ಮಂಗಳೂರು/ಪ್ರಯಾಗ್ ರಾಜ್ : ಉತ್ತರಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಹೊಸ ಹೊಸ ದಾಖಲೆ ಬರೆಯುತ್ತಿದೆ. ಫೆಬ್ರವರಿ 26ಕ್ಕೆ ಮಹಾಕುಂಭ ಮೇಳ ಅಂತ್ಯವಾಗಲಿದೆ. ಹೀಗಾಗಿ ಪ್ರಯಾಗ್ ರಾಜ್‌ನತ್ತ ಭಕ್ತಸಾಗರವೇ ಹರಿದು ಬರುತ್ತಿದ್ದು, ಟ್ರಾಫಿಕ್ ಜಾಮ್ ವಿಚಾರದಲ್ಲೂ ದಾಖಲೆ ಬರೆದಿದೆ.

ಮಹಾ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಬರುತ್ತಿರುವ ಕಾರಣ ನೂರಾರು ಕಿ.ಮೀ. ಟ್ರಾಫಿಕ್ಜಾಮ್ ಉಂಟಾಗಿದೆ. ಪ್ರಯಾಗರಾಜ್ -ವಾರಾಣಾಸಿ ಮಾರ್ಗದಲ್ಲಿ 25 ಕಿ.ಮೀ.ವರೆಗೂ ಟ್ರಾಫಿಕ್ ಜಾಮ್ ಆಗಿದ್ದು, ಸುಮಾರು 48 ಗಂಟೆವರೆಗೂ ವಾಹನಗಳು ಟ್ರಾಫಿಕ್ನಲ್ಲಿ ಸಿಲುಕಿಕೊಳ್ತಿವೆ. ಇನ್ನು ಪ್ರಯಾಗರಾಜ್-ಕಾನ್ಪುರ ಮಾರ್ಗದಲ್ಲೂ 25 ಕಿ.ಮೀ.ವರೆಗೂ ಟ್ರಾಫಿಕ್ ಜಾಮ್ ಆಗಿದೆ. ಹೀಗಾಗಿ ಮಧ್ಯಪ್ರದೇಶ ರಾಜ್ಯದಲ್ಲೇ ಪ್ರಯಾಗರಾಜ್ನತ್ತ ಬರುವ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ಟ್ರಾಫಿಕ್ನಿಂದಾಗಿ ಸುಮಾರು 50 ಕಿ.ಮೀ.ಸಂಚರಿಸಲು 10-12 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಒಂದೆರೆಡು ಕಿ.ಮೀ.ಸಂಚಾರಕ್ಕೂ ಹೆಚ್ಚಿನ ಸಮಯ ಬೇಕೇ ಬೇಕು. ಆದ್ದರಿಂದ ಮಧ್ಯಪ್ರದೇಶದ ನಗರವಾದ ಕಟ್ನಿಗೂ ಬರಬೇಡಿ ಎಂದು ಭಕ್ತರಲ್ಲಿ ಪೊಲೀಸರ ಮನವಿ ಮಾಡ್ತಿದ್ದಾರೆ.
ರೈಲ್ವೇ ಸ್ಟೇಷನ್ ಬಂದ್
ಬಸಂತ ಪಂಚಮಿಯ ಬಳಿಕ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇತ್ತು. ಆದ್ರೆ ಅದೆಲ್ಲವೂ ಉಲ್ಟಾ ಆಗಿದ್ದು, ಭಕ್ತಾದಿಗಳ ಸಂಖ್ಯೆ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಳವಾಗಿದೆ. ಸದ್ಯ ಪ್ರಯಾಗರಾಜ್‌ನಲ್ಲಿ ಸಾರ್ವಜನಿಕರಿಂದ ಭಾರೀ ಜನದಟ್ಟಣೆಯಿಂದಾಗಿ ಸಂಗಮ ರೈಲು ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಸಂಗಮ ರೈಲ್ವೇ ಸ್ಟೇಷನ್ನಿಂದ ಹೊರ ಹೋಗಲು ಪ್ರಯಾಣಿಕರಿಗೆ ತೊಂದರೆಯಾದ ಕಾರಣ ರೈಲ್ವೇ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
ಟ್ರಾಫಿಕ್ ಕ್ಲೀಯರ್ ಮಾಡಲು ಪೊಲೀಸರ ಹರಸಾಹಸ
ಇನ್ನು ಉತ್ತರಪ್ರದೇಶದ ವಾರಾಣಸಿ, ಲಖನೌ, ಮತ್ತು ಕಾನ್ಪುರ್ಗಳಲ್ಲಿ ಪ್ರಯಾಗರಾಜ್ಗೆ ಹೋಗುವ ರಸ್ತೆಗಳೆಲ್ಲವೂ ವಾಹನಗಳಿಂದ ತುಂಬಿ ತುಳುಕುತ್ತಿವೆ. ಟ್ರಾಫಿಕ್ ಕ್ಲೀಯರ್ ಮಾಡಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಸುಮಾರು 25 ಕಿಲೋ ಮೀಟರ್ವರೆಗೂ ಟ್ರಾಫಿಕ್ ಜಾಮ್ ಹರಡಿದೆ. ಪ್ರಯಾಗರಾಜ್ನಲ್ಲಿಯೇ ಸುಮಾರು 7 ಕಿಲೋ ಮೀಟರ್ ರಸ್ತೆಯಲ್ಲಿ ವಾಹಗನಗಳು ಅಲುಗಾಡದೆ ಹಾಗೆಯೇ ನಿಂತಿವೆ.
ಇದನ್ನೂ ಓದಿ: ಕಾಪು ಶ್ರೀ ಹೊಸ ಮಾರಿಗುಡಿ ಕ್ಷೇತ್ರ; ಸಂಭ್ರಮದಿಂದ ನಡೆದ ಮೆರವಣಿಗೆ
ಚೀನದ ದಾಖಲೆ ಮುರಿದ ಭಾರತ
ಇನ್ನು ಪ್ರಯಾಗರಾಜ್ನಿಂದ 400 ಕಿಲೋ ಮೀಟರ್ ದೂರದಲ್ಲಿರುವ ಜಬಲಾಪುರ್ನಲ್ಲಿಯೂ ಕೂಡ ಸುಮಾರು 15 ಕಿಲೋ ಮೀಟರ್ ಉದ್ದದಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ. ಎಲ್ಲ ನೆರೆಯ ರಾಜ್ಯಗಳಿಂದ ಪ್ರಯಾಗರಾಜ್ಗೆ ಹೋಗುವ ಎಲ್ಲಾ ರಸ್ತೆಗಳಲ್ಲಿಯೂ ಕೂಡ ಇದೇ ಸ್ಥಿತಿ ಇದೆ. ಸದ್ಯ ಇದನ್ನು ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್ ಎಂದು ಕರೆಯಲಾಗುತ್ತದೆ. ಈ ಹಿಂದೆ ಚೀನಾದಲ್ಲಿ 2010ರಲ್ಲಿ ಬೀಜಿಂಗ್ ಟಿಬೆಟ್ ಎಕ್ಸ್ಪ್ರೆಸ್ ಹೈವೇನಲ್ಲಿ ಇದೇ ರೀತಿಯ 100 ಕಿಲೋ ಮೀಟರ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಟ್ರಾಫಿಕ್ ಕ್ಲೀಯರ್ ಆಗಲು ಸುಮಾರು 12 ದಿನಗಳನ್ನು ತೆಗೆದುಕೊಳ್ಳಲಾಗಿತ್ತು. ಅದಾದ ಬಳಿಕ ಅತಿದೊಡ್ಡ ಟ್ರಾಫಿಕ್ ಜಾಮ್ ಸಂಭವಿಸಿದ್ದು ಈಗಲೇ ಎನ್ನಲಾಗುತ್ತಿದೆ.
ಜಗತ್ತಿನ ಅತಿದೊಡ್ಡ ಟ್ರಾಫಿಕ್ ಜಾಮ್
ಇನ್ನು ಮಹಾರಾಷ್ಟ್ರದಲ್ಲಿ ಸಾವಿರಾರು ಕಾರುಗಳು ಒಂದು ಒಂದು ಇಂಚು ಕೂಡ ಮೂವ್ ಆಗದ ಮಟ್ಟಕ್ಕೆ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿವೆ. ಮಧ್ಯಪ್ರದೇಶದ ಅನೇಕ ಜಿಲ್ಲೆಗಳು ಕತ್ನಿ, ಮಲ್ಹಾರ್, ಮತ್ತು ರೇವಾ ಜಿಲ್ಲೆಗಳಲ್ಲಿ ಟ್ರಾಫಿಕ್ ಜಾಮ್ ಸುಮಾರು 200 ಕಿಲೋ ಮೀಟರ್ನಿಂದ 300 ಕಿಲೋ ಮೀಟರ್ ವರೆಗೂ ಹಬ್ಬಿದೆ. ಸುಮಾರು 48 ಗಂಟೆಗಳ ಕಾಲದಿಂದ ಟ್ರಾಫಿಕ್ ಹಾಗೆಯೇ ಇದೆ. ಇದು ಜಗತ್ತಿನ ಅತಿದೊಡ್ಡ ಟ್ರಾಫಿಕ್ ಜಾಮ್ ಎಂದು ಕೂಡ ಹೇಳಲಾಗುತ್ತಿದೆ.