Connect with us

MANGALORE

ಖ್ಯಾತ ನಟಿ ವಿನ್ನಿ ಫೆರ್ನಾಂಡಿಸ್ ಇನ್ನಿಲ್ಲ

Published

on

ಮಂಗಳೂರು: ಬಹುಭಾಷಾ ನಟಿ ವಿನ್ನಿ ಫೆರ್ನಾಂಡಿಸ್(63) ಇಂದು ಹೃದಯಘಾತದಿಂದ ನಿಧನರಾಗಿದ್ದಾರೆ.


ಕನ್ನಡ, ತುಳು ಮತ್ತು ಕೊಂಕಣಿ ಚಲನಚಿತ್ರಗಳಲ್ಲಿ ಪೋಷಕ ಪಾತ್ರ ನಟಿಸಿದ್ದ ಅವರು ಕನ್ನಡ ಮತ್ತು ಕೊಂಕಣಿ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದರು. ತುಳು ಮತ್ತು ಕನ್ನಡ ನಾಟಕಗಳಲ್ಲೂ ಅಭಿನಯಿಸಿದ್ದರು. ಇವರ ಕಲಾ ಸೇವೆಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಮೃತರು ಪತಿ ವಿನ್ಸೆಂಟ್, ಮತ್ತು ಮಕ್ಕಳು ಪ್ರತಾಪ್ ಮತ್ತು ಬಬಿತಾ ಇವರನ್ನು ಅಗಲಿದ್ದಾರೆ.

MANGALORE

ಮದುವೆಗೆ ಕೇವಲ ಒಂದು ಗಂಟೆ ಮೊದಲು ವಧುವನ್ನು ಕೊಂದ ವರ!

Published

on

ಮಂಗಳೂರು/ಅಹಮದಾಬಾದ್: ಮದುವೆಗೆ ಕೆಲವೇ ಗಂಟೆಗಳ ಮೊದಲು ವರ ವಧುವನ್ನು ಹತ್ಯೆ ಮಾಡಿರುವ ಘಟನೆ ಗುಜರಾತ್ನ ಭಾವನನಗರ ಎಂಬಲ್ಲಿ ನಡೆದಿದೆ.

ಸಾಜನ್ ಬರೈಯಾ ಹತ್ಯೆಗೈದ ವರ. ಸೋನಿ ಹಿಮ್ಮತ್ ರಾಥೋಡ್ ಮೃತಪಟ್ಟ ವಧು.

ವಧು-ವರರ ನಡುವೆ ಸೀರೆಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸಾಜನ್ ಬರೈಯಾ ಮತ್ತು ಸೋನಿ ಹಿಮ್ಮತ್ ರಾಥೋಡ್ ಕಳೆದ ಒಂದೂವರೆ ವರ್ಷದಿಂದ ಲಿವಿಂಗ್ ಟುಗೆದರ್ ನಲ್ಲಿದ್ದರು. ಇದೀಗ ಅವರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಮದುವೆಯ ಹಲವು ಶಾಸ್ತ್ರಗಳನ್ನು ಪೂರೈಸಿದ್ದರು.

ಹಸೆಮಣೆ ಏರುವ ಕೆಲವೇ ಗಂಟೆಯ ಮೊದಲು ವಧು ವರರ ಮಧ್ಯೆ ಸೀರೆ ಮತ್ತು ಹಣದ ಕಾರಣಕ್ಕೆ ಜಗಳ ಹುಟ್ಟಿಕೊಂಡಿದೆ. ಕೋಪಗೊಂಡ ವರ ಕಬ್ಬಿಣದ ಪೈಪ್ನಿಂದ ವಧು ಸೋನಿಗೆ ಹೊಡೆದು, ಗೋಡೆಗೆ ತಲೆಯನ್ನು ಬಡಿದು ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: 72ನೇ ಅಖಿಲ ಭಾರತ ಸಹಕಾರ ಸಪ್ತಾಹ : ಆಕರ್ಷಕ ಮೆರವಣಿಗೆ

ಅಷ್ಟೇ ಅಲ್ಲದೆ, ಆರೋಪಿಯು ಮನೆಯನ್ನು ಧ್ವಂಸ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.

Continue Reading

chikkamagaluru

ಕಾರಿನ ಮೇಲೆ ಬಿದ್ದ ಕಾಡಾನೆ ; ಆಮೇಲೇನಾಯ್ತು?

Published

on

ಮಂಗಳೂರು/ಚಿಕ್ಕಮಗಳೂರು : ಇತ್ತೀಚೆಗೆ ಕಾಡಾನೆಗಳು ಅಲ್ಲಲ್ಲಿ ಪ್ರತ್ಯಕ್ಷವಾಗುತ್ತಿವೆ. ಕಾಡಿನಿಂದ ನಾಡಿಗೆ ಎಂಟ್ರಿ ಕೊಡುವ ಸಲಗಗಳು ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ. ಇದೀಗ ಚಿಕ್ಕಮಗಳೂರಿನಲ್ಲೊಂದು ಘಟನೆ ನಡೆದಿದೆ.


ನರಸಿಂಹರಾಜಪುರದಿಂದ ಆಡುವಳ್ಳಿ ಗ್ರಾಮದ ಬುರದ ಮನೆ ನಿವಾಸಿ ಪ್ರದೀಪ್ ಎಂಬವರು ತಮ್ಮ ಊರಿಗೆ ಕಾರಿನಲ್ಲಿ ಹೋಗುವಾಗ ಮುಡೋಡಿ ಬಳಿ ಎರಡು ಕಾಡಾನೆಗಳು ರಸ್ತೆ ದಾಟುತ್ತಿದ್ದವು. ಒಂದು ಕಾಡಾನೆ ರಸ್ತೆ ದಾಟಿದ್ದು ಇನ್ನೊಂದು ಕಾಡಾನೆ ದಾಟುವಾಗ ಕಾರು ಗುದ್ದಿದೆ. ಈ ವೇಳೆ ಆನೆ ಕಾರಿನ ಮೇಲೆಯೇ ಬಿದ್ದಿದೆ.

ಇದನ್ನೂ ಓದಿ: ಕಾಪು: ಕೌನ್ಸಿಲಿಂಗ್ ಸೆಂಟರ್ ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

ಬಳಿಕ ಕಾಡಾನೆ ಎದ್ದು ಯಾವುದೇ ತೊಂದರೆ ಮಾಡದೇ ಅರಣ್ಯದೊಳಕ್ಕೆ ಹೋಗಿದೆ. ಆನೆ ಬಿದ್ದ ರಭಸಕ್ಕೆ ಕಾರಿಗೆ ಹಾನಿಯಾಗಿದೆ. ಎನ್.ಆರ್.ಪುರ – ಬಾಳೆಹೊನ್ನೂರು ರಾಜ್ಯ ಹೆದ್ದಾರಿಯ 9ನೇ ಮೈಲಿಕಲ್ಲುವಿನಲ್ಲಿ ಈ ಘಟನೆ ನಡೆದಿದೆ. ಅದೃಷ್ಟವಶಾತ್, ಕಾರಿನಲ್ಲಿದ್ದವರು ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ.

Continue Reading

MANGALORE

ಉಳ್ಳಾಲ: ವ್ಯಕ್ತಿಯ ಮೇಲೆ ದಾಳಿ ನಡೆಸಿ ಅವರ ಸಾವಿಗೆ ಕಾರಣವಾದ ಬೀದಿನಾಯಿ ಸಾವು

Published

on

ಉಳ್ಳಾಲ: ಉಳ್ಳಾಲ ಕುಂಪಲ ನಿವಾಸಿ ದಯಾನಂದ ಗಟ್ಟಿ ಎಂಬುವವರ ಮೇಲೆ ದಾಳಿ ನಡೆಸಿದ್ದ ನಾಯಿಯು ಶನಿವಾರ ಸಾವಿಗೀಡಾಗಿದೆ ಎಂದು ತಿಳಿದುಬಂದಿದೆ.


ಶುಕ್ರವಾರ ಕುಂಪಲ ನಿವಾಸಿ, ದಯಾನಂದ ಗಟ್ಟಿ ಅವರ ರಕ್ತ ಸಿಕ್ತ ಮೃತದೇಹ ಮನೆಯೊಂದರ ಮುಂಭಾಗ ಪತ್ತೆಯಾಗಿತ್ತು. ದಯಾನಂದ ಅವರ ಸಾವಿಗೆ ನಾಯಿ ದಾಳಿ ಕಾರಣ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕೆ ವಿಧಿ ವಿಜ್ಞಾನ ತಜ್ಞರು ಬಂದು ಪರಿಶೀಲನೆ ನಡೆಸಿದ ಬಳಿಕ ಅವರ ಸಾವು ಪ್ರಾಣಿ ದಾಳಿಯಿಂದ ಆಗಿದೆ ಎಂದು ದೃಢಪಡಿಸಿದ್ದರು.

ಇದನ್ನೂ ಓದಿ: INDvsSA: ಮೊದಲ ಟೆಸ್ಟ್‌ನಿಂದ ಶುಭಮನ್ ಗಿಲ್ ಔಟ್; ಆಸ್ಪತ್ರೆಗೆ ದಾಖಲು!

ದಾಳಿಗೆ ಕಾರಣವಾದ ನಾಯಿಯನ್ನು ಶಕ್ತಿನಗರ ಅನಿಮಲ್ ಕೇರ್ ಟ್ರಸ್ಟ್ ಸಹಾಯದಿಂದ ಹಿಡಿಯಲಾಗಿತ್ತು.

Continue Reading
Advertisement

Trending

Copyright © 2025 Namma Kudla News

You cannot copy content of this page