Connect with us

LATEST NEWS

ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಕೊಟ್ಟ ರಾಧಿಕಾ ಪಂಡಿತ್

Published

on

ಬೆಂಗಳೂರು: ರಾಂಕಿಂಗ್ ಸ್ಟಾರ್ ಯಶ್ ಪತ್ನಿ ಹಾಗೂ ನಟಿ ರಾಧಿಕಾ ಪಂಡಿತ್ ಆಗಾಗ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಲೇಟೆಸ್ಟ್​ ಫೋಟೋವನ್ನು ಶೇರ್​ ಮಾಡುತ್ತಿರುತ್ತಾರೆ. ಚೆಂದನವನದ ಚೆಲುವೆ ರಾಧಿಕಾ ಪಂಡಿತ್​ಗೆ ಅಪಾರ ಅಭಿಮಾನಿಗಳಿದ್ದಾರೆ. ರಾಧಿಕಾ ಫ್ಯಾನ್ಸ್​ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಪಂಡಿತ್ ಒಂದೇ ಒಂದು ಪೋಸ್ಟ್​​ಗಾಗಿ ಕಾಯುವ ಫ್ಯಾನ್ಸ್​ಗೆ ರಾಧಿಕಾ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅಭಿಮಾನಿಗಳ ಜೊತೆ ಟಚ್​ನಲ್ಲಿ ಇರಲು ಆಗಾಗ ರಾಧಿಕಾ ಪಂಡಿತ್​ ಪ್ರಶ್ನೋತ್ತರ ಸೆಷನ್​ ಕೂಡ ನಡೆಸುತ್ತಾರೆ. ಇನ್ಸ್ಟಾದಲ್ಲಿ ಈ ಬಗ್ಗೆ ಹೊಸ ಪೋಸ್ಟ್ ಮಾಡಿದ್ದಾರೆ.

ನಾವು ಸಿಕ್ಕು ತುಂಬಾ ಸಮಯವಾಗಿದೆ. ನೀವು ನನಗೆ ಇಂದು ಏನೂದರೂ ಪ್ರಶ್ನೆಯನ್ನು ಕೇಳಬಹುದು ಎಂದಿದ್ದಾರೆ ನಟಿ. ಹಾಗಾಗಿ ಇಂದು ರಾಧಿಕಾ ಪಂಡಿತ್ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಲಿದ್ದಾರೆ. ಈ ಪೋಸ್ಟ್‌ ವೀಕ್ಷಿಸಿದ ಫ್ಯಾನ್ಸ್ ನಿಮ್ಮನ್ನು ಕೇಳೋದು ತುಂಬಾ ಇದೆ ಎಂದು ಕಮೆಂಟ್ ಮಾಡ್ತಿದ್ದಾರೆ.

ಸದ್ಯಕ್ಕೆ ಸಿನಿಮಾಗಳಿಂದ ದೂರ ಉಳಿದ ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್, ಫ್ಯಾಮಿಲಿ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ. ಮಕ್ಕಳ ಲಾಲನೆ-ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ರಾಧಿಕಾ ರೀ ಎಂಟ್ರಿಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ಕಮ್​ ಬ್ಲ್ಯಾಕ್​ ಬಗ್ಗೆ ರಾಧಿಕಾ ಗುಡ್​ ನ್ಯೂಸ್ ಕೊಡುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ಮನೆ, ಸಂಸಾರ ಎಂದು ಮಕ್ಕಳ ಜೊತೆ ಫುಲ್ ಟೈಮ್ ಬ್ಯುಸಿಯಾಗಿರುವ ರಾಧಿಕಾ ಪಂಡಿತ್, ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ನಟಿ ರಾಧಿಕಾ ಪಂಡಿತ್ ಎಂಟ್ರಿ ಕೊಟ್ಟಿದ್ದು, ಅನೇಕ ಸಿನಿಮಾಗಳಲ್ಲಿ ನಟಿ ಸೈ ಎನಿಸಿಕೊಂಡಿದ್ದಾರೆ.

LATEST NEWS

ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಿದ ಸಂಬಂಧಿಕರು

Published

on

ಮಧ್ಯಪ್ರದೇಶ: 19 ವರ್ಷದ ಯುವತಿಯ ಮೇಲೆ ಸಂಬಂಧಿಕರೇ ಆಕೆಯ ಮೇಲೆ ಆತ್ಯಾಚಾರ ಎಸಗಿ ದೌರ್ಜನ್ಯ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಈ ಅಪರಾಧದಲ್ಲಿ ಆರು ಜನರು ಭಾಗಿಯಾಗಿದ್ದರು. ಅವರಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. 6 ಜನರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ 15 ಅಡಿ ಎತ್ತರದ ಟೆರೇಸ್‌ನಿಂದ ತಳ್ಳಿದ್ದಾರೆ.

ಸಂತ್ರಸ್ತೆಯು ಕಿರುಚಾಟವನ್ನು ಕೇಳಿ ಆಕೆಯ ಪೋಷಕರು ತಕ್ಷಣ ಹೊರಗೆ ಓಡಿ ಬಂದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣ 100 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸಂತ್ರಸ್ತೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಇದೀಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

Continue Reading

DAKSHINA KANNADA

ಹರಿಪಾದೆ ಜಾರಂದಾಯ ವಾರ್ಷಿಕ ನೇಮೋತ್ಸವದಲ್ಲಿ ಭಾಗಿಯಾದ ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್

Published

on

ಮುಲ್ಕಿ : ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ತುಳುನಾಡಿನ ನೇಮೋತ್ಸವದಲ್ಲಿ ಭಾಗಿಯಾದರು.

ಮಂಗಳವಾರ ರಾತ್ರಿ ಪಕ್ಷಿಕೆರೆ ಸಮೀಪದ ಹರಿಪಾದೆ ಜಾರಂದಾಯ ವಾರ್ಷಿಕ ನೇಮ ನಡೆದಿದ್ದು, ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಸುಮಾರು ಮೂರು ಗಂಟೆಗಳ ಕಾಲ ಭಕ್ತಿಯಿಂದ ಜಾರಂದಾಯ ನೇಮವನ್ನು ವೀಕ್ಷಿಸಿದರು.

ವಿಶಾಲ್ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದು, ಇದಕ್ಕಾಗಿ ದೈವಕ್ಕೆ ಪ್ರಾರ್ಥನೆ ಸಲ್ಲಿಸಿದ್ದು, ಸಂಪೂರ್ಣ ಗುಣಮುಖವಾಗಿ ಬಂದು ಶ್ರೀ ಕ್ಷೇತ್ರದಲ್ಲಿ ತುಲಾಭಾರ ಸೇವೆ ಕೊಡಲು ಅರ್ಚಕರು ಸೂಚಿಸಿದ ಹಿನ್ನೆಲೆಯಲ್ಲಿ ಅವರು ಒಪ್ಪಿಕೊಂಡರು. ಮಾದ್ಯಮದೊಂದಿಗೆ ಮಾತನಾಡಿದ ವಿಶಾಲ್ ಕಾಂತಾರ ನಿನಿಮಾದಲ್ಲಿ ದೈವ ಮತ್ತು ಇಲ್ಲಿನ ನೇಮೋತ್ಸವದ ಬಗ್ಗೆ ತಿಳಿದಿದ್ದೇನೆ.

ಇದನ್ನೂ ಓದಿ: ಅಯೋಧ್ಯೆ ಶ್ರೀರಾಮ ಮಂದಿರದ ಪ್ರಧಾನ ಅರ್ಚಕ ನಿಧನ

ಇದೀಗ ಪ್ರಥಮ ಬಾರಿಗೆ ತುಳುನಾಡಿನ ನೇಮೋತ್ಸವವನ್ನು ನೋಡುತ್ತಿದ್ದೇನೆ ತುಂಬಾ ಖುಷಿ ನೀಡಿದೆ. ನಿನ್ನೆ ಕೊಲ್ಲೂರು ಮುಕಾಂಬಿಕೆ ದರ್ಶನ ಪಡೆದು ಇದೀಗ ಇಲ್ಲಿಗೆ ಭೇಟಿ ನೀಡಿದ್ದೇನೆ, ಬೆಳೆಯುತ್ತಿರುವ ತುಳು ಚಿತ್ರರಂಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮಿಳಿನಲ್ಲಿ ಹಲವು ಸಿನಿಮಾಗಳ ಮಾತುಕಥೆ ನಡೆಯುತ್ತಿದೆ ಎಂದರು.

Continue Reading

LATEST NEWS

ಬಸ್ ಚಾಲಕನಿಗೆ ಎದೆನೋವು; ಕಂಟ್ರೋಲ್ ತಪ್ಪಿ ಇಳಿಜಾರಿಗಿಳಿದ ಬಸ್

Published

on

ಪಡುಬಿದ್ರೆ: ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದ್ದು, ಚಲಿಸುತ್ತಿದ್ದ ಬಸ್ ಹೆದ್ದಾರಿ ಪಕ್ಕದ ಇಳಿಜಾರಿಗಿಳಿದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಬಸ್‌ ಚಾಲಕ ಶಂಭು ಎಂಬುವವರಿಗೆ ಎದೆನೋವು ಕಾಣಿಸಿಕೊಂಡಿದೆ. ತೆಂಕ ಎರ್ಮಾಳಿನ ಮಸೀದಿ ಬಳಿಯಿಂದ ಬಸ್ ಉಡುಪಿಯತ್ತ ಹೋಗುತ್ತಿತ್ತು. ಬಸ್‌ ನಲ್ಲಿ ಹಠಾತ್ ಚಾಲಕನಿಗೆ ಎದೆನೋವು ಸಂಭವಿಸಿದ್ದರಿಂದ ಬಸ್ ಕಂಟ್ರೋಲ್ ತಪ್ಪಿ ಇಳಿಜಾರಿಗಿಳಿದಿದೆ.

ಬಸ್ ಚಾಲಕ ಹಾಗೂ ಪ್ರಯಾಣಿಕರಿಗೆ ಗಾಯವಾಗಿದ್ದು, ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ವಿವರ ತಿಳಿದು ಬರಬೇಕಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page