Connect with us

BELTHANGADY

ಕಾಂತಾರ’ ಯಶಸ್ಸಿನ ಬೆಳ್ಳಿತೆರೆಗೆ ಬರಲಿದೆ ತುಳುನಾಡ ಆರಾಧ್ಯ ದೈವ ‘ಕೊರಗಜ್ಜನ’ ಸಿನಿಮಾ..!

Published

on

ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜ ಆಧಾರಿತ ಸಿನಿಮಾ ತೆರೆಗೆ ಬರಲು ಸಿದ್ದತೆಗಳು ಆರಂಭವಾಗಿದೆ.ಖ್ಯಾತ ಹಾಲಿವುಡ್- ಬಾಲಿವುಡ್ ನಟ ಕಬೀರ್ ಬೇಡಿ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಖ್ಯಾತ ನಾಟಿಯರಾದ ಭವ್ಯ ಮತ್ತು ಶ್ರುತಿ ಕೂಡಾ ಅಭಿನಯಿಸುತ್ತಿದ್ದಾರೆ.

ಮಂಗಳೂರು : ತುಳುನಾಡಿನ ದೈವಾಧಾರಿತ ಚಲನ ಚಿತ್ರ ಕಾಂತಾರ ಸೂಪರ್ ಹಿಟ್ ಆಗಿ ದೇಶ ವಿದೇಶಗಳಲ್ಲಿ ಸದ್ದು ಮಾಡಿದ ಬಳಿಕ ದೈವಾಧಾರಿತ ಸಿನಿಮಾ ನಿರ್ಮಾಣಗಳತ್ತ ಒಲವು ಹೆಚ್ಚಿದೆ.

ಇದಕ್ಕೆ ಪೂರಕವಾಗಿ ಇದೀಗ ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜ ಆಧಾರಿತ ಸಿನಿಮಾ ತೆರೆಗೆ ಬರಲು ಸಿದ್ದತೆಗಳು ಆರಂಭವಾಗಿದೆ.

ತ್ರಿವಿಕ್ರಮ್ ಸಪಲ್ಯ ನಿರ್ಮಿಸುತ್ತಿರುವ , ಸುಧೀರ್ ಅತ್ತಾವರ್ ನಿರ್ದೇಶನದಲ್ಲಿ ಈ “ಕರಿ ಹೈದ….ಕರಿ ಅಜ್ಜ …”ಹೆಸರಿನ ಸಿನಿಮಾ ತಯಾರಾಗುತ್ತಿದೆ.

ಬೆಳ್ತಂಗಡಿ ತಾಲೂಕಿನ ಬಳ್ಳಮಂಜದ ಇತಿಹಾಸ ಪ್ರಸಿದ್ಧ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಸ್ಥಳಿಯ ಶಾಸಕ ಹರೀಶ್ ಪೂಂಜ ರವರು ಕ್ಯಾಮೆರ ಚಾಲನೆ ಮಾಡುವುದರ ಮೂಲಕ ಅದ್ದೂರಿ ಚಾಲನೆ ನೀಡಿದರು.

ಮಾತ್ರಶ್ರೀ ಕಮಲ ಕೆ ಸಪಲ್ಯ ಆರಂಭ ಫಲಕ ತೋರಿಸಿದರು. ಇತ್ತೀಚಿನ ಹಲವಾರು ವರ್ಷಗಳಿಂದ ಕೊರಗಜ್ಜನ ಮಹಿಮೆ ಮತ್ತು ಕಾರ್ಣಿಕವನ್ನು ತೆರೆಯ ಮೇಲೆ ತರಬೇಕೆಂದು ಹಲವಾರು ನಿರ್ಮಾಪಕರು ಯತ್ನಿಸುತ್ತಿದ್ದರು.

ಇದೀಗ ಸುಧೀರ್ ಅತ್ತಾವರ್ ಕೊರಗಜ್ಜ ನ ಜೀವನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ, ಕೊರಗಜ್ಜನ ಜನಾಂಗದ ಮಹನೀಯರೊಂದಿಗೆ ಚರ್ಚಿಸಿ, ಸುಮಾರು 12ನೇ ಶತಮಾನದಲ್ಲಿದ್ದ ಕೊರಗಜ್ಜನ ನಿಜ ಬದುಕಿನ ಯಾರಿಗೂ ತಿಳಿದಿರದಂತಹ ಸಾಕಷ್ಟು ವಿಷಯಗಳನ್ನು ಈ ಸಿನಿಮಾದ ಮೂಲಕ ಜಗತ್ತಿಗೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಮುಹೂರ್ತ ನಡೆಸುವ ಮೊದಲು ಕೊರಗಜ್ಜನ ಸಮುದಾಯದ ಪ್ರಮುಖ ವ್ಯಕ್ತಿಗಳು ಡೊಳ್ಳು -ತಮಟೆಗಳ ಸ ವಿಶೇಷ ಪೂಜೆಯನ್ನು ಶ್ರೀ ಸುಂದರ ಬೆಳುವಾಯಿ, ಶ್ರೀ ಬಾಬು ಪಾಂಗಳ, ಶ್ರೀ ಬಲ್ ರಾಜ್, ಶ್ರೀ ರಮೇಶ್ ಮೊದಲಾದ ಮಹನೀಯರು ಮತ್ತು ಗುರಿಕಾರರು ಹಳೆಯ ಶೈಲಿಯ ಪೂಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟು ಸಿನೆಮಾಕ್ಕೆ ಶುಭ ಹಾರೈಸಿದರು. ಚಿತ್ರದಲ್ಲಿ ಖ್ಯಾತ ನಾಟಿಯರಾದ ಭವ್ಯ ಮತ್ತು ಶ್ರುತಿ ಕೂಡಾ ಅಭಿನಯಿಸುತ್ತಿದ್ದಾರೆ.

ಭರತ್ ಸೂರ್ಯ ಎನ್ನುವ ಹೊಸ ಕಲಾವಿದನನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ.

ವಿದ್ಯಾಧರ್ ಶೆಟ್ಟಿ ಸಂಕಲನದ ಜೊತೆಗೆ ಎಂಟುನೂರು ವರ್ಷಗಳ ಇತಿಹಾಸದ ದಾಖಲೆ ಮತ್ತು ಪುರಾವೆಗಳನ್ನು ಕಲೆ ಹಾಕುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ

BELTHANGADY

ಭಾರೀ ಮಳೆಗೆ ಬೆಳ್ತಂಗಡಿಯಲ್ಲಿ ಧರೆಗುರುಳಿದ 131 ವಿದ್ಯುತ್ ಕಂಬಗಳು

Published

on

ಬೆಳ್ತಂಗಡಿ: ಕಳೆದ ಒಂದು ವಾರದಿಂದ ವಾತಾವರಣದ ಉಷ್ಣತೆಯು ವಿಪರೀತ ಏರಿಕೆಯಾಗಿತ್ತು. ಆದರೆ ಬಿಸಿಯ ಗಾಳಿಗೆ ತತ್ತರಿಸಿ ಹೋಗಿದ್ದ ಜನರಿಗೆ ಇದೀಗ ವರುಣದೇವ ತಂಪೆರೆದಿದ್ದಾನೆ. ರಾಜ್ಯದ ಹಲವು ಭಾಗಗಳಲ್ಲಿ ಈಗ ಮಳೆಯ ಆರ್ಭಟ ಜೋರಾಗಿದೆ.

ಕರಾವಳಿಯಲ್ಲೂ ಮಳೆಯ ಸಿಂಚನವಾಗಿದ್ದು, ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಕೆಲ ತಾಲೂಕಿನಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯ ರಭಸಕ್ಕೆ 131 ವಿದ್ಯುತ್ ಕಂಬಗಳು ಧರೆಗುರುಳಿದೆ.

ರಭಸದ ಗಾಳಿಯೊಂದಿಗೆ ಆರ್ಭಟಿಸಿದ ವರ್ಷದ ಮೊದಲ ಮಳೆಗೆ ಬೆಳ್ತಂಗಡಿಯಲ್ಲಿ ಒಟ್ಟು 131 ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಹೀಗಾಗಿ ತಾಲೂಕಿನೆಲ್ಲೆಡೆ ಕರೆಂಟ್ ಇಲ್ಲದೇ ಜನರು ಪರದಾಡುವಂತೆ ಆಗಿದೆ. ಅಪಾರ ಸಂಖ್ಯೆಯಲ್ಲಿ ಅಡಿಕೆ, ತೆಂಗು, ಬಾಳೆ ಗಿಡಗಳು ತುಂಡಾಗಿ ಅಪಾರ ಪ್ರಮಾಣದ ಕೃಷಿನಷ್ಟ ಉಂಟಾಗಿದೆ.

Continue Reading

BELTHANGADY

ಶಿವರಾತ್ರಿಗೆ ಪಾದಯಾತ್ರೆ ಮಾಡುತ್ತಿದ್ದವರ ಮೇಲೆ ಹರಿದ ಬಸ್; ಇಬ್ಬರು ಸಾವು

Published

on

ಹಾಸನ: ಶಿವರಾತ್ರಿಗೆ ಧರ್ಮಸ್ಥಳ ಯಾತ್ರೆ ಮಾಡುತ್ತಿದ್ದ ಪಾದಚಾರಿಗಳ ಮೇಲೆ ಖಾಸಗಿ ಬಸ್ ಹರಿದ ಪರಿಣಾಮ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ ಹಾಸನ ತಾಲೂಕಿನ ಕೆಂಚಟ್ಟಹಳ್ಳಿ ಬಳಿ ನಡೆದಿದೆ.

ಮಂಡ್ಯ ಜಿಲ್ಲೆಯ ಸುರೇಶ್ (60) ಹಾಗೂ ಕುಮಾರ್ (55) ಮೃತ ದುರ್ದೈವಿಗಳು. ಘಟನೆಯಲ್ಲಿ ದಿನೇಶ್‌ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ತಕ್ಷಣವೇ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದರು. ದಾರಿ ಮಧ್ಯೆ ಖಾಸಗಿ ಬಸ್ ಪಾದಾಯಾತ್ರಿಗಳಿಗೆ ಡಿಕ್ಕಿ ಹೊಡೆದಿದೆ. ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

Continue Reading

BELTHANGADY

ಬೆಳ್ತಂಗಡಿ: ಹೃದಯಾಘಾತದಿಂದ ಸಾವನ್ನಪ್ಪಿದ ಪದವಿ ವಿದ್ಯಾರ್ಥಿ

Published

on

ಬೆಳ್ತಂಗಡಿ: ಹೃದಯಾಘಾತದಿಂದ ಪದವಿ ವಿದ್ಯಾರ್ಥಿ ನಿಧನವಾಗಿರುವ ಘಟನೆ ತೋಟತ್ತಾಡಿ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿ ಜಯರಾಮ (19) ರವರಿಗೆ ಹೃದಯಾಘಾತ ಸಂಭವಿಸಿದ್ದು ಇಂದು(ಫೆ.17) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಇವರು ಬೆಳ್ತಂಗಡಿ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು. ಜ. 22 ರಂದು ಬೆಳಿಗ್ಗೆ ಏಕಾಏಕಿ ಹೃದಯಾಘಾತ ಸಂಭವಿಸಿದ್ದು ಬ್ರೆನ್ ಸ್ಟೋಕ್ ಕೂಡ ಸಂಭವಿಸಿತ್ತು. ಈ ವೇಳೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಜಯರಾಮರವರು ಚಿಕಿತ್ಸೆ ಫಲಾಕಾರಿಯಾಗದೆ ಫೆ.17 ರಂದು ನಿಧನರಾಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page