Connect with us

FILM

‘ಇಂದಿನ ನಟಿಯರು ಹೆಚ್ಚು ಹಣ ಸಂಪಾದಿಸುತ್ತಾರೆ, ನಾವು ಗೌರವ ಸಂಪಾದಿಸಿದ್ವಿ’ – ನಟಿ ಸುಹಾಸಿನಿ

Published

on

ಬೆಂಗಳೂರು : ದಕ್ಷಿಣ ಭಾರತದ ಖ್ಯಾತ ನಟಿ ಸುಹಾಸಿನಿ ಇಂದಿನ ಕಾಲದ ನಾಯಕ ನಟಿಯರ ಬಗ್ಗೆ ಮಾತನಾಡಿದ್ದಾರೆ.ಇಂದಿನ ತಲೆಮಾರಿನ ನಟಿಯರು ನಮಗಿಂತ ಹೆಚ್ಚು ಹಣ ದುಡಿಯುತ್ತಾರೆ. ಆದರೆ, ನಮಗೆ ಅವರಿಗಿಂತ ಹೆಚ್ಚು ಗೌರವ ಸಿಗುತ್ತಿತ್ತು ಎಂಬ ಹೇಳಿಕೆಯನ್ನು ನಟಿ ಸುಹಾಸಿನಿ ನೀಡಿದ್ದಾರೆ.


ಅವರ ಪಾತ್ರದಲ್ಲಿ ಹೆಣ್ಣಿನ ಮನಸ್ಸನ್ನು ಬಹಳ ಅರ್ಥಗರ್ಭಿತವಾಗಿ, ಆಳವಾಗಿ ಚಿತ್ರಿಸಲಾಗುತ್ತಿತ್ತು. ಹೀರೋಯಿನ್ ಎಂದರೆ ಆಕೆಯಲ್ಲಿ ಒಬ್ಬ ತಾಯಿಯಿರುತ್ತಿದ್ದಳು, ತಾಳ್ಮೆಯ ಪ್ರತಿರೂಪವಾಗಿರುತ್ತಿದ್ದಳು, ಮತ್ತೊಬ್ಬರನ್ನು ನೋಯಿಸದ ಸ್ವಭಾವ ತೋರಿಸಲಾಗುತ್ತಿತ್ತು.ಈಗ ಬಹುತೇಕ ಸಿನಿಮಾಗಳಲ್ಲಿ ಹೀರೋಯಿನ್‌ಗೆ ಇಂಥ ಯಾವ ಗುಣವೂ ಬೇಕಿಲ್ಲ. ಆಕೆ ಚೆನ್ನಾಗಿ ಕಾಣಿಸಿಕೊಂಡು, ಕುಣಿದು, ಒಂದೆರಡು ಡೈಲಾಗ್ ಹೇಳಿದರೆ ಸಾಕು. ಕ್ರೈಮೇ ಸಿನಿಮಾ ಜೀವಾಳ ಆಗಿರುವ ಕತೆಗಳಲ್ಲಂತೂ ಹೆಸರಿಗಷ್ಟೇ ಹೀರೋಯಿನ್.


ಅವಳ ಮನೋಭಾವ ನೋಡುಗರನ್ನು ಬಹುವಾಗಿ ಪ್ರಭಾವಿಸುವಂತಿರುತ್ತಿತ್ತು, ಅವಳ ಸಹೃದಯಕ್ಕೆ ಸರಿಸಾಟಿ ಇರಲಿಲ್ಲ. ನೋಡಿದ ಹೆಣ್ಣುಮಕ್ಕಳು ತಾವೂ ಹೀಗಿರಬೇಕೆಂದುಕೊಳ್ಳುವಂಥ ಆದರ್ಶ ಮಹಿಳೆ ಅವರಾಗಿರುತ್ತಿದ್ದರು, ಪುರುಷರು ತಮಗಿಂತ ಪತ್ನಿ ದೊರೆಯಲೆಂದು ಪ್ರಾರ್ಥಿಸುವಂತೆ ಹೀರೋಯಿನ್‌ಗಳನ್ನು ಚಿತ್ರಿಸಲಾಗುತ್ತಿತ್ತು ಎಂದಿದ್ದಾರೆ.

 

FILM

ರಾಜ್ಯದಾದ್ಯಂತ ಡೆವಿಲ್ ಚಿತ್ರದ ಟ್ರೇಲರ್‌ ಔಟ್‌; ಗಿಲ್ಲಿ ಖಡಕ್‌ ಡೈಲಾಗ್‌

Published

on

ಮಿಲನ ಪ್ರಕಾಶ್‌ ನಿರ್ದೇಶನದ, ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾದ ಟ್ರೇಲರ್‌ ಇಂದು (ಡಿ.5)ಬೆಳಿಗ್ಗೆ 10.05 ಕ್ಕೆ ರಿಲೀಸ್‌ ಆಗಿದ್ದು, ಭಾರೀ ಮೆಚ್ಚುಗೆಯನ್ನು ಪಡೆದಿದೆ. ಈ ಟ್ರೇಲರ್‌ನಲ್ಲಿ ದರ್ಶನ್‌ ಮಾಸ್‌ ಲುಕ್‌ನಲ್ಲಿ ಕಾಣಿಸಿ, ಎಲ್ಲರ ಗಮನ ಸೆಳೆದಿದ್ದಾರೆ.

ಬಿಗ್‌ಬಾಸ್‌ನಲ್ಲಿರೋ ಗಿಲ್ಲಿ ನಟ ಕೂಡ ಡೆವಿಲ್‌ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಟ್ರೇಲರ್‌ನಲ್ಲಿ ಗಿಲ್ಲಿ ಅವರ ಪಾತ್ರದ ಝಲಕ್‌ ತೋರಿಸಲಾಗಿದೆ. ಟ್ರೇಲರ್‌ನಲ್ಲಿ ತೋರಿಸಲಾದ ಒಂದು ಡೈಲಾಗ್‌ಗೆ ಮತ್ತು ಅವರ ಗೆಟಪ್ ನೋಡಿ ಫ್ಯಾನ್ಸ್‌ ಫುಲ್‌ ಖುಷಿಪಟ್ಟಿದ್ದಾರೆ.


ಖಡಕ್‌ ಲುಕ್‌ನಲ್ಲಿ ಪೊಲೀಸ್‌ ಠಾಣೆಗೆ ಬಂದು ಪೊಲೀಸ್‌ ಅಧಿಕಾರಿ ಮುಂದೆ ಕಾಲ್ಮೇಲೆ ಕಾಲಾಕಿ ಕೂತು, ‘ಎಕ್ಸ್‌ಕ್ಯೂಸ್‌ ಮೀ ಪಿಸಿ, ಎಸಿ ಹಾಕಮ್ಮ. ಲಾಟ್ಸ್‌ ಆಫ್‌ ಸೆಖೆ’ ಎಂದು ಡೈಲಾಗ್‌ ಹೊಡೆಯುತ್ತಾರೆ. ಸಿನಿಮಾದಲ್ಲಿ ಅವರ ಪಾತ್ರ ಎಷ್ಟು ಹೊತ್ತು ಇರುತ್ತದೆ ಎಂಬ ಕುತೂಹಲ ಇದೆ.

 

ಡೆವಿಲ್‌ ಸಿನಿಮಾದಲ್ಲಿ ದರ್ಶನ್‌ಗೆ ಜತೆಯಾಗಿ ರಚನಾ ರೈ ಅಭಿನಯಿಸಿದ್ದಾರೆ. ಮಹೇಶ್‌ ಮಂಜ್ರೇಕರ್‌, ಅಚ್ಯುತ್‌ ಕುಮಾರ್‌, ಶರ್ಮಿಳಾ ಮಾಂಡ್ರೆ ಮೊದಲಾದವರಿದ್ದಾರೆ. ಶೋಭರಾಜ್‌ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಡಿದ್ದಾರೆ. ಬಿಗ್‌ಬಾಸ್‌ ಖ್ಯಾತಿಯ ವಿನಯ್‌ ಗೌಡ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

 

ಇದನ್ನೂ ಓದಿ: ಡೆವಿಲ್ ಸಿನಿಮಾ ಸೆಟ್‌ನಲ್ಲಿ ಮರೆಯಲಾಗದ ಕ್ಷಣಗಳು ಇವು : ಚಂದು ಗೌಡ ಪೋಸ್ಟ್

 

ಡಿಸೆಂಬರ್ 11ರಂದು ಡೆವಿಲ್‌ ಸಿನಿಮಾ ರಾಜ್ಯಾದಾದ್ಯಂತ ಬಿಡುಗಡೆ ಆಗಲಿದೆ. ದರ್ಶನ್‌ ಜೈಲಿನಲ್ಲಿ ಇರುವಾಗಲೇ ಡೆವಿಲ್‌ ಸಿನಿಮಾ ತೆರೆಗೆ ಬರುತ್ತಿದೆ. ಎಲ್ಲರೂ ಪ್ಯಾನ್‌ ಇಂಡಿಯಾ ಹಿಂದೆ ಓಡುತ್ತಿರುವಾಗ ಡೆವಿಲ್‌ ಕನ್ನಡದಲ್ಲಿ ಮಾತ್ರ ರಿಲೀಸ್‌ ಆಗುತ್ತಿದೆ.

Continue Reading

FILM

ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್‌ ವತಿಯಿಂದ ಬಾರೆಬೈಲ್‌ನಲ್ಲಿ ಹರಕೆ ನೇಮೋತ್ಸವ

Published

on

ಮಂಗಳೂರು: ಕಾಂತಾರ-1 ಸಿನಿಮಾದ ಯಶಸ್ಸಿನ ಹಿನ್ನೆಲೆಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಚಿತ್ರತಂಡದಿಂದ ಗುರುವಾರ ರಾತ್ರಿ ಹರಕೆಯ ಕೋಲ ಸಮರ್ಪಿಸಲಾಯಿತು.

ಮಂಗಳೂರಿನ ಬಾರೆಬೈಲ್ ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ನೆರವೇರಿತು. ನಟ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್‌ ವತಿಯಿಂದ ಹರಕೆ ನೇಮೋತ್ಸವ ಆಯೋಜನೆಗೊಂಡಿತ್ತು.

 

ಪತ್ನಿ ಮಕ್ಕಳ ಜತೆಗೆ ರಿಷಬ್ ಶೆಟ್ಟಿ ಭಾಗವಹಿಸಿದರು. ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್ ಸೇರಿದಂತೆ ಚಿತ್ರರಂಗದ ಹಲವರು ಭಾಗವಹಿಸಿದ್ದರು.

 

ಕಳೆದ ಏಪ್ರಿಲ್ ನಲ್ಲಿ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಹಾಗೂ ಕುಟುಂಬ ಭಾಗವಹಿಸಿತ್ತು. ಗುರುವಾರ ಅದೇ ದೈವಸ್ಥಾನದಲ್ಲಿ ಹರಕೆ ನೇಮೋತ್ಸವ ಸಲ್ಲಿಸಲಾಯಿತು.

Continue Reading

FILM

ಸಿನಿಮಾ ಶೂಟಿಂಗ್ ವೇಳೆ ಕುಸಿದು ಬಿದ್ದು ಕನ್ನಡದ ನಿರ್ದೇಶಕ ಸಾವು

Published

on

ಶಿವಮೊಗ್ಗ: ಸಾವು ಅನ್ನೋದು ಯಾವಾಗ ಹೇಗೆ ಬರುತ್ತದೆ ಎಂದು ಊಹಿಸೋದು ತುಂಬಾನೇ ಕಷ್ಟ. ಅದೆಷ್ಟೋ ಕಲಾವಿದರು ಅಭಿನಯ ಮಾಡುತ್ತಿರುವಾಗಲೇ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದೀಗ ಕನ್ನಡದ ನಿರ್ದೇಶಕರೊಬ್ಬರು ಸಿನಿಮಾ ಚಿತ್ರೀಕರಣದ ವೇಳೆಯೇ ಕುಸಿದು ಬಿದ್ದ ಪರಿಣಾಮ ಬುಧವಾರ (ಡಿ.03) ಮೃತಪಟ್ಟಿದ್ದಾರೆ. ಸಂಗೀತ್ ಸಾಗರ್ ಮೃತಪಟ್ಟ ನಿರ್ದೇಶಕ.


ಸಂಗೀತ್ ಸಾಗರ್ ಶಿವಮೊಗ್ಗ ಕೊಪ್ಪದಲ್ಲಿ ಪಾತ್ರಧಾರಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಇಡೀ ತಂಡ ಅಲ್ಲಿ ಬೀಡು ಬಿಟ್ಟಿತ್ತು. ಆ ವೇಳೆ ನಿರ್ದೇಶಕ ಸಾಗರ್ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಏನೂ ಪ್ರಯೋಜನ ಆಗಿಲ್ಲ.

ಇದನ್ನೂ ಓದಿ: ಮದುವೆ ಮನೆಯಲ್ಲಿ ರಾದ್ಧಾಂತ ಮಾಡಿದ ವರನ ಕುಟುಂಬ; ಕಾರಣ ಏನು ಗೊತ್ತಾ?

ಮೃತ ನಿರ್ದೇಶಕ ಸಂಗೀತ್ ಸಾಗರ್ ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page