Connect with us

DAKSHINA KANNADA

ಮಂಗಳೂರಿನಲ್ಲಿ ಭೀಕರ ಅಪಘಾತ; ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ; ಯುವಕ ಸಾ*ವು

Published

on

ಮಂಗಳೂರು : ನಗರದ ಪಂಪ್ವೆಲ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ತೊಕ್ಕೊಟ್ಟು ನಿವಾಸಿ ಶಮಿತ್ ಶೆಟ್ಟಿ ಯಾನೆ ಬಂಟಿ (30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಶಮಿತ್ ಶೆಟ್ಟಿ ದೈವಕೋಲದ ನೇಮೋತ್ಸವದಲ್ಲಿ ಭಾಗವಹಿಸಿ ಕೊಟ್ಟಾರದಲ್ಲಿರುವ ತನ್ನ ಸ್ನೇಹಿತರ ಮನೆಯಿಂದ ತೊಕ್ಕೊಟ್ಟಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 66ರ ಪಂಪ್ವೆಲ್ ಬಳಿ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಇದರಿಂದ ಗಂಭೀರ ಗಾಯಗೊಂಡ ಶಮಿತ್ ಶೆಟ್ಟಿ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಪೊಲೀಸರು ತಿಳಿಸಿದ್ದಾರೆ. ಸಂಪೂರ್ಣ ನಜ್ಜುಗುಜ್ಜಾಗಿರುವ ಕಾರನ್ನು ಜೆಸಿಬಿ ಮೂಲಕ ಕಾರನ್ನು ತೆರವುಗೊಳಿಸಲಾಗಿದೆ. ಕದ್ರಿ ಸಂಚಾರಿ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

DAKSHINA KANNADA

ಕಾಪು ಶ್ರೀ ಹೊಸ ಮಾರಿಗುಡಿ ಕ್ಷೇತ್ರ; ಸಂಭ್ರಮದಿಂದ ನಡೆದ ಮೆರವಣಿಗೆ

Published

on

ಉಡುಪಿ : ಪುನಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಂಡಿರುವ ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಚಿನ್ನದ ಹೊಸ ಗದ್ದುಗೆ ಸಮರ್ಪಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಪ್ರಯುಕ್ತ ಮೆರವಣಿಗೆ ಸಂಭ್ರಮದಿಂದ ನಡೆಯಿತು.

ನೂತನ ಸ್ವರ್ಣ ಗದ್ದುಗೆ, ಬೆಳ್ಳಿ ರಥೋತ್ಸವ, ಬಂಗಾರದ ಮೊಗ,  ಉಚ್ಚoಗಿ ದೇವಿಯ ಬಂಗಾರದ ಪಾದ ಪೀಠ, ಬಂಗಾರದ ಮುಖ, ಬೃಹತ್ ಗಾತ್ರದ ಗಂಟೆ, ಮತ್ತು ರಾಜಗೋಪುರ ಮಹಾದ್ವಾರದ ಬಾಗಿಲು ಸಹಿತ ಸಂಭ್ರಮದ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ಮಹಿಳೆಯರ ಸಂಖ್ಯೆ ಎಷ್ಟು ಗೊತ್ತಾ!?

ಕೃಷ್ಣಾಪುರ ಮಠತ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಮಾಣಿಲ ಶ್ರೀ ಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಶೋಭಾಯಾತ್ರೆ ಉದ್ಘಾಟಿಸಿದರು. ಕಾಪು ಶ್ರೀ ಪೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದಿಗೆ ಸಮರ್ಪಣೆ ಸಮಿತಿ ಮುಂದಾಳತ್ವದಲ್ಲಿ ಭಕ್ತರು ಒಟ್ಟುಗೂಡಿಸಿದ ಬಂಗಾರ ಸಹಿತ ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಮಾರಿಯಮ್ಮ ದೇವಿ ಬಂಗಾರದ ಗದ್ದುಗೆ ಸಹಿತ ಬೆಳ್ಳಿ ರಥ, ಬೃಹತ್ ಗಂಟೆ ಇತ್ಯಾದಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು.

ಮೆರವಣಿಗೆಯಲ್ಲಿ 30ಕ್ಕೂ ಅಧಿಕ ಟ್ಯಾಬ್ಲೋ,  ಕಲಶ ಹಿಡಿದ ಮಹಿಳೆಯರು ಸಹಿತ 10,000ಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹಿತ ಪ್ರಮುಖರಾದ ಸುನೀಲ್ ಕುಮಾರ್, ವಿನಯಕುಮಾರ ಸೊರಕೆ , ಲಾಲಾಜಿ ಆರ್ ಮೆಂಡನ್ ಮೊದಲಾದವರು ಭಾಗವಹಿಸಿದ್ದರು.

Continue Reading

DAKSHINA KANNADA

ವಳಚ್ಚಿಲ್ ಶ್ರೀನಿವಾಸ ದೇವಸ್ಥಾನದಲ್ಲಿ ಪ್ರಥಮ ವರ್ಧಂತ್ಯೋತ್ಸವ ಸಂಪನ್ನ

Published

on

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ವಳಚ್ಚಿಲ್ ಪರಿಸರದಲ್ಲಿರುವ ವೈಕುಂಠದಲ್ಲಿನ ಶ್ರೀನಿವಾಸ ದೇವಸ್ಥಾನದಲ್ಲಿ ಪ್ರಥಮ ವರ್ಧಂತ್ಯೋತ್ಸವ ಭಕ್ತಿಭಾವದಿಂದ ಮತ್ತು ಅದ್ದೂರಿಯಾಗಿ ಫೆಬ್ರವರಿ 10, 2025ರಂದು ನಡೆಯಿತು. ಈ ಭಕ್ತಿ ಮಯ ಸಮಾರಂಭದಲ್ಲಿ ಅನೇಕ ಭಕ್ತರು ಪಾಲ್ಗೊಂಡಿದ್ದರು ಮತ್ತು ಅನೇಕ ವೈದಿಕ ವಿಧಿವಿಧಾನಗಳು ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.

ದಿನದ ಪ್ರಾರಂಭದಲ್ಲಿ ನಡೆದ ಭಜನೆಗಳು ದೇವಸ್ಥಾನದ ವಾತಾವರಣವನ್ನು ಭಕ್ತಿಭಾವದಿಂದ ತುಂಬಿಸಿದವು. ಇದರ ನಂತರ ಪುಣ್ಯಾಹವಚನ, ಗಣಹೋಮ, ವಿಷ್ಣು ಸಹಸ್ರನಾಮಹೋಮ ಮತ್ತು ಪಾವಮಾನ ಹೋಮ ನೆರವೇರಿತು. ಭಕ್ತರು ಸಂಕೀರ್ತನೆ ಮಾಡಿದ ವಿಷ್ಣು ಸಹಸ್ರನಾಮದ ಗಾಯನವು ಮಂದಿರದ ಆವರಣದಲ್ಲಿ ಆಧ್ಯಾತ್ಮಿಕ ಭಾವ ತುಂಬಿತು. ಭಕ್ತಿಭಾವದಿಂದ ನೆರವೇರಿದ ಪ್ರಸನ್ನ ಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಿತು.

ಮಧ್ಯಾಹ್ನದ ವೇಳೆಯಲ್ಲಿ ವಿದ್ಯಾರ್ಥಿಗಳಿಂದ ಭಜನೆಗಳು ಮತ್ತು ಮನೋಹರವಾದ ಸಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಪಡಿಸಲ್ಪಟ್ಟವು. ಸಂಜೆ 5:30 ರಿಂದ 7:30ರ ತನಕ ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯವರಿಂದ *ಶ್ರೀನಿವಾಸ ಕಲ್ಯಾಣ* ಯಕ್ಷಗಾನ ಪ್ರದರ್ಶನ ನಡೆಯಿತು. ಈ ಕಲಾತ್ಮಕ ಮತ್ತು ಭಕ್ತಿ ಮಯ ಯಕ್ಷಗಾನದ ಮೂಲಕ ಭಕ್ತರು ಶ್ರೀನಿವಾಸನ ದಿವ್ಯ ವಿವಾಹ ಮಹೋತ್ಸವವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಪಡೆದರು.

ಈ ಅದ್ಧೂರಿ ಸಮಾರಂಭದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎ. ರಾಘವೇಂದ್ರ ರಾವ್, ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್, ಟ್ರಸ್ಟಿಗಳಾದ ಎ. ವಿಜಯಲಕ್ಷ್ಮಿ ಆರ್. ರಾವ್ ಮತ್ತು ಪ್ರೊ.  ಎ. ಮಿತ್ರಾ ಎಸ್. ರಾವ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Continue Reading

BELTHANGADY

ಮಹಾ ಶಿವರಾತ್ರಿಯಂದು ಧರ್ಮಸ್ಥಳಕ್ಕೆ ಪಾದಯಾತ್ರೆ ಬರುವ ಭಕ್ತರಿಗೆ ವಿಶೇಷ ಸೂಚನೆ

Published

on

ಧರ್ಮಸ್ಥಳ: ಹಬ್ಬ ಹರಿದಿನಗಳ ಸಂದರ್ಭದಲ್ಲಿ ಜನರು ದೇವಸ್ಥಾನಕ್ಕೆ ತೆರಳುವುದು ಸರ್ವೆ ಸಾಮಾನ್ಯ. ಹೀಗಾಗಿ ಈ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ವಿಶೇಷ ಸೂಚನೆಗಳನ್ನು ಹೊರಡಿಸಲಾಗುತ್ತದೆ. ಅದೇ ರೀತಿ ಮಹಾ ಶಿವರಾತ್ರಿಯಂದು ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಲಕ್ಷಾಂತರ ಮಂದಿ ಭಕ್ತರು ರಾಜ್ಯದ ಮೂಲೆ-ಮೂಲೆಗಳಿಂದ ಆಗಮಿಸುತ್ತಾರೆ. ಅವರಿಗಾಗಿ ಈ ವರ್ಷವೂ ಸಹ ಕೆಲವು ಸೂಚನೆಗಳನ್ನು ನೀಡಲಾಗಿದೆ.

ಭಕ್ತರಿಗೆ ಮಹತ್ವದ ಸೂಚನೆ:

  • ರಸ್ತೆಯಲ್ಲಿ ವಾಹನ ದಟ್ಟಣೆ ಇರುವ ಹಿನ್ನೆಲೆ ಕಡ್ಡಾಯವಾಗಿ ಉಡುವ ಬಟ್ಟೆಯ ಬೆನ್ನಿನಲ್ಲಿ, ತೋಳಿನಲ್ಲಿ, ತಲೆಯ ದಿರಿಸಿನಲ್ಲಿ ಪ್ರತಿಫಲಕ ಇರಲೇಬೇಕು.
  • ನೀವು ವಾಸ್ತವ್ಯ ಇರುವ ಸ್ಥಳದಲ್ಲಿ ಮತ್ತು ದಾರಿಯಲ್ಲಿ ಬರುವಾಗ ಉಗುಳುವುದು, ಗಲೀಜು ಇತ್ಯಾದಿ ಮಾಡುವುದರಿಂದ ಇತರ ಸದ್ಭಕ್ತರನ್ನು ಹೀಯಾಳಿಸಿದಂತಾಗುತ್ತದೆ.
  • ನೀವು ತಂಗುವ ಸ್ಥಳ, ಅಡುಗೆ ಮಾಡಿದ ಸ್ಥಳವನ್ನು ಸ್ವಯಂಸ್ಪೂರ್ತಿಯಿಂದ ಸ್ವಚ್ಛ ಮಾಡಿರಿ. ನೀವು ಬಳಸುವ ಪ್ಲಾಸ್ಟಿಕ್ ಮತ್ತು ಕಸ-ಕಡ್ಡಿಗಳನ್ನು ಒಂದು ಚೀಲದಲ್ಲಿ ತುಂಬಿ ತ್ಯಾಜ್ಯ ವಿಲೇವಾರಿಗೆ ಇರುವ ನಿಗದಿತ ಸ್ಥಳದಲ್ಲೇ ವಿಲೇವಾರಿ ಮಾಡಿ.
  • ಇನ್ನು ಪಾದಯಾತ್ರೆಗಳ ಅನುಕೂಲಕ್ಕಾಗಿ ತಾಳು ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಸುಮಾರು 10 ಕಡೆ ಮಿನಿ ಟ್ಯಾಂಕ್‌ಗಳನ್ನು ಇಡಲಾಗಿದ್ದು, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
  • ಭಕ್ತಾದಿಗಳ ಆರೋಗ್ಯ ದೃಷ್ಟಿಯಿಂದ ತಾಳು ಬೆಟ್ಟದಲ್ಲಿ ತಾತ್ಕಾಲಿಕ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದೆ. ಐವತ್ತಕ್ಕೂ ಹೆಚ್ಚು ಮೊಬೈಲ್ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗಾಗಿ ಬರುವಂತಹ ಭಕ್ತರು ಶುಚಿತ್ವವನ್ನು ಕಾಪಾಡಿಕೊಳ್ಳಿ.

Continue Reading
Advertisement

Trending

Copyright © 2025 Namma Kudla News

You cannot copy content of this page