Connect with us

LATEST NEWS

ರಾಜ್ಯದ ಎರಡು ಕಡೆ ಕಲಬೆರಕೆ ತುಪ್ಪ ಪತ್ತೆ; ಉತ್ಪಾದನಾ ಘಟಕಗಳಿಗೆ ನೋಟಿಸ್

Published

on

ಬೆಂಗಳೂರು: ರಾಜ್ಯದ ಎರಡು ಕಡೆ ಕಲಬೆರಕೆ ತುಪ್ಪ ಪತ್ತೆಯಾಗಿದೆ.

ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಕಲಬೆರಕೆ ತುಪ್ಪ, ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪ ಬಳಕೆ ವಿವಾದದ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರ ರಾಜ್ಯದಲ್ಲಿ ತಯಾರಾಗುವ ಖಾಸಗಿ ತುಪ್ಪದ ಮಾದರಿ ಪರೀಕ್ಷೆಗೆ ಸೂಚಿಸಿತ್ತು. ಪರೀಕ್ಷೆ ವೇಳೆ ರಾಜ್ಯದ ಎರಡು ಘಟಕಗಳಲ್ಲಿ ತಯಾರಾಗುವ ತುಪ್ಪ ಕಲಬೆರಕೆ ತುಪ್ಪ ಎಂಬುದು ಬೆಳಕಿಗೆ ಬಂದಿದೆ. ಆಹಾರ ಸುರಕ್ಷತಾ ಇಲಾಖೆ 40 ಕಡೆ ತುಪ್ಪ ಸಂಗ್ರಹಿಸಿ ಪರೀಕ್ಷೆ ನಡೆಸಿತ್ತು. ಈ ವೇಳೆ ರಾಜ್ಯದ ಎರಡು ಕಡೆ ಕಲಬೆರಕೆ ತುಪ್ಪ ಕಂಡುಬಂದಿದೆ.

ಬೆಂಗಳೂರು ಹಾಗೂ ಬಾಗಲಕೋಟೆಯ ಘಟಕದಲ್ಲಿ ತಯಾರಾಗುವ ತುಪ್ಪ ಸುರಕ್ಷಿತ ಇಲ್ಲ ಎಂಬುದು ತಿಳಿದುಬಂದಿದೆ. ಆಹಾರ ಇಲಾಖೆ ವರದಿ ಹಿನ್ನೆಲೆಯಲ್ಲಿ ಎರಡೂ ಘಟಕಗಳಿಗೆ ನೋಟಿಸ್ ನೀಡಲಾಗಿದೆ. 30 ದಿನಗಳ ಒಳಗೆ ತುಪ್ಪ ಅಸುರಕ್ಷತೆ ಅಲ್ಲ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಇಲಾಖೆ ಸೂಚನೆ ನೀಡಿದೆ. ಮೈಸೂರು ಲ್ಯಾಬ್‌ನಲ್ಲಿ ಖಚಿತತೆಯ ಪರೀಕ್ಷೆ ನಡೆಸಲಾಗುತ್ತಿದೆ.

DAKSHINA KANNADA

ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಗೆ LAPT ಗೌರವ..! ನಮ್ಮ ಕುಡ್ಲ ಸಹಯೋಗದಲ್ಲಿ ಮಾಸ್ ಕಮ್ಯುನಿಕೇಷನ್ ಕೋರ್ಸ್ ಪ್ರಾರಂಭ..!

Published

on

ಮಂಗಳೂರು : ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಔದ್ಯೋಗಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುವ ಮಂಗಳೂರಿನ ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್‌ಗೆ 20 ವರ್ಷ ತುಂಬಿದೆ. 2005 ರಲ್ಲಿ ಮಂಗಳೂರಿನ ಪಂಪ್ವೆಲ್‌ ನಲ್ಲಿ ಆರಂಭವಾದ ಈ ಸಂಸ್ಥೆ ಸಾವಿರಾರು ಯುವಕ ಯುವತಿಯರಿಗೆ ವಿಶೇಷ ತರಬೇತಿಯನ್ನು ನೀಡಿ ಉದ್ಯೋಗ ಒದಗಿಸುವ ಕೆಲಸ ಮಾಡಿದೆ. ಇದರ ಇಪ್ಪತ್ತನೇ ವರ್ಷಾಚರಣೆಯು ಸಂಭ್ರಮ್ 2025 ಎಂಬ ಹೆಸರಿನಲ್ಲಿ ಮಂಗಳೂರಿನ ಖಾಸಗಿ ಹೊಟೇಲ್ ನ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆದಿದೆ. ಇದೇ ಕಾರ್ಯಕ್ರಮದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಐಜಿಐ ಸಂಸ್ಥೆಯಲ್ಲಿ ಮಾಸ್ ಮೀಡಿಯಾ ಕಮ್ಯುನಿಕೇಷನ್ ಕೋರ್ಸ್ ಆರಂಭಿಸುವ ಕುರಿತಾಗಿ ಘೋಷಣೆ ಮಾಡಲಾಗಿದೆ.

ಕರಾವಳಿಯ ಪ್ರತಿಷ್ಠಿತ ಹಾಗೂ ಹೆಮ್ಮೆಯ ವಾಹಿನಿಯಾಗಿರುವ ನಮ್ಮ ಕುಡ್ಲ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಕೋರ್ಸ್ ಆರಂಭವಾಗಲಿದೆ. ಈ ಹೊಸ ಕೋರ್ಸ್ ನ ಘೋಷಣೆಯನ್ನು ನಮ್ಮ ಕುಡ್ಲ ವಾಹಿನಿಯ ಸಿಒಒ ನವನೀತ ಶೆಟ್ಟಿ ಅವರು ಮಾಡಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಯಂತ್ ಕೋಡ್ಕಿಣಿ ಅವರು ಇದರ ಕುರಿತಾದ ಬ್ರೋಶರ್ ನ್ನು ಗಣ್ಯರ ಸಮಕ್ಷಮದಲ್ಲಿ ಅನಾವರಣ ಮಾಡಿದ್ದಾರೆ.

ಕಾರ್ಯಕ್ರಮವನ್ನು  ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಹಿರಿಯ ಚಲನಚಿತ್ರ ನಿರ್ದೇಶಕ ವಿಜಯಕುಮಾರ್ ಕೋಡಿಯಾಲ್ ಬೈಲ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಗಣ್ಯರಿಂದ ಶುಭಹಾರೈಕೆ :

ಐಜಿಐ ಸಂಭ್ರಮ್‌ 2025ರ ಕಾರ್ಯಕ್ರಮದ  ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಇಂತಹ ಕೋರ್ಸ್‌ಗಳ ಅಗತ್ಯ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದ್ದು, ಐಜಿಐ ಅದನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ ಎಂದು ಶುಭ ಹಾರೈಸಿದ್ದಾರೆ.

ಶಾಸಕ ವೇದವ್ಯಾಸ್ ಕಾಮತ್ ಅವರು ಕೂಡ ಐಜಿಐ ಹಾಗೂ ನಮ್ಮಕುಡ್ಲ ಸಂಸ್ಥೆ ಜಂಟಿಯಾಗಿ ಪ್ರಾರಂಭ ಮಾಡಿರುವ ಮಾಸ್ ಮೀಡಿಯಾ ಕಮ್ಯುನಿಕೇಷನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಉದ್ಯೋಗವಕಾಶ :

ಐಜಿಐಗೆ ಲಂಡನ್ ಅಕಾಡೆಮಿ ಆಫ್ ಪ್ರೊಫೇಷನಲ್ ಟ್ರೈನಿಂಗ್ ಇದರ  ಮಾನ್ಯತೆ ದೊರೆತಿದ್ದು, ಇದೇ ಕಾರ್ಯಕ್ರಮದಲ್ಲಿ ಐಜಿಐ ಸಂಸ್ಥೆಯ ಆಡಳಿತ ನಿರ್ದೇಶಕ ಮುರಳಿ ಹೊಸಮಜಲು ಹಾಗೂ ನಿರ್ದೇಶಕರಾದ ಸಜಿತಾ ಎಂ ನಾಯರ್ ಅವರಿಗೆ ಈ ಲಾಪ್ಟ್ ನಿಂದ ಮಾಸ್ಟರ್ ಟ್ರೈನರ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ಐಜಿಐಗೆ ಲಾಪ್ಟ್ ಮಾನ್ಯತೆ ದೊರಕಿರುವ ಕಾರಣದಿಂದ ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗವಕಾಶಕ್ಕೂ ಅನುಕೂಲವಾಗಲಿದೆ.

ಇದನ್ನೂ ಓದಿ : 9 ತಿಂಗಳ ಬಳಿಕ ಮಾ.18ರಂದು ಸುನಿತಾ ಭೂಮಿಗೆ ವಾಪಸ್; ಗಗನಯಾನಿಗಳ ಸಂಬಳ ಎಷ್ಟಿರುತ್ತೆ ಗೊತ್ತಾ?

ಐಜಿಐ ಸಂಭ್ರಮ್ 2025 ಅದ್ಧೂರಿಯಾಗಿ ನಡೆದಿದ್ದು, ವಿಶೇಷವಾಗಿ ಐಜಿಐ ನಿರ್ದೇಶಕ ಮುರಳಿ ಹೊಸಮಜಲು ಅವರ ಮಾತೃಶ್ರೀ ಶ್ರೀಮತಿ ರಾಜಮ್ಮ ಅವರ ನೆನಪಿಗಾಗಿ , ಶ್ರೀಮತಿ ರಾಜಮ್ಮ ಸ್ಮಾರಕ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ಮಾಡಲಾಗಿದೆ. ಇದರ ಮೂಲಕ ಮಹಿಳಾ ಸಬಲೀಕರಣಕ್ಕೆ ಬೇಕಾದ ಪೂರಕ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಹಾಗೂ ವಿವಿಧ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವೂ ಈ ಕಾರ್ಯಕ್ರಮದಲ್ಲಿ ನಡೆದಿದೆ.

ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆದಿದ್ದು, ವಿದ್ಯಾರ್ಥಿಗಳು ಸಂಗೀತ ಹಾಗೂ ನೃತ್ಯದ ಮೂಲಕ ಅತಿಥಿಗಳನ್ನು ರಂಜಿಸಿದ್ದಾರೆ.

Continue Reading

LATEST NEWS

ಕೊಹ್ಲಿ ಎದುರಿಸಿದ ಕಠಿಣ ಬೌಲರ್ ಇವರಂತೆ ?

Published

on

ಮಂಗಳೂರು/ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೀವರ್ ಕ್ರಿಕೆಟ್ ಲೋಕವನ್ನು ಆವರಿಸಿದೆ. ಮಾರ್ಚ್ 22ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಐಪಿಎಲ್ 2025ರ ಉದ್ಘಾಟನಾ ಪಂದ್ಯ ನಡೆಯಲಿದ್ದು, ಈ ಮ್ಯಾಚ್‌ನಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾಗಲಿದೆ.


ಸೀಸನ್ 18ಕ್ಕೆ ಎಲ್ಲಾ ತಂಡಗಳು ಅಭ್ಯಾಸ ಪ್ರಾರಂಭಿಸಿದ್ದು, ಆರ್‌ಸಿಬಿ ಕೂಡ ಈ ಸೀಸನ್‌ಗೆ ಸಜ್ಜಾಗಿ ನಿಂತಿದೆ. ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಇದೆಲ್ಲದರ ನಡುವೆ ಕೊಹ್ಲಿ ಐಪಿಎಲ್‌ನಲ್ಲಿ ನಾನೆದುರಿಸಿದ ಅತ್ಯಂತ ಕಠಿಣ ಬೌಲರ್ ಯಾರೆಂಬುದನ್ನು ಹೇಳಿದ್ದಾರೆ.

ಆರ್‌ಸಿಬಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನಾನೆದುರಿಸಿದ ಕಠಿಣ ಬೌಲರ್ ಎಂದರೆ ಅದು ಜಸ್‌ಪ್ರೀತ್ ಬುಮ್ರಾ ಎಂದಿದ್ದಾರೆ. ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್. ಅವರನ್ನು ಎದುರಿಸುವುದು ಅಂದುಕೊಂಡಷ್ಟು ಸುಲಭವಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: IML 2025: ಇಂಡಿಯಾ ಮಾಸ್ಟರ್ಸ್‌ಗೆ ಚಾಂಪಿಯನ್‌ ಕಿರೀಟ

ಬುಮ್ರಾ ಐಪಿಎಲ್‌ನಲ್ಲಿ ಹಲವು ಬಾರಿ ನನ್ನನ್ನು ಔಟ್ ಮಾಡಿದ್ದಾರೆ. ಅವರನ್ನು ನೆಟ್ಸ್‌ನಲ್ಲೂ ಎದುರಿಸುವುದು ಅತ್ಯಂತ ಕಠಿಣವಾಗಿರುತ್ತದೆ. ಅವರನ್ನು ಎದುರಿಸಲು ನಾವು ಯಾವಾಗಲೂ, ಪ್ರತಿ ಚೆಂಡಿಗೂ ಮೈಂಡ್ ಗೇಮ್‌ನೊಂದಿಗೆ ಸಿದ್ದವಾಗಿರಬೇಕು ಎಂದು ಕೊಹ್ಲಿ ಬುಮ್ರಾ ಬೌಲಿಂಗ್ ಅನ್ನು ಹೊಗಲಿದ್ದಾರೆ.

 

 

ವಿರಾಟ್ ಕೊಹ್ಲಿ ಹಾಗೂ ಬುಮ್ರಾ ಐಪಿಎಲ್‌ನ 16 ಇನಿಂಗ್ಸ್‌ಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಬುಮ್ರಾ ಎಸೆದ 95 ಎಸೆತಗಳನ್ನು ಎದುರಿಸಿರುವ ಕೊಹ್ಲಿ 140 ರನ್​ ಗಳಿಸಿದ್ದಾರೆ. ಇದರ ನಡುವೆ 5 ಬಾರಿ ವಿಕೆಟ್​ ಅನ್ನು ಸಹ ಒಪ್ಪಿಸಿದ್ದಾರೆ. ಇನ್ನು ಬುಮ್ರಾ-ಕೊಹ್ಲಿ ಮುಖಾಮುಖಿಯಲ್ಲಿ ಮೂಡಿಬಂದಿರುವ ಫೋರ್​ಗಳ ಸಂಖ್ಯೆ 15. ಹಾಗೆಯೇ ಬುಮ್ರಾ ಎಸೆತಗಳಲ್ಲಿ ಕೊಹ್ಲಿ ಕೇವಲ 5 ಸಿಕ್ಸ್ ಮಾತ್ರ ಬಾರಿಸಿದ್ದಾರೆ.

 

Continue Reading

LATEST NEWS

ಕಾರು ಡಿ*ಕ್ಕಿಯಾಗಿ ಟಿಪ್ಪರ್‌ನಡಿ ಸಿಲುಕಿದ ಸ್ಕೂಟಿ; ಅದೃಷ್ಟವಶಾತ್ ಮಹಿಳೆ, ಮಕ್ಕಳು ಪಾರು

Published

on

ಕುಂದಾಪುರ : ಇತ್ತೀಚೆಗೆ ಅಪಘಾ*ತ ಪ್ರಕರಣಗಳು ಹೆಚ್ಚುತ್ತಿದ್ದು, ಅನೇಕರು ಪ್ರಾ*ಣ ಕಳೆದು ಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ಅಪ*ಘಾತ ಪ್ರಕರಣ ವರದಿಯಾಗಿದ್ದು, ಅದೃಷ್ಟವಶಾತ್ ದುರಂ*ತವೊಂದು ತಪ್ಪಿದೆ.

ಸ್ಕೂಟಿಗೆ ಕಾರು ಡಿ*ಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ‌‌ ನಿಂತಿದ್ದ ಟಿಪ್ಪರ್ ಚಕ್ರದಡಿ ಸ್ಕೂಟಿ ಸಿಲುಕಿದೆ. ಅದೃಷ್ಟವಶಾತ್ ಮಹಿಳೆ ‌ಮತ್ತು ಮಕ್ಕಳಿಬ್ಬರು ಸಣ್ಣ ಪುಟ್ಟ ಗಾ*ಯಗಳೊಂದಿಗೆ ಪಾರಾಗಿದ್ದಾರೆ. ಈ ಘಟನೆ ನಡೆದಿರೋದು ಕುಂದಾಪುರದ ಹೆಮ್ಮಾಡಿಯಲ್ಲಿ.

ಸ್ಕೂಟಿಗೆ ಕಾರು ಡಿ*ಕ್ಕಿ ಹೊಡೆದು  ರಸ್ತೆಯ ಬದಿಗೆ ತಳ್ಳಲ್ಪಟ್ಟಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟಿ ನಿಂತಿದ್ದ ಟಿಪ್ಪರ್‌ನಡಿ ಬಿದ್ದಿದೆ.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page