದ್‌ನ ಮನೆಯಲ್ಲಿ ಕಳೆದ 11 ವರ್ಷಗಳಿಂದ ವಾಸವಾಗಿದ್ದ. ಇತ್ತೀಚೆಗೆ ಕೌಟುಂಬಿಕ ಕಲಹದಿಂದಾಗಿ ಇನಾಯತ್‌ಗೆ ಡಿವೋರ್ಸ್‌ ಆಗಿದ್ದು, ಬಳಿಕ ಒಂಟಿಯಾಗಿ ವಾಸವಿದ್ದ ಇನಾಯತ್‌ಗೆ ಮನೆ ಖಾಲಿ ಮಾಡುವಂತೆ ಮಾವ ಮಸೂರ್ ಅಹ್ಮದ್ ಕಿರುಕುಳ ನೀಡಲು ಶುರು ಮಾಡಿದ್ದ.

ಕಳೆದ ಭಾನುವಾರ ಮನೆಗೆ ಬಂದ ಇನಾಯತ್‌ ಮಾವ ಇದೇ ವಿಚಾರಕ್ಕೆ ಜಗಳ ಆಡಿದ್ದಲ್ಲದೇ, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಗಲಾಟೆಯಲ್ಲಿ ಇನಾಯತ್‌ಗೆ ಹಿಗ್ಗಾಮುಗ್ಗ ಥಳಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದ. ಬಳಿಕ ಮದ್ಯದ ಅಮಲಿನಲ್ಲಿ ಮೊದಲ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಇನಾಯತ್‌ ಮೃತಪಟ್ಟಿದ್ದಾನೆ ಎಂದು ಮಾವನೇ ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದ.

ಇದನ್ನೂ ಓದಿ: ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಬಳಿಕ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ತೀರ್ಮಾನ ಮಾಡಿದರು. ಮಸೀದಿಯಲ್ಲಿ ಪ್ರಾರ್ಥನೆ ಮಾಡಿ, ಇನ್ನೇನು ಮೃತದೇಹವನ್ನು ತೆಗೆದುಕೊಂಡು ಹೋಗಬೇಕು ಅನ್ನುವಷ್ಟರಲ್ಲಿ ಪೊಲೀಸರ ಭೇಟಿಯಿಂದ ರಹಸ್ಯ ಬಯಲಾಗಿದೆ. ಪೋಸ್ಟ್ ಮಾರ್ಟಂ ರಿಪೋರ್ಟ್‌ನಲ್ಲಿ ಮೃತದೇಹದ ಹಲವು ಕಡೆಗಳಲ್ಲಿ ಗಾಯವಾಗಿದೆ ಎಂದು ತಿಳಿದುಬಂದಿದ್ದು, ಆರೋಪಿ ಮಸೂರ್ ಅಹ್ಮದ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Continue Reading

bangalore

ಬಾಣಂತನಕ್ಕೆ ಪತ್ನಿ ಹೋಗಿದ್ದ ವೇಳೆ ದುರಂತ: ಹೋಟೆಲ್‌ನಲ್ಲಿ ಕಾಲು ತುಳಿದಿದ್ದಕ್ಕೆ ಯುವಕನ ಭೀಕರ ಕೊಲೆ!

Published

on

ಬೆಂಗಳೂರು: ಹೋಟೆಲ್‌ನಲ್ಲಿ ದೋಸೆ ತಿನ್ನುವ ವೇಳೆ ಆಕಸ್ಮಿಕವಾಗಿ ಕಾಲ್ತುಳಿದ ಕಾರಣಕ್ಕೆ ಉಂಟಾದ ಕ್ಷುಲ್ಲಕ ಜಗಳವೊಂದು 31 ವರ್ಷದ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ಸೋಮವಾರ(ಮಾ.2) ತಡರಾತ್ರಿ ನಡೆದಿದೆ.


ಕೊಲೆಯಾದ ಯುವಕನನ್ನು ಶಶಿಕುಮಾರ್(31) ಎಂದು ಗುರುತಿಸಲಾಗಿದೆ. ಇವರು ಲೋನ್ ರಿಕವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಶಶಿಕುಮಾರ್ ಅವರ ಪತ್ನಿ ಬಾಣಂತನಕ್ಕಾಗಿ ತವರು ಮನೆಗೆ ಹೋಗಿದ್ದರು. ಈ ಕಾರಣದಿಂದ ಅವರು ಒಬ್ಬರೇ ಊಟ ಮಾಡಲು ಹೋಟೆಲ್‌ಗೆ ಬಂದಿದ್ದರು. ತಿಮ್ಮಯ್ಯ ರಸ್ತೆಯಲ್ಲಿರುವ ‘ಶ್ರೀ ರಾಘವೇಂದ್ರ ವೆಜ್ ದೋಸೆ ಕಾರ್ನರ್’ ಹೋಟೆಲ್‌ನಲ್ಲಿ ದೋಸೆ ತಿನ್ನುತ್ತಿದ್ದಾಗ, ಶಶಿಕುಮಾರ್ ಅಲ್ಲಿಗೆ ಬಂದಿದ್ದ ಮಂಜುನಾಥ್ ಎಂಬಾತನ ಕಾಲನ್ನು ಆಕಸ್ಮಿಕವಾಗಿ ತುಳಿದಿದ್ದರು.

ಈ ವಿಷಯವಾಗಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ, ಮಂಜುನಾಥ್ ತನ್ನ ಸಹೋದರ ಭಾಗ್ಯರಾಜ್‌ನಿಗೆ ವಿಷಯ ತಿಳಿಸಿ ಬರಮಾಡಿಕೊಂಡಿದ್ದ. ಮಾರಕಾಸ್ತ್ರದ ಜತೆಗೆ ಬಂದ ಭಾಗ್ಯರಾಜ್‌, ಏಕಾಏಕಿ ಶಶಿ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಶಶಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ಗೋವಿನ ಕಳೇಬರ ಪತ್ತೆ; ಪ್ರತಿಭಟನಾಕಾರರ ವಿರುದ್ಧವೇ ಎಫ್‌ಐಆರ್ ದಾಖಲು

ಬಸವೇಶ್ವರನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ. ಮೃತ ಶಶಿಕುಮಾರ್ ಅವರು ಪೋಷಕರು, ಪತ್ನಿ ಮತ್ತು ಪುಟ್ಟ ಮಗುವನ್ನು ಅಗಲಿದ್ದಾರೆ.

Continue Reading

bangalore

ಅಡುಗೆ ವಿಚಾರಕ್ಕೆ ಅತ್ತೆ-ಸೊಸೆ ಜಗಳ; ಮಾಜಿ ಐಟಿ ಉದ್ಯೋಗಿ ಸುಷ್ಮಾ ದುರಂತ ಅಂತ್ಯ

Published

on

ಬೆಂಗಳೂರು: ಅಡುಗೆ ಮಾಡುವ ವಿಚಾರಕ್ಕೆ ಅತ್ತೆ ಮತ್ತು ಸೊಸೆಯ ನಡುವೆ ನಡೆದ ಜಗಳವು ತಾರಕಕ್ಕೇರಿ, ಮಾಜಿ ಐಟಿ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.


ಮೃತ ಮಹಿಳೆಯನ್ನು 35 ವರ್ಷದ ಸುಷ್ಮಾ ಎಂದು ಗುರುತಿಸಲಾಗಿದೆ. ಇವರು ಈ ಹಿಂದೆ ಡೆಲ್ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸುಷ್ಮಾ ಅವರು ಪುನೀತ್ ಕುಮಾರ್ ಎಂಬುವವರನ್ನು ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು ಮತ್ತು ಈ ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ.

ಅಡುಗೆ ಮನೆಯಲ್ಲಿ ಅಡುಗೆ ಮಾಡುವಂತಹ ಸಾಮಾನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಸುಷ್ಮಾ ಮತ್ತು ಅವರ ಅತ್ತೆ ಕಲ್ಪನಾ ಅವರ ನಡುವೆ ತೀವ್ರವಾದ ಜಗಳ ನಡೆದಿತ್ತು. ಇದರಿಂದ ತೀವ್ರವಾಗಿ ಮನನೊಂದ ಸುಷ್ಮಾ, ಮನೆಯಲ್ಲಿ ನೇಣು ಬಿಗಿದುಕೊಂಡು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಅತ್ತೆ ಕಲ್ಪನಾ ಅವರು ಸುಷ್ಮಾ ಅವರಿಗೆ ಅಡುಗೆ ಮನೆ ಬಳಸಲು ಬಿಡುತ್ತಿರಲಿಲ್ಲ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಮೃತ ಸುಷ್ಮಾ ಅವರ ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆಕಸ್ಮಿಕ ಬೆಂಕಿ; 32 ಪ್ರಯಾಣಿಕರು ಪಾರು

ಸುಷ್ಮಾ ಅವರ ಪೋಷಕರು ನೀಡಿದ ವರದಕ್ಷಿಣೆ ಕಿರುಕುಳದ ದೂರಿನ ಮೇರೆಗೆ, ಬೆಂಗಳೂರು ಪೊಲೀಸರು ಪತಿ ಪುನೀತ್ ಅವರನ್ನು ಬಂಧಿಸಿದ್ದಾರೆ. ಘಟನೆಯ ನಂತರ ಅತ್ತೆ ಕಲ್ಪನಾ ಅವರು ನಾಪತ್ತೆಯಾಗಿದ್ದು, ಪೊಲೀಸರು ಅವರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page