Connect with us

NATIONAL

‘ನನ್ನ ಪ್ರತಿಷ್ಠಾನದ ಪ್ರತಿಯೊಂದು ರೂಪಾಯಿ ಅಮೂಲ್ಯವಾದ ಜೀವವನ್ನು ಉಳಿಸಲು ಕಾಯುತ್ತಿದೆ’ ಐಟಿ ದಾಳಿಯ ಬಳಿಕ ಸೋನು ಸೂದ್ ಮೊದಲ ಪ್ರತಿಕ್ರಿಯೆ

Published

on

ಮುಂಬೈ: ಬಹುಭಾಷಾ ನಟ ಸೋನು ಸೂದ್ ಮನೆ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ನಂತರ ಮೌನ ಮುರಿದಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಇದರ ಬಗ್ಗೆ ಬರೆದುಕೊಂಡಿರುವ ಸೋನು ಸೂದ್ “ನೀವು ಯಾವಾಗಲು ನಿಮ್ಮ ಕಥೆಯನ್ನು ಹೇಳಬೇಕಾಗಿಲ್ಲ.

ಸಮಯ ಬರುತ್ತದೆ ನಾನು ನನ್ನ ಸಂಪೂರ್ಣ ಶಕ್ತಿ ಹಾಗೂ ಹೃದಯದಿಂದ ಭಾರತದ ಜನರ ಸೇವೆ ಮಾಡುವ ಪ್ರತಿಜ್ಞೆ ಮಾಡಿದ್ದೇನೆ.

ನನ್ನ ಪ್ರತಿಷ್ಠಾನದಲ್ಲಿ ಪ್ರತಿಯೊಂದು ರೂಪಾಯಿಯೂ ಅಮೂಲ್ಯವಾದ ಜೀವವನ್ನು ಉಳಿಸಲು ಕಾಯುತ್ತಿದೆ ಮತ್ತು ಅಗತ್ಯವಿರುವವರನ್ನು ತಲುಪಲು ಕಾಯುತ್ತಿದೆ ” ಎಂದು ಹೇಳಿದ್ದಾರೆ.

ಐಟಿ ಅಧಿಕಾರಿಗಳು ನಟ ಸೋನು ಸೂದ್ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿದ್ದು, ಇದನ್ನು ಸರ್ವೆ ಎಂದು ಹೇಳಿಕೊಂಡಿದ್ದು ಸೋನು ಸೂದ್ 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ.

ಸತತ ಮೂರು ದಿನಗಳ ಕಾಲ ಸೋನು ಮನೆ, ಕಚೇರಿಗಳ ಮೇಲೆ ಸಮೀಕ್ಷೆ ನಡೆಸಿದ ಐಟಿ ಅಧಿಕಾರಿಗಳು,

ನಟನಿಗೆ ಸಂಬಂಧಿಸಿದ ನಾನ್ ಪ್ರಾಫಿಟ್ ಸಂಸ್ಥೆಯು 2.1 ಕೋಟಿಗಳನ್ನು ವಿದೇಶಿ ಮೂಲಗಳಿಂದ ಸಂಗ್ರಹಿಸಿದೆ ಎಂದಿದ್ದಾರೆ.

ಇದು ಸರ್ಕಾರದ ವಿದೇಶಿ ಹಣ ಸ್ವೀಕಾರದ ಕಾನೂನಿಗೆ ವಿರುದ್ಧವಾಗಿದೆ ಎಂದು ಇಲಾಖೆ ತಿಳಿಸಿದೆ.

LATEST NEWS

ಬಿಹಾರ ಚುನಾವಣೆಯಲ್ಲಿ ಜನ್ ಸುರಾಜ್ ಪಕ್ಷಕ್ಕೆ ಹೀನಾಯ ಸೋಲು; ಮೌನ ಮುರಿದ ಪ್ರಶಾಂತ್ ಕಿಶೋರ್?

Published

on

ಪಾಟ್ನಾ: ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷವು ಒಂದು ಹೀನಾಯ ಸೋಲು ಕಂಡಿತ್ತು. ಇದೀಗ ಸೋಲಿನ ಹೊಣೆ ಸಂಪೂರ್ಣವಾಗಿ ತಾನೇ ಹೊತ್ತುಕೊಳ್ಳುವುದಾಗಿ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಇದಲ್ಲದೆ ಸೋಲಿನ ಬಗ್ಗೆ ಪರಾಮರ್ಶೆ ನಡೆಸಲು ಒಂದು ದಿನ ವೃತ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.


ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಪ್ರಶಾಂತ್ ಕಿಶೋರ್, ನಾವು ಪಕ್ಷವನ್ನು ಅಧಿಕಾರಕ್ಕೆ ತರಲು ಬಹಳಷ್ಟು ಶ್ರಮಿಸಿದ್ದೇವೆ. ಆದರೆ ಬಿಹಾರದಲ್ಲಿ ಸರ್ಕಾರವನ್ನು ಬದಲಾಯಿಸಲು ವಿಫಲರಾಗಿದ್ದೇವೆ. ಈ ಚುನಾವಣೆಯ ಸೋಲಿನ ಸಂಪೂರ್ಣ ಹೊಣೆ ನಾನೇ ಹೊತ್ತುಕೊಳ್ಳುತ್ತೇನೆ. ಪಕ್ಷದ ಸೋಲಿನ ಬಗ್ಗೆ ಪರಾಮರ್ಶೆ ನಡೆಸಲಾಗುವುದು. ಇದರೊಂದಿಗೆ ನಾನು ಒಂದು ದಿನದ ಉಪವಾಸ ವೃತ ನಡೆಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: 26 ಸಶಸ್ತ್ರ ದಾಳಿಗಳ ರೂವಾರಿ-ಮೋಸ್ಟ್ ವಾಂಟೆಡ್ ನಕ್ಸಲ್ ಕಮಾಂಡರ್ ಮಡ್ವಿ ಹಿಡ್ಮಾ ಎನ್​ಕೌಂಟರ್​​ನಲ್ಲಿ ಸಾ*ವು

ಬಿಹಾರದಲ್ಲಿ ಇಂಡಿ ಮೈತ್ರಿಕೂಟವನ್ನು ಎನ್‌ಡಿಎ ಸೋಲಿಸಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಎನ್‌ಡಿಎ 202 ಸ್ಥಾನಗಳನ್ನು ಗೆದ್ದರೆ, ಆರ್‌ಜೆಡಿ 143 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 25 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಆದರೆ ಜನ್ ಸುರಾಜ್ ಪಕ್ಷ ಒಂದು ಕ್ಷೇತ್ರದಲ್ಲಿ ಗೆಲ್ಲದೆ ಹೀನಾಯವಾಗಿ ಸೋಲು ಕಂಡಿತು.

Continue Reading

LATEST NEWS

26 ಸಶಸ್ತ್ರ ದಾಳಿಗಳ ರೂವಾರಿ-ಮೋಸ್ಟ್ ವಾಂಟೆಡ್ ನಕ್ಸಲ್ ಕಮಾಂಡರ್ ಮಡ್ವಿ ಹಿಡ್ಮಾ ಎನ್​ಕೌಂಟರ್​​ನಲ್ಲಿ ಸಾ*ವು

Published

on

ವಿಶಾಖಪಟ್ಟಣ: 26 ಸಶಸ್ತ್ರ ದಾಳಿಗಳ ರೂವಾರಿಯಾಗಿದ್ದ, ಟಾಪ್ ನಕ್ಸಲ್ ಕಮಾಂಡರ್ ಮಾಡ್ವಿ ಹಿಡ್ಮಾ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.


ಇಂದು (ನ.18) ಬೆಳಿಗ್ಗೆಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಮಾವೋವಾದಿ ಸಂಘಟನೆಯ ಪ್ರಮುಖ ನಾಯಕ ಮಾಡ್ವಿ ಹಿದ್ಮಾ ಸೇರಿ ಆರು ಮಂದಿಯನ್ನು ಹತ್ಯೆ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿಸಲಾಗಿದೆ.

ಮಡ್ವಿ ಹಿಡ್ಮಾ, ಭಾರತದ ಭದ್ರತಾ ಪಡೆಗಳ ವಿರುದ್ಧ 26 ಸಶಸ್ತ್ರ ದಾಳಿಯನ್ನ ನಡೆಸಿದ್ದ ಉನ್ನತ ಮಾವೋವಾದಿ ನಕ್ಸಲ್ ನಾಯಕನಾಗಿದ್ದ. ಮಡ್ವಿ ಹಿಡ್ಮಾ ಬಗ್ಗೆ ಮಾಹಿತಿಗಾಗಿ ಭದ್ರತಾ ಪಡೆಗಳು 50 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದವು. ಮಡ್ವಿ ಹಿಡ್ಮಾ ನೇತೃತ್ವದಲ್ಲಿ ನಕ್ಸಲರು 2010ರ ದಾಂತೇವಾಡ ದಾಳಿ ಮತ್ತು 2013ರ ಜೀರಂ ಕಣಿವೆಯ ದಾಳಿಗಳನ್ನು ನಡೆಸಿದ್ದರು. 2021ರ ಸುಕ್ಮಾ- ಬಿಜಾಪುರ ಎನ್ ಕೌಂಟರ್ ನಲ್ಲಿ ಈ ಮಡ್ವಿ ಹಿಡ್ಮಾ ಕೂಡ ಭಾಗಿಯಾಗಿದ್ದ. ಬಹಳ ದೀರ್ಘ ಕಾಲದಿಂದ ಭಾರತದ ಭದ್ರತಾ ಪಡೆಗಳು ಮಡ್ವಿ ಹಿಡ್ಮಾಗಾಗಿ ಹುಡುಕಾಟ ನಡೆಸುತ್ತಿದ್ದವು.

ಇದನ್ನೂ ಓದಿ: ಪತ್ನಿಯನ್ನು ಕೊಂದ ಪಾಪಿ ಪತಿ; 4 ವರ್ಷದ ಮಗು ಅನಾಥ!

ಇಂದು ಆಂಧ್ರಪ್ರದೇಶ- ಛತ್ತೀಸ್ ಘಡ- ಒರಿಸ್ಸಾ ಗಡಿಯಲ್ಲಿ ಎನ್ ಕೌಂಟರ್ ನಡೆಸಿ ಮಡ್ವಿ ಹಿಡ್ಮಾ ಹತ್ಯೆ ಮಾಡಲಾಗಿದೆ. ಇಂಟಲಿಜೆನ್ಸ್ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ನಕ್ಸಲರ ವಿರುದ್ಧ ಎನ್ ಕೌಂಟರ್ ನಡೆಸಿವೆ ಎಂದು ವರದಿಯಾಗಿದೆ.

Continue Reading

LATEST NEWS

WATCH VIDEO : ಭಾಷಣ ಮುಗಿಸಿದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿ*ದ್ದು ಐಟಿ ಉದ್ಯೋಗಿ ಸಾ*ವು

Published

on

ಮಂಗಳೂರು/ಸೂರತ್ : ಇತ್ತೀಚೆಗೆ ಕುಸಿದು ಬಿ*ದ್ದು ಸಾ*ವನ್ನಪ್ಪುವ ಘಟನೆಗಳು ಹೆಚ್ಚಾಗುತ್ತಿವೆ. ಹಿರಿಯರು ಮಾತ್ರವಲ್ಲದೆ, ಕಿರಿಯರು, ಮಕ್ಕಳೂ ಹೃದಯಾ*ಘಾತಕ್ಕೆ ಬ*ಲಿಯಾಗುತ್ತಿರುವ ಬಗ್ಗೆ ವರದಿಯಾಗುತ್ತಿವೆ. ಇದೀಗ ಮತ್ತೊಂದು ಘಟನೆ ನಡೆದಿದ್ದು, ಐಟಿ ಉದ್ಯೋಗಿಯೊಬ್ಬರು  ಕುಸಿದು ಬಿ*ದ್ದು ಪ್ರಾ*ಣ ಬಿಟ್ಟಿದ್ದಾರೆ.

ಸೂರತ್‌ ನಲ್ಲಿ ನಡೆದ ಮಾಹಿತಿ ತಂತ್ರಜ್ಞಾನದ ಕಾರ್ಯಕ್ರಮದಲ್ಲಿ ಈ ದುರಂ*ತ ಸಂಭವಿಸಿದೆ. ರಾಯ್ ಪುರದ 24 ವರ್ಷದ ಝಿಲ್ ಥಕ್ಕರ್ ಮೃ*ತ ಯುವತಿ. ಎಂಸಿಎ ಪದವಿ ಪಡೆದಿದ್ದ ಝಿಲ್,  ಕಳೆದ ಎರಡು ವರ್ಷಗಳಿಂದ ಅಹಮದಾಬಾದ್‌ ನ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಗರಗಳಲ್ಲಿ ನಡೆಯುವ ತಾಂತ್ರಿಕ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ತಮ್ಮ ಕಂಪನಿಯನ್ನು ಪ್ರತಿನಿಧಿಸುತ್ತಿದ್ದರು.

ಅಂತೆಯೇ,  ಕಪೋದ್ರಾದ ಶ್ರೀ ಸ್ವಾಮಿ ಆತ್ಮಾನಂದ ಸರಸ್ವತಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನಲ್ಲಿ ನಡೆದ ವರ್ಡ್‌ ಕ್ಯಾಂಪ್ ಸೂರತ್ 2025 ರಲ್ಲಿ ಭಾಗವಹಿಸಲು ಆಗಮಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿದ್ದ  ಆಕೆ, ಭಾಷಣ ಮುಗಿಸಿದ ಕೆಲವೇ ಕ್ಷಣಗಳಲ್ಲಿ ವೇದಿಕೆಯ ಮೇಲೆಯೇ ಕುಸಿದು ಬಿ*ದ್ದು ಮೃ*ತಪಟ್ಟಿದ್ದಾರೆ.

ಇದನ್ನೂ ಓದಿ : ಲವ್ ಬ್ರೇಕಪ್ ಎಫೆಕ್ಟ್; ತಾನೇ ಸೃಷ್ಟಿಸಿದ ಎಐ ಸಂಗಾತಿ ಜೊತೆ ಮದುವೆಯಾದ ಮಹಿಳೆ!

ಥಕ್ಕರ್ ತಮ್ಮ ಕಂಪನಿಯನ್ನು ಪ್ರತಿನಿಧಿಸಲು ವೇದಿಕೆಯ ಮೇಲೆ ಬಂದಿದ್ದರು. ಅಲ್ಲಿ ಭಾಷಣ ಮುಗಿಸಿದ ಕೆಲವೇ ಕ್ಷಣಗಳಲ್ಲಿ ಅವರು ಕುಸಿದು ಬಿ*ದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ  ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page