Connect with us

DAKSHINA KANNADA

ಅಂತರ ಜಿಲ್ಲಾ ಶಾಲಾ ಕಾಲೇಜು ಕಳ್ಳತನದ ಆರೋಪಿ ಸೆರೆ; 1 ಕಾರು, 1 ಮೊಬೈಲ್ ಮತ್ತು 84,500 ರೂಪಾಯಿ ನಗದು ವಶ

Published

on

ಹಲವು ಶಾಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಶಾಲಾ ಕಾಲೇಜು ಆರೋಪಿ ಇಂದು ಸೆರೆಯಾಗಿದ್ದಾನೆ. ಆತನಿಂದ 1 ಕಾರು, 1 ಮೊಬೈಲ್ ಹಾಗೂ 84,500 ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಫೆ.21 ರಿಂದ ಫೆ.22 ರ ಮದ್ಯಾವಧಿಯಲ್ಲಿ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲೆಯ ಕಛೇರಿಯ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಒಡೆದು ಒಳ ಪ್ರವೇಶಿಸಿ ಕಛೇರಿಯ ಕಪಾಟು ಮತ್ತು ಮೇಜಿನ ಡ್ರಾವರನ್ನು ಒಡೆದು ನಗದು ಹಣ ಅಂದಾಜು 1,50,000/- ಮತ್ತು 3 ಡಿವಿಆರ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದಲ್ಲದೆ, ಶಾಲೆಯ ಸಿಸಿಟಿವಿಯನ್ನು ಹಾಳು ಮಾಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ 26/2025 ಕಲಂ 331(3) 331(4), 305 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಮಾರ್ಚ್‌ 6 ರಿಂದ ಮಾಚ್‌ 7 ರ ಮದ್ಯಾವಧಿಯಲ್ಲಿ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮುರಿದು, ಒಳಪ್ರವೇಶಿಸಿ ಕಪಾಟಿನ ಬಾಗಿಲು ತೆಗೆದು, ರಿಜಿಸ್ಟರ್ ಗಳನ್ನು ಚಲ್ಲಾಪಿಲ್ಲಿ ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 35/2025 ಕಲಂ 331(3), 331(4), 62 ಬಿ.ಎನ್.ಎಸ್ ನಂತೆ ಪ್ರಕರಣ ದಾಖಲಾಗಿರುತ್ತದೆ.

ಮಾರ್ಚ್‌ 4 ರಿಂದ ಮಾಚ್‌ 5ರ ಮದ್ಯಾವಧಿಯಲ್ಲಿ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಸಂತ ಮರಿಯಾ ಗೊರಟ್ಟಿ ಆಂಗ್ಲ ಮಾದ್ಯಮ ಶಾಲೆಯ ಕಛೇರಿಯ ಬೀಗವನ್ನು ಯಾರೋ ಕಳ್ಳರು ಒಡೆದು ಒಳಪ್ರವೇಶಿಸಿ, ಕಪಾಟಿನ ಬೀಗವನ್ನು ಮುರಿದು ಅದರಲ್ಲಿದ್ದ ನಗದು 60000/- ಮತ್ತು 5000/- ಮೌಲ್ಯದ ಸಿಸಿ ಕ್ಯಾಮರಾ ಡಿವಿಆರ್ ಕಳವು ಮಾಡಿರುವ ಬಗ್ಗೆ ಶಾಲಾ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 40/2025 ಕಲಂ 305, 331(3), 331(4) ಬಿ.ಎನ್.ಎಸ್ ನಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಎಲ್ಲಾ ಪ್ರಕರಣಗಳಲ್ಲಿ ಆರೋಪಿ ಮತ್ತು ಸ್ವತ್ತು ಪತ್ತೆಯ ಬಗ್ಗೆ ಕಾರ್ಕಳ ವೃತ್ತ ನಿರೀಕ್ಷಕರಾದ ಮಂಜಪ್ಪ ಡಿ.ಆರ್‌ರವರ ನೇತೃತ್ವದ ಕಾರ್ಕಳ ನಗರ ಪೊಲೀಸ್ ಠಾಣಾ ಪಿ.ಎಸ್.ಐ ಶಿವಕುಮಾರ್, ಸಿಬ್ಬಂದಿಯವರಾದ ರಂಜಿತ್‌, ಶಿವಾನಂದ, ಕಾರ್ಕಳ ಗ್ರಾಮಾಂತರ ಠಾಣಾ ಚಂದ್ರಶೇಖರ, ಅಜೆಕಾರು ಠಾಣಾ ಸತೀಶ, ಪ್ರದೀಪ್‌ರವರನ್ನೊಳಗೊಂಡ ತಂಡ, ಮಾರ್ಚ್‌ 20ರಂದು ನಿಟ್ಟೆ ಗ್ರಾಮದ ಸಂತ ಲಾರೆನ್ಸ್ ಫ್ರೌಡ ಶಾಲೆಯ ಸಮೀಪ ಅನುಮಾನಾಸ್ಪದವಾಗಿ ಬಿಳಿ ಬಣ್ಣದ ಕಾರಿನಲ್ಲಿ ಕಂಡು ಬಂದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಅರ್ಷಿತ್ ಅವಿನಾಶ್ ದೋಡ್ರೆ(24), ಯೋಜನಾ ನಗರ, ಬೈಂದೂರು ಎಂಬುದಾಗಿ ತಿಳಿಸಿದ್ದು, ಮೇಲ್ಕಾಣಿಸಿದ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಪ್ರಕರಣಗಳಿಗೆ ಸಂಬಂದಿಸಿದಂತೆ ಆಪಾದಿತನನ್ನು ವಶಕ್ಕೆ ಪಡೆಯಲಾಯಿತು.

ಆಪಾದಿತನು ಕೃತ್ಯಕ್ಕೆ ಬಳಸಿದ್ದ ಸುಮಾರು 2,00,000/- ಮೌಲ್ಯದ KA21N3929 Ritz ಕಾರು, 20,000/- ಮೌಲ್ಯದ ಮೊಬೈಲ್ ಫೋನ್, ನಗದು ರೂ 84,500/- ಮತ್ತು ಇತರೇ ಸ್ವತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾದೀನಪಡಿಸಿಕೊಂಡು, ಆಪಾದಿತನನ್ನು ವಿಚಾರಣೆ ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಾನ್ಯ ನ್ಯಾಯಾಲಯವು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂದನಕ್ಕೆ ನೀಡಿರುತ್ತಾರೆ.

DAKSHINA KANNADA

ಮಂಗಳೂರು: ಪಾವನಿ ಸಿಲ್ಕ್ಸ್ & ಟೆಕ್ಸ್‌ಟೈಲ್ಸ್ ಶೋರೂಂ ಲೋಕಾರ್ಪಣೆ

Published

on

ಮಂಗಳೂರು: ಕಳೆದ 10 ವರ್ಷಗಳಿಂದ ಜವುಳಿ ಉದ್ಯಮದಲ್ಲಿ ಜನಮನ್ನಣೆಗೆ ಪಾತ್ರವಾಗಿರುವ ಪಾವನಿ ಸಿಲ್ಕ್ಸ್ ಮತ್ತು ಫ್ಯಾಬ್ರಿಕ್ಸ್‌ನ ಸಹ ಸಂಸ್ಥೆ ಪಾವನಿ ಸಿಲ್ಕ್ಸ್ ಮತ್ತು ಟೆಕ್ಸ್ ಟೈಲ್ಸ್ ಎರಡನೇ ಶೋರೂಂ ಮಂಗಳೂರಿನ ಭವಂತಿ ಸ್ಟ್ರೀಟ್ ನ ಮಹಾಲಕ್ಷ್ಮಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಶುಭಾರಂಭಗೊಂಡಿತು.

ದೈವಜ್ಞ ಕೆ.ಸಿ.ನಾಗೇಂದ್ರ ಭಾರದ್ವಾಜ್, ಕಟ್ಟಡ ಮಾಲಕ ರವೀಂದ್ರ ನಿಕಂ ಅವರು ರಿಬ್ಬನ್ ಕತ್ತರಿಸುವ ಮೂಲಕ ನೂತನ ಶೋರೂಂ ಉದ್ಘಾಟಿಸಿದರು. ಪುಟ್ಟ ಮಕ್ಕಳಿಂದ ದೀಪ ಬೆಳಗಿಸುವ ಮೂಲಕ ಶೋರೂಂ ವಿಶೇಷ, ವಿಭಿನ್ನ ರೀತಿಯಲ್ಲಿ ಉದ್ಘಾಟಿಸಲಾಯಿತು.

ಮುಖ್ಯ ಅತಿಥಿ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಇಂದು ಸ್ಪರ್ಧಾತ್ಮಕ ಯುಗದಲ್ಲಿ ವ್ಯವಹಾರ ಮಾಡಬೇಕಾದರೆ ತುಂಬಾ ಕಷ್ಟವಿದೆ. ನಾವು ವ್ಯವಹಾರಕ್ಕೆ ಇಳಿದಾಗ ಅದರ ಕಷ್ಟ ಗೊತ್ತಾಗುತ್ತದೆ. ಆದರೆ ಆ ಕಷ್ಟವನ್ನು ಮೀರಿ ನಾವು ಯಶಸ್ವಿ ಆಗುವುದೇ ನಮ್ಮ ಸಾಧನೆ. ಆ ಸಾಧನೆ ಮಾಡಿ ಇನ್ನೂ ಹಲವರಿಗೆ ಉದ್ಯೋಗ ನೀಡುವ ಕೆಲಸಕ್ಕೆ ದೇವರ ಅನುಗ್ರಹ ಇರುತ್ತದೆ ಎಂದರು. ಪಾವನಿ ಸಂಸ್ಥೆಯ ಇನ್ನೂ ಹಲವು ಶಾಖೆಗಳು ಬೆಳೆದುಕೊಂಡು ಬರಲಿ ಎಂಧರು.

ದೈವಜ್ಞ ಕೆ ಸಿ ನಾಗೇಂದ್ರ ಅವರು ಮಾತನಾಡಿ ಶ್ರಮಜೀವಿಯಾಗಿರುವ ಐವರು ಯುವಕರು ಇಂದು ತಮ್ಮದೇ ಸಂಸ್ಥೇಯನ್ನು ಕಟ್ಟಿಕೊಂಡು ಇದೀಗ ೨ನೇ ಶೋರೂಂ ಉದ್ಘಾಟನೆ ಮಾಡಿರುವುದು ಸಂತಸದ ವಿಷಯ. ಈ ಮೂಲಕ ಅನ್ಯರಿಗೂ ಕೆಲಸ ನೀಡುತ್ತಿರುವುದು ಪುಣ್ಯದ ಕೆಲಸವಾಗಿದೆ. ಸಮಾಜಕ್ಕೆ ನಾವು ಮಾದರಿಯಾಗಿ ಬೆಳೆಯಬೇಕು ಎಂದು ಶುಭ ಹಾರೈಸಿದರು.

ಬೋಳಾರ ಮುಹಿಯುದ್ದೀನ್ ಜುಮಾ ಮಸೀದಿ ಮುಸ್ಲಿಮ್ ಜಮಾಅತ್ ನ ಖತೀಬ್ ಬಿ.ಕೆ.ಇಲ್ಯಾಸ್ ಬಾಖವಿ ಮಾತನಾಡಿ, ಇಲ್ಲಿ ಸರ್ವಧರ್ಮದವರು ಜೊತೆಗೆ ಸೇರಿ ಈ ಜವುಳಿ ಸಂಸ್ಥೇಯನ್ನು ಕಟ್ಟಿಕೊಂಡು ಬಂದಿದ್ದಾರೆ. ನಾವು ವ್ಯವಹಾರ ಮಾಡುವಾಗ ಜಾತಿ, ಧರ್ಮ ಎನ್ನುವ ಮನೋಭಾವನೆಯನ್ನು ಕಾಣದೇ ಎಲ್ಲರೊಂದಿಗೂ ಪ್ರೀತಿಯಿಂದ ಇದ್ದರೆ ವ್ಯವಹಾರಕ್ಕೆ ಆ ಭಗವಂತ ಕೂಡಾ ಕೈಹಿಡಿಯುತ್ತಾನೆ ಎಂದು ಶುಭ ನುಡಿದರು.

ನೂತನ ಶೋರೂಂನಲ್ಲಿ ಕೆಲಸ ಮಾಡಿದ ಕಂಟ್ರಾಕ್ಟರ್ ಶರತ್‌ಚಂದ್ರ, ಇಲೆಕ್ಟ್ರಿಕ್ ಕೆಲಸ ಮಾಡಿದ ಅನೂಪ್ ಬಂಗೇರ, ಇಂಟೀರಿಯರ್ ಡಿಸೈನಿಂಗ್ ಮಾಡಿದ ದೀಕ್ಷಿತ್ ರಾಜ್ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಸಮಾರಂಭದಲ್ಲಿ ಅಡ್ವೋಕೇಟ್ ದಯಾನಂಧ ರೈ, ಅಡ್ವೋಕೇಟ್ ಮತ್ತು ತೆರಿಗೆ ಸಲಹೆಗಾರ ಅಬ್ದುಲ್ ಖಾದರ್ ಇಡ್ಯಾ, ದಕ್ಷಿಣ ಕನ್ನಡ ಟೆಕ್ಸ್‌ಟೈಲ್ಸ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಯಶವಂತ್ ವಿ. ರಾವಲ್, ಐಸಿವೈಎಂ ನಿರ್ದೇಶಕ ರೆ. ಫಾ.ಅಶ್ವಿನ್ ಕಾರ್ಡೋಜ, ರವೀಂದ್ರ ನಿಕ್ಕಂ ಅವರ ಸಹೋದರ ಅರುಣ್ ನಿಕ್ಕಂ ಮೊದಲಾದವರಿದ್ದರು. ಸಂಸ್ಥೆಯ ಪಾಲುದಾರರಾದ ಹೈದರ್, ಗೌತಮ್ ಬಂಗೇರ, ಇಬ್ರಾಹಿಂ, ನರಸಿಂಹ, ನಾಗೇಶ್ ಅವರು ಅತಿಥಿಗಳನ್ನು ಗೌರವಿಸಿದರು. ನೂತನವಾಗಿ ಉದ್ಘಾಟನೆಗೊಂಡ ಈ ಶೋರೂಂನಲ್ಲಿ ಮದುವೆ, ನಿಶ್ಚಿತಾರ್ಥ ಸೇರಿದಂತೆ ಸಭೆ ಸಮಾರಂಭ ಹಾಗೂ ಇತರ ಎಲ್ಲಾ ಸಂದರ್ಭಗಳಿಗೆ ಪೂರಕವಾದ ಬಟ್ಟೆಬರೆಗಳ ಅಪೂರ್ವ ಸಂಗ್ರಹವಿದೆ. ಸಂಸ್ಥೆಯ 10ನೇ ವಾರ್ಷಿಕೋತ್ಸವ ಮತ್ತು ಹೊಸ ಶಾಖೆಯ ಉದ್ಘಾಟನೆ ಪ್ರಯುಕ್ತ ಏಪ್ರಿಲ್ 39ರವರೆಗೆ ಎಲ್ಲಾ ಬಟ್ಟೆಗಳ ಮೇಲೆ ಶೇ.೧೦ರಷ್ಟು ವಿಶೇಷ ರಿಯಾಯಿತಿ ಗ್ರಾಹಕರಿಗೆ ನೀಡಲಾಗುತ್ತಿದೆ.

Continue Reading

DAKSHINA KANNADA

ಮಂಗಳೂರು: ಪತ್ರಕರ್ತ ನವೀನ್ ಸೂರಿಂಜೆ ಇವರ “ಸತ್ಯೊಲು” ಸಂಶೋಧನಾ ಕೃತಿ ಬಿಡುಗಡೆ

Published

on

ಮಂಗಳೂರು: ತುಳುನಾಡಿನಲ್ಲಿ ದೈವಾರಾಧನೆ ಮತ್ತು ಅದರ ಹಿಂದಿರುವ ಸಾಮರಸ್ಯದ ಸಂದೇಶ ಈಗಿನ ಪೀಳಿಗೆಗೆ ಅಗತ್ಯವಾಗಿದ್ದು, ಇದರ ಕುರಿತಾದ ಸಂಶೋಧನ ಕೃತಿ ಬಿಡುಗಡೆಯಾಗಿದೆ.

ಪತ್ರಕರ್ತ ನವೀನ್ ಸೂರಿಂಜೆ ಅವರು ಹಲವು ಹಿರಿಯ ವಿದ್ವಾಂಸರು ಬರೆದ ಕೃತಿಗಳ ಅಧ್ಯಯನ ಮಾಡಿ ದೈವಗಳು ಸಾರಿದ ಸಾಮರಸ್ಯದ ಸಂದೇಶಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ‘ಸತ್ಯೊಲು’ ಎಂಬ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಬಲ್ಮಠದ ಸಹೋದಯ ಸಭಾಂಗಣದಲ್ಲಿ ನಡೆದಿದೆ.

‘ಸತ್ಯೊಲು’ ಪುಸ್ತಕವನ್ನು ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಅತ್ರಾಡಿ ಅಮೃತ ಶೆಟ್ಟಿ ಅವರು ಬಿಡುಗಡೆ ಮಾಡಿದ್ದಾರೆ. ಮೊದಲ ಪ್ರತಿಯನ್ನು ಪತ್ರಕರ್ತ ನವೀನ್ ಸೂರಿಂಜೆ ಅವರ ಪೋಷಕರಿಗೆ ಹಸ್ತಾಂತರಿಸುವ ಮೂಲಕ ಕೃತಿ ಬಿಡುಗಡೆ ಮಾಡಲಾಗಿದೆ. ಹಲವು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಯಾದ ಈ ಪುಸ್ತಕ ಈಗಿನ ಕಾಲಘಟ್ಟದಲ್ಲಿ ಜನರು ಅಗತ್ಯವಾಗಿ ಓದಬೇಕಾದ ಕೃತಿಯಾಗಿದೆ.

ತುಳುನಾಡಿನ ಪಾಡ್ದನ, ಬೀರ, ಐತಿಹ್ಯದ ಅಧ್ಯಯನದ ಮೂಲಕ “ಸತ್ಯೊಲು” ಎನ್ನುವುದು, ಶೋಷಣೆ ಮತ್ತು ಅಸಮಾನತೆಯ ವಿರುದ್ಧ ಹೋರಾಡಿದ ನಮ್ಮ ಪೂರ್ವಿಕರು ಎಂಬುದನ್ನು ಈ ಕೃತಿಯಲ್ಲಿ ತೋರಿಸಲಾಗಿದೆ. ಅಲ್ಲದೆ ಎಲ್ಲಾ ಜಾತಿ ಧರ್ಮಗಳ ಜನರನ್ನು ದೈವಗಳು ಹೇಗೆ ಒಂದೇ ಕುಟುಂಬವಾಗಿ ನೋಡಿವೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

ಸಣ್ಣ ಸಣ್ಣ ವಿಚಾರಗಳಲ್ಲಿ ಕೋಮು ಸಂಘರ್ಷಗಳಾಗುತ್ತಿರುವ ಕರಾವಳಿಯಲ್ಲಿ ದೈವಗಳು ಯಾವ ರೀತಿಯ ಸೌಹಾರ್ದದ ಸಂದೇಶ ನೀಡಿವೆ ಎಂಬ ಕುರಿತಾಗಿ ಪಾಡ್ದನ, ಬೀರಗಳನ್ನು ಸಾಕ್ಷಿಯಾಗಿಟ್ಟುಕೊಂಡು ಈ ಕೃತಿ ರಚಿಸಲಾಗಿದೆ. ದೈವಾರಾಧನೆಯಲ್ಲಿ ವೈದಿಕ ಪ್ರವೇಶದ ಕುರಿತಾಗಿ ದೈವಗಳು ಏನು ಹೇಳುತ್ತವೆ ಎಂಬುದು ಕೂಡಾ ಇದರಲ್ಲಿ ವಿವರಿಸಲಾಗಿದೆ. ಪತ್ರಕರ್ತ ನವೀನ್ ಸೂರಿಂಜೆ ಅವರ ಈ ಅಧ್ಯಯನ ಕೃತಿಯ ಬಗ್ಗೆ ಅನೇಕ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ದೈವಾರಾಧಕರು ಸೇರಿದಂತೆ ಪ್ರತಿಯೊಬ್ಬರು ಓದ ಬೇಕಾದ ಅಧ್ಯಯನ ಕೃತಿಯಾಗಿದೆ.

Continue Reading

DAKSHINA KANNADA

ಭೀಕರ ರಸ್ತೆ ಅಪಘಾತ; ಗಾಯಾಳು ಸಾವು

Published

on

ಬಜಪೆ : ಕೆಂಜಾರ್‌ ಸಮೀಪ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ  ಘಟನೆ  ನಡೆದಿದೆ.

ಜೋಶ್ವಾ ಪಿಂಟೋ (27) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಮೃತ ವ್ಯಕ್ತಿ ಈಸ್ಟರ್‌ ವಸ್ತುಗಳನ್ನು ಖರೀದಿಸಿ, ಮಂಗಳೂರಿನಿಂದ ಸ್ನೇಹಿತರೊಂದಿಗೆ ವಾಪಾಸು ಬರುತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿದ್ದ ಗುಂಡಿಗೆ ಕಾರು ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ : ಮಂಗಳೂರು: ರಸ್ತೆ ಬದಿಗೆ ಉರುಳಿದ ಕಾರು; ಚಾಲಕನಿಗೆ ಗಂಭೀರ ಗಾಯ

ಡಿಕ್ಕಿಯ ರಭಸಕ್ಕೆ ಕಾರು ನಿಯಂತ್ರಣ ತಪ್ಪಿ ವಾಹನವು ತಿರುವಿನಲ್ಲಿ ಪಲ್ಟಿಯಾಗಿದ್ದು, ಗಂಭೀರ ಗಾಯಗೊಂಡಿದ್ದ ಗಾಯಾಳು ಮೃತಪಟ್ಟಿದ್ದಾನೆ.

ಈ ಘಟನೆ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page