Connect with us

FILM

5 ವರ್ಷಗಳ ಬಳಿಕ ಬಾಲಿವುಡ್ ನಟಿ ಶ್ರೀದೇವಿ ಸಾವಿನ ರಹಸ್ಯ ಬಯಲು

Published

on

ಇದೇ ಮೊದಲ ಬಾರಿಗೆ ಜನಪ್ರಿಯ ಬಾಲಿವುಡ್‌ ನಟಿ ಶ್ರೀದೇವಿ ಸಾವಿನ ಕುರಿತು ಬೋನಿ ಕಪೂರ್‌ ಬಾಯ್ಬಿಟ್ಟಿದ್ದಾರೆ.ಆಕೆಯ ಸಾವಿನ ಹಿಂದೆ ತನ್ನ ಪಾತ್ರ ಇರುವ ಕುರಿತ ವದಂತಿಗಳಿಗೆ ಸ್ಪಷ್ಟನೆ ನೀಡುವ ಪ್ರಯತ್ನವನ್ನು ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ತನ್ನ ಪತ್ನಿ, ಜನಪ್ರಿಯ ಬಾಲಿವುಡ್‌ ನಟಿ ಶ್ರೀದೇವಿ ಸಾವಿನ ಕುರಿತು ಬೋನಿ ಕಪೂರ್‌ ಬಾಯ್ಬಿಟ್ಟಿದ್ದಾರೆ.ಆಕೆಯ ಸಾವಿನ ಹಿಂದೆ ತನ್ನ ಪಾತ್ರ ಇರುವ ಕುರಿತ ವದಂತಿಗಳಿಗೆ ಸ್ಪಷ್ಟನೆ ನೀಡುವ ಪ್ರಯತ್ನವನ್ನು ಮಾಡಿದ್ದಾರೆ.

2018ರಲ್ಲಿ ದುಬೈ ಹೋಟೆಲ್‌ನ ಬಾತ್‌ ಟಬ್‌ನಲ್ಲಿ ಮುಳುಗಿ ನಟಿ ಶ್ರೀದೇವಿ ಮೃತಪಟ್ಟಿದ್ದರು. ಇವರ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿತ್ತು. “ನನ್ನ ಪತ್ನಿ ಶ್ರೀದೇವಿ ಸಾವು ಸಹಜವಲ್ಲ, ಅದೊಂದು ಆಕಸ್ಮಿಕ” ಎಂದು ಬೋನಿ ಕಪೂರ್‌ ಹೇಳಿದ್ದಾರೆ. ಶ್ರೀದೇವಿ ಅವರ ಸಾವಿಗೆ ವಿಪರೀತವಾಗಿ ಅವರು ಪಥ್ಯ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಸದಾ ತಾನು ಸುಂದರವಾಗಿಯೇ ಇರಬೇಕು ಎಂದು ಶ್ರೀದೇವಿ ಪಥ್ಯ ಮಾಡುತ್ತಿದ್ದರು.

ಹಲವಾರು ಬಾರಿ ಉಪವಾಸ ಇರುತ್ತದೆ. ಕಡಿಮೆ ರಕ್ತದೊತ್ತಡವಿದೆ ಎಂದು ವೈದ್ಯರು ತಿಳಿಸಿದ್ದರು ಅದನ್ನು ಶ್ರೀದೇವಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ.

ಶ್ರೀದೇವಿ ಅವರ ನಿಧನರಾದಾಗ ತಮ್ಮನ್ನು ದುಬೈ ಪೊಲೀಸರು ಹಲವು ಗಂಟೆಗಳ ಕಾಲ ತನಿಖೆಗೆ ಒಳಪಡಿಸಿದ್ದರು ಎನ್ನುವ ಸಂಗತಿಯನ್ನೂ ಅವರು ಹಂಚಿಕೊಂಡಿದ್ದಾರೆ.

ಸುಳ್ಳು ಪತ್ತೆ ಸೇರಿದಂತೆ ಹಲವಾರು ರೀತಿಯ ತನಿಖೆಗಳನ್ನೂ ಪೊಲೀಸರು ಮಾಡಿದ್ದಾರೆ.


ನಾನು ಸುಮಾರು 24 ಅಥವಾ 48 ಗಂಟೆಗಳ ಕಾಲ ನನ್ನನ್ನು ತನಿಖೆ ಮತ್ತು ವಿಚಾರಣೆಗೆ ಒಳಪಡಿಸಿದಾಗ ಅದರ ಬಗ್ಗೆ ಮಾತನಾಡಿದ್ದೇನೆ.

ಹೀಗಾಗಿ ದುಬೈ ಪೊಲೀಸರಿಂದ ಕ್ಲೀನ್ ಚಿಟ್ ಸಿಕ್ಕಿದೆ. ವಾಸ್ತವವಾಗಿ, ಭಾರತೀಯ ಮಾಧ್ಯಮಗಳಿಂದ ಹೆಚ್ಚಿನ ಒತ್ತಡವಿರುವುದರಿಂದ ನಾನು ಈ ಕಠಿಣ ತನಿಖೆಗೆ ಒಳಗಾಗಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ಎಲ್ಲಾ ಬಗೆಯ ಪರೀಕ್ಷೆಗಳಿಗೆ ಒಳಗಾದೆ. ಬಳಿಕ ಇದು ನೀರಿನಲ್ಲಿ ಮುಳುಗಿ ಸಂಭವಿಸಿದ ಆಕಸ್ಮಿಕ ಸಾವು ಎನ್ನುವುದು ರುಜುವಾಯಿತು” ಎಂದು ಅವರು ಹೇಳಿದ್ದಾರೆ.

“ಶ್ರೀದೇವಿ ಅವರು ಉತ್ತಮ ದೇಹ ಆಕಾರ ಖಚಿತಪಡಿಸಿಕೊಳ್ಳಲು ಸದಾ ಗಮನ ನೀಡುತ್ತಿದ್ದಳು. ಸಿನಿಮಾ ತೆರೆಯ ಮೇಲೆ ಉತ್ತಮವಾಗಿ ಕಾಣಿಸಲು ಪ್ರಯತ್ನಿಸುತ್ತಿದ್ದಳು.

ಹಿಂದೊಮ್ಮೆ ತನ್ನ ತೂಕವನ್ನು 46-47 ಕೆಜಿಗೆ ಇಳಿಸಿಕೊಂಡಿದ್ದಳು” ಎಂದು ಹೇಳಿದ ಬೋನಿ ಕಪೂರ್‌ ಇಂಗ್ಲಿಷ್‌ ವಿಂಗ್ಲಿಷ್‌ನಂತಹ ಚಿತ್ರದ ಉದಾಹರಣೆಯನ್ನು ನೀಡಿದ್ದಾರೆ. ಶ್ರೀದೇವಿಯು ಉಪ್ಪು ಸೇವನೆ ತಪ್ಪಿಸುತ್ತಿದ್ದರು ಎಂಬ ಮಾಹಿತಿಯನ್ನೂ ಬೋನಿ ಕಪೂರ್‌ ನೀಡಿದ್ದಾರೆ.

DAKSHINA KANNADA

ಕರಾವಳಿಯ ಕಲಾವಿದರನ್ನು ಹಾಡಿ ಹೊಗಳಿದ ಖ್ಯಾತ ನಟ ರಮೇಶ್ ಅರವಿಂದ್

Published

on

ಪುತ್ತೂರು : ಕರಾವಳಿಯ ಬೀಚ್ ಗಳು ನನ್ನ ರೋಮ್ಯಾಂಟಿಕ್ ಸಿನೆಮಾಗೆ ಜೀವ ತುಂಬಿದ್ರೆ, ಕರಾವಳಿಯ ತುಳು ನಾಟಕ ನೋಡಿ ಕಾಮಿಡಿ ಸಿನೆಮಾ ಮಾಡಿದೆ. ಯಕ್ಷಗಾನದ ವೇಷ ಹಾಕಿ ಇಲ್ಲಿನ ಯಕ್ಷಗಾನ ಕಲಾವಿದರ ಬಗ್ಗೆ ಗೌರವಪಟ್ಟೆ ಅಂತ ನಟ ರಮೇಶ್ ಅರವಿಂದ್ ಕರಾವಳಿಯನ್ನು ಹಾಡಿ ಹೊಗಳಿದ್ದಾರೆ.

ಪುತ್ತೂರಿನಲ್ಲಿ ಮುಳಿಯ ಗೋಲ್ಡ್ ಅ್ಯಂಡ್ ಡೈಮಂಡ್ ಶೋ ರೂಮ್ ಉದ್ಘಾಟನೆಗೆ ಆಗಮಿಸಿದ ಅವರು ಪತ್ರಕರ್ತರ ಜೊತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ತುಳು ರಂಗಭೂಮಿಯಲ್ಲಿ ಇರುವ ಕಲಾವಿದರ ಹ್ಯೂಮರ್ ತುಂಬಾನೆ ಚೆನ್ನಾಗಿದ್ದು , ಅವರ ಪಂಚಿಂಗ್ ಡೈಲಾಗ್ ನನಗೆ ತುಂಬಾ ಇಷ್ಟ. ತುಳು ಭಾಷೆ ಬಾರದೇ ಇದ್ರೂ ಅದನ್ನು ಅರ್ಥೈಸಿಕೊಂಡು ಕನ್ನಡದಲ್ಲೂ ತುಳು ಕಲಾವಿದರನ್ನು ಹಾಕಿ ಸಿನೆಮಾ ಮಾಡಿದ್ದೇನೆ. ನನ್ನ ಕೆಲವು ಕಾಮಿಡಿ ಸಿನೆಮಾಗಳಿಗೆ ತುಳು ರಂಗಭೂಮಿಯೇ ಪ್ರೇರಣೆಯಾಗಿತ್ತು ಅಂತ ಅವರು ಹೇಳಿದ್ದಾರೆ.

ಇದೇ ವೇಳೆ ಯಕ್ಷಗಾನ ಕಲಾವಿದರು ತಾವೇ ಬಣ್ಣ ಹಚ್ಚಿ ವೇಷ ಧರಿಸಿಕೊಳ್ಳುವಂತಹದು ನಿಜಕ್ಕೂ ಒಂದು ಅದ್ಭುತ ವಿಚಾರ ಅಂತ ಯಕ್ಷಗಾನದ ವೇಷಧಾರಿಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ ರಮೇಶ್ ಅರವಿಂದ್ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗಬೇಕು ಎಂದು ಸಲಹೆ ನೀಡಿದ್ದಾರೆ.

Continue Reading

FILM

ಸ್ಟೈಲಿಶ್ ಹೆಸರಿಡೋ ಕಾಲದಲ್ಲೂ ದೇವರ ಹೆಸರು ..! ನಟಿ ಪ್ರಣಿತಾ ಮಗುವಿಗೆ ಈ ಹೆಸರಿಡಲು ಕಾರಣವೇನು ..?

Published

on

ನಟಿ ಪ್ರಣಿತಾ ಸುಬಾಷ್ ಹಾಗೂ ನಿತಿನ್ ರಾಜು ದಂಪತಿಗೆ 2024 ರ ಸೆಪ್ಟೆಂಬರ್​ನಲ್ಲಿ ಜನಿಸಿದ್ದ ಗಂಡು ಮಗುವಿಗೆ ಈಗ ನಾಮಕರಣ ಶಾಸ್ತ್ರ ನಡೆದಿದೆ. ಎಲ್ಲರೂ ಸ್ಟೈಲಿಶ್ ಹೆಸರಿಡೋ ಈ ಕಾಲದಲ್ಲಿ ಪ್ರಣಿತಾ ಮಾತ್ರ ಮಹಾಭಾರತದಲ್ಲಿ ಬರುವ ಪ್ರಮುಖ ವ್ಯಕ್ತಿಯ ಹೆಸರು ಇಟ್ಟಿದ್ದಾರೆ. ಆ ಹೆಸರು ಇಡಲು ಕಾರಣ ಏನು ಎಂಬುವುದನ್ನೂ ಸಹ ಎಳೆ ಎಳಯಾಗಿ ವಿವರಿಸಿದ್ದಾರೆ. ಹಾಗಾದರೆ ನಟಿ ಪ್ರಣಿತಾಳ ಮಗುವಿನ ಹೆಸರೇನು ? ಆ ನಾಮ ಇಡುವುದರ ಹಿಂದಿನ ಉದ್ದೇಶ ಏನು ? ಇಲ್ಲಿದೆ ಸಂಪೂರ್ಣ ಮಾಹಿತಿ.

ಪ್ರಣಿತಾ ಹಾಗೂ ಉದ್ಯಮಿ ನಿತಿನ್ ಜೋಡಿ ಕೊವಿಡ್ ಸಂದರ್ಭದಲ್ಲಿ ಮದುವೆ ಆಗಿತ್ತು. ಈ ದಂಪತಿಗೆ 2022ರಲ್ಲಿ ಹೆಣ್ಣು ಮಗು ಜನಿಸಿತು. ಅವಳಿಗೆ ಅರ್ನಾ ಎಂದು ಹೆಸರು ಇಡಲಾಗಿದೆ. ಸೆಪ್ಟೆಂಬರ್​​ನಲ್ಲಿ ಪ್ರಣಿತಾ ಗಂಡು ಮಗುವನ್ನು ಬರಮಾಡಿಕೊಂಡಿದ್ದು, ಈಗ ನಾಮಕರಣ ಶಾಸ್ತ್ರ ನಡೆದಿದೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ತಮ್ಮ ಮಕ್ಕಳಿಗೆ ಫ್ಯಾನ್ಸಿ ಹೆಸರನ್ನು ಇಡಲು ಬಯಸುತ್ತಾರೆ. ಅದರಲ್ಲೂ ಪೌರಾಣಿಕ ಪಾತ್ರಗಳ ಹೆಸರನ್ನು ಇಡಬೇಕು ಎಂದು ಯಾರೂ ಬಯಸುವುದಿಲ್ಲ.

ಆದರೆ, ನಟಿ ಪ್ರಣಿತಾ ತಮ್ಮ ಮುದ್ದಾದ ಗಂಡು ಮಗುವಿಗೆ ‘ಜೈ ಕೃಷ್ಣ’ ಎಂದು ನಾಮಕರಣ ಮಾಡಿದ್ದಾರೆ. ಮಾರ್ಡನ್ ನಟಿ ಸಾಂಪ್ರದಾಯಿಕ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಎಲ್ಲರಿಂದ ಮೆಚ್ಚುಗೆ ಪಡೆಕುಕೊಂಡಿದ್ದಾರೆ. “ಯಾಕಾಗಿ ಮಗುವಿಗೆ ಆ ಹೆಸರು ಇಡಲಾಗಿದೆ ?” ಎಂದಾಗ “ನನ್ನ ತಂದೆಯ ತಂದೆ ಹೆಸರು ಬಾಲಕೃಷ್ಣ ಅಂತ. ನಮ್ಮ ಹಾಸ್ಪಿಟಲ್ ಹೆಸರು ಶ್ರೀಕೃಷ್ಣ. ನನ್ನ ಪತಿಯ ತಂದೆಯ ಹೆಸರು ವಾಸುದೇವ ಅಂತ. ಎಲ್ಲಾ ಒಟ್ಟಿಗೆ ಸೇರಿ ಜೈ ಕೃಷ್ಣ ಎಂದು ಹೆಸರು ಇಟ್ಟಿದ್ದೇವೆ” ಎಂದಿದ್ದಾರೆ ನಟಿ ಪ್ರಣಿತಾ.

Continue Reading

FILM

ಸಿನಿಮಾ ನಿರ್ದೇಶನಕ್ಕಿಳಿದ ಕನ್ನಡತಿ; ಪ್ರೇಮ್, ಗೋಲ್ಡನ್ ಸ್ಟಾರ್ ಮಗನಿಗೆ ಆ್ಯಕ್ಷನ್ ಕಟ್

Published

on

ಮಂಗಳೂರು/ಬೆಂಗಳೂರು : ಕಿರುತೆರೆಯಲ್ಲಿ ಮಿಂಚಿ ಜನಮನ ಗೆದ್ದಿರುವ ಕಲಾವಿದೆ ರಂಜನಿ ರಾಘವನ್.  ಹಿರಿತೆರೆಯಲ್ಲೂ ಕೆಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಇದೀಗ ಮತ್ತೊಂದು ಅಗ್ನಿ ಪರೀಕ್ಷೆಗಿಳಿದಿದ್ದಾರೆ. ಈ ಬಾರಿ ನಿರ್ದೇಶಕಿಯಾಗಿ ಅವರು ಬೆಳ್ಳಿ ಪರದೆಯ ಮೇಲೆ ಕಮಾಲ್ ಮಾಡುವ ತಯಾರಿಯಲ್ಲಿದ್ದಾರೆ.

ರಂಜನಿಯವರ ಚೊಚ್ಚಲ ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಪಾತ್ರವಾಗುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಪುತ್ರ ವಿಹಾನ್ ಪ್ರಮುಖ ಪಾತ್ರವಾಗುತ್ತಿರೋದು. ಈ ಚಿತ್ರದಲ್ಲಿ ತಂದೆ – ಮಗನ ಬಾಂಧವ್ಯದ ಕುರಿತ ಕಥೆಯಿದೆ ಎಂಬುದಾಗಿ ಹೇಳಲಾಗಿದೆ. ಸದ್ಯ ಚಿತ್ರದ ಮೋಷನ್ ಪೋಸ್ಟರ್ ಗಮನ ಸೆಳೆಯುತ್ತಿದೆ.

ಅಂದ್ಹಾಗೆ, ರಂಜನಿ ರಾಘವನ್ ವಿಭಿನ್ನಶೀರ್ಷಿಕೆಯನ್ನು ಚಿತ್ರಕ್ಕಿಟ್ಟಿದ್ದಾರೆ.  ‘ಡಿ ಡಿ ಢಿಕ್ಕಿ’ ಎಂಬುದು ಚಿತ್ರದ ಹೆಸರು. ನಟ ಪ್ರೇಮ್ ಹಾಗೂ ಗಣೇಶ್ ಪುತ್ರ ವಿಹಾನ್ ಈ ಚಿತ್ರದಲ್ಲಿ ತಂದೆ ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಟೇರ ಚಿತ್ರದ ರೈಟರ್ ಜಡೇಶ್ ಕುಮಾರ್ ತಮ್ಮ ‘ಹಂಪಿ ಪಿಕ್ಚರ್ಸ್’ ಅಡಿಯಲ್ಲಿ ನಿರ್ಮಾಣಕ್ಕಿಳಿದಿದ್ದು, ರಾಮಕೃಷ್ಣ ಮತ್ತು ಆನಂದ್ ಕುಮಾರ್  ನೇತೃತ್ವದ ಆರ್‌ಕೆ ಮತ್ತು ಎಕೆ ಎಂಟರ್‌ಟೇನ್‌ಮೆಂಟ್ ಸಂಸ್ಥೆ ಜೊತೆಯಾಗಿದೆ.

ಇದನ್ನೂ ಓದಿ : ಮಗಳ ಹೆಸರು ರಿವೀಲ್ ಮಾಡಿದ ಕ್ರಿಕೆಟಿಗ ಕೆ.ಎಲ್.ರಾಹುಲ್, ಅಥಿಯಾ ಶೆಟ್ಟಿ

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಇಳಯರಾಜ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯ ಶೇ.60 ರಷ್ಟು ಚಿತ್ರೀಕರಣ ನಡೆದಿದ್ದು, ಕೆಲಸಗಳು ಭರದಿಂದ ಸಾಗುತ್ತಿವೆ.

Continue Reading
Advertisement

Trending

Copyright © 2025 Namma Kudla News

You cannot copy content of this page