Connect with us

LATEST NEWS

ಟರ್ಕಿಯಲ್ಲಿ ಮತ್ತೊಂದು ಪವಾಡ : ಭೂಕಂಪದಲ್ಲಿ 52 ದಿನಗಳ ಬಳಿಕ ಬದುಕಿ ಬಂದ ಮಿರಾಕಲ್‌ ಮಗುವಿನ ‘ಅಮ್ಮ’.!

Published

on

ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ, ಸಾವಿರಾರು ಜನರ ಸಾವುನೋವಿಗೆ ಕಾರಣವಾಗಿದ್ದ ಟರ್ಕಿ ಮಹಾಭೂಕಂಪದಲ್ಲಿ ಪವಾಡಸದೃಶವಾಗಿ ಬದುಕುಳಿದಿದ್ದ ಪುಟಾಣಿ ಕಂದಮ್ಮ ಇದೀಗ ತನ್ನ ಹೆತ್ತಮ್ಮನ ಮಡಿಲು ಸೇರಿದೆ.

ಇಸ್ತಾಂಬುಲ್ :ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ, ಸಾವಿರಾರು ಜನರ ಸಾವುನೋವಿಗೆ ಕಾರಣವಾಗಿದ್ದ ಟರ್ಕಿ ಮಹಾಭೂಕಂಪದಲ್ಲಿ ಪವಾಡಸದೃಶವಾಗಿ ಬದುಕುಳಿದಿದ್ದ ಪುಟಾಣಿ ಕಂದಮ್ಮ ಇದೀಗ ತನ್ನ ಹೆತ್ತಮ್ಮನ ಮಡಿಲು ಸೇರಿದೆ.

ಫೆಬ್ರವರಿ 13ರಂದು ಈ ಮಗುವಿನ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಈ ಮಗು ಬದುಕಿದ್ದು ಪವಾಡವೇ ಸರಿ ಎಂದು ಜನರು ಅಭಿಪ್ರಾಯಪಟ್ಟಿದ್ದರು. ಇದೀಗ ಆ ಮಗುವಿನ ಅಮ್ಮನೂ ಜೀವಂತವಾಗಿರುವ ಸುದ್ದಿ ಬಂದಿದೆ.

ಟರ್ಕಿಯಲ್ಲಿ ಭಾರೀ ಭೂಕಂಪ ಸಂಭವಿಸಿದ ಬಳಿಕ ಅವಶೇಷಗಳಡಿಯಿಂದ 128 ಗಂಟೆಗಳ ನಂತರ ರಕ್ಷಿಸಲ್ಪಟ್ಟ “ಪವಾಡಸದೃಶ್ಯ ಕಂದಮ್ಮಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಹೃದಯಗಳನ್ನು ಗೆದ್ದಿತ್ತು.

ಈ ಪುಟ್ಟ ಮಗುವಿನ ಫೋಟೊ ವೈರಲ್‌ ಆಗಿತ್ತು. ಆದರೆ, ಭೂಕಂಪದಲ್ಲಿ ಪುಟ್ಟ ಕಂದಮ್ಮನ ತಾಯಿ ಮೃತಪಟ್ಟಿದ್ದಾರೆ ಎನ್ನಲಾಗಿತ್ತು.

ಆದರೆ, ಇದೀಗ ಬಂದ ವರದಿ ಪ್ರಕಾರ ಆ ಅಮ್ಮ ಜೀವಂತವಾಗಿದ್ದಾರೆ. ಭೂಕಂಪ ಸಂಭವಿಸಿದ 52 ದಿನಗಳ ಬಳಿಕ ಬದುಕಿ ಬಂದಿದ್ದಾರೆ. ಈಕೆ ಬದುಕಿ ಬಂದಿರುವ ಕುರಿತು ಸಚಿವ ಆಂಟನ್ ಗೆರಾಶ್ಚೆಂಕೊ ಸ್ಪಷ್ಟಪಡಿಸಿದ್ದಾರೆ.

“ಟರ್ಕಿಯಲ್ಲಿ ಭೂಕಂಪದ ನಂತರ 128 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿ ಕಳೆದ ಮಗುವಿನ ಈ ಚಿತ್ರವನ್ನು ನೀವು ಬಹುಶಃ ನೆನಪಿಸಿಕೊಳ್ಳುತ್ತೀರಿ.

ಮಗುವಿನ ತಾಯಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆದರೆ ಆ ತಾಯಿ ಜೀವಂತವಾಗಿದ್ದಾಳೆ.!

ಆಕೆಗೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸುಮಾರು 54 ದಿನಗಳ ಅಂತರ ಮತ್ತು ಡಿಎನ್‌ಎ ಪರೀಕ್ಷೆಯ ನಂತರ ಆ ಮಗು ಮತ್ತು ತಾಯಿ ಮತ್ತೆ ಒಟ್ಟಿಗೆ ಇದ್ದಾರೆ, ”ಎಂದು ಅವರು ಟ್ವೀಟ್ ಮಾಡಿದ್ದಾರೆ.

ನೆಟ್ಟಿಗರು “ಇನ್ನೊಂದು ಪವಾಡ” ಎಂದು ಕರೆದಿದ್ದಾರೆ. “ನೋವಿನ ಕತೆ, ಆದರೆ, ಈ ಕತೆ ಸುಂದರ ಅಂತ್ಯಕಂಡಿದೆ. ಮಗು ಮತ್ತು ತಾಯಿ ಒಂದಾಗಿರುವುದು ಆನಂದಬಾಷ್ಪ ತರಿಸಿದೆ” ಎಂದು ಟ್ವಿಟ್ಟರ್‌ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ.

LATEST NEWS

ಪರ್ಯಾಯ ಮೆರವಣಿಗೆಗೆ ಭಗವಾಧ್ವಜ ಮೂಲಕ ಚಾಲನೆ ಕೊಟ್ಟಿದ್ದು, ಪಾಕಿಸ್ತಾನ ಧ್ವಜ ಹಿಡಿದಲ್ಲ-ಶಾಸಕ ಯಶ್ಪಾಲ್

Published

on

ಉಡುಪಿ: ಉಡುಪಿ ಪರ್ಯಾಯ ಮಹೋತ್ಸವಕ್ಕೆ ಜಿಲ್ಲಾಧಿಕಾರಿಗಳು ಕೇಸರಿ ಧ್ವಜ ತೋರಿಸಿ ಚಾಲನೆ ನೀಡಿರುವ ವಿಚಾರ ವಿವಾದವಾಗಿ ಮಾರ್ಪಟ್ಟಿದೆ. ಇದಕ್ಕೆ ಈಗಾಗಲೇ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ನಗರಸಭೆಯ ಆಡಳಿತ ಅಧಿಕಾರಿಯಾಗಿದ್ದ ಹಿನ್ನೆಲೆಯಲ್ಲಿ ತಾನು ಭಾಗಿಯಾಗಿದ್ದೇನೆ ವಿನಃ ಯಾವುದೇ ರಾಜಕೀಯ ಕಾರಣಗಳಿಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ಜಿಲ್ಲಾಧಿಕಾರಿ ಕೈಗೆ ಕೇಸರಿ ಧ್ವಜ ಕೊಟ್ಟಿರುವ ಉಡುಪಿ ಶಾಸಕ ಯಶಪಾಲ್  ಸುವರ್ಣ ಅವರು ಜಿಲ್ಲಾಧಿಕಾರಿ ಸ್ವರೂಪ ಪರ ಮಾತನಾಡಿದ್ದಾರೆ.

ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಆಕ್ಷೇಪಕ್ಕೆ ಅರ್ಥ ಇಲ್ಲ, ಪರ್ಯಾಯ ಮೆರವಣಿಗೆ ಭಗವಾಧ್ವಜ ಮೂಲಕ ಚಾಲನೆ ಕೊಟ್ಟಿದ್ದಾರೆ. ಹಿಂದೆಯೂ ಕೂಡ ಇದೇ ರೀತಿ ಚಾಲನೆ ನೀಡಲಾಗುತ್ತಿತ್ತು. ಒಂದು ವೇಳೆ ಅವರು ಪಾಕಿಸ್ತಾನ ಧ್ವಜ ಕೊಟ್ಟಿದ್ದರೆ ಟೀಕೆ ಮಾಡಬೇಕಿತ್ತು. ಡಿಸಿ ಅವರ ಸ್ಥಾನದಲ್ಲಿ ಅಂದು ನಮಗೆ ಉಸ್ತುವಾರಿ ಸಚಿವರು ಲಭಣ್ಯವಿರುತ್ತಿದ್ದರೆ ಅವರಿಮದಲೇ ಭಗವಾಧ್ವ ಹಜ ಮೂಲಕ ಚಾಲನೆ ನೀಡುತ್ತಿದ್ದೆವು. ಆವಾ್ಗಲೂ ಇವರು ಇದೇ ರೀತಿ ಅವರನ್ನು ರಾಜೀನಾಮೆಗೆ ಒಒತ್ತಾಯಿಸುತ್ತಿದ್ರಾ ಎಂಬುವುದು ಪ್ರಶ್ನೆಯಾಗಿದೆ.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದವರ ಮೇಲೆ ಕ್ರಮ ಕೈಗೊಂಡಿಲ್ಲ. ಬೇರೆ ಬೇರೆ ಸಂದರ್ಭದಲ್ಲಿ ಪಾಕಿಸ್ತಾನ ಧ್ವಜ ಹರಿದಾಗ ಕಣ್ಣು ಮುಚ್ಚಿ ಕೂರುತ್ತಾರೆ.   ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟನೆಯನ್ನು ಕೊಡಲಿ. ಇಲ್ಲವಾದರೆ ಅದೆಷ್ಟೇ ದೊಡ್ಡ ರಾಜಕೀಯ ನಾಯಕ ಬಂದ್ರೂ ಕೂಡಾ ಇನ್ಮುಂದೆ ನಾವು ಭಗವಾಧ್ವಜ ಮೂಲಕವೇ ಸ್ವಾಗತ ಕೊಡುತ್ತೇವೆ ಇದು ಅವರಿಗೆ ನನ್ನ ಓಪನ್ ಚಾಲೆಂಜ್.  ಪರ್ಯಾಯದ  ಯಶಸ್ಸನ್ನು ಇವರಿಗೆ ಸಹಿಸಲು ಆಗಲ್ಲ ಎಂದು ಟೀಕಿಸಿದ್ದಾರೆ. ಇನ್ನು ಉಡುಪಿ ಪರ್ಯಾಯಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂಧೂ ಅವರು ಪ್ರಶ್ನಿಸಿ ವಾಗ್ದಾಳಿ ಮಾಡಿದ್ದಾರೆ.

 

Continue Reading

LATEST NEWS

ಉಡುಪಿ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ, ಕಾರಣ ನಿಗೂಢ

Published

on

ಉಡುಪಿ: ಪ್ರೌಢ ಶಾಲೆಯ ವಿದ್ಯಾರ್ಥಿನಿಯೊಬ್ಬಳು ವಾಸವಾಗಿದ್ದ ಬಿಡಾರದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಉಡುಪಿಯ ಬೀಡಿನಗುಡ್ಡೆಯಲ್ಲಿ ನಡೆದಿದೆ.

ಬೋರ್ಡ್ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಬರ್ಮವ್ವ ಮೃತ ಬಾಲಕಿ. ಖಾಸಗಿ ನಿವೇಶನದಲ್ಲಿದ್ದ ಜೋಪಡಿಯನ್ನು ಬಾಡಿಗೆ ಪಡೆದುಕೊಂಡು ಮೃತ ಬಾಲಕಿಯ ಹೆತ್ತವರು‌ ವಾಸವಾಗಿದ್ದರು. ಮನೆ ಮಂದಿ ಬೆಳಿಗ್ಗೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಬಾಲಕಿಯಿಂದ ಈ ಕೃತ್ಯ ನಡೆದಿದೆ.

ನಗರ ಪೋಲಿಸ್  ಠಾಣೆಯ ಎಸ್ ಐ ಗಂಗಪ್ಪ, ಮುಖ್ಯ ಆರಕ್ಷಕಿಯರಾದ ಆಶಾ ಲತಾ, ಜಾಸ್ವ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದ್ದಾರೆ. ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ಮೃತ ದೇಹವನ್ನು ನೇಣು ಕುಣಿಕೆಯಿಂದ ತೆರವುಗೊಳಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಇಲಾಖೆಗೆ ನೆರವಾದರು.

Continue Reading

DAKSHINA KANNADA

ನಾಳೆ(ಜ.21) ಕದ್ರಿ ಮ್ಯೂಸಿಕಲ್ ನೈಟ್ಸ್ 2026 : ರಿಷಬ್ ಶೆಟ್ಟಿ ಭಾಗಿ

Published

on

ಮಂಗಳೂರು : ಕದ್ರಿ ಶ್ರೀಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ  ಪ್ರಯುಕ್ತ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದಲ್ಲಿ ಕದ್ರಿ ಈವೆಂಟ್ಸ್ ಅರ್ಪಿಸುವ  ‘ಕದ್ರಿ ಮ್ಯೂಸಿಕಲ್ ನೈಟ್ಸ್ 2026’ ನಾಳೆ(ಜ.21) ಸಂಜೆ 7 ಗಂಟೆಯಿಂದ ಕದ್ರಿ ಮೈದಾನದಲ್ಲಿ ಅದ್ದೂರಿಯಾಗಿ ಜರುಗಲಿದೆ.

ಎಂದಿನಂತೆ ಈ ಬಾರಿಯೂ ತಾರಾ ಮೆರುಗು ಇರಲಿದ್ದು, ಕಾರ್ಯಕ್ರಮಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ಆಗಮಿಸಲಿದ್ದಾರೆ.

ಆಯೋಜಕ ಜಗದೀಶ್ ಕದ್ರಿ ಈ ಬಗ್ಗೆ ಮಾತನಾಡಿ, ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ಕದ್ರಿ ಮ್ಯೂಸಿಕಲ್ ನೈಟ್ ಆಯೋಜನೆ ಮಾಡಿದ್ದೇವೆ. ಸಿನಿಮಾ ಸೆಲೆಬ್ರಿಟಿಗಳು, ಗಣ್ಯರು ಸೇರಿದಂತೆ ಹೆಸರಾಂತ ಗಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

ಇದನ್ನೂ ಓದಿ : BBK12: ಟಾಪ್‌ 6ನಲ್ಲಿ ಕಾವ್ಯಾ ಇರಬಾರದಿತ್ತು: ಹೀಗ್ಯಾಕಂದ್ರು ರಕ್ಷಿತಾ..?

ಕನ್ನಡ, ತುಳು ಚಿತ್ರರಂಗದ ಕಲಾವಿದರಾದ ರೂಪೇಶ್ ಶೆಟ್ಟಿ, ದೇವದಾಸ್ ಕಾಪಿಕಾಡ್, ಭೋಜರಾಜ ವಾಮಂಜೂರು, ಅರ್ಜುನ್ ಕಾಪಿಕಾಡ್, ಶನಿಲ್ ಗುರು, ಪ್ರಕಾಶ್ ತೂಮಿನಾಡು, ಸ್ವರಾಜ್ ಶೆಟ್ಟಿ, ದೀಪಕ್ ರೈ ಪಾಣಾಜೆ, ವಿಜೆ ವಿನೀತ್, ಸಮತಾ ಅಮೀನ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page