Connect with us

DAKSHINA KANNADA

ಸೊಳ್ಳೆ ಉತ್ಪತ್ತಿ ತಾಣದ ಫೋಟೋ ಕಳುಹಿಸಿ..! ಡೆಂಗೀ ನಿಯಂತ್ರಣಕ್ಕೆ ಜಿಲ್ಲಾಡಳಿತ ಪ್ಲ್ಯಾನ್‌..!

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಡೆಂಗ್ಯೂ ರೋಗ ಕಂಡು ಬಂದಿರುವ ಹಿನ್ನೆಲೆಯಲ್ಲಿ ಡೆಂಗ್ಯೂ ರೋಗಕ್ಕೆ ಕಾರಣವಾದ ಅಂಶಗಳನ್ನು ನಿಯಂತ್ರಿಸಲು ಜಿಲ್ಲಾಡಳಿತ ತೀವ್ರ ಪ್ರಯತ್ನ ಪಡುತ್ತಿದೆ.

ಮನೆಯ ಸುತ್ತಮುತ್ತ ಹಾಗೂ ಇತರ ಸಾರ್ವಜನಿಕ ಪ್ರದೇಶಗಳಲ್ಲಿರುವ ನೀರಿನ ತೊಟ್ಟಿಗಳು, ಡ್ರಮ್‍ಗಳು, ಬ್ಯಾರಲ್‍ಗಳು, ಹೂವಿನಕುಂಡ, ಹಳೆ ಟಯರ್‌ಗಳು, ಎಳೆನೀರು ಚಿಪ್ಪು ಮತ್ತಿತರ ವಸ್ತುಗಳಲ್ಲಿ ಅಥವಾ ಖಾಲಿ ಜಾಗಗಳಲ್ಲಿ ನೀರು ನಿಂತು ಸಂಗ್ರಹವಾದರೆ ಸೊಳ್ಳೆಗಳ ಲಾರ್ವಾಗಳು ಉತ್ಪತ್ತಿಯಾಗುತ್ತವೆ. ಲಾರ್ವಾ ನಾಶದಿಂದ ಮಾತ್ರ ಡೆಂಗ್ಯೂ ನಿಯಂತ್ರಣ ಸಾಧ್ಯ. ಡೆಂಗ್ಯೂ ನಿಯಂತ್ರಣಕ್ಕಾಗಿ ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ನಗರ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೊಳ್ಳೆ ಉತ್ಪತ್ತಿಯಾಗುವ ಪ್ರದೇಶಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲು ಸೂಚಿಸಲಾಗಿದೆ.

ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಪರಿಸರದಲ್ಲಿ ಎಲ್ಲಿಯಾದರೂ ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯ ಲಾರ್ವಾ ಕಂಡುಬಂದಲ್ಲಿ ಅದರ ಫೋಟೋ ತೆಗೆದು ಈ ಕೆಳಗಿನ ತಮ್ಮ ಪ್ರದೇಶಕ್ಕೆ ಸಂಬಂಧಿಸಿದ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಕಳುಹಿಸಿಕೊಡ ಬೇಕು. ಫೋಟೋದೊಂದಿಗೆ ಸ್ಥಳದ ಸರಿಯಾದ ವಿಳಾಸವನ್ನು ನಮೂದಿಸಿ, ಡೆಂಗ್ಯೂ ನಿಯಂತ್ರಣಕ್ಕೆ ಸಹಕರಿಸ ಬೇಕೆಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ನಗರ ಪ್ರದೇಶಗಳು:

1) ಮಂಗಳೂರು ಮಹಾನಗರಪಾಲಿಕೆ ಕಂಟ್ರೋಲ್ ರೂಂ: 9449007722,
ಮೇಲ್ವಿಚಾರಕರು: ನಿತಿನ್ – 9743219627, ಚಂದ್ರಹಾಸ- 9482250909, ಚೇತನ್- 9742567033, ಪ್ರವೀಣ್- 8618794892
2) ಉಳ್ಳಾಲ ನಗರಸಭೆ : ಪೌರಾಯುಕ್ತರು – 9449073871
3) ಸೋಮೇಶ್ವರ ಪುರಸಭೆ: ಮುಖ್ಯಾಧಿಕಾರಿಗಳು- 9449452255
4) ಕೋಟೆಕಾರ್ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 9902209485
5) ಮೂಡುಬಿದಿರೆ ಪುರಸಭೆ: ಮುಖ್ಯಾಧಿಕಾರಿಗಳು- 8105926291
6) ಮೂಲ್ಕಿ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 8105926291
7) ಕಿನ್ನಿಗೋಳಿ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 9886080940
8) ಬಜಪೆ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 9902774917
9) ಬಂಟ್ವಾಳ ಪುರಸಭೆ :ಮುಖ್ಯಾಧಿಕಾರಿಗಳು- 9972989637
10) ವಿಟ್ಲ ಪಟ್ಟಣ ಪಂಚಾಯತ್ : ಮುಖ್ಯಾಧಿಕಾರಿ -9606321133
11) ಪುತ್ತೂರು ನಗರಸಭೆ : ಪೌರಾಯುಕ್ತರು – 9886403029
12) ಬೆಳ್ತಂಗಡಿ ಪಟ್ಟಣ ಪಂಚಾಯತ್ : ಮುಖ್ಯಾಧಿಕಾರಿ – 9845518266
13) ಸುಳ್ಯ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 9448253341
14) ಕಡಬ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 9980882189
ಗ್ರಾಮಾಂತರ ಪ್ರದೇಶಗಳು:
1) ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ: 9480862110/9483912230
2) ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ: 9620636400
3) ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9480862110/9483912230
4) ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9448795901
5) ಮೂಲ್ಕಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9901114650
6) ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9480862115
7) ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9902579353
8) ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 8217830169
9) ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9902579353

DAKSHINA KANNADA

ಪಡೀಲ್ : ಬೈಕ್‌ಗೆ ಗೂಡ್ಸ್ ಟೆಂಪೋ ಡಿ*ಕ್ಕಿ; ಸವಾರ ಸಾ*ವು

Published

on

ಮಂಗಳೂರು : ಗೂಡ್ಸ್‌ ಟೆಂಪೋವೊಂದು ಬೈಕ್‌ಗೆ ಡಿ*ಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಮಂಗಳೂರಿನ ಪಡೀಲ್ ಸಮೀಪ ಸಂಭವಿಸಿದೆ. ಸಚ್ಚೇರಿಪೇಟೆಯ ಕುದ್ರೋಟ್ ನಿವಾಸಿ, ಸಜೇಶ್ ಪೂಜಾರಿ ಮೃ*ತ ದುರ್ದೈವಿ.

ಐದು ತಿಂಗಳ ಹಿಂದೆಯಷ್ಟೇ ಹೊಸ ಮನೆ ಕಟ್ಟಿದ್ದ ಸಜೇಶ್ :

ಸಜೇಶ್, ಮಂಗಳೂರಿನ  ಶೋರೂಮ್‌ ಒಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ತನ್ನ ಬೈಕ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಪಡೀಲ್ ಸಮೀಪ ತಿರುವಿನಲ್ಲಿ ಟೆಂಪೋ ಡಿ*ಕ್ಕಿ ಹೊಡೆದಿದ್ದು, ಬೈಕ್ ಸಮೇತ ರಸ್ತೆಗೆ ಬಿದ್ದ ಸಜೇಶ್  ಗಂ*ಭೀರವಾಗಿ ಗಾ*ಯಗೊಂಡಿದ್ದ ಸಜೇಶ್ ಕೊನೆಯು*ಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಬಾಲನಟನಾಗಿ ಖ್ಯಾತಿ ಗಳಿಸಿದ್ದ ಹರಿಮುರಳಿ ಶ*ವವಾಗಿ ಪತ್ತೆ

ಸಜೇಶ್‌  ಸಣ್ಣ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಐದು ತಿಂಗಳ ಹಿಂದೆಯಷ್ಟೇ ಹೊಸ ಮನೆಯೊಂದನ್ನು ಕಟ್ಟಿ ಒಬ್ಬರೇ ವಾಸಿಸುತ್ತಿದ್ದ ಎನ್ನಲಾಗಿದೆ.

Continue Reading

DAKSHINA KANNADA

ಮಂಗಳೂರು : ನ್ಯೂ ನಿಸ್ಸಾನ್ ಗ್ರಾವೈಟ್ ಕಾರು ಬಿಡುಗಡೆ; ಏನಿದರ ವಿಶೇಷತೆ?

Published

on

ಮಂಗಳೂರು : ಪ್ರಮುಖ ಕಾರು ತಯಾರಿಕಾ ಸಂಸ್ಥೆ ನಿಸ್ಸಾನ್ ಇಂಡಿಯಾದ ಹೊಸ ನಿಸ್ಸಾನ್‌ ಗ್ರಾವೈಟ್‌ ಕಾರು ಮಂಗಳೂರು ಕೊಟ್ಟಾರ ಚೌಕಿಯ ಪೈ ಸೇಲ್ಸ್‌ ನಿಸ್ಸಾನ್‌ನಲ್ಲಿ ಬುಧವಾರ(ಮಾ.11) ಮಾರುಕಟ್ಟೆಗೆ ಬಿಡುಗಡೆಗೊಂಡಿತು.

ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ ಡಿಜಿಎಂ ಕೃಷ್ಣ ಮೋಹನ್ ಕಾರು ಬಿಡುಗಡೆಗೊಳಿಸಿ ಮಾತನಾಡಿ, ದೇಶದಲ್ಲಿ ಕಾರು ಖರೀದಿದಾರರ ಸಾಮರ್ಥ್ಯ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ಕಾರು ಉತ್ಪದನಾ ಸಂಸ್ಥೆಗಳು ಹೊಸ ಹೊಸ ವಿನ್ಯಾಸದ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ನಿಸ್ಸಾನ್‌ ಗ್ರಾವೈಟ್‌ ಗ್ರಾಹಕರಿಗೆ ಮೆಚ್ಚುಗೆಯಾಗಲಿದೆ ಎಂದರು.

ನಿಸ್ಸಾನ್‌ ಪೈ ಸೇಲ್ಸ್‌ ವ್ಯವಸ್ಥಾಪಕ ನಿರ್ದೇಶಕ ಗಣಪತಿ ಪೈ, ನಿರ್ದೇಶಕ ರತ್ನಾಕರ ಪೈ, ಸಿಇಒ ಗುರುರಾಜ ಕೆ. ರಾವ್‌, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ಮಲ್ಲಿಕಟ್ಟೆ ಶಾಖೆ ಮುಖ್ಯ ಪ್ರಬಂಧಕ ಸೌರಭ್‌ ಕುಮಾರ್ ವರ್ಮ ಮೊದಲಾದವರಿದ್ದರು. ಸೇಲ್ಸ್‌ ಮ್ಯಾನೇಜರ್‌ ಕೌಶಿಕ್‌ ಸ್ವಾಗತಿಸಿ, ನಿರ್ದೇಶಕ ಅರುಣ್ ಪೈ ವಂದಿಸಿದರು.

ಕಾರಿನ ವಿಶೇಷತೆ :

ನೂತನ ಕಾರು ಗ್ರಾವೈಟ್‌ನ ಇಂಟೀರಿಯರ್‌ ಲೇಯರ್ಡ್‌ ಡ್ಯಾಶ್‌ ಬೋರ್ಡ್‌ ವಿನ್ಯಾಸದೊಂದಿಗೆ ಡ್ಯುಯಲ್ ಟೋನ್‌ ಬ್ಲ್ಯಾಕ್‌ ಮತ್ತು ಬೀಜ್ ಕಲರ್ ಸ್ಕೀಮ್‌ ಹೊಂದಿದೆ. ಕಾರು ಕಿರಿದಾದ ಏರ್‌ ವೆಂಟ್ಸ್‌ ಅಡಿಯಲ್ಲಿ 8 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ. ಅದರ ಕೆಳಗೆ 3 ರೋಟರಿ ಕ್ಲೈಮೆಟ್‌ ಕಂಟ್ರೋಲ್ ನಾಬ್‌ಗಳಿವೆ.

ಕಂಟ್ರೋಲ್ಸ್ ಫ್ಲಾಟ್ ಬಾಟಂನ್ನು ಸ್ಟೀರಿಂಗ್ ವೀಲ್‌ನಲ್ಲಿ ಜೋಡಿಸಲಾಗಿದ್ದು, ಹಿಂಭಾಗದಲ್ಲಿ 7 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ ಪ್ಲೇ ಇದೆ. ಹೊಸ ಗ್ರಾವೈಟ್ ಅದರ ರೆನಾಲ್ಟ್ ಪ್ರತಿರೂಪದಂತೆ 3 ಸಾಲುಗಳ ಆಸನಗಳಿದ್ದು, 5+2 ಆಸನ ಸಂರಚನೆಯಲ್ಲಿ ಲಭ್ಯವಿದೆ.

ವೈರ್‌ ಲೆಸ್ ಆ್ಯಪಲ್ ಕಾರ್‌ ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೋ, ವೈರ್‌ಲೆಸ್‌  ಜಾರ್ಜಿಂಗ್ ಪ್ಯಾಡ್‌, ಫುಶ್ ಬಟನ್ ಸ್ಟಾರ್ಟ್/ಸ್ಟಾಪ್, ರೈನ್ – ಸೆನ್ನಿಂಗ್ ವೈಪರ್ಸ್, ವಾಕ್ ಅವೇ, ಅಪ್ರೋಚ್ ಲಾಕ್/ಅನ್ ಲಾಕ್ ಹೀಗೆ ವಿಶೇಷ ಫೀಚರ್‌ಗಳನ್ನು ಹೊಂದಿದೆ.

ಇದನ್ನೂ ಓದಿ : ಟಿ-20 ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಹಾರ್ದಿಕ್‌ ಪಾಂಡ್ಯಗೆ ಬಿಗ್‌ ಶಾಕ್!‌ FIR ದಾಖಲು

ಕಾರಿನಲ್ಲಿ 6 ಏರ್ ಬ್ಯಾಗ್‌ಗಳು, ಪಾರ್ಕಿಂಗ್ ಸೆನ್ಸಾರ್‌ಗಳು, ರಿವರ್ಸ್‌ ಕ್ಯಾಮರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಅನೇಕ ವಿಶೇಷತೆಯನ್ನೊಳಗೊಂಡಿದೆ.

 

Continue Reading

DAKSHINA KANNADA

ಸಮಗ್ರ ನೆಫ್ರಾಲಜಿ ಸೌಲಭ್ಯದ ಮೂಲಕ ನಿರಂತರ ಸೇವೆ ನೀಡಲಾಗುತ್ತಿದೆ : ಕೆಎಂಸಿ ಆಸ್ಪತ್ರೆ

Published

on

ಮಂಗಳೂರು : ವಿಶ್ವ ಕಿಡ್ನಿ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆ ಮಂಗಳೂರು , ಶೀಘ್ರ ರೋಗ ಪತ್ತೆ, ಚಿಕಿತ್ಸೆ ಮತ್ತು ಕಿಡ್ನಿ ಸಮಸ್ಯೆಯ ದೀರ್ಘ ಕಾಲದ ನಿರ್ವಹಣೆಯನ್ನು ಗುರಿಯಾಗಿಸಿ ತನ್ನ ಸಮಗ್ರ ಮೂತ್ರಪಿಂಡ (ಕಿಡ್ನಿ) ಆರೈಕೆಯ  ಸೇವೆಯನ್ನು ಒತ್ತಿ ಹೇಳಿದೆ. ಮೂತ್ರಪಿಂಡದ ಆರೋಗ್ಯ ಮತ್ತು ರೋಗ ತಡೆಗಟ್ಟುವ ಆರೈಕೆಯ ಕುರಿತು ಜಾಗೃತಿ ಹೆಚ್ಚಿಸುವ ಈ ನೇತೃತ್ವವನ್ನು ಆಸ್ಪತ್ರೆಯ ನೆಫ್ರಾಲಜಿ ವಿಭಾಗವು ಕೈಗೊಂಡಿದೆ.

ಈ ವಿಭಾಗವು ಅತ್ಯಾಧುನಿಕ ಕಿಡ್ನಿ ಕಸಿ ಸೇವೆಯನ್ನು ಹಾಗೂ ದಕ್ಷಿಣಕನ್ನಡದ ಅತಿದೊಡ್ಡದಾದ ಡಯಾಲಿಸಿಸ್‌ ಘಟಕವನ್ನು ಹೊಂದಿದ್ದು, 24 ಗಂಟೆ ನಿರಂತರ ಸೇವೆಗೆ ಮುಡಿಪಾಗಿರುವ ಮತ್ತು ಹೆಚ್ಚು ಅನುಭವಿ ನೆಫ್ರಾಲಜಿಸ್ಟ್‌ಗಳನ್ನು ಹೊಂದಿರುವ ಏಕೈಕ ಘಟಕವಾಗಿದ್ದು, ಸದಾ ರೋಗಿಯ ಆರೈಕೆಗೆ ಮುಡಿಪಾಗಿರುವ ಗುರಿಯನ್ನು ಹೊಂದಿದೆ.

ಈ ಬಗ್ಗೆ ಮಾತನಾಡಿದ ಹಿರಿಯ ನೆಫ್ರಾಲಜಿ ತಜ್ಞ, ಡಾ ಅಶೋಕ್‌ ಭಟ್‌, ವಿಶ್ವ ಕಿಡ್ನಿ ದಿನ  ಮೂತ್ರಪಿಂಡದ ಆರೋಗ್ಯವನ್ನು ಆದ್ಯತೆಯನ್ನಾಗಿ ಪರಿಗಣಿಸುವಂತೆ ನೆನಪಿಸುವ ದಿನ. ರೋಗ ಲಕ್ಷಣಗಳು ಸಮಸ್ಯೆ ಮುಂದುವರಿದ ಹಂತ ತಲುಪಿದಾಗ ಗೋಚರವಾಗುವ ಕಾರಣದಿಂದ  ಸಾಕಷ್ಟು ರೋಗಿಗಳು ಆರಂಭಿಕ ಹಂತದಲ್ಲಿ ಸಮಸ್ಯೆಯ ಕುರಿತು ಅರಿವು ಹೊಂದಿರುವುದಿಲ್ಲ. ಆರೋಗ್ಯಕರ ಜೀವನಶೈಲಿ ಹೊಂದುವುದು, ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣ, ಹೈಡ್ರೇಟ್‌ ಆಗಿರುವುದು, ನಿಯಮಿತ ರಕ್ತ, ಮೂತ್ರ ಹಾಗೂ ಆರೋಗ್ಯ ಪರೀಕ್ಷೆಯಿಂದ ಕಿಡ್ನಿ ರೋಗದ ಅಪಾಯವನ್ನು ತಗ್ಗಿಸಬಹುದು. ರೋಗ ತಡೆಗಟ್ಟುವುದೇ ದೀರ್ಘ ಕಾಲದ ಕಿಡ್ನಿ ಆರೋಗ್ಯಕ್ಕೆ ದಾರಿ. ಪ್ರತಿಯೊಬ್ಬರು ನೆಫ್ರೊಲಾಜಿ ತಜ್ಞರನ್ನು ಭೇಟಿ ಮಾಡಿ ಸಮಸ್ಯೆಗೆ ಸಲಹೆಯನ್ನು ಪಡೆಯಬೇಕು ಎಂದರು.

ಹಿರಿಯ ನೆಫ್ರಾಲಜಿ ತಜ್ಞ ಡಾ.ಸುಶಾಂತ್‌ ಕುಮಾರ್ ಮಾತನಾಡಿ, ಎಲ್ಲಾ ಕಿಡ್ನಿ ಸಮಸ್ಯೆಗೆ ಡಯಾಲಿಸಿಸ್‌ ಒಂದೇ ಪರಿಹಾರವಲ್ಲ. ಡಯಾಲಿಸಿಸ್‌ ಸಿಕೆಡಿಯಲ್ಲಿ 5ನೇ ಹಂತದಲ್ಲಿ ಅಥವಾ ತೀವ್ರ ಪ್ರಮಾಣದ ಸಮಸ್ಯೆಗಳು ಕಂಡು ಬಂದಾಗ ಆರಂಭಿಸಬೇಕಾಗುತ್ತದೆ. ಡಯಾಲಿಸಿಸ್‌ಗೆ ಹೋಲಿಸಿದಾಗ ಸಿಕೆಡಿ ಅಥವಾ ಕಿಡ್ನಿ ಫೆಲ್ಯೂರ್ ಸಮಸ್ಯೆಗೆ ಮೂತ್ರಪಿಂಡದ ಕಸಿ ಉತ್ತಮ ವಿಧಾನ. ಕಿಡ್ನಿ ಕಸಿ ಯಶಸ್ಸಿನ ಪ್ರಮಾಣವು ಹೆಚ್ಚಾಗಿದೆ. ಆದರೆ ಇದು ಸೂಕ್ತವಾದ ದಾನಿಗಳು ಸಿಕ್ಕಾಗ ಮಾತ್ರ ಸಾಧ್ಯ. ಮರಣ ಹೊಂದಿರುವವರಿಂದ ಅಂಗಾಂಗ ದಾನ ಪಡೆಯಲು ನಮ್ಮಲ್ಲಿ ಸರ್ಕಾರದ ಯೋಜನೆಯಾದ ಜೀವ ಸಾರ್ಥಕತೆ ಕಾರ್ಯಕ್ರಮವಿದೆ. ಅದೇ ರೀತಿ ಜೀವಂತ ದಾನಿಗಳಿಂದ ದಾನ ಪಡೆಯಲು ನಮ್ಮ ಆಸ್ಪತ್ರೆಯಲ್ಲಿ ಸಮಿತಿಯಿದ್ದು ಅಂಗಾಂಗ ದಾನ ಆ್ಯಕ್ಟ್‌ಗೆ ಅನುಗುಣವಾಗಿ ಎಲ್ಲಾ ರೀತಿಯ ಅನುಮತಿ, ಕಾನೂನು ಅಗತ್ಯತೆಗಳನ್ನು ಪೂರೈಸಲಾಗುತ್ತದೆ ಎಂದರು.

ಸೌಲಭ್ಯಗಳ ಕುರಿತು ಮಾತನಾಡಿದ ನೆಫ್ರಾಲಜಿ ವಿಭಾಗದ ಎಚ್‌ಒಡಿ ಡಾ.ಮಯೂರ್ ಪ್ರಭು, ಕೆಎಂಸಿ ಆಸ್ಪತ್ರೆ ಮಂಗಳೂರಿನಲ್ಲಿ ನಮ್ಮ ದಕ್ಷಿಣ ಕನ್ನಡದಲ್ಲೇ  ಅತಿದೊಡ್ಡ ಡಯಾಲಿಸಿಸ್‌  ಕೇಂದ್ರಗಳಲ್ಲಿ ಒಂದಾದ ಅಡ್ವಾನ್ಸ್ಡ್ ಡಯಾಲಿಸಿಸ್‌ ಸೇವೆ, ತಜ್ಞ ಮೂತ್ರಪಿಂಡ ಕಸಿ ತಂಡ ಮತ್ತು ಅಡ್ವಾನ್ಸ್ಡ್ ಡಯಾಗ್ನೋಸ್ಟಿಕ್‌ ಸೇವೆ ಬೆಂಬಲದ ಬಹು ವಿಭಾಗೀಯ ಚಿಕಿತ್ಸಾ ಸೇವೆಯನ್ನು ಒಳಗೊಂಡ ಸಮಗ್ರ ನೆಫ್ರಾಲಜಿ ಸೌಲಭ್ಯವನ್ನು ರೂಪಿಸಿದ್ದೇವೆ. ನಮ್ಮ ತಂಡವು ಅತಿದೊಡ್ಡ ತಜ್ಞರ ತಂಡವಾಗಿದ್ದು ವರ್ಷದ 365 ದಿನವೂ 24 ಗಂಟೆಗಳ ಆರೋಗ್ಯ ಸೇವೆಯನ್ನು ನೀಡುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಭಾರತಕ್ಕೆ ಹೊರಟಿದ್ದ ಸರಕು ಹಡಗಿನ ಮೇಲೆ ಇರಾನ್‌ ದಾ*ಳಿ

ನಾವು ರೋಗಿ ಕೇಂದ್ರಿತ ಸೇವೆಗಳಾದ ಬೆಡ್‌ಸೈಡ್‌ ಟ್ರೀಟ್‌ಮೆಂಟ್‌, ಐಸಿಯುನಲ್ಲಿ ಡಯಾಲಿಸಿಸ್‌ ಸೌಲಭ್ಯ, ಶೂನ್ಯ ಹರಡುವಿಕೆಯ ವಿಧಾನದೊಂದಿಗೆ ಎಚ್‌ಐವಿ ಮತ್ತು ಎಚ್‌ಬಿಎಸ್‌ಎಜಿ ಸೋಂಕಿತರಿಗೆ ವಿಶೇಷ ಡಯಾಲಿಸಿಸ್‌ ಸೌಲಭ್ಯ, ಸುಸಜ್ಜಿತ ಎಚ್‌ಡಿಎಫ್‌ ಡಯಾಲಿಸಿಸ್ ಘಟಕ ಮತ್ತು ನಿಯಮಿತ ಡಯಾಲಿಸಿಸ್ ಅಗತ್ಯವಿರುವ ಹಾಸಿಗೆ ಹಿಡಿದ ರೋಗಿಗಳಿಗೆ ಮೀಸಲಾದ ಸಾರಿಗೆ ಬೆಂಬಲವನ್ನು ಒದಗಿಸಲಾಗುತ್ತದೆ. ಈ ಪ್ರದೇಶದಲ್ಲಿ ರೋಗಿ-ಕೇಂದ್ರಿತ ನೆಫ್ರಾಲಜಿ ಸೇವೆಗಳನ್ನು ವಿಸ್ತರಿಸುವುದನ್ನು ಮುಂದುವರಿಸುವುದರೊಂದಿಗೆ ಮೂತ್ರಪಿಂಡದ ಕಾಯಿಲೆಗಳ ಜಾಗೃತಿ, ಆರಂಭಿಕ ಪತ್ತೆ ಮತ್ತು ಸುಧಾರಿತ ಚಿಕಿತ್ಸಾ ಆಯ್ಕೆಗಳನ್ನು ಬಲಪಡಿಸುವ ತನ್ನ ಬದ್ಧತೆಯನ್ನು ಆಸ್ಪತ್ರೆ ಪುನರುಚ್ಚರಿಸುತ್ತದೆ ಎಂದರು.

Continue Reading
Advertisement

Trending

Copyright © 2025 Namma Kudla News

You cannot copy content of this page