Connect with us

FILM

Pune : ಖ್ಯಾತ ನಟ ರವೀಂದ್ರ ಮಹಾಜನಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ..!

Published

on

ಚಿತ್ರ ರಂಗದ ಹೆಸರಾಂತ ಬಹುಭಾಷಾ ನಟ ರವೀಂದ್ರ ಮಹಾಜನಿ ಅವರ ಮೃತ ದೇಹ ಕೊಳೆತ  ಸ್ಥಿತಿಯಲ್ಲಿ  ಪತ್ತೆಯಾಗಿದ್ದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ. 

ಪುಣೆ : ಚಿತ್ರ ರಂಗದ ಹೆಸರಾಂತ ಬಹುಭಾಷಾ ನಟ ರವೀಂದ್ರ ಮಹಾಜನಿ ಅವರ ಮೃತ ದೇಹ ಕೊಳೆತ  ಸ್ಥಿತಿಯಲ್ಲಿ  ಪತ್ತೆಯಾಗಿದ್ದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ.

ಪುಣೆಯ ಅವರ ಫ್ಲ್ಯಾಟ್ ನಲ್ಲಿ ಮೃತದೇಹ ಪತ್ತೆಯಾಗಿದ್ದು, ಕೆಲ ದಿನಗಳ ಹಿಂದೆಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಪುಣೆಯ ತಾಳೇಗಾಂವ್ ದಭಾಡೆ ಸಮೀಪದ ಅಂಬಿ ಗ್ರಾಮದಲ್ಲಿ ರವೀಂದ್ರ ವಾಸವಾಗಿದ್ದರು.

ಅವರು ವಾಸುತ್ತಿದ್ದ ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ಸ್ಥಳಕ್ಕೆ ಆಗಮಿಸಿ ಫ್ಲ್ಯಾಟ್ ಬಾಗಿಲು ತೆರೆದಾಗ ರವೀಂದ್ರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ನಂತರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಶುಕ್ರವಾರ ಸಂಜೆಯಿಂದಲೇ ಅವರ ಫ್ಲ್ಯಾಟ್ ನಿಂದ ವಾಸನೆ ಬರುತ್ತಿತ್ತು ಎಂದು ನಿವಾಸಿಗಳು ಮಾಹಿತಿ ನೀಡಿದ್ದಾರೆ.

70-80ರ ದಶಕದಲ್ಲಿ ಪ್ರಮುಖ ನಟರಾಗಿ ರವೀಂದ್ರ ಗುರುತಿಸಿಕೊಂಡಿದ್ದರು. ಹಲವಾರು ಹಿಟ್ ಚಿತ್ರಗಳನ್ನೂ ಅವರು ನೀಡಿದ್ದಾರೆ.

ಮರಾಠಿ, ಗುಜರಾತಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ರವೀಂದ್ರ ನಟಿಸಿದ್ದಾರೆ. ಮರಾಠಿ ಚಿತ್ರರಂಗವಂತೂ ಅವರನ್ನು ವಿನೋದ್ ಖನ್ನಾ ಎಂದೇ ಅಭಿಮಾನದಿಂದ ಕರೆಯುತ್ತಿತ್ತು.

FILM

ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರ ನಡೆದ ನಟಿ ಶ್ವೇತಾ; ಕಾರಣವೇನು?

Published

on

ಬೆಂಗಳೂರು/ಮಂಗಳೂರು : ಕೌಟುಂಬಿಕ ಕಥಾಹಂದರ ಹೊಂದಿರುವ ಧಾರಾವಾಹಿ ‘ಲಕ್ಷ್ಮೀ ನಿವಾಸ’. ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಈ ಧಾರಾವಾಹಿಯಿಂದ ಇತ್ತೀಚೆಗಷ್ಟೇ ತನು ಪಾತ್ರಧಾರಿ ಯುಕ್ತಾ ಹೊರ ನಡೆದಿದ್ದರು. ಇದೀಗ ಹಿರಿಯ ನಟಿ ಶ್ವೇತಾ ಧಾರಾವಾಹಿ ತೊರೆದಿದ್ದಾರೆ ಎಂದು ತಿಳಿದುಬಂದಿದೆ.

ಶ್ವೇತಾ ಈ ಧಾರಾವಾಹಿಯಲ್ಲಿ ಲಕ್ಷ್ಮೀಯಾಗಿ ಕಾಣಿಸಿಕೊಂಡಿದ್ದರು. ಗಂಡನಿಗೆ ಸದಾ ಜೊತೆಯಾಗಿ ನಿಲ್ಲುವ ಪತ್ನಿಯಾಗಿ, ಮಕ್ಕಳ ಹಿತ ಬಯಸುವ ತಾಯಿಯಾಗಿ ಮನೋಜ್ಞ ಅಭಿನಯ ನೀಡುತ್ತಿದ್ದರು. ಆದರೆ, ಇದೀಗ ದಿಢೀರಾಗಿ ಧಾರಾವಾಹಿಯಿಂದ ಹೊರ ಬಂದಿರುವುದು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ.

ಕಾರಣವೇನು ?

ಧಾರಾವಾಹಿಯಿಂದ ಹೊರಬಂದಿರುವ ವಿಚಾರದ ಬಗ್ಗೆ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವೈಯಕ್ತಿಕ ಕಾರಣ ಹಾಗೂ ತಾಯಿಯ ಅನಾರೋಗ್ಯದಿಂದ ಲಕ್ಷ್ಮೀ ನಿವಾಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ.  ಬಹಳ ದಯೆಯಿಂದ ವರ್ತಿಸಿ ಮತ್ತು ನನ್ನನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಕ್ಕಾಗಿ ಕರ್ನಾಟಕಕ್ಕೆ ಧನ್ಯವಾದಗಳು.  ಸೆಟ್‌ನ ಕೆಲವರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ನನ್ನನ್ನು ಮತ್ತೆ ಕನ್ನಡ ಪ್ರೇಕ್ಷಕರಿಗೆ ಪರಿಚಯಿಸಿದಕ್ಕಾಗಿ ಝೀ ಕನ್ನಡ ವಾಹಿನಿಗೆ ಧನ್ಯವಾದಗಳು. ನೀವೆಲ್ಲ  ಅದ್ಭುತ ಮಂದಿ. ಶೀಘ್ರದಲ್ಲೇ ಮತ್ತೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಒಂದೇ ಧಾರಾವಾಹಿಯಲ್ಲಿ ತಾಯಿ, ಮಗ, ಮಗಳು; ಲಕ್ಷ್ಮೀ ನಿವಾಸಕ್ಕೆ ಬಂದ ಹೊಸ ನಟಿ ಯಾರು ಗೊತ್ತಾ?

ಲಕ್ಷ್ಮೀಯಾಗಿ ಮಾಧುರಿ ಎಂಟ್ರಿ :

ಶ್ವೇತಾ ಜಾಗಕ್ಕೆ ಮತ್ತೊಬ್ಬ ಹಿರಿಯ ನಟಿಯ ಪ್ರವೇಶವಾಗಿದೆ. ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿ ಜನಮನಸೂರೆಗೊಳಿಸಿದ್ದ ಮಾಧುರಿ, ಲಕ್ಷ್ಮೀಯಾಗಿ ಎಂಟ್ರಿ ಕೊಟ್ಟಿದ್ದಾರೆ . ಜಗ್ಗೇಶ್, ಪ್ರಭಾಕರ್, ದೇವರಾಜ್ ಮೊದಲಾದವರ ಜೊತೆ ನಟಿಸಿರುವ ಮಾಧುರಿ ಕನ್ನಡ ಮಾತ್ರವಲ್ಲದೇ ಹಿಂದಿ ಧಾರಾವಾಹಿಗಳಿಗೂ ಬಣ್ಣ ಹಚ್ಚಿಸಿದ್ದಾರೆ.

Continue Reading

FILM

ಕಿಚ್ಚ ಹೆಸರಲ್ಲಿ ವಂಚಿಸಿದ್ರಾ ನಿರ್ದೇಶಕ ನಂದ ಕಿಶೋರ್? ಏನಿದು ಆರೋಪ!?

Published

on

ಮಂಗಳೂರು/ಬೆಂಗಳೂರು : ನಟ, ನಿರ್ದೇಶಕ  ನಂದ ಕಿಶೋರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ನಟ ಕಿಚ್ಚ ಸುದೀಪ್ ಹೆಸರು ಹೇಳಿ ವಂಚಿಸಿದ್ದಾರೆ ಎಂದು ಹೇಳಲಾಗಿದೆ.  ಯುವ ನಟ ಶಬರೀಶ್ ಶೆಟ್ಟಿ, ನಂದ ಕಿಶೋರ್ ವಿರುದ್ಧ ಆರೋಪ ಮಾಡಿದ್ದಾರೆ.

2016ರಲ್ಲಿ ನಂದ ಕಿಶೋರ್ ಜಿಮ್​​ನಲ್ಲಿ ಶಬರೀಶ್ ಶೆಟ್ಟಿಗೆ ಪರಿಚಯವಾಗಿದ್ದಂತೆ. ಚಿನ್ನ ಅಡವಿಟ್ಟು 22 ಲಕ್ಷವನ್ನು ನಂದ ಕಿಶೋರ್‌ಗೆ ಕೊಟ್ಟಿದ್ದರಂತೆ ಶಬರೀಶ್. 9 ವರ್ಷಗಳಿಂದ ನನಗೆ ನಂದ ಕಿಶೋರ್ ಹಣವನ್ನು ಹಿಂದಿರುಗಿಸಿಲ್ಲ ಎಂಬುದು ಶಬರೀಶ್ ಆರೋಪ.

ಹಣ ಕೇಳಿದರೆ ನಂದ ಕಿಶೋರ್ ನನಗೆ ಧಮ್ಕಿ ಹಾಕುತ್ತಿದ್ದಾರೆ. ಹಣ ಕೇಳಿದಾಗಲೆಲ್ಲ ಸುದೀಪ್ ಸರ್ ಹೆಸರು ಹೇಳಿ ಯಾಮಾರಿಸುತ್ತಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಮೋಸ ಮಾಡಿದ್ದಾರೆ. ಅತ್ತ ಸಿನಿಮಾದಲ್ಲಿ ಅವಕಾಶ ಇಲ್ಲ, ಇತ್ತ ಹಣವೂ ಕೊಟ್ಟಿಲ್ಲ ಎಂಬುದಾಗಿ ಶಬರೀಶ್ ಆರೋಪಿಸಿದ್ದಾರೆ.

ನನಗೆ ಸಿಸಿಎಲ್ ಆಡುವ ಕನಸಿತ್ತು. ಕೆಸಿಸಿ ಟೂರ್ನಿಯಲ್ಲಿ ಎರಡು ಸೀಸನ್ ಆಡಿದ್ದೇನೆ. ಹಣ ಕೇಳಿದ್ರೆ ಕೆಸಿಸಿಯಿಂದ ಹೊರ ಹಾಕುತ್ತೇನೆ ಎಂಬ ಬೆದರಿಕೆ ಹಾಕುತ್ತಿದ್ದರು. ನಾನು ಸುದೀಪ್ ಸರ್ ಜೊತೆ ಕ್ರಿಕೆಟ್ ಆಡುವ ಆಸೆಯಿಂದ ಸುಮ್ಮನಾಗುತ್ತಿದ್ದೆ ಎಂದಿದ್ದಾರೆ.

ಇದನ್ನೂ ಓದಿ : ಒಂದೇ ಧಾರಾವಾಹಿಯಲ್ಲಿ ತಾಯಿ, ಮಗ, ಮಗಳು; ಲಕ್ಷ್ಮೀ ನಿವಾಸಕ್ಕೆ ಬಂದ ಹೊಸ ನಟಿ ಯಾರು ಗೊತ್ತಾ?

ನನ್ನ ರಾಮಧೂತ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಸಿನಿಮಾ ರಿಲೀಸ್ ಮಾಡಲು ನನ್ನ ಬಳಿ ಹಣವಿಲ್ಲ. ನನ್ನ ಹಣ ವಾಪಾಸ್ ಕೊಡಿ ಅಂದ್ರೆ ಏನು ಮಾಡಿಕೊಳ್ಳುತ್ತೀಯೋ ಮಾಡ್ಕೋ ಅನ್ನುತ್ತಾರೆ. ಈ ವಿಚಾರವನ್ನು ಸುದೀಪ್ ಸರ್ ಗಮನಕ್ಕೆ ತರಲು ಪ್ರಯತ್ನ ಪಟ್ಟಾಗ ನನ್ನ ತಡೆದಿದ್ದರು. ನನ್ನ ಹಣ ನನಗೆ ಕೊಡದಿದ್ದರೆ ಕಾನೂನು ಮೊರೆ ಹೋಗುತ್ತೇನೆ. ಶಿವಣ್ಣ, ಸುದೀಪ್ ಸರ್ ಹಾಗೂ ಫಿಲ್ಮ್ ಛೇಂಬರ್‌ಗೆ ದೂರು ಕೊಡುತ್ತೇನೆ ಎಂಬುದಾಗಿ ಶಬರೀಶ್ ಶೆಟ್ಟಿ ಹೇಳಿದ್ದಾರೆ.

Continue Reading

FILM

ಪಾರ್ಟ್‌ನರ್ ಬಗ್ಗೆ ಮನಬಿಚ್ಚಿ ಮಾತನಾಡಿದ ರಮ್ಯಾ!

Published

on

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮದುವೆ ಯಾವಾಗ ಅನ್ನೋದು ಅಭಿಮಾನಿಗಳ ಬಹುಕಾಲದ ಪ್ರಶ್ನೆ? ಈ ಪ್ರಶ್ನೆ ಕೇಳಿದಾಗೆಲ್ಲಾ ರಮ್ಯಾ ನಕ್ಕು ಸುಮ್ಮನಾಗ್ತಾರೆ. ಆದ್ರೆ ಇದೀಗ ಸಂದರ್ಶನವೊಂದರಲ್ಲಿ ರಮ್ಯಾ ತಮ್ಮ ಪಾರ್ಟ್‌ನರ್ ಬಗ್ಗೆ ಮಾತನಾಡಿದ್ದಾರೆ.

ಹೌದು, ಮೋಹಕ ತಾರೆ ರಮ್ಯಾ ತಮ್ಮ ಪಾರ್ಟ್‌ನರ್ ಬಗ್ಗೆ ಮಾತನಾಡಿದ್ದಾರೆ. ಅರೇ ಇದು ಯಾರು ಹೊಸ ಪಾರ್ಟ್‌ನರ್ ಅಂತ ಫ್ಯಾನ್ಸ್ ತೆಲೆಕೆಡಿಸಿಕೊಂಡಿದ್ದಾರೆ. ಅಷ್ಟಕ್ಕೂ, ರಮ್ಯಾ ಮದುವೆ ಯಾವಾಗ? ಈ ಚೆಲುವೆಯ ಕೈಹಿಡಿಯುವ ಲಕ್ಕಿಮ್ಯಾನ್ ಯಾರು ಅನ್ನೋದು ಅಭಿಮಾನಿಗಳ ಬಹುಕಾಲದ ಪ್ರಶ್ನೆ..? ಈ ಬಗ್ಗೆ ಇಲ್ಲಿದೆ ಉತ್ತರ…

ರಮ್ಯಾ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ರಾಫೇಲ್ ಅನ್ನೋ ವಿದೇಶಿ ಹುಡುಗನ ಜೊತೆ ರೀಲೆಷನ್‌ಶಿಪ್‌ನಲ್ಲಿದ್ರು. ಈ ಬಗ್ಗೆ ಖುದ್ದು ನಟಿಯೇ ಸಡಗರದಿಂದ ಹೇಳಿಕೊಳ್ಳುತ್ತಿದ್ರು. ಆದ್ರೆ ಅದ್ಯಾಕೋ ವಿದೇಶಿ ಗೆಳೆಯ ರಮ್ಯಾ ಪಾಲಿಗೆ ಬಾಳ ಗೆಳೆಯ ಆಗಲೇ ಇಲ್ಲ.

ಮುಂದೆ ರಮ್ಯಾ ರಾಜಕೀಯದಲ್ಲಿ ಬ್ಯುಸಿ ಆದ್ರೂ. ಆದ್ರೆ ಮದುವೆ ಬಗ್ಗೆ ಮುಂದುಕ್ಕೆ ಹೋಗ್ತಾನೆ ಹೋಯ್ತು. ಸದ್ಯ ರಮ್ಯಾಗೆ 43 ವರ್ಷ. ಈಗಲೂ ರಮ್ಯಾ ಒಬ್ಬಂಟಿ. ಸೋ ಈಗಲೂ ಒಂಟಿ ಚೆಲುವೆ ಜಂಟಿ ಆಗೋದು ಯಾವಾಗ ಅಂತ ಫ್ಯಾನ್ಸ್ ಕೇಳ್ತಾನೆ ಇರುತ್ತಾರೆ.

ಇತ್ತೀಚೆಗೆ ಶುಭ್ರಾ ಅಯ್ಯಪ್ಪ ಯೂಟ್ಯುಬ್ ಚಾನಲ್‌ಗೆ ರಮ್ಯಾ ಸಂದರ್ಶನ ಕೊಟ್ಟಿದ್ದಾರೆ. ಅದರಲ್ಲಿ ತಮ್ಮ ಸಿನಿಮಾ, ವೈಯಕ್ತಿಕ, ಪ್ರೀತಿ-ಬದುಕು ಇತ್ಯಾದಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅದರಲ್ಲೂ ರಮ್ಯಾ ಪಾರ್ಟ್‌ನರ್‌ ಬಗ್ಗೆ ಹೇಳಿದ್ದಾರೆ.

“ನನ್ನ ಪಾರ್ಟ್‌ನರ್ ನೀನ್ಯಾಕೆ ಹೀಗೆ.. ನೀನ್ಯಾಕೆ ನನ್ನ ಬಳಿ ಏನೂ ಹೇಳಿಕೊಳ್ಳುವುದಿಲ್ಲ.. ನಿನ್ನನ್ನು ಹೇಗೆ ಅರ್ಥ ಮಾಡಿಕೊಳ್ಳೋದು ಅಂತ ಕೇಳ್ತಾ ಇರ್ತಾರೆ. ಆದ್ರೆ ನಾನು ಇರುವುದೇ ಹೀಗೆ. ಮತ್ತೊಬ್ಬರ ಬಳಿ ಹೇಳಿಕೊಳ್ಳುವುದು ದೌರ್ಬಲ್ಯ ಅಂತ ನಾನು ನಂಬುವ ಕಾರಣ ಅಷ್ಟು ಸುಲಭವಾಗಿ ಏನನ್ನೂ ಹೇಳಿಕೊಳ್ಳುವುದಿಲ್ಲ” ಎಂದು ರಮ್ಯಾ ಹೇಳಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷಾಂತರ ಹಣ ವಂಚನೆ ಆರೋಪ

ಅಷ್ಟಕ್ಕೂ, ಇಲ್ಲಿ ರಮ್ಯಾ ಯಾರ ಬಗ್ಗೆ ಹೇಳಿದ್ದಾರೆ ಎಂದು ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ನಿಜಕ್ಕೂ ರಮ್ಯಾ ಯಾರ ಜೊತೆನಾದ್ರೂ ಸೀರಿಯಸ್ ರೀಲೆಷನ್‌ಶಿಪ್‌ನಲ್ಲಿದ್ದಾರಾ ಅಂತ ಪ್ರಶ್ನೆ ಮಾಡ್ತಾ ಇದ್ದಾರೆ.
ಇನ್ನು ಈ ಸಂದರ್ಶನದಲ್ಲಿ ರಮ್ಯಾ, ನನಗೆ ಮದುವೆ-ಮಕ್ಕಳಾಗಿದೆ ಅಂತ ಎಲ್ಲಾ ಗಾಸಿಪ್ ಹರಿದಾಡಿದೆ.. ಅದರ ಬಗ್ಗೆ ಎಲ್ಲಾ ತಲೆಕೆಡಿಸಿಕೊಳ್ಳೋದಿಲ್ಲ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಈ ಸಂದರ್ಶನದಿಂದ ರಮ್ಯಾ ಲವ್‌ ಬಗ್ಗೆ ಮತ್ತೆ ಚರ್ಚೆಯಾಗುತ್ತಿದೆ. ಆದ್ದರಿಂದ ರಮ್ಯಾ ಸದ್ಯದಲ್ಲೇ ಏನೋ ಸಿಹಿ ಸುದ್ದಿ ಕೊಡ್ತಾರೆ ಅಂತ ಫ್ಯಾನ್ಸ್ ಕಾಯುತ್ತಿದ್ದಾರೆ. ಆದರೆ ತಮ್ಮ ಬಾಯ್‌ಫ್ರೆಂಡ್ ಯಾರು ಎಂಬ ಬಗ್ಗೆ ರಮ್ಯಾ ಗುಟ್ಟು ಬಿಟ್ಟುಕೊಟ್ಟಿಲ್ಲ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page