Connect with us

FILM

‘ಕಲ್ಕಿ 2898 ಎಡಿ’ ಸಿನೆಮಾದಲ್ಲಿನ ನಟ ಪ್ರಭಾಸ್ ಹೆಸರು ರಿವೀಲ್; ಕಥೆ ಬಿಚ್ಚಿಟ್ಟ ನಿರ್ದೇಶಕ..!

Published

on

ಹೈದರಾಬಾದ್ : ಸದ್ಯದಲ್ಲೇ ತೆರೆಗೆ ಬರಲಿರುವ ವರ್ಷದ ದುಬಾರಿ ವೆಚ್ಚದ ಸಿನೆಮಾ ಎಂದೇ  ಹೇಳಲಾಗಿರುವ ‘ಕಲ್ಕಿ 2898 ಎಡಿ’ (Kalki 2898 AD) ಚಿತ್ರದಲ್ಲಿ  ನಟ ಪ್ರಭಾಸ್ ನಟಿಸುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರ ಪಾತ್ರ ಏನು? ಹೆಸರೇನು? ಕಥೆ ಏನು? ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳಲ್ಲಿ ಇದೆ. ಈ ನಡುವೆ ಚಿತ್ರದಲ್ಲಿ ಪ್ರಭಾಸ್ ಪಾತ್ರದ ಹೆಸರನ್ನು ರಿವೀಲ್ ಮಾಡಲಾಗಿದೆ.

 

ಪ್ಯಾನ್ ಇಂಡಿಯಾ ಸಿನೆಮಾವಾಗಿ ‘ಕಲ್ಕಿ 2898 ಎಡಿ’ (Kalki 2898 AD) ತಯಾರಾಗುತ್ತಿದ್ದು, ಟಾಲಿವುಟ್ ಸ್ಟಾರ್ ಪ್ರಭಾಸ್, ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಹೆಸರಿನ ಬಗ್ಗೆ ಸಿನಿರಂಗದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು ಇದೀಗ ಪ್ರಭಾಸ್ ಹೆಸರು ಏನು ಅನ್ನೋದು ರಿವೀಲ್ ಆಗಿದೆ.

ಟಾಲಿವುಡ್ ನಿರ್ದೇಶಕ ನಾಗ್ ಅಶ್ವಿನ್ ‘ಕಲ್ಕಿ 2898 ಎಡಿ’ (Kalki 2898 AD) ಚಿತ್ರದ ನಿರ್ದೇಶನ ಮಾಡುತ್ತಿದ್ದು, ಶಿವರಾತ್ರಿಯಂದು ಸಿನೆಮಾದ ಹೊಸ ಪೋಸ್ಟರ್ ಕೂಡಾ ಬಿಡುಗಡೆಯಾಗಿದೆ.

ಈ ಪೋಸ್ಟರ್ ಮೂಲಕ ಸಿನೆಮಾದಲ್ಲಿ ಪ್ರಭಾಸ್ ಪಾತ್ರದ ಪರಿಚಯ ಮಾಡಿಸಿದೆ. ವಿಶೇಷ ಚಿತ್ರಕಥೆ ಹೊಂದಿರುವ ‘ಕಲ್ಕಿ 2898 ಎಡಿ’ (Kalki 2898 AD) ಸಿನೆಮಾದಲ್ಲಿ ‘ಭೈರವ’ ಹೆಸರಿನಲ್ಲಿ ನಟ ಪ್ರಭಾಸ್ ಮಿಂಚಲಿದ್ದಾರೆ.

ಪೋಸ್ಟರ್ ನಲ್ಲಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಪ್ರಭಾಸ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಾಹುಬಲಿಯ ಬಳಿಕ ಪ್ರಭಾಸ್ ಮತ್ತೊಂದು ಹಿಟ್ ಸಿನೆಮಾ ‘ಕಲ್ಕಿ 2898 ಎಡಿ’ (Kalki 2898 AD) ಆಗಲಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಕಥೆಯ ಬಗ್ಗೆ ಕ್ಲೂ ಕೊಟ್ಟ ನಿರ್ದೇಶಕ ನಾಗ್ ಅಶ್ವಿನಿ

ಮಹಾಭಾರತದ ಕಾಲದಿಂದ ಆರಂಭವಾಗಿ ಕ್ರಿ.ಶ.2898 ರಲ್ಲಿ ಕೊನೆಗೊಳ್ಳುವ ಸರಿ ಸುಮಾರು 6000 ವರ್ಷಗಳ ಕಥೆ ಇದಾಗಿದ್ದು, ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡ್ತಾ ಇದ್ದೇವೆ ಅಂತ ನಿರ್ದೇಶಕ ನಾಗ್ ಅಶ್ವಿನ್ ಕಥೆಯ ಸಣ್ಣ ಎಳೆಯನ್ನು ಬಿಚ್ಚಿಟ್ಟಿದ್ದಾರೆ.

ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಜೊತೆಗೆ ಶ್ರೇಷ್ಠ ನಟರಾದ ಕಮಲ್ ಹಾಸನ್ , ಅಮಿತಾಬ್ ಬಚ್ಚನ್ ಹಾಗೂ ಬಾಲಿವುಡ್ ನಟಿ ದಿಶಾ ಪಠಾಣಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

‘ಕಲ್ಕಿ 2898 ಎಡಿ’ (Kalki 2898 AD) ಸುಮಾರು 600 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ ಎಂದು ಹೇಳಲಾಗಿದ್ದು, ಇದು ಈ ವರ್ಷದ ದೊಡ್ಡ ಬಜೆಟ್ ಸಿನೆಮಾ ಅನ್ನೋದ್ರಲ್ಲಿ ಎರಡು ಮಾತಿಲ್ಲ.

FILM

ಟಾಲಿವುಡ್‌ನ 25 ಖ್ಯಾತ ನಟ, ನಟಿಯರ ಮೇಲೆ ಕೇಸ್ ದಾಖಲು

Published

on

ಮಂಗಳೂರು/ಹೈದರಾಬಾದ್: ಟಾಲಿವುಡ್‌ನ 25 ಖ್ಯಾತ ನಟ, ನಟಿಯರಿಗೆ ತೆಲಂಗಾಣ ಪೊಲೀಸರು ಶಾಕ್ ಕೊಟ್ಟಿದ್ದಾರೆ.

ವಿಜಯ್‌ ದೇವರಕೊಂಡ, ಪ್ರಕಾಶ್‌ ರಾಜ್, ರಾಣಾ ದಗ್ಗುಬಾಟಿ, ಮಂಚು ಲಕ್ಷ್ಮಿ, ನಿಧಿ ಅಗರವಾಲ್, ಕನ್ನಡದ ನಟಿ ಪ್ರಣೀತಾ ವಿರುದ್ದ ಕೇಸ್ ದಾಖಲಾಗಿದೆ.

32 ವರ್ಷದ ಉದ್ಯಮಿ ಫಣೀಂದ್ರ ಶರ್ಮಾ ಸಲ್ಲಿಸಿದ ಅರ್ಜಿಯ ಮೇರೆಗೆ ಹೈದರಾಬಾದ್‌ನ ಮಿಯಾಪುರ ಪೊಲೀಸ್ ಠಾಣೆಯಲ್ಲಿ BNS ಸೆಕ್ಷನ್ 318 (4), ಸೆಕ್ಷನ್ 112, 49ರಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಮ್ ಇಂಡಿಯಾಗೆ ಭರ್ಜರಿ ನಗದು ಬಹುಮಾನ ಘೋಷಿಸಿದ ಬಿಸಿಸಿಐ!

ಆನ್‌ಲೈನ್ ಬೆಟ್ಟಿಂಗ್ ದಂಧೆಯಿಂದ ಯುವಜನರು ಹಾಳಾಗುತ್ತಿದ್ದಾರೆ. ಸಮಾಜದಲ್ಲಿ ಸಾಕಷ್ಟು ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಬೆಟ್ಟಿಂಗ್ ಆ್ಯಪ್‌ಗಳ ಆಘಾತಕಾರಿ ವಿಚಾರ ಗೊತ್ತಿದ್ದರೂ ಖ್ಯಾತ ನಟ, ನಟಿಯರು ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ.

ಹೀಗಾಗಿ ಇದಕ್ಕೆ ಕಡಿವಾಣ ಹಾಕುವಂತೆ ದೂರು ಸಲ್ಲಿಕೆಯಾಗಿತ್ತು. ಈ ದೂರಿನ ಆಧಾರದ ಮೇಲೆ ನಟ, ನಟಿಯರ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

Continue Reading

FILM

ಕೊನೆಗೂ ಬಯಲಾಯ್ತು ನಟಿ ಕೀರ್ತಿ ಸುರೇಶ್‌ ಮುಚ್ಚಿಟ್ಟಿದ್ದ ಆ ಸಿಕ್ರೇಟ್….

Published

on

ಉತ್ತಮ ನಟಿಯಾಗಿ ತಮಿಳು ಚಿತ್ರರಂಗದಲ್ಲಿ ನಟಿ ಕೀರ್ತಿ ಸುರೇಶ್ ಮಿಂಚುತ್ತಿದ್ದಾರೆ. ಆಂಟನಿ ತಟ್ಟಿಲ್ ಎಂಬುವವರನ್ನು ಪ್ರೀತಿಸಿ 2024 ರಲ್ಲಿ ಕೀರ್ತಿ ಸುರೇಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆಗೆ ನಟ ವಿಜಯ್, ನಿರ್ದೇಶಕ ಅಟ್ಲಿ, ನಟಿ ತ್ರಿಶಾ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ಮದುವೆಯ ನಂತರವೂ ಕೀರ್ತಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಸ್ತುತ ಕೀರ್ತಿ ಸುರೇಶ್ ಬಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ. ಅವರು ಕಳೆದ ವರ್ಷ ಬಿಡುಗಡೆಯಾದ ‘ಬೇಬಿ ಜಾನ್’ ಎಂಬ ಚಿತ್ರದ ಮೂಲಕ ಬಾಲಿವುಡ್​ಗೆ ಪರಿಚಯವಾಗಿದ್ದರು. ತಮಿಳಿನಲ್ಲಿ ವಿಜಯ್ ನಟಿಸಿದ ಬ್ಲಾಕ್​ಬಸ್ಟರ್ ಹಿಟ್ ಚಿತ್ರ ‘ತೆರಿ’ ಸಿನಿಮಾದ ಹಿಂದಿ ರಿಮೇಕ್ ಈ ಬೇಬಿ ಜಾನ್ ಸಿನಿಮವಾಗಿದೆ. ಈ ಚಿತ್ರವನ್ನು ಅಟ್ಲಿ ನಿರ್ಮಾಣ ಮಾಡಿದ್ದು, ವರುಣ್ ಧವನ್​ಗೆ ಜೋಡಿಯಾಗಿ ಕೀರ್ತಿ ನಟಿಸಿದ್ದರು. ಈ ಸಿನಿಮಾ ದೊಡ್ಡ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿ ಸೋತಿತು.

ಬೇಬಿ ಜಾನ್ ಸಿನಿಮಾ ಸೋತರೂ ಬಾಲಿವುಡ್ ನಿರ್ಮಾಪಕರು ಕೀರ್ತಿ ನಟನೆ ನೋಡಿ ಇಂಪ್ರೆಸ್ ಆಗಿ ಸಾಲು ಸಾಲು ಸಿನಿಮಾ ಅವಕಾಶ ನೀಡುತ್ತಿದ್ದಾರಂತೆ. ಆ ರೀತಿಯಲ್ಲಿ ಈಗ ‘ಅಕ್ಕಾ’ ಎಂಬ ವೆಬ್ ಸರಣಿಯಲ್ಲಿ ಕೀರ್ತಿ ನಟಿಸಿದ್ದಾರೆ. ಇದು ಐತಿಹಾಸಿಕ ಕಥಾಹಂದರ ಹೊಂದಿರುವ ವೆಬ್ ಸರಣಿಯಾಗಿದೆ. ಇದು ಬೇಗನೆ ನೆಟ್​ಫ್ಲಿಕ್ಸ್ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಕೆಲ ದಿನಗಳ ಹಿಂದೆ ಅದರ ಟೀಸರ್​ ರಿಲೀಸ್ ಆಗಿದ್ದು, ಕೀರ್ತಿ ಮಾಸ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಷ್ಟು ಮಾತ್ರವಲ್ಲದೆ ಕೀರ್ತಿಗೆ ಮತ್ತೊಂದು ಜಾಕ್​ಪಾಟ್ ಅವಕಾಶ ಬಾಲಿವುಡ್​ನಲ್ಲಿ ಸಿಕ್ಕಿದೆಯಂತೆ. ಅದೇನೆಂದರೆ, ಹಿಂದಿಯಲ್ಲಿ ತಯಾರಾಗುವ ಒಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ಆದರೆ ಅದರ ಬಗ್ಗೆ ಬಾಯಿ ಬಿಡದೆ ಗುಪ್ತವಾಗಿ ಇಟ್ಟಿದ್ದಾರೆ ಕೀರ್ತಿ. ಅವರು ರಹಸ್ಯವಾಗಿ ಕಾಪಾಡಿಕೊಂಡಿರುವ ಈ ವಿಷಯ ಈಗ ಲೀಕ್ ಆಗಿದೆ. ಆದರೆ ಅವರ ಜೊತೆ ಯಾರು ನಟಿಸುತ್ತಾರೆ? ಆ ಸಿನಿಮಾವನ್ನು ಯಾರು ನಿರ್ದೇಶಿಸುತ್ತಾರೆ? ಎಂಬ ವಿವರಗಳು ತಿಳಿಯಬೇಕಷ್ಟೇ. ಬೇಗನೆ ತಾವು ನಟಿಸುವ ಬಾಲಿವುಡ್ ಸಿನಿಮಾ ಬಗ್ಗೆ ಗುಡ್ ನ್ಯೂಸ್​ನ್ನು ಕೀರ್ತಿ ಬಿಡುಗಡೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.

Continue Reading

FILM

ಚಹಲ್-ಧನಶ್ರೀ ಡಿವೋರ್ಸ್ ನಾಳೆ ನಿರ್ಧಾರ… ಜೀವನಾಂಶ ಎಷ್ಟು ಕೋಟಿ ಗೊತ್ತಾ..?

Published

on

ಮಂಗಳೂರು/ಮುಂಬೈ: ಯಜುವೇಂದ್ರ ಚಹಲ್ ಹಾಗೂ ಕೋರಿಯೋಗ್ರಾಫರ್ ಧನಶ್ರೀ ಈಗಾಗಲೇ ದೂರಾಗಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಇವರಿಬ್ಬರು ಬೇರೆ, ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಜುವೇಂದ್ರ ಚಹಲ್ ಅವರು ಡಿವೋರ್ಸ್ ನೀಡುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.


ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನದ ಕುರಿತು ಬಿಗ್ ಅಪ್​ಡೇಟ್ ಹೊರಬಿದ್ದಿದೆ.

ಮಾಧ್ಯಮಗಳ ವರದಿಯ ಪ್ರಕಾರ, ಬಾಂಬೆ ಹೈಕೋರ್ಟ್ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನ ಅರ್ಜಿಯ ಕುರಿತು ಮಾರ್ಚ್ 20 ರೊಳಗೆ ಅಂತಿಮ ತೀರ್ಪು ನೀಡುವಂತೆ ಬಾಂದ್ರಾ ಕುಟುಂಬ ನ್ಯಾಯಾಲಯಕ್ಕೆ ಆದೇಶಿಸಿದೆ. ಚಾಹಲ್ ಜೀವನಾಂಶ ನೀಡಲು ಒಪ್ಪಿದ್ದಾರೆ ಎಂದು ವರದಿಯಾಗಿದೆ. ಐಪಿಎಲ್ ಆರಂಭಕ್ಕೂ ಮುನ್ನ ತೀರ್ಪು ಹೊರಬೀಳುವ ನಿರೀಕ್ಷೆಯಿದೆ.

ಕಳೆದ ಫೆಬ್ರವರಿ 5ರಂದು ಯಜುವೇಂದ್ರ ಚಹಲ್ ಮತ್ತು ಧನಶ್ರೀ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಸೆಕ್ಷನ್ 13B ಹಿಂದೂ ವಿವಾಹ ಕಾಯ್ದೆ ಪ್ರಕಾರ ಯಾವುದೇ ದಂಪತಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದರೆ 6 ತಿಂಗಳ ಕಾಲ ಸಂಧಾನಕ್ಕೆ ಸಮಯಾವಕಾಶ ನೀಡಬೇಕು. ಆದರೆ ಈ 6 ತಿಂಗಳ ಸಂಧಾನ ಬೇಡ ಎಂದು ಚಾಹಲ್ ಮನವಿ ಸಲ್ಲಿಸಿದ್ದರು. ಬಾಂದ್ರಾ ಫ್ಯಾಮಿಲಿ ಕೋರ್ಟ್ 6 ತಿಂಗಳ ಒಳಗೆ ಡಿವೋರ್ಸ್‌ ನೀಡುವ ಮನವಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಬಾಂದ್ರಾ ಕೌಟುಂಬಿಕ ಕೋರ್ಟ್‌ನಲ್ಲಿ ನಾಳೆ ಇಬ್ಬರ ವಾದವನ್ನು ಆಲಿಸಲಾಗುತ್ತಿದೆ. ಫ್ಯಾಮಿಲಿ ಕೋರ್ಟ್‌ ಯಾವ ತೀರ್ಪು ನೀಡುತ್ತೆ ಅನ್ನೋದು ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಸ್ಪಿನ್ನರ್ ಚಹಾಲ್ ಜೊತೆ ಕಾಣಿಸಿಕೊಂಡ ಹುಡುಗಿ ಯಾರು ಗೊತ್ತಾ?

ಜೀವನಾಂಶ ಎಷ್ಟು ?
ಯಜುವೇಂದ್ರ ಚಹಲ್ ಅವರು ಡಿವೋರ್ಸ್ ಪಡೆಯಲು ಧನುಶ್ರೀಗೆ 4 ಕೋಟಿ 75 ಲಕ್ಷ ರೂಪಾಯಿ ಜೀವನಾಂಶ ನೀಡಲಿದ್ದಾರೆ ಎಂದು ವರದಿಯಾಗಿದೆ. ಕುಟುಂಬ ನ್ಯಾಯಾಲಯದ ಪ್ರಕಾರ, ಚಾಹಲ್ ಈಗಾಗಲೇ ಇದರಲ್ಲಿ 2.37 ಕೋಟಿ ರೂ.ಗಳನ್ನು ಧನಶ್ರೀ ಅವರಿಗೆ ನೀಡಿದ್ದಾರೆ. ಇನ್ನುಳಿದ ಜೀವನಾಂಶದ ಬಗ್ಗೆ ನಾಳೆ ಕೋರ್ಟ್ ಏನು ಹೇಳಲಿದೆ ಅನ್ನೋದು ಮುಖ್ಯವಾಗಿದೆ.

ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿರುವ ಚಾಹಲ್
25ರಂದು ಯುಜುವೇಂದ್ರ ಚಹಲ್ ಅವರು ಈ ಬಾರಿಯ ಐಪಿಎಲ್‌ ಹಣಾಹಣಿಯಲ್ಲಿ ಮೊದಲ ಪಂದ್ಯ ಆಡುತ್ತಿದ್ದಾರೆ. ಈ ಬಾರಿಯ ಐಪಿಎಲ್‌ಗೆ 18 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್‌ ತಂಡದ ಪಾಲಾಗಿದ್ದಾರೆ. ಐಪಿಎಲ್‌ಗೆ ಸಜ್ಜಾಗುತ್ತಿರುವ ಈ ಹಿನ್ನೆಲೆಯಲ್ಲಿ ಯಜುವೇಂದ್ರ ಚಹಲ್ ವಿಚ್ಛೇದನ ನೀಡುವಂತೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಚಾಹಲ್ ಅವರ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು, ಮಾರ್ಚ್ 20 ರೊಳಗೆ ವಿಚ್ಛೇದನ ಅರ್ಜಿಯ ಕುರಿತು ಅಂತಿಮ ನಿರ್ಧಾರವನ್ನು ನೀಡುವಂತೆ ಹೈಕೋರ್ಟ್ ಕುಟುಂಬ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page