Connect with us

LATEST NEWS

ಏಕರೂಪ ನಾಗರಿಕ ಸಂಹಿತೆ ಬಳಿಕ ಉತ್ತರಖಾಂಡ್‌ನಲ್ಲಿ ಮತ್ತೊಂದು ರೂಲ್ಸ್ ಜಾರಿ..! ಲಿವ್ ಇನ್-ರಿಲೇಶನ್ ಶಿಪ್‌ಗೆ ಖಡಕ್ ಕಾನೂನು

Published

on

ಮಂಗಳೂರು/ಡೆಹ್ರಾಡೂನ್ : ಏಕರೂಪ ನಾಗರಿಕ ಸಂಹಿತೆಯು (ಯುಸಿಸಿ) ಉತ್ತರಾಖಂಡ ರಾಜ್ಯದಲ್ಲಿ ಜನವರಿ 27ರಿಂದ ಜಾರಿಗೆ ಬಂದಿದೆ. ಈ ಕಾನೂನು ಜಾರಿಯಾದ ನಂತರ, ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿರುವ ದಂಪತಿ ರಿಜಿಸ್ಟ್ರಾರ್‌ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

ಯುಸಿಸಿ ಕಾರ್ಯರೂಪಕ್ಕೆ ತಂದ ಮೊದಲ ರಾಜ್ಯವಾಗಲಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಕಾನೂನು ಜಾರಿಗೆ ಸಂಬಂಧಿಸಿದ ಎಲ್ಲ ನಿಯಮಗಳಿಗೆ ಅನುಮೋದನೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತರಬೇತಿ ನೀಡುವುದೂ ಸೇರಿದಂತೆ ಯುಸಿಸಿ ಅನುಷ್ಠಾನಗೊಳಿಸಲು ಎಲ್ಲ ಸಿದ್ದತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.

ಹೊಸ ಕಾನೂನು ಜಾರಿಯಾದ ನಂತರ, ಮದುವೆಯಾಗದೆ ಲಿವ್-ಇನ್‌ನಲ್ಲಿರುವ ಯುವಕರಿಗೆ ನಿಯಮಗಳು ಬದಲಾಗಿವೆ. ಅವರು ಕಡ್ಡಾಯವಾಗಿ ಈ ಮಾಹಿತಿಯನ್ನು ರಿಜಿಸ್ಟ್ರಾರ್‌ಗೆ ನೀಡಬೇಕು. ನಂತರ ಅವರು ಕಾನೂನು ಉಲ್ಲಂಘಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ…

ಇದನ್ನೂ ಓದಿ: ಪತ್ನಿಯ ಕಾಟದಿಂದ ಮನನೊಂದು ಪತಿ ಆ*ತ್ಮಹ*ತ್ಯೆ

ಯುಸಿಸಿ ಅಡಿಯಲ್ಲಿ ಅನೇಕ ಕಾನೂನುಗಳನ್ನು ಜಾರಿ ಮಾಡಲಾಗಿದೆ. ಇದರ ಅಡಿಯಲ್ಲಿ ಲಿವ್-ಇನ್ ರಿಲೇಶನ್‌ ಶಿಪ್‌ನಲ್ಲಿರುವ ಯುವಕರು ಕಡ್ಡಾಯವಾಗಿ ತಮ್ಮ ಲಿವ್‌-ಇನ್ ಸಂಬಂಧದ ಬಗ್ಗೆ ರಿಜಿಸ್ಟ್ರಾರ್‌ಗೆ ಮಾಹಿತಿ ನೀಡಬೇಕು.

ಇದಕ್ಕಾಗಿ, ಯುಸಿಸಿ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ. ಅಲ್ಲಿ ರಿಲೇಶನ್‌ ಶಿಪ್‌ನಲ್ಲಿರುವ ಯುವಕರು, ಅವರ ಸಂಬಂಧದ ಬಗ್ಗೆ ಮಾಹಿತಿಯನ್ನು ನೀಡಬಹುದು ಮತ್ತು ಪ್ರಮಾಣಪತ್ರವನ್ನು ಸಹ ಪಡೆಯಬಹುದು. ಇದರ ನೋಂದಣಿಗಾಗಿ, ದಂಪತಿ ಫೋಟೋ ಮತ್ತು ಇತರ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಅಲ್ಲದೇ, ಯೂನಿಫಾರ್ಮ್ ಸಿವಿಲ್ ಕೋಡ್ ಅಡಿಯಲ್ಲಿ, ಲಿವ್-ಇನ್ ಸಂಬಂಧದಲ್ಲಿರುವ ದಂಪತಿಗೆ ಜನಿಸಿದ ಮಗುವನ್ನು ಕೂಡ ಕಾನೂನುಬದ್ದವೆಂದು ಪರಿಗಣಿಸಲಾಗುತ್ತದೆ ಮತ್ತು ಎಲ್ಲಾ ಹಕ್ಕುಗಳನ್ನು ಪಡೆಯುತ್ತದೆ.

ಲಿವ್-ಇನ್-ರಿಲೇಶನ್ ಶಿಪ್‌ನಲ್ಲಿ ಬ್ರೇಕ್ ಅಪ್ ?
ಯುಸಿಸಿ ಕಾನೂನಿನ ಅಡಿಯಲ್ಲಿ, ದಂಪತಿಗಳ ನಡುವೆ ಬ್ರೇಕ್ ಅಪ್ ಆದರೆ ಈ ಮಾಹಿತಿಯನ್ನು ರಿಜಿಸ್ಟ್ರಾರ್‌ಗೆ ನೀಡಬೇಕಾಗುತ್ತದೆ. ಒಂದು ವೇಳೆ ಲಿವ್-ಇನ್-ರಿಲೇಶನ್ ಶಿಪ್‌ನಲ್ಲಿ ದಂಪತಿಗೆ ಮಗು ಜನಿಸಿದರೆ, ಮಹಿಳೆ ಜೀವನಾಂಶವನ್ನು ಕೂಡ ಕೋರಬಹುದು.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ಕಂಬಳಕ್ಕೆ ವಿದಾಯ ಹೇಳಿದ ‘ಚಾಂಪಿಯನ್ ಕುಟ್ಟಿ’ ; 17 ವರ್ಷದಿಂದ ಕಂಬಳಾಭಿಮಾನಿಗಳ ಫೇವರೇಟ್ ಆಗಿದ್ದ ‘ಕುಟ್ಟಿ’..!

Published

on

ಮಂಗಳೂರು : ಕಳೆದ ಹದಿನೇಳು ವರ್ಷಗಳಿಂದ ಕಂಬಳ ಕ್ಷೇತ್ರವನ್ನು ಆಳಿದ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದ ‘ಚಾಂಪಿಯನ್ ಕುಟ್ಟಿ’ ಕಂಬಳ ಕ್ಷೇತ್ರಕ್ಕೆ ವಿದಾಯ ಹೇಳಿದ್ದಾನೆ. ಈ ಮೂಲಕ ಸುದೀರ್ಘ ಕಾಲ ಕಂಬಳ ಕರೆಯಲ್ಲಿ ತನ್ನ ಗಾಂಭೀರ್ಯ ಓಟದ ಮೂಲಕ ಕಂಬಳಾಭಿಮಾನಿಗಳ ಹೃದಯ ಗೆದ್ದಿದ್ದ ಪ್ರಸಿದ್ಧ ‘ಕುಟ್ಟಿ’ ಕಂಬಳ ಕ್ಷೇತ್ರದಿಂದ ದೂರ ಉಳಿಯಲಿದ್ದಾನೆ.


17 ವರ್ಷದ ಹಿಂದೆ ಮುಲ್ಕಿಯಲ್ಲಿ ಮೊದಲ ಬಾರಿಗೆ ಜ್ಯೂನಿಯರ್ ವಿಭಾಗದಲ್ಲಿ ಕಂಬಳ ಕರೆಗೆ ಇಳಿದು ಮೊದಲ ಓಟದಲ್ಲೇ ಬಹುಮಾನ ಪಡೆಯುವ ಮೂಲಕ ‘ಕುಟ್ಟಿ’ ತನ್ನ ಗೆಲುವಿನ ನಾಗಾಲೋಟ ಆರಂಭಿಸಿತ್ತು. ಇದಾದ ಬಳಿಕ ಸತತ ಎರಡು ವರ್ಷ ಜ್ಯೂನಿಯರ್ ವಿಭಾಗದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ ‘ಚಾಂಪಿಯನ್ ಕುಟ್ಟಿ’ ಕಂಬಳಾಭಿಮಾನಿಗಳ ಹೃದಯ ಗೆದ್ದಿತ್ತು. ಬಾರ್ಕೂರು ಶಾಂತಾರಾಮ ಶೆಟ್ಟಿ ಅವರ ಬಳಿ ಇದ್ದ ‘ಕುಟ್ಟಿ’ ಕೋಪಿಷ್ಠನಾಗಿದ್ದು, ಯಾರ ನಿಯಂತ್ರಣಕ್ಕೂ ಸಿಗುವ ಕೋಣ ಅಲ್ಲ. ಹೀಗಾಗಿ ‘ಚಾಂಪಿಯನ್ ಕುಟ್ಟಿ’ ನಂದಳಿಕೆ ಶ್ರೀಕಾಂತ ಭಟ್ಟರ ತಂಡ ಸೇರಿಕೊಂಡಿತ್ತು. ನಂದಳಿಕೆ ಶ್ರೀಕಾಂತ ಭಟ್ಟರ ಬಳಿ ಮತ್ತಷ್ಟು ಪಳಗಿದ ‘ಕುಟ್ಟಿ’ ಹಲವಾರು ಬಹುಮಾನಗಳನ್ನು ಪಡೆಯುವ ಮೂಲಕ ‘ಚಾಂಪಿಯನ್ ಕುಟ್ಟಿ’ಯಾಗಿ ಬದಲಾಗಿತ್ತು.

ಯಾವುದೇ ಕೋಣಗಳ ಜೊತೆ ಕಟ್ಟಿ ಓಡಿಸಿದ್ರೂ ಬಹುಮಾನ ತಂದು ಕೊಡುವ ಶಕ್ತಿ ಚಾಂಪಿಯನ್ ‘ಕುಟ್ಟಿ’ಗೆ ಇತ್ತು ಅನ್ನೋದೇ ವಿಶೇಷ. ಈ ಕೋಣವನ್ನು ಓಡಿಸಿದ ನಾಲ್ವರು ಓಟಗಾರರು ಕೂಡಾ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಮತ್ತೊಂದು ವಿಶೇಷ. ಸಾಮಾನ್ಯವಾಗಿ ಓಟದಲ್ಲಿ ಹಿಂದೆ ಬಿದ್ದಾಗ ಕೋಣಗಳಿಗೆ ನಿವೃತ್ತಿ ಘೊಷಣೆ ಮಾಡಲಾಗುತ್ತದೆ. ಆದ್ರೆ ಉಪ್ಪಿನಂಗಡಿಯಲ್ಲಿ ನಡೆದ ಕಂಬಳದಲ್ಲಿ ಭಾಗವಹಿಸಿದ ‘ಚಾಂಪಿಯನ್ ಕುಟ್ಟಿ’ ಇಲ್ಲೂ ಕೂಡಾ ಹಗ್ಗ ಹಿರಿಯ ವಿಭಾಗದಲ್ಲಿ ಬಹುಮಾನ ಗಳಿಸಿ ತಾನು ಇನ್ನೂ ಚಾಂಪಿಯನ್ ಅಂತ ತೋರಿಸಿಕೊಟ್ಟಿದೆ. ಆದ್ರೆ ಇದಾದ ಬಳಿಕ ನಂದಳಿಗೆ ಶ್ರೀಕಾಂತ್ ಭಟ್ಟರು ‘ಚಾಂಪಿಯನ್ ಕುಟ್ಟಿ’ಯ ನಿವೃತ್ತಿ ಘೋಷಣೆ ಮಾಡಿದ್ದರೆ. ಕಂಬಳ ಅಭಿಮಾನಿಗಳ ಕರತಾಡನದೊಂದಿಗೆ ‘ಚಾಂಪಿಯನ್ ಕುಟ್ಟಿ’ಗೆ ಗೌರವ ನೀಡಿ ವಿಶೇಷ ರೀತಿಯಲ್ಲಿ ಬೀಳ್ಕೊಡಲಾಗಿದೆ.

Continue Reading

LATEST NEWS

ಭಾರತದಲ್ಲೇ ಶ್ರೀಮಂತ ಹಾಸ್ಯ ನಟ ಬ್ರಹ್ಮಾನಂದಂ ಅವರ ಆಸ್ತಿ ಕೇಳಿದ್ರೆ ಶಾಕ್ ಆಗ್ತೀರಾ !

Published

on

‘ಟಾಲಿವುಡ್‌ ಕಾಮಿಡಿ ಕಿಂಗ್’ ಎಂದೇ ಖ್ಯಾತರಾಗಿರುವ ತೆಲುಗು ನಟ ಬ್ರಹ್ಮಾನಂದಂ ಭಾರತದ ಅತ್ಯಂತ ಶ್ರೀಮಂತ ಹಾಸ್ಯನಟ ಎಂದು ಅನೇಕ ವರದಿಗಳು ತಿಳಿಸಿವೆ.


ಹೌದು, ಪದ್ಮಶ್ರೀ ಪುರಸ್ಕೃತ ಹಾಸ್ಯ ನಟ ಬ್ರಹ್ಮಾನಂದಂ ಇದುವರೆಗೂ ಬರೀ ನಟರಾಗಿ ಎಲ್ಲರಿಗೂ ಪರಿಚಯಗೊಂಡಿದ್ದರು. ಆದ್ರೆ ಅವರು ಕೇವಲ ನಟನಲ್ಲದೇ ಒಬ್ಬ ಅದ್ಭುತ ಚಿತ್ರ ಕಲಾವಿದ ಕೂಡ ಆಗಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ತೆರೆ ಮೇಲೆ ಎಲ್ಲರನ್ನೂ ನಗಿಸುತ್ತಾರೆ. ಒಂದು ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಪಡೆದುಕೊಂಡಿದ್ದಾರೆ.

ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ (ವಿಶ್ವ ದಾಖಲೆ) ಬ್ರಹ್ಮಾನಂದಂ ತಮ್ಮ ವೃತ್ತಿಜೀವನದಲ್ಲಿ ಸುಮಾರು 500 ಕೋಟಿಗೂ ಹೆಚ್ಚು ಆಸ್ತಿಯನ್ನು ಸಂಪಾದಿಸಿದ್ದಾರೆ. ಇದು ಭಾರತದ ಸ್ಟಾರ್​ ನಟರಾದ ರಣಬೀರ್ ಕಪೂರ್ (350 ಕೋಟಿ), ಪ್ರಭಾಸ್ ( 300 ಕೋಟಿ) ಮತ್ತು ರಜನಿಕಾಂತ್ (400 ಕೋಟಿ) ಗಿಂತ ಹೆಚ್ಚು ಶ್ರೀಮಂತನನ್ನಾಗಿ ಮಾಡಿದೆ.

ಭಾರತದ ಇತರ ಪ್ರಮುಖ ಹಾಸ್ಯನಟರು ಯಾರೂ ಬ್ರಹ್ಮಾನಂದಂ ಅವರ ಹತ್ತಿರಕ್ಕೂ ಸುಳಿದಿಲ್ಲ. ಕಪಿಲ್ ಶರ್ಮಾ ಅವರ ನಿವ್ವಳ ಮೌಲ್ಯ 300 ಕೋಟಿ ರೂ. ಎಂದು ವರದಿಯಾಗಿದೆ. ದೇಶದ ಇತರ ಯಾವುದೇ ಹಾಸ್ಯನಟರು ತಮ್ಮ ನಿವ್ವಳ ಮೌಲ್ಯದಲ್ಲಿ 100 ಕೋಟಿ ರೂ.ಗಳನ್ನು ದಾಟಿಲ್ಲ. ಆದರೆ, ಬ್ರಹ್ಮಾನಂದಂ 500 ಕೋಟಿ ಗೂ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಟ್ರೆಂಡ್ ಬದಿಗಿಟ್ಟು ಮಗಳಿಗೆ ಅರ್ಥಗರ್ಭಿತ ಹೆಸರಿಟ್ಟ ನಟಿ ನೇಹಾ ಗೌಡ; ವ್ಹಾವ್ ಅಂದ್ರು ಫ್ಯಾನ್ಸ್!

ಬ್ರಹ್ಮಾನಂದಂ ಅವರು ಮೂಲತಃ ಆಂಧ್ರಪ್ರದೇಶದ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. 80ರ ದಶಕದಲ್ಲಿ ತಮ್ಮ ಮಿಮಿಕ್ರಿ ಕೌಶಲ್ಯಕ್ಕೆ ಹೆಸರುವಾಸಿಯಾದ ರಂಗಭೂಮಿ ಕಲಾವಿದರಾಗಿ ತಮ್ಮ ಶೋಬಿಜ್ ವೃತ್ತಿ ಜೀವನವನ್ನು ಪ್ರಾರಂಭಿಸಿದರು.

ಇದರಿಂದ 1985ರಲ್ಲಿ ಟಿವಿಗೆ ಪಾದಾರ್ಪಣೆ ಮಾಡಿದ್ರು. 1987ರಲ್ಲಿ ಸಿನಿಮಾಗೆ ಪಾದಾರ್ಪಣೆ ಮಾಡಿದ್ದರು. ಆಹಾ ನಾ ಪೆಲ್ಲಂಟ ಹೆಸರಿನ ಸಿನಿಮಾ ಅವರ ವೃತ್ತಿಜೀವನದಲ್ಲಿ ಹೊಸ ತಿರುವು ನೀಡಿತು. ಅಂದಿನಿಂದ, ಆಫರ್‌ಗಳು ಹರಿದು ಬಂದವು.

Continue Reading

FILM

ಟ್ರೆಂಡ್ ಬದಿಗಿಟ್ಟು ಮಗಳಿಗೆ ಅರ್ಥಗರ್ಭಿತ ಹೆಸರಿಟ್ಟ ನಟಿ ನೇಹಾ ಗೌಡ; ವ್ಹಾವ್ ಅಂದ್ರು ಫ್ಯಾನ್ಸ್!

Published

on

ಮಂಗಳೂರು/ಬೆಂಗಳೂರು : ಲಕ್ಷ್ಮೀ ಬಾರಮ್ಮ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ನಟಿ ನೇಹಾ ಗೌಡ. ಗೊಂಬೆ ಎಂದೇ ಖ್ಯಾತರಾಗಿದ್ದರು ನೇಹಾ. ಅದಾದ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 9 ರ ಶೋ ಮೂಲಕನೂ ಗಮನ ಸೆಳೆದಿದ್ದರು. ಅವರ ಪತಿ ಚಂದನ್ ಕೂಡ ‘ಅಂತರಪಟ’ ಧಾರಾವಾಹಿಯಲ್ಲಿ ನಟಿಸಿ ಮನೆ ಮಾತಾಗಿದ್ದರು. ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ನಾಮಕರಣ ಶಾಸ್ತ್ರ ಅದ್ದೂರಿಯಾಗಿ ನಡೆದಿದೆ.

ಬೆಂಗಳೂರಿನಲ್ಲಿ ಅದ್ದೂರಿ ಸಮಾರಂಭ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಕಿರುತೆರೆ, ಹಿರಿತೆರೆ ಕಲಾವಿದರು ಆಗಮಿಸಿ ಶುಭ ಹಾರೈಸಿದರು.

ವಿಶೇಷ ಅಂದ್ರೆ ಟ್ರೆಂಡ್ಸ್‌ ಬದಿಗಿಟ್ಟು ನೇಹಾ ದಂಪತಿ ಚಂದದ ಹೆಸರೊಂದನ್ನು ಮಗಳಿಗಿಟ್ಟಿದ್ದಾರೆ. ಇತ್ತೀಚೆಗೆ ವಿಭಿನ್ನ ಹೆಸರುಗಳದೇ ರಾಯಭಾರವಾಗಿರುವಾಗ ನೇಹಾ – ಚಂದನ್ ಮಾತ್ರ ಅರ್ಥಪೂರ್ಣವಾಗಿರುವ ಹೆಸರಿಟ್ಟಿದ್ದಾರೆ.

ಹೌದು, ಈ ದಂಪತಿ ಮಗುವಿಗೆ ಇಟ್ಟಿರುವ ಹೆಸರು ‘ಶಾರದಾ’. ದಂಪತಿ ನಿಲುವಿಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಶುಭ ಹಾರೈಸುತ್ತಿದ್ದಾರೆ.

ಇದನ್ನೂ ಓದಿ : ಸಿಕಂದರ್ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಒಬ್ಬರೇ ಅಲ್ಲ..! ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಕನ್ನಡಿಗ..?

ಬಾಲ್ಯದಲ್ಲೇ ಪ್ರೀತಿಯಲ್ಲಿ ಬಿದ್ದಿದ್ದ ನೇಹಾ – ಚಂದನ್ 2018ರಲ್ಲಿ ವಿವಾಹವಾಗಿದ್ದರು. ಕಳೆದ ವರ್ಷ ಅಕ್ಟೋಬರ್‌ 29ರಂದು ನೇಹಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page